ಜೊತೆ ಜೊತೆಯಲಿ: ಅನು ನಂಬಿರುವುದೇ ಸುಳ್ಳಾ? ಆರ್ಯನ ಆಕ್ಸಿಡೆಂಟ್ ಎಲ್ಲದಕ್ಕೂ ಉತ್ತರ ನೀಡುತ್ತಾ?
ರಾಜನಂದಿನಿಯ ಪುನರ್‌ಜನ್ಮ ಅನು ಸಿರಿಮನೆ ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ಆರ್ಯನಿಗೆ ಸಂಪೂರ್ಣವಾಗಿ ತಿಳಿದಿಲ್ಲ, ಝೇಂಡೆಗೆ ನೂರೆಂಟು ಟೆನ್ಶನ್. ಕಷ್ಟಪಟ್ಟು ಕಟ್ಟಿದ ಕೋಟೆ ಒಡೆದು ಹೋಗಬಹುದೆಂಬ ಭಯ ಝೇಂಡೆಯನ್ನು ಕಾಡುತ್ತಿದೆ. ಇದೆಲ್ಲವನ್ನೂ ಹೇಳಿಕೊಳ್ಳಲು ಹೊರಟರೆ ಆರ್ಯ ಎಲ್ಲವನ್ನೂ ನಿರ್ಲಕ್ಷ್ಯದಿಂದಲೇ ತಳ್ಳಿ ಹಾಕುತ್ತಿದ್ದಾನೆ. ಇದು ಮತ್ತಷ್ಟು ಅಪಾಯ ತಂದೊಡ್ಡುತ್ತೆ ಅನ್ನೋದು ಝೇಂಡೆಗಿರುವ ಆತಂಕ.
ದಿನೇ ದಿನೇ ಹೊಸ ಹೊಸ ತಿರುವಿನೊಂದಿಗೆ ಮುನ್ನುಗ್ಗುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿ ಈಗ ಮತ್ತೊಂದು ಘಟ್ಟ ತಲುಪಿದೆ. ಅನು ಮಾತ್ರ ಗೊಂದಲಕ್ಕೀಡಾಗುತ್ತಿರುವುದಲ್ಲ. ನೋಡುಗರನ್ನು ಗೊಂದಲಕ್ಕೆ ದೂಡುತ್ತಿದೆ. ಹಾಗಾದ್ರೆ ಏನದು ಎಂಬುದು ಇವತ್ತಿನ ಎಪಿಸೋಡಿನಲ್ಲಿ ಗೊತ್ತಾಗಲಿದೆ.

ರಾಜನಂದಿನಿ ಸಾವಿಗೆ ಆರ್ಯ ಕಾರಣನಾ..?
ಇತ್ತೀಚೆಗೆ ಸಖತ್ ಇಂಟ್ರೆಸ್ಟಿಂಗ್ ಎಪಿಸೋಡ್ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಪ್ರಸಾರವಾಗಿತ್ತು. ಅದು ಸೀಕ್ರೆಟ್ ರೂಮಿನಲ್ಲಿದ್ದ ರಾಜನಂದಿನಿ ಎಲ್ಲರ ಎದುರು ಕಾಣಿಸಿಕೊಂಡಿದ್ದರು. ಆರ್ಯ ಪರಿಚಯವಾಗಿದ್ದು, ಲವ್ ಆಗಿದ್ದು, ಆಫೀಸಿನ ಅಧಿಕಾರವಹಿಸಿಕೊಂಡಿದ್ದು, ಮಾವನ ಕೊಲೆಗೆ ಕಾರಣವಾಗಿದ್ದು ಈ ಎಲ್ಲವನ್ನು ನೋಡಿದ್ದೀವಿ. ಜೊತೆಗೆ ಇದೆಲ್ಲಾ ಸತ್ಯ ರಾಜನಂದಿನಿಗೆ ತಿಳಿದ ಮೇಲಂತು ಕೆಂಡಾಮಂಡಲವಾಗುತ್ತಾಳೆ. ಆರ್ಯನನ್ನು ಜೈಲಿಗೆ ಕಳುಹಿಸಬೇಕೆಂದು ನಿರ್ಧಾರ ಮಾಡುತ್ತಾಳೆ. ಆದರೆ ಆರ್ಯನ ಜೊತೆ ಮಾತನಾಡುವಾಗ ಜಗಳವಾಡಿಕೊಂಡು ವಾಪಾಸ್ ಆಗುವಾಗ ಬೆಟ್ಟದಿಂದ ಕಾಲು ಜಾರಿ ಬೀಳುತ್ತಾಳೆ. ಈ ಸಮಯದಲ್ಲಿ ಆರ್ಯ ಕಾಪಾಡಬೇಕಿತ್ತು. ಆದರೆ ತೀರಾ ಗಾಬರಿಯಿಂದ ಆ ಪ್ರಯತ್ನಕ್ಕೆ ಕೈ ಹಾಕಲಿಲ್ಲ. ರಾಜನಂದಿನಿ ಕೆಳಗೆ ಬಿದ್ದು ಸತ್ತೆ ಹೋದಳು. ಆದರೆ ಇಲ್ಲಿ ಆರ್ಯ ಆಕೆಯನ್ನು ತಳ್ಳಿ ಸಾಯಿಸಿಲ್ಲ.

ಸತ್ಯ ಅರಗಿಸಿಕೊಳ್ಳದ ಸ್ಥಿತಿಯಲ್ಲಿದ್ದಾನೆ ಹರ್ಷ
ಹರ್ಷ ತುಂಬಾ ಮುಗ್ಧ. ಆರ್ಯ ಫ್ಲ್ಯಾನ್ ಮಾಡಿಯೇ ಆತನನ್ನು ಆ ರೀತಿ ಬೆಳೆಸಿರುವುದು. ದಾದಾನನ್ನು ಬಿಟ್ಟರೆ ಪ್ರಪಂಚವೇ ಆರ್ಯನಿಗೆ ಗೊತ್ತಿಲ್ಲ. ಆದರೆ ಇದನ್ನು ಅನು ಒಂದೊಂದೆ ಬದಲಾಯಿಸುತ್ತಾ ಹೋಗುತ್ತಿದ್ದಾಳೆ. ಆರ್ಯನ ಜಾಗದಲ್ಲಿ ಹರ್ಷನನ್ನು ಕೂಡಿಸಿದ್ದಾಳೆ. ಇದರ ಜೊತೆಗೆ ಹರ್ಷನ ಕೆಲಸಕ್ಕೆ ಅಡ್ಡಿ ಬರುವವರ ಬಣ್ಣವನ್ನು ಬಯಲು ಮಾಡುತ್ತಿದ್ದಾಳೆ. ಅದರಲ್ಲಿ ನಕಲಿ ಹೂಡಿಕೆದಾರನ ಬಣ್ಣ ಕೂಡ ಬಯಲಾಗಿದೆ. ಇದೇ ವೇಳೆ ಆರ್ಯ ಮತ್ತು ಝೇಂಡೆ ಮಾಡಿದ ಎಲ್ಲಾ ಕಿತಾಪತಿಯನ್ನು ತಿಳಿಸಿದ್ದಾಳೆ. ಇದು ಹರ್ಷನಿಗೆ ಅರಗಿಸಿಕೊಳ್ಳಲಾಗದ ತುತ್ತಾಗಿದೆ. ದಾದಾ ಈ ರೀತಿ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾನೆ. ಆದರೆ ಇದೆಲ್ಲವನ್ನು ನಂಬಲೇಬೇಕು. ನಾನು ನಿನ್ನ ಅಕ್ಕ ರಾಜನಂದಿನಿ ಎಂದು ಗದರಿದಾಗ ಸೈಲೆಂಟ್ ಆಗಿಹೋದ ಹರ್ಷ, ಈ ಎಲ್ಲಾ ಸತ್ಯವನ್ನು ದಾದಾನ ಕೇಳಿ ಪಡೆಯುತ್ತೇನೆಂದು ಹೊರಟಿದ್ದ. ಅಷ್ಟರಲ್ಲಿ ಮತ್ತೊಂದು ಬ್ಯಾಡ್ ನ್ಯೂಸ್ ತಲುಪಿತ್ತು.

ಅನು ಸೇವೆ ಮಾಡ್ತಾಳಾ, ಸೇಡು ತೀರಿಸಿಕೊಳ್ಳುತ್ತಾಳಾ..?
ಆರ್ಯ ದೊಡ್ಡ ಮೋಸ ಮಾಡಿದ್ದಾನೆ, ತಂದೆಯ ಸಾವಿಗೆ ಕಾರಣವಾಗಿದ್ದಾನೆ. ಆಸ್ತಿಗಾಗಿ ಮಾಡಿರುವ ಆರ್ಯನಿಗೆ ಆಸ್ತಿ ಸಿಗದಂತೆ ನೋಡಿಕೊಳ್ಳಬೇಕು ಎಂದು ಅನು ನಿರ್ಧರಿಸಿದ್ದಾಳೆ. ಆದರೆ ಇದೇ ವೇಳೆ ಆಕ್ಸಿಡೆಂಟ್ ಆಗಿರುವುದು ಅನು ಮನಸ್ಸನ್ನು ಆಘಾತಕ್ಕೆ ದೂಕಿದೆ. ಇದೇ ಸಮಯದಲ್ಲಿ ಜೋಗ್ತವ್ವ ಬಂದು ಮತ್ತಷ್ಟು ಗೊಂದಲ ಮಾಡಿಟ್ಟಿದ್ದಾಳೆ. ನಾನೀಗ ಸೇವೆ ಮಾಡಲೋ, ಇಲ್ಲ ಸೇಡು ತೀರಿಸಿಕೊಳ್ಳಲೋ ಎಂದ ಅನುಗೆ ಜೋಗ್ತವ್ವ ಕೊಟ್ಟ ಉತ್ತರವೇ ಬೇರೆಯಾಗಿದೆ. ಈಗ ಅನು ನಿರ್ಧಾರದ ಮೇಲೆ ಸೇವೆ, ಸೇಡು ನಿರ್ಧಾರವಾಗಲಿದೆ.

ಆರ್ಯನ ತಪ್ಪು ಏನು ಇಲ್ಲವಾ..?
ಇಷ್ಟು ದಿನ ನೋಡಿದ ರಾಜನಂದಿನಿ ಎಪಿಸೋಡಿನಲ್ಲಿ ಆರ್ಯ ಪಕ್ಕಾ ವಿಲನ್. ರಾಜನಂದಿನಿ ಸಾವಿಗೆ ಕಾರಣವಾಗಿದ್ದು, ಆಸ್ತಿ ಹೊಡೆಯಲು ಯತ್ನಿಸಿದ್ದು, ವರ್ಧನ್‌ರನ್ನು ಸಾಯಿಸಿದ್ದು ಇದೇ ಆರ್ಯ. ಆದರೆ ಜೋಗ್ತವ್ವ ಹೇಳಿದ ಹಾಗೆ "ಪ್ರತ್ಯಕ್ಷವಾಗಿ ಕಂಡರು ಪ್ರಾಮಾಣಿಸಿ ನೋಡುವ ಕಾಲವಿದು" ಎಂಬ ಮಾತು ನೋಡುಗರಿಗೂ ಗೊಂದಲ ಮೂಡಿಸಿದೆ. ಹಾಗಾದರೆ ಇದರಲ್ಲಿ ಆರ್ಯನ ತಪ್ಪಿಲ್ಲವಾ..? ರಾಜನಂದಿನಿ ತಪ್ಪಾಗಿ ತಿಳಿದುಕೊಂಡಳಾ ಎಂಬ ಪ್ರಶ್ನೆಗಳು ಬರುತ್ತಿವೆ. ಪ್ರೇಕ್ಷಕರ ಗೊಂದಲಕ್ಕೂ ತೆರೆ ಬೀಳಬೇಕು ಎಂದರೆ ಇನ್ನು ಯಾವ್ಯಾವ ಟ್ವಿಸ್ಟ್ ಅಂಡ್ ಟರ್ನಿಂಗ್ ಸಿಗುತ್ತವೆ ಅಂತ ಕಾದು ನೋಡಬೇಕು.


Click it and Unblock the Notifications











