India
  For Quick Alerts
  ALLOW NOTIFICATIONS  
  For Daily Alerts

  ಚಿಕ್ಕಮಗಳೂರಿನಲ್ಲಿ ರೌಂಡ್ಸ್ ಹೊಡೆಯುತ್ತಿರುವ 'ಜೊತೆ ಜೊತೆಯಲಿ' ನಟಿ ಮೀರಾ!

  By ಎಸ್ ಸುಮಂತ್
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಈಗ ರಾಜನಂದಿನಿ ಹವಾ. ಇದ್ದಾಗ ಆದ ಅನ್ಯಾಯಕ್ಕೆ ಸತ್ತ ಮೇಲೆ ಮತ್ತೆ ಮರುಜನ್ಮ ಪಡೆದು ಸೇಡು ತೀರಿಸಿಕೊಳ್ಳಲು ಹೊರಟಿದ್ದಾಳೆ. ಈ ಮಧ್ಯೆ ಅನು ತಾಯಿ ಕೂಡ ಆಗಿದ್ದಾಳೆ. ಆದರೆ ಆರ್ಯ ಎಂದರೆ ಪ್ರಾಣ ಬಿಡುತ್ತಿದ್ದ ಮೀರಾ ಹೆಗ್ಡೆ ಉಲ್ಟಾ ಆಗಿದ್ದಾಳೆ. ಅನುಗೆ ಸಹಾಯ ಮಾಡುತ್ತಾ? ಸೇಡು ತೀರಿಸಿಕೊಳ್ಳಲು ಮೀರಾ ಕೂಡ ನಿಂತಿದ್ದಾಳೆ.

  ಇದೆಲ್ಲಾ ಧಾರಾವಾಹಿ ಕಥೆಯಾದರೆ ಮೀರಾ ಹೆಗ್ಡೆ ರಿಯಲ್ ಲೈಫ್ ಬೇರೆನೇ ಇದೆ. ಮೀರಾ ಹೆಗ್ಡೆ ಅಲಿಯಾಸ್ ಮಾನಸ ಮನೋಹರ್ ಶೂಟಿಂಗ್ ಮಧ್ಯೆ ಗ್ಯಾಪ್ ಸಿಕ್ಕಿದ್ದೆ ತಡ ಪ್ರಕೃತಿಯ ಸೌಂದರ್ಯ ಸವಿಯಲು ಹೊರಟಿದ್ದಾರೆ. ಪ್ರಕೃತಿಯ ನಡುವಿನ ಸೊಬಗಲ್ಲಿ ನಿಂತು ಒಂದಷ್ಟು ಫೋಟೊ ಕ್ಲಿಕ್ಕಿಸಿಕೊಂಡು, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

  ರಾಘವೇಂದ್ರ ರಾಜ್‌ಕುಮಾರ್ ನಿರ್ಮಾಣದಲ್ಲಿ 'ವಿಜಯದಶಮಿ' ಧಾರಾವಾಹಿ: ಯಾವ ಸಿನಿಮಾಗೂ ಕಮ್ಮಿಯಿಲ್ಲ!ರಾಘವೇಂದ್ರ ರಾಜ್‌ಕುಮಾರ್ ನಿರ್ಮಾಣದಲ್ಲಿ 'ವಿಜಯದಶಮಿ' ಧಾರಾವಾಹಿ: ಯಾವ ಸಿನಿಮಾಗೂ ಕಮ್ಮಿಯಿಲ್ಲ!

  ಪ್ರಕೃತಿಯ ಮಡಿಲಲ್ಲಿ ಮೀರಾ ಹೆಗ್ಡೆ ಮಸ್ತಿ

  ಪ್ರಕೃತಿಯ ಮಡಿಲಲ್ಲಿ ಮೀರಾ ಹೆಗ್ಡೆ ಮಸ್ತಿ

  ಮೀರಾ ಹೆಗ್ಡೆ ಅಲಿಯಾಸ್ ಮಾನಸ ಮನೋಹರ್ ಸದ್ಯ ಚಿಕ್ಕಮಗಳೂರಿನ ಕಡೆಗೆ ಪಯಣ ಬೆಳೆಸಿದ್ದಾರೆ. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದಿದ್ದಾರೆ. ಹಸಿರು ವನದ ನಡುವೆ ಸಂಚರಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಎಸ್‌ಪಿಬಿ ಹಾಡಿಗೆ ವಿಡಿಯೋ ಎಡಿಟ್ ಮಾಡಿ ಹಾಕಿದ್ದಾರೆ. ಧಾರಾವಾಹಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ಗ್ಯಾಪ್ ಸಿಕ್ಕಿದ ಕೂಡಲೇ ಟ್ರಿಪ್ ಹೊರಟಿದ್ದಾರೆ.

  DKD: ಶಶಾಂಕ್ - ತ್ರಿಶಾ ಪರ್ಫಾಮೆನ್ಸ್‌ಗೆ ಬೆಚ್ಚಿಬಿದ್ದ ಶಿವಣ್ಣ, ಚಿನ್ನಿ ಮಾಸ್ಟರ್, ರಕ್ಷಿತಾ!DKD: ಶಶಾಂಕ್ - ತ್ರಿಶಾ ಪರ್ಫಾಮೆನ್ಸ್‌ಗೆ ಬೆಚ್ಚಿಬಿದ್ದ ಶಿವಣ್ಣ, ಚಿನ್ನಿ ಮಾಸ್ಟರ್, ರಕ್ಷಿತಾ!

  ಬರ್ತ್ ಡೇ ಸೆಲೆಬ್ರೆಟ್‌ ಮಾಡಿಕೊಂಡ ಮಾನಸ

  ಬರ್ತ್ ಡೇ ಸೆಲೆಬ್ರೆಟ್‌ ಮಾಡಿಕೊಂಡ ಮಾನಸ

  ಮೀರಾ ಹೆಗ್ಡೆ ಇತ್ತೀಚೆಗಷ್ಟೇ ಹುಟುಹಬ್ಬ ಆಚರಿಸಿಕೊಂಡಿದ್ದಾರೆ. ಗ್ರ್ಯಾಂಡ್ ಆಗಿ ಆಚರಿಸಿರುವ ಯಾವ ಸುಳಿವನ್ನು ಬಿಟ್ಟುಕೊಟ್ಟಿಲ್ಲ. ಸಿಂಪಲ್ ಆಗಿ ಒಂದು ಕೇಕ್ ಕಟ್ ಮಾಡಿರುವ ಫೋಟೊ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಕಾಫಿನಾಡಿನ ಕಡೆ ಪ್ರವಾಸಕ್ಕೆ ಹೊರಟಿದ್ದಾರೆ. ಚಿಕ್ಕಮಗಳೂರಿನ ಸುಂದರ ತಾಣದಲ್ಲಿ ಅಲೆದಾಡುತ್ತಾ, ಸೌಂದರ್ಯ ಸವಿಯುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ತೆಗೆದ ಫೋಟೊ, ವಿಡಿಯೋಗೆ ಅಭಿಮಾನಿಗಳು ಕಮೆಂಟ್ ಹಾಕುತ್ತಿದ್ದಾರೆ. ಹಲವರು ತಡವಾಗಿ ಶುಭಾಶಯ ಕೂಡ ಹೇಳಿದ್ದಾರೆ. ಹುಟ್ಟುಹಬ್ಬಕ್ಕೆ ಶುಭ ಕೋರಿದವರಿಗೆಲ್ಲಾ ಮಾನಸ ಸರೋವರ್ ಸೋಶಿಯಲ್ ಮೀಡಿಯಾ ಮೂಲಕವೂ ಧನ್ಯವಾದ ತಿಳಿಸಿದ್ದಾರೆ.

  ಮಾನಸ ಮನೋಹರ್‌ಗೆ ಫ್ಯಾನ್ಸ್

  ಮಾನಸ ಮನೋಹರ್‌ಗೆ ಫ್ಯಾನ್ಸ್

  ಮಾನಸ ಮನೋಹರ್ ಸೋಶಿಯಲ್‌ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ಧಾರಾವಾಹಿಯಲ್ಲಿ ಅವರ ಸ್ಟೈಲಿಶ್ ಮಾತು ಕೇಳೋದಕ್ಕೆ ಎಲ್ಲರೂ ಕಾಯುತ್ತಾ ಇರುತ್ತಾರೆ. ಅಷ್ಟೇ ಅಲ್ಲ ಒಂಥರ ಸ್ಟೈಲ್ ಐಕಾನ್ ಕೂಡ. ಇವರಿಗೆ ಸೋಶಿಯಲ್ ಮೀಡಿಯಾದಲ್ಲಿ 125 ಸಾವಿರ ಫಾಲೋವರ್ಸ್ ಇದ್ದಾರೆ. ಧಾರಾವಾಹಿಯ ಬಿಡುವಿನ ವೇಳೆಯಲ್ಲಿ ಸೆಟ್‌ನಲ್ಲಿಯೂ ಕೂತು ಎಲ್ಲರ ಜೊತೆ ರೀಲ್ಸ್ ಮಾಡುತ್ತಾ ಇರುತ್ತಾರೆ. ಮೇಘಾ ಶೆಟ್ಟಿ, ಹರ್ಷ ಹೀಗೆ ಎಲ್ಲರ ಜೊತೆಗಿನ ವಿಡಿಯೋ ಹಂಚಿಕೊಳ್ಳುತ್ತಾ ಇರುತ್ತಾರೆ. ಹೆಚ್ಚೆಚ್ಚು ಫೋಟೊಶೂಟ್ ಕೂಡ ಮಾಡಿಸುತ್ತಿರುತ್ತಾರೆ.

  ತಾಯಿ ಆಗಿಲ್ಲ ಏಕೆ ಎಂದವರಿಗೆ ತಕ್ಕ ಉತ್ತರ ಕೊಟ್ಟ ನಟಿತಾಯಿ ಆಗಿಲ್ಲ ಏಕೆ ಎಂದವರಿಗೆ ತಕ್ಕ ಉತ್ತರ ಕೊಟ್ಟ ನಟಿ

  ಆರ್ಯವರ್ಧನ್ ವಿಚಾರದಲ್ಲಿ ಉಲ್ಟಾ ನಿಂತ ಮೀರಾ

  ಆರ್ಯ ಎಂದರೆ ಮೀರಾಗೆ ಸಿಕ್ಕಾಪಟ್ಟೆ ಇಷ್ಟವಿತ್ತು. ಆರ್ಯನನ್ನು ಮನಸಾರೆ ಪ್ರೀತಿಸುತ್ತಿದ್ದಳು. ಅನು ಮತ್ತು ಆರ್ಯನ ಮದುವೆಯನ್ನು ತಡೆಯುವುದಕ್ಕೂ ಯತ್ನಿಸಿದಳು ನೋವು ಪಟ್ಟಳು. ಆದರೆ ಆರ್ಯ ಎಷ್ಟು ಸ್ವಾರ್ಥಿ? ಎಷ್ಟು ಮೋಸ ಮಾಡಿದ್ದಾನೆಂದು ಗೊತ್ತಾದ ಮೇಲೆ ಈಗ ಮೀರಾ ಕೂಡ ಉಲ್ಟಾ ಹೊಡೆದಿದ್ದಾಳೆ. ಆರ್ಯ ಹೇಗೆ ನಂಬಿಕೆಯ ಜೊತೆಗೆ ಆಟವಾಡಿದನೋ ಅದೇ ರೀತಿ ಈಗ ಮೀರಾ ಕೂಡ ನಂಬಿಕೆಯ ಮೇಲೆಯೇ ಆಟವಾಡುತ್ತಿದ್ದಾಳೆ. ಅನುಗೆ ಸಹಾಯ ಮಾಡುತ್ತಾ? ಆರ್ಯನ ಆಟ ಬಯಲು ಮಾಡಲು ನಿಂತಿದ್ದಾಳೆ. ಈಗಾಗಲೇ ಆಸ್ತಿಯ ವಿಚಾರದಲ್ಲಿಯೂ ಮೀರಾ ಜಾಣ್ಮೆಯಿಂದ ಅನುಗೆ ಸಹಾಯ ಮಾಡಿದ್ದಾಳೆ.

  English summary
  Zee Kannada Serial Jothe Jotheyali Actress Manasa Manohar Travelling In Chikkamagaluru. Here Is The Details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X