ದರ್ಶನ್ ಜೊತೆಗೆ ಮತ್ತೆ ಫೋಟೊ ಶೇರ್ ಮಾಡಿದ ಮೇಘಾ ಶೆಟ್ಟಿ: 22 ರ ಸಂಖ್ಯೆಯ ರಹಸ್ಯವೇನು?
ಮೇಘಾ ಶೆಟ್ಟಿ ಎಂದರೆ ಈಗ ಎಲ್ಲರ ಮನೆ ಮಗಳಾಗಿ ಹೋಗಿದ್ದಾರೆ. 'ಜೊತೆ ಜೊತೆಯಲಿ' ಧಾರಾವಾಹಿಯ ಮೂಲಕ ಅನು ಸಿರಿಮನೆಯಾಗಿ ಎಲ್ಲರ ಗಮನ ಸೆಳೆದಿದ್ದ ಮೇಘಾ ಇದೀಗ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ 'ತ್ರಿಬಲ್ ರೈಡಿಂಗ್' ಹೊರಟು ಬೆಳ್ಳಿ ತೆರೆ ಮೇಲೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಜೊತೆ ಜೊತೆಗೆ ಹೊಸ ಹೊಸ ಪ್ರಾಜೆಕ್ಟ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸದಾ ಬ್ಯುಸಿಯಾಗಿರುವ ನಟಿ ಮೇಘಾ ಶೆಟ್ಟಿ ತಮ್ಮ ಫ್ಯಾನ್ಸ್‌ಗೆ ದಿಲ್ ಖುಷ್ ಆಗುವಂತ ಫೋಟೊ ಹಂಚಿಕೊಂಡಿದ್ದಾರೆ. ಅದು ದರ್ಶನ್ ಜೊತೆಗೆ. ದರ್ಶನ್‌ಗೆ ಅಭಿಮಾನಿಗಳ ಬಳಗವೇನು ಕಡಿಮೆ ಇಲ್ಲ. ಇಂಡಸ್ಟ್ರಿಯಿಂದ ಹೊರಗಲ್ಲ. ಇಂಡಸ್ಟ್ರಿಯ ಸಾಕಷ್ಟು ನಟ-ನಟಿಯರು ಕೂಡ ದರ್ಶನ್ ಅಭಿಮಾನಿಗಳಾಗಿದ್ದಾರೆ. ಅದರಲ್ಲಿ ಮೇಘಾ ಶೆಟ್ಟಿ ಕೂಡ ಒಬ್ಬರು.

ಅಭಿಮಾನಿಗಳ ತಲೆಗೆ ಹುಳ ಬಿಟ್ಟರಾ ಮೇಘಾ ಶೆಟ್ಟಿ?
ತಮ್ಮಿಷ್ಟವಾದ ನಟ-ನಟಿಯರ ಸೋಶಿಯಲ್ ಮೀಡಿಯಾ ಖಾತೆಯನ್ನು ಅಭಿಮಾನಿಗಳು ಫಾಲೋ ಮಾಡುತ್ತಿರುತ್ತಾರೆ. ಅವರು ಏನು ಮಾಡುತ್ತಾರೆ ಅದೆಲ್ಲವನ್ನೂ ಗಮನಿಸುತ್ತಿರುತ್ತಾರೆ. ಅಷ್ಟೇ ಅಲ್ಲ ಅಭಿಮಾನಿಗಳು ಆಗಾಗ ತಮ್ಮ ಆಸೆಯನ್ನು ಕಮೆಂಟ್ ಮೂಲಕ ತಿಳಿಸುತ್ತಲೇ ಇರುತ್ತಾರೆ. ಸದಾ ಆಕ್ಟಿವ್ ಆಗಿರುವ ನಟಿ ಮೇಘಾ ಶೆಟ್ಟಿ ಅಭಿಮಾನಿಗಳ ತಲೆಗೆ ಹುಳ ಬಿಡುವ ಫ್ಲ್ಯಾನ್ ಏನಾದರೂ ಮಾಡಿಕೊಂಡಿದ್ದಾರೆ ಅನ್ನಿಸುತ್ತೆ. ಅದಕ್ಕೆ ದರ್ಶನ್ ಜೊತೆಗಿನ ಫೋಟೊ ಹಾಕಿ, ಹುಚ್ಚೆಬ್ಬಿಸುತ್ತಿದ್ದಾರೆ. ಇವರು ಹಾಕುವ ಫೋಟೊಗಳಿಗೆ ಕ್ಯಾಪ್ಶನ್ ಹಾಕುವ ನಟಿ, ಈ ಫೋಟೊಗಳಿಗೆ ಯಾವುದೇ ಕ್ಯಾಪ್ಶನ್ ಕೊಟ್ಟಿಲ್ಲ. ಇದು ಅಭಿಮಾನಿಗಳಿಗೆ ಊಹೆಗೂ ನಿಲುಕದ ಕಗ್ಗಂಟಾಗಿ ಕಾಡುತ್ತಿದೆ.

ಮೇಘಾ ಶೆಟ್ಟಿ ಪದೇ ಪದೆ ದರ್ಶನ್ ಭೇಟಿ ಆಗ್ತಿರೋದ್ಯಾಕೆ?
ಮೇಘಾ ಶೆಟ್ಟಿ ಕೂಡ ಸದ್ಯ ಬಹುಬೇಡಿಕೆಯ ನಟಿ. ಹೀಗಾಗಿ ದರ್ಶನ್ ಜೊತೆಗೆ ಹೀಗೆ ಫೋಟೊ ಹಂಚಿಕೊಳ್ಳುತ್ತಿದ್ದರೆ ಮುಂದಿನ ಸಿನಿಮಾಗೆ ಯೋಜನೆಯ ಎಂಬ ಅನುಮಾನ ಬಾರದೆ ಇರುವುದಿಲ್ಲ. ಈಗ ಪೋಸ್ಟ್ ಮಾಡಿದ್ದು, ಹಿಂದ ಹಾಕಿದ್ದ ಫೋಟೊ ಅಲ್ಲ. ಇದು ಎರಡನೇ ಬಾರಿ ಭೇಟಿಯಾದ ಫೋಟೊವನ್ನು ಹಂಚಿಕೊಂಡಿದ್ದಾರೆ. ಅಭಿಮಾನಕ್ಕೆ ಪದೇ ಪದೆ ಅವರನ್ನು ಭೇಟಿ ಮಾಡಿ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರಾ ಎಂಬ ಅನುಮಾನ ಅಭಿಮಾನಿಗಳನ್ನು ಕಾಡುತ್ತಿದೆ. ಆದರೆ ಇದಕ್ಕೆ ಮೇಘಾ ಶೆಟ್ಟಿ ಯಾವುದೇ ಉತ್ತರ ನೀಡುತ್ತಿಲ್ಲ.

ಸೇಮ್ ಡೇಟ್.. ಸೇಮ್ ಹೀರೋ.. ಏನಿದು ಗುಟ್ಟು?
ಮೇಘಾ ಶೆಟ್ಟಿ ಮೊದಲ ಬಾರಿಗೆ ದರ್ಶನ್ ಜೊತೆಗಿನ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಎರಡು ತಿಂಗಳ ಹಿಂದಷ್ಟೇ ದರ್ಶನ್ ಜೊತೆಗಿನ ಫೋಟೊವನ್ನು ಶೇರ್ ಮಾಡಿದ್ದರು. ಈ ಫೋಟೊ ನೋಡಿದ ಮೇಘಾ ಫ್ಯಾನ್ಸ್ ಫುಲ್ ಖುಷಿಯಾಗಿ ಬಿಟ್ಟಿದ್ದರು. ಆಗಲು ಕೂಡ ಮೇಘಾ ಶೆಟ್ಟಿ ನೋ ರಿಪ್ಲೇ. ಆದರೆ ಇಂದು (ಮೇ 23) ಮತ್ತೆರಡು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಅದು ಸೇಮ್ ಡ್ರೆಸ್ ಕೂಡ ಅಲ್ಲ. ಅಷ್ಟಕ್ಕೂ ಎರಡು ತಿಂಗಳ ಹಿಂದೆ ಇದೇ ದಿನ ಫೋಟೊ ಹಂಚಿಕೊಂಡ ವಿಶೇಷತೆ ಬಗ್ಗೆಯೂ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ಉತ್ತರ ಹುಡುಕುತ್ತಿದ್ದರೂ ಸಿಗುತ್ತಿಲ್ಲ.
ಮೈಸೂರಿನಲ್ಲಿ ಮೇಘಾ ಶೆಟ್ಟಿ ಎಂಜಾಯ್
ಒಂದು ಕಡೆ ದರ್ಶನ್ ಜೊತೆಗಿನ ಫೋಟೊ ಹಾಕಿದ್ದಾರೆ. ಮತ್ತೊಂದು ಕಡೆ ಮೈಸೂರಿನ ಗಲ್ಲಿಗಲ್ಲಿಯೂ ಸುತ್ತುತ್ತಿದ್ದಾರೆ. ಮೈಸೂರಿನ ಸುಂದರ ರಸ್ತೆಗಳಲೆಲ್ಲಾ ಓಡಾಡಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ ಮೇಘಾ. ದರ್ಶನ್ ಕೂಡ ಮೈಸೂರಿನಲ್ಲಿಯೇ ಹೆಚ್ಚಾಗಿ ಇರುತ್ತಾರೆ. ನಿನ್ನೆಯೆಲ್ಲಾ ಮೈಸೂರಿಗೆ ಹೋಗಿದ್ದರಿಂದ ಮೇಘಾ ಶೆಟ್ಟಿ ಭೇಟಿ ಮಾಡಿರಬಹುದು ಎಂಬ ಸಮಾಧಾನ ಮಾಡಿಕೊಂಡರೆ, ಪದೇ ಪದೆ ಭೇಟಿಯಾಗಿದ್ದು ಸಿನಿಮಾವೇ ಇರಬಹುದು ಎಂಬ ಅನುಮಾನ ವ್ಯಕ್ತಪಡಿಸುವಂತೆ ಮಾಡುತ್ತಿದೆ. ಫೈನಲಿ ಇದಕ್ಕೆಲ್ಲಾ ಮೇಘಾ ಶೆಟ್ಟಿಯೇ ಉತ್ತರ ನೀಡಬೇಕಾಗಿದೆ.


Click it and Unblock the Notifications











