twitter
    For Quick Alerts
    ALLOW NOTIFICATIONS  
    For Daily Alerts

    ಯಮುನಾ ಶ್ರೀನಿಧಿ: ಮೈಸೂರಿನ ಯಮುನಾ ʻಕಮಲಿʼ ಅಮ್ಮ ಆಗಿದ್ದು ಹೇಗೆ..?

    By ಎಸ್ ಸುಮಂತ್
    |

    ಜೀ ಕನ್ನಡದ 'ಕಮಲಿ' ಧಾರಾವಾಹಿ ಈಗಲೂ ಎಲ್ಲರಿಗೂ ಅಚ್ಚುಮೆಚ್ಚು. ಮಧ್ಯಾಹ್ನದಿಂದಲೂ ಧಾರಾವಾಹಿ ನೋಡದರು ರಾತ್ರಿ 10 ಗಂಟೆಗೆ ಮಲಗುವ ಮುನ್ನ 'ಕಮಲಿ' ಧಾರಾವಾಹಿ ನೋಡದೆ ಹೋದರೆ ಮಹಿಳಾ ಮಣಿಗಳಿಗೆ ಅದೆನೋ ಒಂದು ರೀತಿಯ ಸಂಕಟ. ಅಯ್ಯೋ ಪಾಪ 'ಕಮಲಿ'ಗೆ ಏನಾಯಿತೋ ಏನೋ ನೋಡಲೇ ಇಲ್ಲ ಎಂಬ ಕೊರಗು. 'ಕಮಲಿ' ಧಾರಾವಾಹಿಗೆ ಇಷ್ಟು ಪಾಪ್ಯುಲಾರಿಟಿ ಹೊಂದಿದೆ .

    'ಕಮಲಿ' ತನ್ನ ತಾಯಿಯನ್ನು ಕಳೆದುಕೊಂಡು ಅಜ್ಜಿಯಲ್ಲಿಯೇ ಅಮ್ಮನ ಪ್ರೀತಿ ಕಾಣುತ್ತಿದ್ದಳು. ಅತ್ತೆಯನ್ನೇ ತಾಯಿಯಂತೆ ಪ್ರೀತಿಸುತ್ತಿದ್ದಾಳೆ. 'ಕಮಲಿ' ತಾಯಿ ಪಾತ್ರ ಕಣ್ಮರೆಯಾಗಿದ್ದರು ಕೂಡ ಸರೋಜಾ ಅಲಿಯಾಸ್ ಗೌರಿ ಪಾತ್ರ ಎಲ್ಲರಿಗೂ ನೆನಪಿದ್ದೆ ಇರುತ್ತದೆ. ಅಷ್ಟು ಕಾಡಿದ ಪಾತ್ರವದು. ಪ್ರೀತಿಸಿದಾತನಿಗೆ ತೊಂದರೆ ಕೊಡದೆ, ಪ್ರೀತಿಯನ್ನು 'ಕಮಲಿ' ರೂಪದಲ್ಲಿ ಕಾಪಾಡಿದ ತಾಯಿ ಸರೋಜಾ.

    'ಕಮಲಿ' ತಾಯಿಯಾಗಿದ್ದ ಗೌರಿ ರಿಯಲ್ ಲೈಫ್ ಬೇರೆ

    'ಕಮಲಿ' ತಾಯಿಯಾಗಿದ್ದ ಗೌರಿ ರಿಯಲ್ ಲೈಫ್ ಬೇರೆ

    'ಕಮಲಿ' ಧಾರಾವಾಹಿಯಲ್ಲಿ ಪಕ್ಕ ಹಳ್ಳಿ ಮಹಿಳೆಯಾಗಿ ಗೌರಿ ಕಾಣಿಸಿಕೊಂಡಿದ್ದಳು. ಈಕೆಯನ್ನು ಹಳ್ಳಿಯಲ್ಲಿ ಒಂದು ಹೆಸರಲ್ಲಿ ಕರೆದರೆ ಪಟ್ಟಣದಲ್ಲಿ ಮತ್ತೊಂದು ಹೆಸರಲ್ಲಿ ಕರೆಯುತ್ತಿದ್ದರು. ಗೌರಿ, ಸರೋಜಾ, ಮಂಗಳಮ್ಮ ಹೀಗೆ ಮೂರು ಹೆಸರುಗಳು 'ಕಮಲಿ' ಧಾರಾವಾಹಿಯಲ್ಲಿಯೇ ಇತ್ತು. ಆದರೆ ಸರೋಜಾ ನಿಜವಾದ ಹೆಸರು ಈ ಮೂರು ಅಲ್ಲ. ಅವರ ನಿಜವಾದ ಹೆಸರು ಯಮುನಾ ಶ್ರೀನಿಧಿ. ಧಾರಾವಾಹಿಯಲ್ಲಿ ಪಕ್ಕಾ ಹಳ್ಳಿ ಮಗಳಂತೆ ನಟಿಸಿದ್ದ ಯಮುನಾ ರಿಯಲ್ ಲೈಫ್‌ನಲ್ಲಿ ಇರುವ ರೀತಿಯೇ ಬೇರೆಯಾಗಿದೆ. ಮೈಸೂರಿನವರಾದ ಯಮುನಾ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಹಲವು ಆಕ್ಟಿವಿಟೀಸ್‌ನಲ್ಲಿ ಭಾಗಿಯಾಗುತ್ತಿರುತ್ತಾರೆ.

    ಸಮಾಜಸೇವೆಯಲ್ಲಿ ಸದಾ ಮುಂದು

    ಸಮಾಜಸೇವೆಯಲ್ಲಿ ಸದಾ ಮುಂದು

    ಯಮುನಾ ಹಲವು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ಅಭಿನಯ ಏನೆಂಬುದನ್ನು ತೋರಿಸಿದ್ದಾರೆ. ಅದರ ಹೊರತಾಗಿಯೂ ಯಮುನಾ ಬೇರೆಯದ್ದೇ ರೀತಿಯಲ್ಲಿ ಬದುಕು ನಡೆಸುತ್ತಿದ್ದಾರೆ. NCC ಎಂದರೆ ತುಂಬಾ ಇಷ್ಟ ಪಡುವ ಯಮುನಾ ಇದರ ಮಾಜಿ ಕೆಡೆಟ್ ಕೂಡ ಆಗಿದ್ದವರು. ಈಗ ಎನ್ಸಿಸಿ ಅಲ್ಯುಮಿನಿ ಅಸೋಸಿಯೇಟ್‌ನಲ್ಲಿ ಪ್ರಮುಖ ಸದಸ್ಯರಾಗಿದ್ದಾರೆ. ಜೀವನದ ಮೌಲ್ಯಗಳನ್ನು ಕಲಿಸಿಕೊಟ್ಟ NCCಗೆ ಅನಂತಾನಂತ ವಂದನೆಗಳು ಎಂದು NCC ಮೇಲಿರುವ ಗೌರವವನ್ನು ತೋರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, NCC ವಿಚಾರದಲ್ಲಿ ಗೋವಾ ಮತ್ತು ಕರ್ನಾಟಕ ಭಾಗದಲ್ಲಿ ನಡೆಯುವ ಇವೆಂಟ್/ಪ್ರಾಜೆಕ್ಟ್‌ಗಳಲ್ಲಿ ಪಾಲ್ಗೊಳ್ಳುತ್ತಾ, NCC ಕೆಡೆಟ್‌ಗಳಿಗೆ ಪ್ರೇರಣೆ ತುಂಬುತ್ತಿರುತ್ತಾರೆ.

    ಯಮುನಾ ಹುಟ್ಟುಹಬ್ಬಕ್ಕೆ ವಿಶೇಷ ಆಚರಣೆ

    ಯಮುನಾ ಹುಟ್ಟುಹಬ್ಬಕ್ಕೆ ವಿಶೇಷ ಆಚರಣೆ

    ಮಾರ್ಚ್ 8ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಆ ವಿಶೇಷ ದಿನದಂದು ಯಮುನಾ ಅವರ ಹುಟ್ಟುಹಬ್ಬವೂ ಇದ್ದು, ಮಕ್ಕಳು ಎರಡು ದಿನವನ್ನು ವಿಶೇಷವಾಗಿ ಆಚರಿಸಿದ್ದಾರೆ. ವೃದ್ಧರ ಆಶ್ರಮಕ್ಕೆ ಕರೆದುಕೊಂಡು ಹೋಗಿ ಹುಟ್ಟುಹಬ್ಬ ಆಚರಿಸಿದ್ದಾರೆ. ಈ ಸಂಬಂಧ ಯಮುನಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ಓಮಾಶ್ರಮ" ವೃದ್ಧಾಶ್ರಮದಲ್ಲಿ ಪೋಷಕರ ಆಶೀರ್ವಾದ ಪಡೆಯಲು ಮತ್ತು ಗುಣಮಟ್ಟದ ಸಮಯವನ್ನು ಕಳೆಯಲು ನಾನು ಅದೃಷ್ಟ ಮಾಡಿದ್ದೇನೆ. ನಮ್ಮ ಮಕ್ಕಳಾದ ವೇದಾಂತ್ ಮತ್ತು ಲಾಸ್ಯ ಹಲವಾರು ವರ್ಷಗಳಿಂದ ವೃದ್ಧಾಶ್ರಮಗಳಿಗೆ ಭೇಟಿ ನೀಡುತ್ತಿರುವುದು ನನಗೆ ಸಂತಸದ ವಿಷಯ. ಹೆಚ್ಚಿನ ಜವಾಬ್ದಾರಿಗಳೊಂದಿಗೆ 47 ನೇ ವರ್ಷಕ್ಕೆ ಕಾಲಿಡುತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದು ಬರೆದುಕೊಂಡಿದ್ದಾರೆ.

    ಭರತನಾಟ್ಯ ಕಲಿತಿರುವ ಕಮಲಿ ತಾಯಿ

    ಯಮುನಾ ಬರೀ ನಟನೆಯಲ್ಲಿ ಛಾಪು ಮೂಡಿಸಿದವರಲ್ಲ. ಬದಲಿಗೆ ಭರತನಾಟ್ಯವನ್ನು ಕರಗತ ಮಾಡಿಕೊಂಡಿದ್ದಾರೆ. ಮೊದ ಮೊದಲಿಗೆ ಭರತನಾಟ್ಯ ಮಾಡುತ್ತಿದ್ದ ಯಮುನಾ, ಬಳಿಕ ಭರತನಾಟ್ಯ ಗುರುಗಳಿಂದ ವಿವಿಧ ಶೈಲಿಯ ಭರತನಾಟ್ಯವನ್ನು ಕಲಿತಿದ್ದಾರೆ. ಅಷ್ಟೇ ಅಲ್ಲ ಇವರು ವಿದೇಶದಲ್ಲಿ ಒಂದಷ್ಟು ವರ್ಷ ವಾಸವಾಗಿದ್ದವರು. ಅಮೆರಿಕದಲ್ಲಿ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿ ನೀಡಿದ್ದಾರೆ. 15 ವರ್ಷಗಳ ಕಾಲ ಅಮೆರಿಕದಲ್ಲಿಯೇ ವಾಸವಾಗಿದ್ದ ಯಮುನಾ, ಬಳಿಕ ಭಾರತಕ್ಕೆ ವಾಪಾಸ್ಸು ಆದರು. ಇಲ್ಲಿ ಬಂದ ಬಳಿಕ ನಟನೆ ಜೊತೆಗೆ ಭರತನಾಟ್ಯ, ಸಮಾಜಸೇವೆ, NCC ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿ ಬಿಟ್ಟಿದ್ದಾರೆ.

    English summary
    Zee Kannada Serial Kamali Actress Saroja Akka Yamuna Srinidhi Biography, Life Story, Journey. Here is the details.
    Wednesday, May 11, 2022, 11:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X