Don't Miss!
- News
ಭವಾನಿ ಟಿಕೆಟ್ಗೆ ರೇವಣ್ಣ, ಸೂರಜ್ ಪಟ್ಟು: ಹಾಸನ ಸ್ಥಿತಿ ಬಗ್ಗೆ ದೇವೇಗೌಡರಿಗೆ ಮನವರಿಕೆ- ಇತ್ತ ಜೆಡಿಎಸ್ ಕಚೇರಿಯಲ್ಲಿ ಎಚ್ಡಿಕೆ
- Technology
ಲಾಂಚ್ ಆಗಿಯೇ ಬಿಡ್ತು 'ವಿವೋ X90 ಪ್ರೊ' ಫೋನ್; ಖರೀದಿಗೆ ಕ್ಯೂ ಖಚಿತ!
- Automobiles
ಅತಿ ವೇತಗದ ಓವರ್ಟೇಕ್... ಎರಡು ಟ್ರಕ್ಗಳ ನಡುವೆ ಸಿಲುಕಿದ ಹ್ಯುಂಡೈ ಗ್ರಾಂಡ್ ಐ10
- Sports
Ind Vs Aus Test: ಮಾರ್ನಸ್ ಲ್ಯಾಬುಸ್ಚಾಗ್ನೆಗೆ ಈ ಮೂವರು ಭಾರತದ ಬೌಲರ್ಗಳಿಂದಲೇ ತೊಂದರೆ!
- Finance
Sharekhan Suggestions: ಟಾಟಾ ಗ್ರೂಪ್ನ ಈ ಸ್ಟಾಕ್ ಖರೀದಿಸಲು ಶೇರ್ಖಾನ್ ಸಲಹೆ
- Lifestyle
ಸಂಧಿವಾತ ಮತ್ತು ಉರಿಯೂತಕ್ಕೆ ಈ ಆಯುರ್ವೇದ ಮದ್ದುಗಳು ಪರಿಣಾಮಕಾರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೇಘಾ ಶೆಟ್ಟಿ ಹೊಸ ಫೋಟೋ ಶೂಟ್: ಕಣ್ಣೋಟಕ್ಕೆ ಬಿದ್ದೋದ್ರು ಹುಡುಗ್ರು..!
ಮಾದಕ ನೋಟ, ಮಾದಕ ಸೆಳೆತ ಅಷ್ಟು ಸುಲಭದಲ್ಲಿ ಎಲ್ಲರಿಗೂ ಬರಲ್ಲ. ಕಣ್ಣಿನ ಸೌಂದರ್ಯ ಅದಕ್ಕೆ ಬಹಳ ಮುಖ್ಯವಾಗುತ್ತೆ. ಕಣ್ಣೋಟದಲ್ಲಿಯೇ ಕೊಲ್ಲೋದು ಆ ಕಣ್ಣಿಗಿರುವ ಎಕ್ಸ್ ಟ್ರಾ ಸ್ಟ್ರೆಂತ್ ಅಂತಾನೇ ಹೇಳಬಹುದು. ಇದ್ಯಾಕಪ್ಪ ಈಗ ಕಣ್ಣೋಟದ ಪಾಠ ಅನ್ನೋ ಪ್ರಶ್ನೆಗೆ ಮೇಘಾ ಶೆಟ್ಟಿಯ ಹೊಸ ಫೋಟೋಗಳೇ ಉತ್ತರ.
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆ ಅಂದ್ರೆ ಅಪ್ಪ ಅಮ್ಮನ ಮುದ್ದಿನ ಮಗಳು, ಡೀಸೆಂಟ್ ಹುಡುಗಿ, ಯಾವಾಗಲೂ ಚೂಡಿದಾರ್ ನಲ್ಲಿಯೇ ಸೆಳೆಯುವ ಹುಡುಗಿ, ಎಲ್ಲರ ಅಚ್ಚು ಮೆಚ್ಚಿನ ಪ್ರೀತಿಯ ಬಂಗಾರ. ಆದರೆ ಇವತ್ತು ಮೇಘಾಶೆಟ್ಟಿ ಸೋಷಿಯಲ್ ಮೀಡಿಯಾವನ್ನೊಮ್ಮೆ ತೆರೆದು ನೋಡಿದರೆ, ಗಂಡು ಮಕ್ಕಳ ಹಾರ್ಟ್ ಬೀಟ್ ಹೆಚ್ಚಾಗೋದು ಗ್ಯಾರಂಟಿ. ಯಾಕೆ..? ಅಂಥದ್ದೇನಿದೆ..? ಅನ್ನೋ ಡಿಟೈಲ್ ಮುಂದಿದೆ ಓದಿ.

ಟ್ರೆಂಡಿಂಗ್ ಡ್ರೆಸ್ ನಲ್ಲಿ ಮುಳುಗಿದ ಅನು
ಮೇಘಾ ಶೆಟ್ಟಿ ಎನ್ನುವುದಕ್ಕಿಂತ ಹೆಚ್ಚಾಗಿ ಅನು ಸಿರಿಮನೆ ಅಂತಾನೇ ಕರೆಯುತ್ತಾರೆ. ಸುಬ್ಬುಗೆ ಮಾತ್ರ ಬಂಗಾರ ಅಲ್ಲ, ಧಾರಾವಾಹಿ ಪ್ರಿಯರ ಬಂಗಾರ ಕೂಡ. ಅಷ್ಟೇ ಯಾಕೆ ಈಗ ಬಾಯ್ಸ್ ಫ್ರಾನ್ಸ್ ಗೂ ಅಪ್ಪಟ ಬಂಗಾರನೇ ಆಗಿದ್ದಾರೆ ಮೇಘಾ ಶೆಟ್ಟಿ. ಯಾವಾಗಲೂ ಫೋಟೋಗಳನ್ನು ಹಂಚುವ ಮೇಘಾ ಶೆಟ್ಟಿ, ಇದೀಗ ಟ್ರೆಂಡಿಂಗ್ ಡ್ರೆಸ್ ನಲ್ಲಿ ಬ್ಯೂಟಿಫುಲ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಬೆಲ್ ಬಾಟಮ್ ನಲ್ಲಿ, ಮೋಹಕವಾಗಿ ಕಾಣಿಸಿಕೊಂಡಿದ್ದಾರೆ.

ಹೊಸ ಲುಕ್ಕಿಗೆ ಹಾರ್ಟ್ ನೀಡಿದ ಬಾಯ್ಸ್
ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿಯ ಈ ಹೊಸ ಫೋಟೊಶೂಟ್ ನೋಡಿದರೆ ಹುಡುಗಿಯರೇ ರಪ್ ಅಂತ ತಿರುಗಿ ನೋಡುವಾಗ, ಇನ್ನು ಬಾಯ್ಸ್ ನೋಡುವುದಿಲ್ಲವೇ..? ಗ್ರೀನ್ ಕಲರ್ ಬೆಲ್ ಬಾಟಮ್ ಪ್ಯಾಂಟಿಗೆ ಬಿಳಿ ಬಣ್ಣದ ಕ್ರಾಪ್ ಟೀ ಶರ್ಟ್ ಧರಿಸಿ, ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಒಂಭತ್ತು ಫೋಟೋಗಳನ್ನು ಇದೇ ಡ್ರೆಸ್ ನಲ್ಲಿ ಹಂಚಿಕಿಂಡಿದ್ದು, ವಿಭಿನ್ನ ಲುಕ್ ನೀಡಿದ್ದಾರೆ.

ಕೆಮೆಂಟ್ ನಲ್ಲಿ ಬೆಂಕಿ, ಹಾರ್ಟ್ ಎಲ್ಲಾ
ಮೇಘಾ ಶೆಟ್ಟಿ ಯಾವುದೇ ಫೋಟೋ ಹಾಕಿದರು ಆ ಫೋಟೋಗೆ ಅಭಿಮಾನಿಗಳು ಕಮೆಂಟ್ ಮಾಡುತ್ತಾರೆ. ಹೆಚ್ಚಾಗಿ ಮೊದಲು ಬಳಸುವುದೇ ಬಂಗಾರ ಎಂಬ ಪದ. ಅದಾದ ಮೇಲೆ ಹೆಚ್ಚು ಹಾರ್ಟ್ ಇಮೋಜಿಗಳು ಇರುತ್ತವೆ. ಆದರೆ ಈ ಫೋಟೋಗೆ ಕೊಂಚ ಬೇರೆಯೇ ಇದೆ. ಕಥೆ, ಕವನಗಳನ್ನೆಲ್ಲಾ ಪೋಣಿಸಿ ಕಮೆಂಟ್ ಮಾಡುತ್ತಿದ್ದಾರೆ. "ನನ್ನ ಹುಡುಗಿ ನವಿಲಂತೆ. ಅವಳ ಮನಸ್ಸು ಹೂವಂತೆ. ನನ್ನ ಪ್ರೀತಿ ಹಾಲಂತೆ" ಹೀಗೆ ವಿಧವಿಧ ರೀತಿಯಲ್ಲಿ ಹೊಗಳುತ್ತಿದ್ದಾರೆ.

ಆರ್ಯ ಸರ್ ರನ್ನು ತಂದ ಫ್ಯಾನ್
ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿಯೇ ಇರುತ್ತಾರೆ. ಧಾರಾವಾಹಿ ಮೂಲಕ ಗಮನ ಸೆಳೆದ ನಟುಗೆ ಇನ್ಸ್ಟಾಗ್ರಾಮ್ ನಲ್ಲಿ 1 ಮಿಲಿಯನ್ ಫಾಲೋವರ್ಸ್ ಸಿಗೋದು ಅಂದ್ರೆ ಸುಮ್ನೆ ಅಲ್ಲ. ಅದು ಒಂದೇ ಧಾರಾವಾಹಿ ಮೂಲಕ ಹೆಚ್ಚು ಪ್ರಚಾರ ಪಡೆದವರು ಮೇಘಾ ಶೆಟ್ಟಿ. ಧಾರಾವಾಹಿಯಲ್ಲಿ ಬೇರೆಯದ್ದೇ ಪಾತ್ರ. ಆದರೆ ರಿಯಲ್ ಲೈಫ್ ನಲ್ಲಿ ಬ್ಯೂಟಿಫುಲ್ ಆಗಿ ಇರುವುದಕ್ಕೆ ನಾನಾ ಸರ್ಕಸ್ ಕೂಡ ಮಾಡುತ್ತಾರೆ. ಅವರು ಮಾಡುವ ವರ್ಕೌಟ್ ನೋಡಿದರೇನೆ ಗೊತ್ತಾಗುತ್ತೆ. ಈಗ ಹೊಸ ಫೋಟೋಗೆ ಹಾಕಿರುವ ಕಮೆಂಟ್ ನಲ್ಲಿ "ಬಂಗಾರ ಏನಿದು ನಿಮ್ಮ ಅವತಾರ, ಆರ್ಯ ಸರ್ ನೋಡಿದ್ರೆ ಬೈತಾರೆ" ಅಂತ ಫನ್ನಿ ಫನ್ನಿಯಾಗಿ ಕಾಲೆಳೆದಿದ್ದಾರೆ.