ಪ್ಯಾನ್ ಇಂಡಿಯಾ ಸಿನಿಮಾದಲ್ಲಿ 'ಜೊತೆಜೊತೆಯಲಿ' ಧಾರಾವಾಹಿ ನಟಿ ಮೇಘಾ ಶೆಟ್ಟಿ

By ಎಸ್ ಸುಮಂತ್

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಸಿರಿಮನೆ ಇದೀಗ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದ್ದಾರೆ. ಒಂದೊಂದೇ ಬಿಗ್ ಸಿನಿಮಾಗಳ ಆಫರ್ ಪಡೆದುಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ದೊಡ್ಡ ದೊಡ್ಡ ಆಫರ್ ಬಂದರೂ, ಅನುಸಿರಿಮನೆಯಾಗಿಯೂ ಇಂದಿಗೂ ಎಲ್ಲರನ್ನು ರಂಜಿಸುತ್ತಿದ್ದಾರೆ. ಇದೀಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ವಿಚಾರವೊಂದನ್ನು ಹಂಚಿಕೊಂಡಿದ್ದು, ಮೇಘಾ ಶೆಟ್ಟಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ದಿನದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು, ಅನು ಸಿರಿಮನೆಯ ಧೈರ್ಯ, ತಾಳ್ಮೆಯ ಪರೀಕ್ಷೆ ನಡೆಯುತ್ತಿದೆ. ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿಯ ಅಭಿನಯ ದಿನದಿಂದ ದಿನಕ್ಕೆ ಬೇರೆ ಬೇರೆ ಅವತಾರಗಳನ್ನು ಸೃಷ್ಟಿಸುತ್ತಿದೆ. ಸಾಫ್ಟ್ ಅನು, ರಗಡ್ ಅನು, ಲವ್ಲಿ ಅನು ಹೀಗೆ ನಾನಾ ರೀತಿಯಲ್ಲಿ ನೋಡಿರುವ ಅನು ಅಲಿಯಾಸ್ ಮೇಘಾ ಶೆಟ್ಟಿ ಅವರ ಬತ್ತಳಿಕೆಯಿಂದ ಇದೀಗ ಸಿನಿಮಾವೊಂದು ಹೊರ ಬಂದಿದೆ.

Recommended Video

'ಜೊತೆ ಜೊತೆಯಲಿ' ನಟಿ ಮೇಘಾ ಶೆಟ್ಟಿ ಹೊಸ ಸಿನಿಮಾ ಹೇಗಿರುತ್ತೆ? | #meghashetty
ಮೇಘಾ ಶೆಟ್ಟಿಯ ಹೊಸ ಸಿನಿಮಾ ಅನೌನ್ಸ್

ಮೇಘಾ ಶೆಟ್ಟಿಯ ಹೊಸ ಸಿನಿಮಾ ಅನೌನ್ಸ್

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಟಿಸುವಾಗಲೇ ಮೇಘಾ ಶೆಟ್ಟಿಗೆ ಸಾಕಷ್ಟು ಸಿನಿಮಾ ಆಫರ್‌ಗಳು ಬಂದಿವೆ. ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ 'ತ್ರಿಬಲ್ ರೈಡಿಂಗ್' ಮಾಡಿ ಬಂದಿದ್ದಾರೆ. ಇದೀಗ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ನಟಿಯಾಗಿ ಮಿಂಚಲಿದ್ದಾರೆ. ಅದು 'ಆಪ್ಟರ್ ಆಪರೇಷನ್ ಲಂಡನ್ ಕೆಫೆ' ಎಂಬ ಸಿನಿಮಾದಲ್ಲಿ. ಪೋಸ್ಟರ್ ರಿಲೀಸ್ ಆಗಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಸಿನಿಮಾದಲ್ಲಿ ಮೇಘಾ ಶೆಟ್ಟಿಯ ಪಾತ್ರ ಹೇಗಿರಲಿದೆ ಎಂಬ ಕೌತುಕವೂ ಹೆಚ್ಚಾಗಿದೆ. ಆದರೆ ಆ ಕೌತುಕಕ್ಕೆ ಮೇಘಾ ಶೆಟ್ಟಿ ತೆರೆ ಎಳೆದಿಲ್ಲ. ಜಸ್ಟ್ ಸಿನಿಮಾದ ಪೋಸ್ಟರ್ ಮಾತ್ರ ಹಂಚಿಕೊಂಡಿದ್ದಾರೆ.

ಮೇಘಾ ಶೆಟ್ಟಿಯ ಮುಂದಿನ ಸಿನಿಮಾ ಹೇಗಿರಲಿದೆ?

ಮೇಘಾ ಶೆಟ್ಟಿಯ ಮುಂದಿನ ಸಿನಿಮಾ ಹೇಗಿರಲಿದೆ?

ಲಂಡನ್ ಕೆಫೆ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿರಲಿದೆ. ಕವಿ ಶೆಟ್ಟಿ ನಾಯಕನಾಗಿದ್ದಾರೆ. ಇಂದು ಕವೀಶ್ ಶೆಟ್ಟಿ ಹುಟ್ಟುಹಬ್ಬದ ಹಿನ್ನೆಲೆ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಇದೊಂದು ಆಕ್ಷನ್ಸ್, ಥ್ರಿಲ್ಲರ್, ಸಸ್ಪೆನ್ಸ್ ಸಿನಿಮಾ ಎಂಬುದು ಪೋಸ್ಟರ್ ನೋಡಿದಾಗಲೇ ಹೇಳಬಹುದು. ಕವೀಶ್ ಶೆಟ್ಟಿ ತೀವ್ರವಾದ ನೋಟದೊಂದಿಗೆ, ಗನ್ ಹಿಡಿದು ನಿಂತಿದ್ದಾರೆ. ಈ ಚಿತ್ರವೇ ಒಂದಷ್ಟು ಕುತೂಹಲವನ್ನು ಹುಟ್ಟುಹಾಕಿದೆ. 'ರಾಜ ರಾಜೇಂದ್ರ', 'ನಾನು ನನ್ನ ಕನಸು', 'ಇನಿಯ' ಇತ್ಯಾದಿ ಸಿನಿಮಾಗಳನ್ನು ನಿರ್ದೇಶಿಸಿದ್ದ, ಸಡಗರ ರಾಘವೇಂದ್ರ ಅವರೇ ಲಂಡನ್ ಕೆಫೆ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದು ಕನ್ನಡ, ಮರಾಠಿ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿದೆ. ಕವೀಶ್ ಶೆಟ್ಟಿ ಜೊತೆ ಮೇಘಾ ಶೆಟ್ಟಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.

ಬಂಗಾರಗೆ ಬೆಸ್ಟ್ ಆಫ್ ಲಕ್ ಹೇಳಿದ ಫ್ರಾನ್ಸ್

ಬಂಗಾರಗೆ ಬೆಸ್ಟ್ ಆಫ್ ಲಕ್ ಹೇಳಿದ ಫ್ರಾನ್ಸ್

ಮೇಘಾ ಶೆಟ್ಟಿ ತಮ್ಮ ಮೊದಲ ಪ್ಯಾನ್ ಇಂಡಿಯಾ ಸಿನಿಮಾದ ಪೋಸ್ಟರ್ ಹಂಚಿಕೊಂಡು, ಇದು ನನ್ನ ಹೊಸ ಸಿನಿಮಾ ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್ ನೋಡಿದ ಕೂಡಲೆ ಅಭಿಮಾನಿಗಳ ದಿಲ್ ಖುಷ್ ಆಗಿದೆ. ಹೀಗಾಗಿ ಫ್ಯಾನ್ಸ್ ಎಲ್ಲಾ ನಾ ಮುಂದು ತಾ ಮುಂದು ಅಂತ ವಿಶ್ ಮಾಡುತ್ತಿದ್ದಾರೆ. ಆಲ್ ದಿ ಬೆಸ್ಟ್ ಬಂಗಾರ ಎಂದು ಕಮೆಂಟ್ ಹಾಕುತ್ತಿದ್ದಾರೆ. ಈ ಸಿನಿಮಾದ ನೆಕ್ಸ್ಟ್ ಅಪ್ಡೇಟ್ ಆದಷ್ಟು ಬೇಗ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ನಿಮ್ಮ ಪಾತ್ರದ ಬಗ್ಗೆ ರಿವೀಲ್ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

'ಜೊತೆ ಜೊತೆಯಲಿ' ಜೊತೆಗೆ ಸಿನಿಮಾ ಬ್ಯಾಲೆನ್ಸ್

'ಜೊತೆ ಜೊತೆಯಲಿ' ಜೊತೆಗೆ ಸಿನಿಮಾ ಬ್ಯಾಲೆನ್ಸ್

'ಜೊತೆ ಜೊತೆಯಲಿ' ಧಾರಾವಾಹಿ ಸದ್ಯಕ್ಕೆ ತುಂಬಾ ಖ್ಯಾತಿ ಪಡೆದಿರುವ ಸಿನಿಮಾ. ಸಾಕಷ್ಟು ಟ್ವಿಸ್ಟ್ ಗಳು ಈ ಧಾರಾವಾಹಿಯಲ್ಲಿ ಬಂದೋಗಿದೆ. ಬರುತ್ತಾನೂ ಇದೆ. ಅನು ಸಿರಿಮನೆ ಈಗ ಎರಡೆರಡು ಪಾತ್ರ ನಿಭಾಯಿಸುತ್ತಾ ಇದ್ದಾಳೆ.ಒಂದು ಅನುಸಿರಿಮನೆ ಮತ್ತೊಂದು ರಾಜನಂದಿನಿ. ಈ ಪಾತ್ರಗಳಿಂದಲೇ ಈಗಾಗಲೇ ಸಾಕಷ್ಟು ಸಿನಿಮಾ ಆಫರ್ ಗಳು ಮೇಘಾ ಶೆಟ್ಟಿಗೆ ಸಿಕ್ಕಿವೆ. ಗಣೇಶ್ ಜೊತೆ 'ತ್ರಿಬಲ್ ರೈಡಿಂಗ್', 'ಡಾರ್ಲಿಂಗ್ ಕೃಷ್ಣ' ಜೊತೆಗೆ 'ದಿಲ್ ಪಸಂದ್', ಈಗ ಪ್ಯಾನ್ ಇಂಡಿಯಾ ಸಿನಿಮಾ. ಆದರೆ ಸಿನಿಮಾದ ಬ್ಯುಸಿ ನಡುವೆಯೂ ಧಾರಾವಾಹಿಯನ್ನು ಬಿಡದೆ ಬ್ಯಾಲೆನ್ಸ್ ಮಾಡುತ್ತಿದ್ದಾರೆ ಮೇಘಾ ಶೆಟ್ಟಿ. ಸಿನಿಮಾ ಅಂದ್ರೆ ದೂರ ದೂರ ಎಲ್ಲಾ ಹೋಗಬೇಕಾಗುತ್ತದೆ. ಆದರೂ ಧಾರಾವಾಹಿಗೂ ಸಮಯ ನೀಡುತ್ತಾ ಎಲ್ಲವನ್ನು ಮೇಘಾ ಚೆನ್ನಾಗಿಯೇ ಬ್ಯಾಲೆನ್ಸ್ ಮಾಡುತ್ತಿರುವುದು ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದೆ.

More from Filmibeat

English summary
Zee Kannada Serial Jothe Jotheyali Actress Megha shetty New Movie. Here is the details about Megha Shetty Pan India Movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X