ಲೀಲಾಗೆ ಸವಾಲು ಹಾಕಿದ ದುರ್ಗಾ? ಲೀಲಾ ಪ್ಲಾನ್ ವರ್ಕ್ ಆಗುತ್ತಾ?

By ಪೂರ್ವ

'ಹಿಟ್ಲರ್ ಕಲ್ಯಾಣ' ಧಾರವಾಹಿ ಚೆನ್ನಾಗಿ ಮೂಡಿಬರುತ್ತಿದೆ. ಲೀಲಾ ತವರು ಮನೆಯಲ್ಲಿ ಅದ್ದೂರಿ ಆಗಿ ಗಣೇಶೋತ್ಸವ ನಡೆದಿದೆ. ಬರೋ ವಿಘ್ನನಗಳನ್ನೆಲ್ಲ ತೊಡೆದು ಹಾಕಿ ಲೀಲಾ ಮನೆಯವರಿಗೆ ಒಳ್ಳೆಯದನ್ನೇ ಮಾಡಿದ್ದಾನೆ ಗಣೇಶ. ಕೌಸಲ್ಯ, ರೇವತಿ ತಬ್ಬಿ ಹಿಡಿದು ಕೊಳ್ಳುತ್ತಾಳೆ ಇದನ್ನು ನೋಡಿದ ಕೌಸಲ್ಯ ಏನಿದು ಮಗಳು ಯಾಕೆ ತಬ್ಬಿ ಹಿಡಿದುಕೊಂಡಿದ್ದಾಳೆ ಕೇಳುತ್ತಾಳೆ.

ಇತ್ತ ಚಂದ್ರಶೇಖರ್ ಮಗನಂತಿರುವ ಅಳಿಯನನ್ನು ಹೊಗಳಿದ್ದೇ ಹೊಗಳಿದ್ದು. ಬೆಟ್ಟದಂತೆ ಇರುವ ಕಷ್ಟವನ್ನು ನೀರಿನ ಹಾಗೆ ಕರಗಿಸುತ್ತೀರಿ ಪ್ರತಿ ಸಲವೂ ನಮ್ಮನ್ನು ನೀವೇ ಕಾಪಾಡುತ್ತಿರಿ ನಿಮಗೆ ಎಷ್ಟೇ ಧನ್ಯವಾದ ಹೇಳಿದರು ಸಾಲುವುದಿಲ್ಲ ಎಂದು ಹೊಗಳುತ್ತಾರೆ. ಇದನ್ನು ಕೇಳಿದ ಲೀಲಾ ಇನ್ನೂ ಖುಷಿ ಪಡುತ್ತಾಳೆ. ಲೀಲಾ ಏಜೆ ಬಳಿ ದೇವ್ ಜೊತೆ ನಡೆದ ಫೈಟ್ ಬಗ್ಗೆ ಕೇಳುತ್ತಿದ್ದಾಳೆ. ಇದನ್ನು ಕೇಳಿದ ಏಜೆಗೆ ನಗು ಬರುತ್ತದೆ.

ಎಷ್ಟೇ ಕೇಳಿದರೂ ಏಜೆ, ಲೀಲಾಗೆ ಅರ್ದಂಬರ್ಧ ಕಥೆ ಹೇಳುತ್ತಾರೆ ಇದನ್ನು ಕೇಳಿದ ಲೀಲಾ ಏಜೆ ಕೈ ಹಿಡಿದು ಕೇಳುತ್ತಾರೆ. ಇದರಿಂದ ಏಜೆ ಲೀಲಾಳ ಮುಖ ನೋಡುತ್ತಾರೆ. ಲೀಲಾ ಬಳಿಕ ಕೈ ಯನ್ನು ಬಿಡುತ್ತಾಳೆ. ಬಳಿಕ ಹೇಳುತ್ತಾಳೆ ನಾನು ಎಲ್ಲಾ ರೇವತಿ ಜೊತೆ ಕೇಳುತ್ತೇನೆ ಎಂದು ಅಲ್ಲಿಂದ ಹೊರಟು ಹೋಗುತ್ತಾಳೆ. ಲೀಲಾಳನ್ನೆ ನೋಡುತ್ತಾ ನಿಂತ ಏಜೆ ಆಕೆ ಹೋದ ಬಳಿಕ ಮುಗುಳು ನಗುತ್ತಾರೆ. ರೇವತಿ ಬಳಿ ಏಜೆ ಮಾಡಿದ ಫೈಟ್ ಬಗ್ಗೆ ಕೇಳಿದಾಗ ರೇವತಿ ಮಾತ್ರ ಆಕೆಯ ಭಾವನನ್ನು ಹೊಗಳಿದ್ದೇ ಹೊಗಳಿದ್ದು.

ಅಕ್ಕನಿಗೆ ಬಾವನ ಪರಾಕ್ರಮದ ಬಗ್ಗೆ ಹೇಳಿದ ರೇವತಿ

ಅಕ್ಕನಿಗೆ ಬಾವನ ಪರಾಕ್ರಮದ ಬಗ್ಗೆ ಹೇಳಿದ ರೇವತಿ

ಆತನನ್ನು ಮಿಸ್ ಮಾಡಿಕೊಳ್ಳಬೇಡ ಬಹಳ ಚೆನ್ನಾಗಿ ನೋಡಿಕೋ. ನಿನ್ನ ಪುಣ್ಯ ಆತ ಸಿಕ್ಕಿರುವುದು ಎಂದೆಲ್ಲ ಹೇಳುತ್ತಾರೆ. ಇದನ್ನು ಕೇಳಿದ ಲೀಲಾ ಬಹಳ ಖುಷಿ ಪಡುತ್ತಾಳೆ. ಅಂತೂ ಇಂತೂ ಏಜೆ ಮೇಲೆ ಲೀಲಾ ಗೆ ಪ್ರೀತಿ ಹುಟ್ಟಿರುವ ರೀತಿ ಕಾಣುತ್ತಿದೆ. ಇನ್ನು ಹಬ್ಬ ಎಲ್ಲಾ ಮುಗಿದ ಬಳಿಕ ಲೀಲಾ ಏಜೆ ಮನೆಗೆ ಹೋಗಲು ರೆಡಿ ಆಗುತ್ತಾಳೆ ಆ ವೇಳೆ ಸೊಸೆಯಂದಿರು ಬಂದು ಏಜೆ ನಾವು ಮನೆಗೆ ಬರುವುದಾದರೆ ಬರುತ್ತೇವೆ ಇಲ್ಲೇ ಇರುವುದು ಆದರೆ ಇರುತ್ತೇವೆ ಎಂದು ಹೇಳುತ್ತಾರೆ ಇದನ್ನು ಕೇಳಿದ ಏಜೆ ಲೀಲಾಳನ್ನು ಕೇಳುತ್ತಾರೆ. ಲೀಲಾ, ಬಂದು ಆಯ್ತು ಅವರು ನಮ್ಮ ಜೊತೆ ಬರಲಿ ಎಂದು ಹೇಳುತ್ತಾಳೆ ಇದನ್ನು ಕೇಳಿ ಮೂವರು ಸೊಸೆಯಂದಿರು ಬಹಳ ಕೋಪಿಸಿಕೊಳ್ಳುತ್ತಾರೆ. ಕೌಸಲ್ಯ ಏಜೆ ಸೊಸೆಯಂದಿರನ್ನೂ ಕೊನೆಗೂ ಏಜೆ ಬಳಿ ಹೊಗಳುತ್ತಾರೆ.

ಏಜೆ ಸೊಸೆಯಂದಿರನ್ನು ಹೊಗಳಿದ ಕೌಸಲ್ಯ

ಏಜೆ ಸೊಸೆಯಂದಿರನ್ನು ಹೊಗಳಿದ ಕೌಸಲ್ಯ

ನನ್ನನ್ನು ಯಾವುದೇ ಕೆಲಸ ಮಾಡಲು ಇವರು ಬಿಟ್ಟಿಲ್ಲ. ಎಲ್ಲಾ ಕೆಲಸವನ್ನು ಇವರೇ ಮಾಡಿದ್ದಾರೆ ಎಂದೆಲ್ಲ ಹೇಳುತ್ತಾರೆ. ಅದಕ್ಕೆ ಏಜೆ ಹೇಳುತ್ತಾರೆ ಕಷ್ಟದ ದಿನಗಳನ್ನು ಅವರು ಎಂದಿಗೂ ನೋಡಿಲ್ಲ. ಈಗ ಇಲ್ಲಿ ಇವರಿಗೆ ಕಷ್ಟ ಆಗಬಹುದು ಎಂದುಕೊಂಡೆ ಆದರೆ ಇವರು ಮೂವರು ಸೇರಿ ಗಣೇಶ ಹಬ್ಬಕ್ಕೆ ಪ್ರಿಪರೇಷನ್ ಮಾಡಿದ್ದನ್ನು ನೋಡಿ ನನಗಂತೂ ಬಹಳ ಸಂತೋಷ ಆಗುತ್ತಿದೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಏಜೆ ಸೊಸೆಯಂದಿರು ಖುಷಿ ಪಡುತ್ತಾರೆ.

ಲೀಲಾ ಸೂಚನೆಯಂತೆ ಲಗೇಜ್ ಪ್ಯಾಕ್

ಲೀಲಾ ಸೂಚನೆಯಂತೆ ಲಗೇಜ್ ಪ್ಯಾಕ್

ಏಜೆ ಸೂಚನೆಯ ಮೇರೆಗೆ ಲಗೇಜ್ ಪ್ಯಾಕ್ ಮಾಡಿಕೊಳ್ಳಲು ಮೂವರು ಸೊಸೆಯಂದಿರಿಗೆ ಸೂಚನೆ ನೀಡುತ್ತಾಳೆ. ಅಲ್ಲಿಂದ ಹೊರಟ ಮೂವರು ಸೊಸೆಯಂದಿರು ಲಗೇಜ್ ಪ್ಯಾಕ್ ಮಾಡುತ್ತಾರೆ ಆದರೆ ಸರಸ್ವತಿ ಮಾತ್ರ ನಾನು ಮಾತ್ರ ಆ ಲೀಲಾ ಇರುವ ಮನೆಗೆ ಬರುವುದಿಲ್ಲ. ಮುಸುರೆ ತಿಕ್ಕಿದರು ತೊಂದರೆ ಇಲ್ಲ ಇಲ್ಲೇ ಇರುತ್ತೇನೆ ಎಂದೆಲ್ಲ ಹೇಳುತ್ತಾರೆ. ದುರ್ಗಾ ಮಾಸ್ಟರ್ ಪ್ಲಾನ್ ಕೇಳಿ ಸರು ಮನೆಗೆ ಬರಲು ಒಪ್ಪಿಕೊಳ್ಳುತ್ತಾರೆ

ಲೀಲಾ ನಿರ್ಧಾರಕ್ಕೆ ಕೌಸಲ್ಯ ಕಿಡಿ

ಲೀಲಾ ನಿರ್ಧಾರಕ್ಕೆ ಕೌಸಲ್ಯ ಕಿಡಿ

ಇತ್ತ ಕೌಸಲ್ಯ ಮಾತ್ರ ಯಾಕಾದರೂ ಲೀಲಾ, ಏಜೆ ಸೊಸೆಯಂದಿರನ್ನು ಕರೆದುಕೊಂಡು ಹೋಗುತ್ತೀನಿ ಎಂದು ಹೇಳಿದಳೋ. ನಮಗೆ ಕಣ್ಣೀರು ಸುರಿಸಿದ್ದಕ್ಕೆ ಸರಿಯಾಗಿ ಬೆಂಡೆತ್ತ ಬೇಕಿತ್ತು ಎಂದು ಹೇಳುತ್ತಾಳೆ. ಆಗ ಲೀಲಾ ಅಲ್ಲಿಗೆ ಬಂದು ಅಮ್ಮನನ್ನು ಸಮಾಧಾನಿಸುತ್ತಾಳೆ. ಬಳಿಕ, ಅವರು ಏಜೆ ಸೊಸೆಯಂದಿರು ಹೆಚ್ಚು ದಿನ ಅವರನ್ನು ಇಟ್ಟುಕೊಳ್ಳಲು ಸಾಧ್ಯ ಇಲ್ಲ ಎಂದೆಲ್ಲ ಹೇಳುತ್ತಾಳೆ. ಅದಕ್ಕೆ ಕೌಸಲ್ಯ ಹೇಳುತ್ತಾಳೆ ಬಡ್ಡಿ ಕೊಟ್ಟಿದ್ದೀನಿ ಅಸಲು ಬಾಕಿ ಇತ್ತು ಅಷ್ಟರಲ್ಲಿ ನೀನು ಬಂದೆ ಎಂದು ಹೇಳುತ್ತಾಳೆ. ಅದಕ್ಕೆ ಲೀಲಾ ನಗುತ್ತಾಳೆ. ಅಲ್ಲಿಗೆ ಬಂದ ದುರ್ಗಾ ಇದೀಗ ಲೀಲಾ ಗೆ ಪಾಠ ಕಲಿಸಿಯೆ ತೀರುತ್ತೇನೆ ಎಂದು ಶಪಥ ಮಾಡಿದ್ದಾಳೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Zee Kannada serial Hitler Kalyana Written Update on September 9th episode. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X