Don't Miss!
- Lifestyle
ಮಂಕಿಪಾಕ್ಸ್ vs ಕೊರೊನಾವೈರಸ್: ಈ ಎರಡು ವೈರಸ್ನಲ್ಲಿ ಮೈ ಮೇಲೆ ಏಳುವ ಗುಳ್ಳೆಗಳು ಹೇಗೆ ಭಿನ್ನವಾಗಿವೆ?
- Technology
ಇನ್ಮುಂದೆ ನಿಮ್ಮ ಕೆಮ್ಮು ಮತ್ತು ಗೊರಕೆಗಳನ್ನು ಕೂಡ ಟ್ರ್ಯಾಕ್ ಮಾಡಲು ಗೂಗಲ್ ಪ್ಲಾನ್!
- Automobiles
ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಕಾರು ಮಾದರಿಗಳಿವು!
- Sports
RCB vs RR: ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿ ಹೀನಾಯ ಸೋಲಿಗೆ ಈ 6 ಆಟಗಾರರೇ ಕಾರಣ!
- News
ಪಂಕ್ಚರ್ ಅಂಗಡಿ ಅನಕ್ಷರಸ್ಥನಿಂದ ವರ್ಷಕ್ಕೆ 7 ಕೋಟಿ ಸಂಪಾದನೆ
- Finance
ಕಾರು, ಬೈಕು ಖರೀದಿಗೆ ಮುನ್ನ ಗಮನಿಸಿ, ಜೂನ್ 1ರಿಂದ ವಿಮೆ ಮೊತ್ತ ಏರಿಕೆ
- Education
KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜೊತೆ ಜೊತೆಯಲಿ: ಶಾರದಾ ದೇವಿ ಬಳಿ ಸತ್ಯ ಒಪ್ಪಿಕೊಳ್ಳಲು ಬಂದ ಅನು.. ಧಾರಾವಾಹಿಯಲ್ಲಿ ಮಹಾ ಟ್ವಿಸ್ಟ್!
ಒಂದು ಧಾರಾವಾಹಿ ಜನರನ್ನು ಎಷ್ಟು ಹಿಡಿದುಕೊಂಡಿರುತ್ತದೆ ಎಂಬುದು ಅವರು ಮಾಡುವ ಒಂದೊಂದು ಕಮೆಂಟ್ ಮೇಲೆ ಗೊತ್ತಾಗುತ್ತದೆ. 'ಜೊತೆ ಜೊತೆಯಲಿ' ಧಾರಾವಾಹಿ ಆರಂಭವಾದಾಗ ನಂಬರ್ ಒನ್ ಸ್ಥಾನಕ್ಕೆ ಬಂದು ನಿಂತಿತ್ತು. ಬಳಿಕ ಹೊಸ ಹೊಸ ಧಾರಾವಾಹಿಗಳು ಬಂದ ಮೇಲೆ, ವಿಭಿನ್ನ ಕಥೆಗಳು ಬಂದ ನಂತರ ನಂಬರ್ ಒನ್ ಸ್ಥಾನ ಬಿಟ್ಟುಕೊಟ್ಟಿದೆ. ಆದರೂ ಒಂದಷ್ಟು ಪ್ರೇಕ್ಷಕರ ವರ್ಗ ಆಕಡೆ ಈ ಕಡೆಯಾಗದೆ ಅನು ಸಿರಿಮನೆಯನ್ನು ಫಾಲೋ ಮಾಡುತ್ತಿದ್ದಾರೆ. ಅದಕ್ಕೆ ಉದಾಹರಣೆ ಇಂದಿನ ಪ್ರೋಮೋದಲ್ಲಿಯೇ ಬಂದಿರುವ ಕಮೆಂಟುಗಳು.
ಅನು ಸಿರಿಮನೆ ಬದುಕಲ್ಲಿ ನಾನಾ ತಿರುವು ಪಡೆದುಕೊಂಡಿದೆ. ಹೆಸರಲ್ಲಿಯೇ ಇದ್ದ, ಕತ್ತಲೆ ಕೋಣೆಯಲ್ಲಿ ರಾಜನಂದಿಯ ಪರಿಚಯವು ಆಗಿದೆ. ಆದರೆ ಈ ಪರಿಚಯದ ನಡುವೆ ಅನು ರಾಜನಂದಿನಿಯಾಗಿ ಪರಿವರ್ತನೆಯಾಗಿದ್ದಾಳೆ. ಅದು ಈಗಾಗಲೇ ಮನೆಯ ಹಲವರಿಗೆ ಗೊತ್ತಾಗಿದೆ. ಇನ್ನೇನಿದ್ದರು ಮುಖ್ಯವಾಗಿ ಶಾರದಾ ದೇವಿಗೆ ತಿಳಿಯಬೇಕಿದೆ. ಈ ಎಪಿಸೋಡಿಗಾಗಿ ಇಡೀ 'ಜೊತೆ ಜೊತೆಯಲಿ' ಪ್ರೇಕ್ಷಕರ ವರ್ಗ ಕಾಯುತ್ತಿದೆ.
ಯಮುನಾ
ಶ್ರೀನಿಧಿ:
ಮೈಸೂರಿನ
ಯಮುನಾ
ʻಕಮಲಿʼ
ಅಮ್ಮ
ಆಗಿದ್ದು
ಹೇಗೆ..?

ಅಮ್ಮ-ಮಗಳ ಬಾಂಧವ್ಯ ನೋಡಲು ಕಾತುರರಾದ ಫಾಲೋವರ್ಸ್
ರಾಜನಂದಿನಿ ಸತ್ತ ಮರುಕ್ಷಣವೇ ಜನಿಸಿದವಳು ಅನು ಸಿರಿಮನೆ. ಆಗಾಗ ರಾಜನಂದಿನಿ ನೆರಳಾಗಿ, ನೆನಪಾಗಿ ಕಾಡುತ್ತಿದ್ದಳು. ಆದರೆ ಎಂದಿಗೂ ಮನಸ್ಸಿನಲ್ಲಿ ಮರು ಜನ್ಮದ ಹುಟ್ಟು ಸಂಪೂರ್ಣವಾಗಿ ಕಾಡಿರಲಿಲ್ಲ. ಇದೀಗ ಜನ್ಮ ರಹಸ್ಯ ಗುಟ್ಟಾಗಿ ಉಳಿದಿಲ್ಲ. ಅನುವಿನ ಈ ಹಿಂದಿನ ಸಮಸ್ಯೆಗಳಿಗೆಲ್ಲಾ ತಾಯಿ ಯಲ್ಲವ್ವ ಪರಿಹಾರ ನೀಡಿದ್ದಾಳೆ. ತಾನೇ ರಾಜನಂದಿನಿ ಎಂಬುದನ್ನು ಅರಿವು ಮಾಡಿದ್ದಾಳೆ. ಈ ಬಗ್ಗೆ ಹೇಳಿದಾಗ ಸುಬ್ಬು-ಪುಷ್ಪ ಗೊಂದಲಕ್ಕೀಡಾಡಗಿದ್ದಾರೆ. ನನ್ನ ಮಗಳಿಗೆ ಇದೇನಾಯಿತು ಅಂತ. ಆದರೆ ಅನು ಎಲ್ಲಾ ಸತ್ಯವನ್ನು ಒಪ್ಪಲೇಬೇಕೆಂದು ಹೇಳಿದ್ದಾಳೆ. ಇದೀಗ ಬಹು ಮುಖ್ಯ ಘಟ್ಟವೆಂದರೆ ಅದು ಶಾರದಾ ದೇವಿಯ ಬಳಿಗೆ ಬಂದು ತನ್ನ ಹುಟ್ಟಿನ ಸತ್ಯವನ್ನು ಹೇಳಿಕೊಳ್ಳುವುದು. ಅದಕ್ಕೆ ಅನು ಸಿದ್ಧವಾಗಿದ್ದಾಳೆ. ಅನು ಅಷ್ಟು ಎಕ್ಸೈಟ್ ಆಗಿದ್ದಾಳೋ ಇಲ್ಲವೋ ಗೊತ್ತಿಲ್ಲ. ಆದರೆ ವೀಕ್ಷಕರು ಮನಸ್ಸಿನಲ್ಲೇ ತಳಮಳ ಅನುಭವಿಸುತ್ತಿದ್ದಾರೆ. ಎಷ್ಟೊತ್ತಿಗೆ ಜೊತೆಜೊತೆಯಲಿ ಪ್ರಸಾರ ಆಗುತ್ತೋ ಅಂತ ಕಾಯುತ್ತಿದ್ದಾರೆ.

ಹರ್ಷನಿಗೇಕೆ ಸತ್ಯ ಗೊತ್ತಾಗಬಾರದು?
ಹರ್ಷ ಮತ್ತು ರಾಜನಂದಿನಿ ಇಬ್ಬರು ಮಕ್ಕಳು. ತಮ್ಮ ಎಂದರೆ ರಾಜನಂದಿಗೆ ಎಲ್ಲಿಲ್ಲದ ಪ್ರೀತಿ. ರಾಜನಂದಿನಿ ಸಾಯುವುದಕ್ಕೂ ಮುನ್ನ ಹರ್ಷ ತುಂಬಾ ಚಿಕ್ಕವನು. ಅನು ಮದುವೆಯಾಗಿ ಅತ್ತಿಗೆಯಾಗಿ ಮನೆಗೆ ಬಂದಾಗಿ ಹರ್ಷ ತುಂಬಾ ಖುಷಿಯಾಗಿದ್ದ. ರಾಜನಂದಿನಿಯ ನೆನಪುಗಳು ಅರಿವಿಲ್ಲದೆ ಇಬ್ಬರ ನಡುವೆ ಬಂದು ಹೋಗುತ್ತಿತ್ತು. ಆಟ ಆಡುತ್ತಿದ್ದ ಆಟಗಳು, ಓಡಾಡುತ್ತಿದ್ದ ಜಾಗ ಎಲ್ಲವೂ ಇಬ್ಬರ ನಡುವೆ ಹಸಿರಾಗಿತ್ತು. ಈಗ ಅನುನೇ, ರಾಜನಂದಿನಿ ಅಂತ ಹರ್ಷನಿಗೆ ಗೊತ್ತಾದರೆ ಹರ್ಷವೋ ಹರ್ಷ. ಆದರೆ ಇದನ್ನು ವೀಕ್ಷಕರು ಬಯಸುತ್ತಿಲ್ಲ. ಇವತ್ತಿನ ಎಪಿಸೋಡಿನ ಪ್ರೋಮೋಗೆ ಕಮೆಂಟ್ ಹಾಕಿರುವ ರೀತಿ ನೋಡಿದರೆ ಹರ್ಷನಿಗೆ ಈ ವಿಚಾರ ತಿಳಿಸುವುದು ಬೇಡ ಎಂದೇ ಬಯಸುತ್ತಿದ್ದಾರೆ. ಕಮೆಂಟ್ ಹಾಕಿರುವ ಪ್ರಕಾರ, ಅಮ್ಮ ಮಗಳ ಸಂಚಿಕೆ ತುಂಬಾ ಚೆನ್ನಾಗಿದೆ. ಆದರೆ ಈ ವಿಚಾರ ಹರ್ಷನಿಗೆ ತಿಳಿಯುವುದು ಬೇಡ. ತಿಳಿದರೆ ಧಾರಾವಾಹಿ ಇಲ್ಲಿಗೆ ನಿಂತು ಹೋಗುತ್ತದೆ. ಇನ್ನು ಎರಡು ವರ್ಷ ಧಾರಾವಾಹಿ ಮೂಡಿಬರಬೇಕು ಎಂದು ಹಾಕಿದ್ದಾರೆ.
ರಾಜನಂದಿನಿಯೇ
ಅನು
ಸಿರಿಮನೆ
ಮರುಜನ್ಮ:
ಆರ್ಯವರ್ಧನ್‌ಗೆ
ಮುಂದೈತೆ
ಮಾರಿ
ಹಬ್ಬ!

ಅನು ನಟನೆ ಹಾಡಿ ಕೊಂಡಾಡಡಿದ ವೀಕ್ಷಕರು
ಅನು ಈ ಧಾರಾವಾಹಿಯಲ್ಲಿ ತುಂಬಾ ಸಿಂಪಲ್ ಆಗಿರುವ ಹುಡುಗಿ. ಬಡವರ ಮನೆಯಿಂದ ಶ್ರೀಮಂತರ ಮನೆಯ ಸೊಸೆಯಾಗಿ ಬಂದರು ಕೂಡ ಎಲ್ಲಿಯೂ ಬದಲಾವಣೆಯಾಗಿಲ್ಲ. ಇಷ್ಟು ದಿನ ನೋಡಿದ ಅನುಗಿಂತ ವೀಕ್ಷಕರಿಗೆ ಇಷ್ಟವಾಗಿದ್ದು ರಾಜನಂದಿನಿ ಅನುವಾಗಿ ಬದಲಾದಾಗ. ಸಾಕಷ್ಟು ಜನ ಕಮೆಂಟ್ ಬಾಕ್ಸ್‌ನಲ್ಲಿ ಅನು ನಟನೆಯನ್ನು ಹೊಗಳಿ ಬರೆದಿದ್ದಾರೆ. ಅಮ್ಮ ಮಗಳ ಭಾವುಕ ಸನ್ನಿವೇಶ ನೋಡಲು ಕಾತುರದಿಂದ ಕಾಯುತ್ತಿದ್ದೇವೆ ಎಂದಿದ್ದಾರೆ. ಇಂತ ಸಮಯದಲ್ಲಿ ಅನು ನಟನೆ ಅದ್ಭುತವಾಗಿದೆ ಎಂದು ಕಮೆಂಟ್ ಹಾಕಿದ್ದಾರೆ.

ಆರ್ಯನ ಮೇಲೆ ಸೇಡು ತೀರಿಸಿಕೊಳ್ಳುತ್ತಾಳಾ ಅನು?
'ಜೊತೆ ಜೊತೆಯಲಿ' ಧಾರಾವಾಹಿ ಮೊದಲಿಗೆ ಬೇರೆ ರೀತಿಯಲ್ಲಿಯೇ ಸಾಗುತ್ತಿತ್ತು. ಈ ಧಾರಾವಾಹಿಯಲ್ಲಿ ಆರ್ಯ ಸಾಯುತ್ತಾನೆ ಎಂದಾಕ್ಷಣ ವೀಕ್ಷಕರು ರೊಚ್ಚಿಗೆದ್ದಿದ್ದರು. ಆಗ ಕಥೆಯಲ್ಲಿಯೇ ಬದಲಾವಣೆಯಾಯಿತು. ಪ್ರೇಕ್ಷಕರು ಬಯಸಿದಂತೆ ಕಥೆಯಲ್ಲಿ ಚೇಂಜಸ್ ಮಾಡುತ್ತಾ ಸಾಗಿದೆ ತಂಡ. ಇದೀಗ ಆರ್ಯನ ವಿಚಾರದಲ್ಲಿ ಅನು ಸಿರಿಮನೆ ಏನು ನಿರ್ಧಾರ ತೆಗೆದುಕೊಳ್ಳುತ್ತಾಳೆ ಎಂಬ ಕುತೂಹಲವಿದೆ. ಯಾಕೆಂದರೆ ಆರ್ಯ ಕಥೆ ಕಟ್ಟುವುದರಲ್ಲಿ ನಿಸ್ಸೀಮ. ಅನುಳನ್ನು ಒಲಿಸಿಕೊಳ್ಳಲು ನಾನಾ ಕಥೆಗಳನ್ನು ಹೇಳಿದ್ದಾನೆ. ಈಗ ತಾನೇ ರಾಜನಂದಿನಿ, ತನ್ನ ಹಿಂದಿನ ಜನ್ಮದ ಸಾವಿಗೆ ಕಾರಣ ಆರ್ಯ ಎಂದು ಗೊತ್ತಾಗಿದೆ. ಸತ್ಯ ಹೇಳಿದರೆ ಅನು ಜೀವಕ್ಕೂ ಕುತ್ತು ಬರುತ್ತೆ? ಮುಂದೆ ಅನು ನಿರ್ಧಾರ ಏನು ಎಂಬುದು ಇಂದಿನ ಸಂಚಿಕೆಯಲ್ಲಿ ರಿವೀಲ್ ಆಗಬಹುದು.