»   » ಜೀ ಕನ್ನಡದಲ್ಲಿ ಶೀಘ್ರದಲ್ಲೇ ನೋಡಲಿದ್ದೀರಿ 'ಕನಕ'

ಜೀ ಕನ್ನಡದಲ್ಲಿ ಶೀಘ್ರದಲ್ಲೇ ನೋಡಲಿದ್ದೀರಿ 'ಕನಕ'

Posted By:
Subscribe to Filmibeat Kannada
Kanaka Image
ಜೀ ಕನ್ನಡ ವಾಹಿನಿಯಲ್ಲಿ ಮತ್ತೊಂದು ವಿನೂತನ ಧಾರಾವಾಹಿ ಅತಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಹೆಸರು ಕನಕ. ಶರವಣ ಟೆಲಿಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಧಾರಾವಾಹಿಯ ನಿರ್ದೇಶಕರು ಮಿಲನ ಚಿತ್ರದ ಖ್ಯಾತಿಯ ಪ್ರಕಾಶ್. ಈಗಾಗಲೇ ಚಿತ್ರೀಕರಣ ಪ್ರಾರಂಭಿಸಿರುವ ಈ ಧಾರಾವಾಹಿ ವಿಶಿಷ್ಠ ಕಥಾವಸ್ತು ಒಳಗೊಂಡಿದೆ.

ಬಸ್ ಲೇಡಿ ಕಂಡಕ್ಟರ್ ಒಬ್ಬರ ಜೀವನದ ಕಥೆ ಹೊಂದಿರುವ ಈ ಧಾರಾವಾಹಿ, ನಿಸ್ಸಂಶಯವಾಗಿಯೂ ಹೊಸ ದಾಖಲೆ ಮೆರೆಯಲಿದೆ ಎಂಬುದು ಇಡೀ ಧಾರಾವಾಹಿ ತಂಡದ ಅನಿಸಿಕೆ. ಇತ್ತೀಚಿಗೆ ಬಸ್ಸುಗಳಲ್ಲಿ ಲೇಡಿ ಕಂಡಕ್ಟರ್ ಗಳು ಹೆಚ್ಚಾಗಿ ಕಾಣಲು ಸಿಗುತ್ತಾರೆ. ಜೊತೆಗೆ ಅವರು ಕರ್ತವ್ಯಗಳನ್ನು ಪುರುಷರ ಸಮಾನವಾಗಿ ನಿರ್ವಹಿಸುತ್ತಿದ್ದಾರೆ.

ಈ ಕಥೆಯಲ್ಲಿ ಮಹಿಳಾ ಕಂಡಕ್ಟರ್ ಜೀವನಗಾಥೆಯನ್ನು ಕಿರುತೆರೆಯ ಮೇಲೆ ತರುವ ಪ್ರಯತ್ನ ನಡೆಸಲಾಗಿದೆ. ಎಲ್ಲರಂತೆ ಜೀವನ ನಡೆಸಿಯೂ ಕಂಡಕ್ಟರ್ ಕರ್ತವ್ಯಗಳನ್ನು ನಡೆಸುವಾಗಿನ ಅವರ ಕೆಟ್ಟ ಹಾಗೂ ಒಳ್ಳೆಯ ಅನುಭವಗಳು, ಕೆಲಸ ಪಡೆಯಲು ಪಟ್ಟ ಶ್ರಮ, ಸದ್ಯದ ಪರಿಸ್ಥಿತಿ ಎಲ್ಲವೂ ಕಥೆಯೊಂದರ ರೂಪದಲ್ಲಿ ಅನಾವರಣಗೊಳ್ಳಲಿದೆ.

ಈ ಮೊದಲು ಸುವರ್ಣ ವಾಹಿನಿಯಲ್ಲಿ 'ಲಕುಮಿ' ಎಂಬ ಜನಪ್ರಿಯ ಧಾರಾವಾಹಿಯನ್ನು ಈ ಮಿಲನ ಪ್ರಕಾಶ್ ಪ್ರಪ್ರಥಮವಾಗಿ ನಿರ್ದೇಶಿಸಿದ್ದರು. ಅದು ತುಂಬಾ ಜನಪ್ರಿಯವಾಗಿ ಪ್ರಕಾಶ್ ಅವರಿಗೆ ಕಿರುತೆರೆಯಲ್ಲೂ ಬಹಳಷ್ಟು ಖ್ಯಾತಿ ತಂದುಕೊಟ್ಟಿತ್ತು. ಆದರೆ, ನಂತರ ಬಂದ 'ಗೊಂಬೆಯಾಟವಯ್ಯ' ಅಷ್ಟೊಂದು ಜನಪ್ರಿಯತೆ ಪಡೆಯಲಿಲ್ಲ. ಇದೀಗ ಸುವರ್ಣ ವಾಹಿನಿಯಲ್ಲಿ ಅವರ 'ಚುಕ್ಕಿ' ಧಾರಾವಾಹಿ ಪ್ರಸಾರ ಕಾಣುತ್ತಿದೆ.

ಇದೀಗ, ಜೀ ಕನ್ನಡ ವಾಹಿನಿಗೆ 'ಕನಕ' ಎಂಬ ಹೆಸರಿನ ಧಾರಾವಾಹಿ ನಿರ್ಮಾಣವಾಗುತ್ತಿದೆ. ಶೀಘ್ರದಲ್ಲೇ ಪ್ರಸಾರವಾಗಲಿರುವ ಇದು ಖಂಡಿತವಾಗಿಯೂ ಜನಮನ್ನಣೆ ಪಡೆಯಲಿದೆ ಎಂಬುದು ನಿರ್ದೇಶಕ ಮಿಲನ ಪ್ರಕಾಶ್ ಹಾಗೂ ಜೀ ವಾಹಿನಿಯ ತಂಡದ ಅಭಿಪ್ರಾಯ. ಧಾರಾವಾಹಿ ಪ್ರಸಾರ ಕಂಡ ನಂತರ ವೀಕ್ಷಕರ ಪ್ರತಿಕ್ರಿಯೆ ತಿಳಿಯಲಿದೆ. (ಒನ್ ಇಂಡಿಯಾ ಕನ್ನಡ) 

English summary
A new serial starts in Zee Kannada Channel called Kanaka. Milana Prakash directs this serial and Sharavana Tele Films Banner produces. It will starts very soon.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada