ಜೊತೆ ಜೊತೆಯಲಿ: ಅನು ಸಿರಿಮನೆ ತಂದೆ ಸುಬ್ಬುನ ಆಸ್ಪತ್ರೆಗೆ ಕರೆದುಕೊಂಡು ಹೋದ ಅವಾಂತರ ಹೇಗಿತ್ತು?
ಅನು ಬಗ್ಗೆ ಯೋಚನೆ ಮಾಡಿ ಮಾಡಿ ಸುಬ್ಬು ಇತ್ತೀಚೆಗೆ ಸಣ್ಣ ಹಾರ್ಟ್ ಅಟ್ಯಾಕ್‌ನಿಂದ ಆಸ್ಪತ್ರೆ ಸೇರಿದ್ದು ಎಲ್ಲರಿಗೂ ನೆನಪಿರಬೇಕು. ಆದರೆ ಹಂಗೆ ಆಸ್ಪತ್ರೆ ಸೇರುವಾಗ ಎಷ್ಟು ರಿಸ್ಕ್ ಇತ್ತು. ಅದರ ಹಿಂದೆ ಯಾರೆಲ್ಲಾ ಕೆಲಸ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿರಲ್ಲ. ಆ ಒಂದು ದೃಶ್ಯದ ಸಣ್ಣ ಝಲಕ್ ಒಂದನ್ನು ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಗಳ ಜೀವನ ಏನೇನೋ ಆಗುತ್ತಿದೆ ಎಂಬುದೇ ಸುಬ್ಬುಗಿರುವ ಚಿಂತೆ. ಅನು ಈಗಾಗಲೇ ತನ್ನ ಪುನರ್ಜನ್ಮದ ಬಗ್ಗೆ ಸುಬ್ಬು ಮತ್ತು ಪುಷ್ಪ ಬಳಿ ಹೇಳಿದ್ದಾಳೆ. ನಂಬುವುದೇನೋ ನಂಬಿರುವ ಸುಬ್ಬು ಮಗಳ ಬಗ್ಗೆಯೇ ಚಿಂತೆಗೀಡಾಗಿದ್ದಾರೆ. ಮೊದಲೇ ಆರೋಗ್ಯ ಸರಿಯಿಲ್ಲದ ಸುಬ್ಬುಗೆ ಆಗಾಗ ಈ ರೀತಿ ಆಸ್ಪತ್ರೆಯ ಬಾಗಿಲು ತಟ್ಟುವಂತೆ ಮಾಡುತ್ತಿದೆ.

ಅಳಿಯ ಆರ್ಯವರ್ಧನ್ ಮೇಲೆ ಅಪಾರ ಪ್ರೀತಿ
'ಜೊತೆ ಜೊತೆಯಲಿ' ಧಾರಾವಾಹಿ ಒಂದಷ್ಟು ಟ್ವಿಸ್ಟ್ ಅಂಡ್ ಟರ್ನಿಂಗ್‌ನಿಂದಾಗಿ ಮುನ್ನುಗ್ಗುತ್ತಿದೆ. ಆರ್ಯನಿಗೆ ನಡೆಯುತ್ತಿರುವ ಸತ್ಯ ಗೊತ್ತಾಗುತ್ತಿಲ್ಲ. ಅನು ಇನ್ನಷ್ಟು ಸಾಕ್ಷಿಗಳ ಹಿಂದೆ ಬಿದ್ದಿದ್ದಾಳೆ. ಅನು ಸಿರಿಮನೆಯನ್ನೇ ಝೇಂಡೆ ಫಾಲೋ ಮಾಡುತ್ತಿದ್ದಾನೆ. ಆರ್ಯ ಕೂಲಾಗಿದ್ದರೆ, ಝೇಂಡೆ ಟೆನ್ಶನ್‌ನಿಂದಲೇ ಪ್ರತಿ ದಿನ ಕೊರಗುತ್ತಿದ್ದಾನೆ. ಹೀಗಾಗಿ ಧಾರಾವಾಹಿ ಫುಲ್ ಇಂಟ್ರೆಸ್ಟಿಂಗ್ ಅನ್ನಿಸ್ತಾ ಇದೆ. ಇತ್ತ ಸುಬ್ಬು ಮಗಳ ಜೀವನದ ಬಗ್ಗೆ ಯೋಚಿಸಿ ಯೋಚಿಸಿ ಹಾಸಿಗೆ ಹಿಡಿಯುವಂತೆ ಆಗಿದ್ದಾನೆ. ಇತ್ತೀಚೆಗಷ್ಟೇ ಹಾರ್ಟ್ ಅಟ್ಯಾಕ್ ಆಗಿ, ಮಕ್ಕಳ ಅಕ್ಕರೆಯ ಆರೈಕೆಯಿಂದ ಹುಷಾರಾಗಿ ಮನೆಗೆ ಬಂದಿದ್ದಾರೆ ಸುಬ್ಬು.

ಸುಬ್ಬು ಆಸ್ಪತ್ರೆಗೆ ಹೋದ ಸುಬ್ಬು!
ಒಂದು ಧಾರಾವಾಹಿಯಾಗಲಿ, ಸಿನಿಮಾವಾಗಲಿ ಶೂಟಿಂಗ್ ಹಿಂದಿನ ಸಂಕಷ್ಟ ಯಾರಿಗೂ ತಿಳಿದಿರುವುದಿಲ್ಲ. ನಮ್ಮ ಕಣ್ಣಿಗೆ ಕಾಣುವುದು ಕ್ಯಾಮೆರಾ, ಎಡಿಟರ್ ಕೊಟ್ಟ ಫೈನಲ್ ಟಚ್. ಆದರೆ ಸುಬ್ಬುನಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಾ ಆ ಒಂದು ದೃಶ್ಯಕ್ಕೆ ಯಾರೆಲ್ಲಾ ವರ್ಕ್ ಮಾಡಿದ್ದಾರೆ. ಆ ವರ್ಕ್ ನ ಹಿಂದಿನ ಎಫರ್ಟ್ ಎಷ್ಟಿದೆ ಎಂಬುದು ಮೇಕಿಂಗ್ ವಿಡಿಯೋ ಮೂಲಕ ತಿಳಿಯುತ್ತಿದೆ. ಮೇಘಾ ಶೆಟ್ಟಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಆಸ್ಪತ್ರೆಗೆ ಸೇರಿಸುವ ದೃಶ್ಯ ತೆಗೆಯುವುದು ಸುಲಭವಲ್ಲ
ಆಸ್ಪತ್ರೆಗೆ ಯಾರನ್ನಾದರೂ ಸೇರಿಸುವ ದೃಶ್ಯ ಹೇಗಿರುತ್ತೆ ಎಂದರೆ, ಅಕ್ಕ ಪಕ್ಕದಲ್ಲಿರುವವರ ಕಣ್ಣೀರು. ವೀಲ್ ಚೇರ್ ಮೇಲೆ ಮಲಗಿರುವ ರೋಗಿ. ಇಲ್ಲವೆಂದರೆ ನ್ಯಾಚುರಲ್ ಆಗಿ ಬರುವುದಿಲ್ಲ. ಅದಕ್ಕೆಂದು ಎಷ್ಟು ರಿಸ್ಕಿನ ಜಾಗದಲ್ಲಿ ಕ್ಯಾಮೆರಾ ಇಟ್ಟು ಶೂಟ್ ಮಾಡಿದ್ದಾರೆ. ಮೇಘಾ ಶೆಟ್ಟಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅದು ಅನಾವರಣವಾಗಿದೆ. ಸುಬ್ಬು ವೀಲ್ ಚೇರ್‌ನಲ್ಲಿ ಮಲಗಿದ್ದರೆ, ಅವರ ಹೊಟ್ಟೆ ಮೇಲೆ ಕೂರುವಂತೆ ಒಂದು ಕ್ಯಾಮೆರಾ ಇಡಲಾಗಿದೆ. ಅದರ ಮೇಲೆಯೇ ಕ್ಯಾಮೆರಾ ಮೆನ್ ಕೂಡ ಕೂತಿದ್ದಾರೆ. ಇನ್ನು ಪುಷ್ಪ ಅಳುವ ದೃಶ್ಯ ಸೆರೆಯಾಗಬೇಕಲ್ಲವಾ? ಅದಕ್ಕೆ ಸುಬ್ಬು ಇಲ್ಲದೆ ಖಾಲಿ ವೀಲ್ ಚೇರ್ ಮೇಲೆ ಕ್ಯಾಮೆರಾ ಇಟ್ಟು ಪುಷ್ಪಾಳಿಂದ ಗೋಳಾಡಿಸಲಾಗಿದೆ. ಒಟ್ಟಾರೆ ಅದು ಸಂಕಟ ಪಡುವ ದೃಶ್ಯವಾದರೂ ಮೇಕಿಂಗ್ ವಿಡಿಯೋದಲ್ಲಿ ನೋಡುವಾಗ ಕ್ಯಾಮೆರಾಮ್ಯಾನ್ ಮೇಲೆ ಕನಿಕರ ಹುಟ್ಟದೆ ಇರುವುದಿಲ್ಲ.
ಅನು ಕೊಲ್ಲಲು ಝೇಂಡೆ ಫ್ಲ್ಯಾನ್
ಜಲಂಧರ್‌ನನ್ನು ನಾನೇ ಕೊಂದಿದ್ದೇನೆಂದು ಆರ್ಯವರ್ಧನ್ ಆರಾಮಾಗಿದ್ದಾನೆ. ಆದರೆ ಜಲಂಧರ್ ಬದುಕಿರುವುದು ಝೇಂಡೆಗೆ ತಿಳಿದಿದೆ. ಹೀಗಾಗಿ ಅದನ್ನು ಹೇಳಲು ಹೋದರು ಆರ್ಯ ನಂಬುತ್ತಿಲ್ಲ. ಅನು ಝೇಂಡೆಯನ್ನು ಭೇಟಿ ಮಾಡಿದ್ದಾಳೆ ಎಂದರು ನಂಬುತ್ತಿಲ್ಲ. ಅನು, ಜಲಂಧರ್ ಬಳಿ ಎಲ್ಲಾ ಮಾಹಿತಿಯನ್ನು ಪಡೆಯುವಾಗ ಝೇಂಡೆ ಕಡೆಯವರು ಫೋಟೊ ಕ್ಲಿಕ್ಕಿಸಿದ್ದಾನೆ. ಇದರ ಪ್ರೂಫ್ ತೋರಿಸಿದರು ಆರ್ಯ, ಝೇಂಡೆ ಮಾತು ನಂಬಲು ರೆಡಿ ಇಲ್ಲ. ಕಡೆಗೆ ಝೇಂಡೆ ನಾವೂ ಸೋಲಬಾರದು. ಆ ರಾಜನಂದಿನಿ ಬದುಕಿದ್ದರೆ ಏನು ಮಾಡುತ್ತಿದ್ದಳೋ, ಈಗ ಅನು ಅದೇ ಮಾಡಲು ಹೊರಟಿದ್ದಾಳೆ. ಅವಳನ್ನು ಕೊಂದು ಬಿಡು ಎಂದು ಹೇಳಿದ್ದಾನೆ.


Click it and Unblock the Notifications











