For Quick Alerts
  ALLOW NOTIFICATIONS  
  For Daily Alerts

  ಜೊತೆ ಜೊತೆಯಲಿ: ಆರ್ಯವರ್ಧನ್ ರಾಜನಂದಿನಿಯನ್ನು ಪ್ರೀತಿ ಮಾಡಿದ್ದು ನಿಜನಾ?

  By ಪೂರ್ವ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಈಗಾಗಲೇ ಸಾಕಷ್ಟು ಟ್ವಿಸ್ಟ್‌ಗಳು ಎದುರಾಗಿವೆ. ಆದರೂ ಕೂಡ ಈ ಧಾರಾವಾಹಿಯ ಕುರಿತು ಪ್ರೇಕ್ಷಕರಿಗೆ ತಿಳಿದಿರದ ಅನೇಕ ರಹಸ್ಯಗಳಿವೆ. ಆರ್ಯವರ್ಧನ್ ನಿಜಕ್ಕೂ ರಾಜನಂದಿನಿಯನ್ನು ಪ್ರೀತಿಸಿರುವುದಿಲ್ಲ. ದುಡ್ಡಿಗಾಗಿ ಆತ ಪ್ರೀತಿ ನಾಟಕವಾಡುತ್ತಾನೆ. ಅನುಗೆ ರಾಜನಂದಿನಿ ವಿಷಯ ಹೇಳಿ ಅವಳ ಅನುಕಂಪ ಪಡೆಯುತ್ತಾನೆ. ಈ ಮೋಸದಲ್ಲಿ ಝೇಂಡೆಯ ಶಾಮೀಲು ಇದೆ. ಆದರೆ ಆತ ಅನುಳನ್ನು ಮಾತ್ರ ನಿಜಕ್ಕೂ ಇಷ್ಟಪಟ್ಟಿರುತ್ತಾನೆ. ರಾಜನಂದಿನಿಯೇ ಅನು ಆಗಿ ಪುನರ್ಜನ್ಮ ಪಡೆದಿರುವುದು ಅವನಿಗೆ ಆರಂಭದಲ್ಲಿ ಗೊತ್ತಿರುವುದಿಲ್ಲ. ಆದರೆ ಆರ್ಯವರ್ಧನ್ ಮದುವೆಯಾದ ಬಳಿಕ ಅನುಗೆ ಈ ಸತ್ಯ ಗೊತ್ತಾಗುತ್ತದೆ. ಆಮೇಲೆ ಆರ್ಯವರ್ಧನ್ ನಿಜಕ್ಕೂ ರಾಜನಂದಿನಿ ಪ್ರೀತಿಸಿದ್ನಾ? ಅಥವಾ ತನ್ನನ್ನು ಪ್ರೀತಿಸಿದ್ನಾ ಎಂಬ ಗೊಂದಲದಲ್ಲಿ ಅನು ಇರುತ್ತಾಳೆ.

  ಇದೀಗ ಅನುಗೆ ಆರ್ಯವರ್ಧನ್ ಅಸಲಿ ಮುಖವಾಡ ಗೊತ್ತಾಗಿದೆ. ಅಸಲಿಗೆ ಒಳ್ಳೆಯವನ ರೀತಿಯಲ್ಲಿ ನಟಿಸುತ್ತಿರುವ ಆರ್ಯವರ್ಧನ್ ರಾಜನಂದಿನಿ ನಂಬಿಕೆಗೆ ದ್ರೋಹ ಮಾಡಿರುವುದಂತು ಅಕ್ಷರಶಃ ಸತ್ಯ. ಆಸ್ತಿ ವ್ಯಾಮೋಹಕ್ಕೆ ಮಾವನನ್ನೇ ಕೊಲೆ ಮಾಡಿಸಿದ ಆರ್ಯವರ್ಧನ್ ಕರಾಳ ಮುಖ ಇದೀಗ ಅನು ಮುಂದೆ ಅನಾವರಣ ಆಗಿದೆ.

  ಹಣದ ಮೋಹಕ್ಕೆ ಬಿದ್ದ ಆರ್ಯವರ್ಧನ್

  ಹಣದ ಮೋಹಕ್ಕೆ ಬಿದ್ದ ಆರ್ಯವರ್ಧನ್

  ಪ್ರೀತಿಸಿ ಮದುವೆಯಾದ ಆರ್ಯವರ್ಧನ್ ಈ ರೀತಿ ತನ್ನ ಮೊದಲ ಹೆಂಡತಿ ಹಾಗೂ ಮಾವನಿಗೆ ಮಾಡಿದ ಘೋರ ಅನ್ಯಾಯ ಮಾಡಿದ್ದು, ಆಕೆಯ ಮನಸ್ಸನ್ನೇ ವಿಚಲಿತರನ್ನಾಗಿ ಮಾಡಿಸಿದೆ. ಆರ್ಯವರ್ಧನ್ ಬಣ್ಣದ ಮಾತುಗಳಿಗೆ ಮರುಳಾಗಿ ರಾಜನಂದಿನಿ ಮೋಸ ಹೋದಳು. ಇದೀಗ ಅನು ಸರದಿಯೂ ಹಾಗೆನಾ ಅಥವಾ ಅನು ಮೇಲೆ ಆರ್ಯವರ್ಧನಿಗೆ ನಿಜವಾಗ್ಲೂ ಪ್ರೀತಿಯಾಗಿದೆಯಾ ಎಂಬುವುದನ್ನು ಧಾರಾವಾಹಿ ನೋಡುವವರ ಕುತೂಹಲಕ್ಕೆ ಕಾರಣವಾಗಿದೆ.

  Recommended Video

  'KGF 2' 14th Day Collection | ಭಾರತದ ಹೆಚ್ಚು ಗಳಿಕೆಯ ಸಿನಿಮಾ ಆಗತ್ತಾ KGF 2 ? | Yash | Prashanth Neel
  ಆರ್ಯವರ್ಧನ್ ಕುತಂತ್ರ ಗೊತ್ತಾಗಿದೆ

  ಆರ್ಯವರ್ಧನ್ ಕುತಂತ್ರ ಗೊತ್ತಾಗಿದೆ

  ರಾಜನಂದಿನಿಗೆ ಆರ್ಯವರ್ಧನ್ ಕುತಂತ್ರದ ಅರಿವಾಗಿದೆ. ಇದೀಗ ಆಫೀಸಿನಲ್ಲೂ ಆರ್ಯವರ್ಧನ್ ದರ್ಬಾರ್ ಜೋರಾಗಿಯೇ ನಡಿತಿದೆ. ಆರ್ಯವರ್ಧನ್ ಎಲ್ಲಾ ಆಸ್ತಿಯೂ ಇದೀಗ ನನ್ನ ಪಾಲಿಗೆ ಬರುತ್ತೆ ಎಂದು ಹಗಲುಗನಸು ಕಾಣುತ್ತಿರುವುದಂತು ಸತ್ಯ. ಆಫೀಸಿನಲ್ಲಿ ಎಲ್ಲಾ ಕೆಲಸಗಾರರನ್ನು ಕರೆದು ಮೀಟಿಂಗ್ ಕೂಡ ನಡೆಸಿದ್ದಾರೆ. ಇದೀಗ ಸತ್ಯ ತಿಳಿದ ರಾಜನಂದಿನಿ, ಆರ್ಯವರ್ಧನ್ ವಿರುದ್ಧ ಸೇಡು ತೀರಿಸಿಕೊಳ್ಳಲು ತಯಾರಾಗಿದ್ದಾಳೆ. ತಂದೆಗೂ ಸಾವಿನ ಹಲವು ದಿನಗಳ ಹಿಂದಷ್ಟೇ ಆರ್ಯವರ್ಧನ್ ಮುಖವಾಡ ಗೊತ್ತಾಗಿತ್ತು ಎಂದು ರಾಜ ನಂದಿನಿಗೆ ಜಲಾಂಧರ್ ತಿಳಿಸಿರುತ್ತಾನೆ.

  ಜೈಲಿನಲ್ಲಿ ಅಸಲಿ ವಿಷಯ ರಿವೀಲ್

  ಜೈಲಿನಲ್ಲಿ ಅಸಲಿ ವಿಷಯ ರಿವೀಲ್

  ಇದೀಗ ಜಲಾಂಧರ್ ಕೂಡ ಜೈಲು ಪಾಲಾಗಿರುವುದು ರಾಜ ನಂದಿನಿಗೆ ತಿಳಿದು ಜಲಾಂಧರನ್ನು ಭೇಟಿಯಾಗಲು ರಾಜನಂದಿನಿ ಆಗಮಿಸಿತ್ತಾಳೆ. ಆ ವೇಳೆ ಜಲಾಂಧರ್ ಎಲ್ಲಾ ವಿಚಾರಗಳನ್ನು ಹೇಳುತ್ತಾನೆ. ಆದ್ರೆ ಇದಿಕ್ಕಿಂತ ಮುಂಚೆನೂ ರಾಜನಂದಿನಿಗೆ ಆರ್ಯವರ್ಧನ್ ಮುಖವಾಡ ಕಳಚುವ ಪ್ರಯತ್ನ ಜಲಾಂಧರ್ ಮಾಡಿರುತ್ತಾನೆ. ಆರ್ಯ ತನ್ನ ಆಫೀಸಿನಲ್ಲಿ ಮಾಡಿದ ಕುತಂತ್ರ ಕೆಲಸದಿಂದ ಆತನನ್ನು ಕೆಲಸದಿಂದಲೇ ತೆಗೆದು ಹಾಕಿದ ವಿಚಾರ ಹೀಗೆ ಹಲವು ವಿಚಾರಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ ಜಲಾಂಧರ್.

  ಸೇಡು ತೀರಿಸಿಕೊಳ್ಳಲು ಮುಂದಾದ ರಾಜನಂದಿನಿ

  ಸೇಡು ತೀರಿಸಿಕೊಳ್ಳಲು ಮುಂದಾದ ರಾಜನಂದಿನಿ

  ಇದೀಗ ಜಲಾಂಧರ್ ಜೈಲು ಪಾಲು ಆಗಿದನ್ನು ನೋಡಿದ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನಾದರೂ ನಾನು ಸುಳ್ಳು ಹೇಳಿ ಏನು ಪ್ರಯೋಜನ ಎಂದು ರಾಜನಂದಿನಿ ಬಳಿ ಹೇಳುತ್ತಾನೆ. ರಾಜ ನಂದಿನಿಗೆ ದುಃಖ ತಡೆದುಕೊಳ್ಳಲಾಗದೇ ಅತ್ತೆಬಿಡುತ್ತಾಳೆ. ಹಾಗೆಯೇ ಆರ್ಯವರ್ಧನ್ ವಿರುದ್ಧ ರಾಜನಂದಿನಿಗೆ ಪ್ರೀತಿ ಮಾತ್ರ ಇರುತ್ತದೆ ಅದು ಸೇಡಾಗಿ ಪರಿವರ್ತನೆ ಆಗುತ್ತದೆ. ಆರ್ಯವರ್ಧನ್‌ಗೆ ಬುದ್ಧಿ ಕಲಿಸದೇ ನಾನು ಬಿಡುವುದಿಲ್ಲ ಎಂದು ರಾಜನಂದಿನಿ ಶಪಥ ಮಾಡಿದ್ದಾಳೆ. ಪ್ರೇಕ್ಷಕರಿಗೆ ಇನ್ನೂ ಕುತೂಹಲ ಜಾಸ್ತಿಯಾಗಿದೆ. 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಇನ್ನೇನೆಲ್ಲಾ ನಡೆಯುತ್ತೆ ಎಂಬುವುದನ್ನು ಕಾದು ನೊಡಬೇಕಾಗಿದೆ.

  English summary
  Zee Kannada Jothe Jotheeyali Serial Highlight. Hear is the details.
  Wednesday, April 27, 2022, 9:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X