Lakshmi nivasa: ಜಾಹ್ನವಿಯದ್ದು ತುಮಕೂರು.. ನಮ್ದು ಅಲ್ಲೇ ಗುಬ್ಬಿ ಎಂದ ಡಾಕ್ಟರ್ ಮೂಳೆ ಮುರಿದ ಜಯಂತ್
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಇತ್ತಿಚೆಗಷ್ಟೇ ಜಾಹ್ನವಿ ಮತ್ತು ಜಯಂತ್ ಮದುವೆಯಾಗಿದೆ. ಜಯಂತ್, ಜಾಹ್ನವಿಯನ್ನು ಅತಿಯಾಗಿ ಪ್ರೀತಿಸುತ್ತಾನೆ. ಆ ಅತಿಯಾದ ಪ್ರೀತಿಯೇ ಒಮ್ಮೊಮ್ಮೆ ಜಾಹ್ನವಿಗೆ ನೋವುಂಟು ಮಾಡುತ್ತದೆ. ಹಲವು ಪ್ರಶ್ನೆಗಳು ಬರುವಂತೆ ಮಾಡುತ್ತದೆ. ಎಷ್ಟೋ ಬಾರಿ ಜಾಹ್ನವಿಗೆ, ಜಯಂತ್ ಪ್ರೀತಿಯೇ ಅರ್ಥವಾಗುವುದಿಲ್ಲ.
ಜಯಂತ್‌ಗೆ ಹೆಂಡತಿ ಮೇಲೆ ಅತಿಯಾದ ಪ್ರೀತಿ. ಅದು ಎಷ್ಟರಮಟ್ಟಿಗೆ ಎಂದರೆ ಅವಳಿಗೆ ಬೇರೆ ಪ್ರಪಂಚವೇ ಗೊತ್ತಿರಬಾರದು. ಗಂಡನನ್ನು ಮಾತ್ರ ಅತಿಯಾಗಿ ಪ್ರೀತಿಸಬೇಕು ಎಂಬ ಭಾವನೆ ಇರುವವನು. ಆ ಕಾರಣಕ್ಕಾಗಿಯೇ ಜಾಹ್ನವಿಯನ್ನು ಮನೆಯೊಳಗೆ ಬಿಟ್ಟು, ಲಾಕ್ ಓಪನ್ ಮಾಡಲು ಆಗದಂತೆ ಕೂಡಿ ಹಾಕಿ ಹೋಗುತ್ತಾನೆ. ಅಷ್ಟೇ ಅಲ್ಲ ಮನೆಗೆ ಯಾರೇ ಬಂದರೂ ಅವಳ ಸಂಪರ್ಕಕ್ಕೆ ಸಿಗದಂತೆ ನೋಡಿಕೊಂಡಿದ್ದಾನೆ. ಆ ರೀತಿಯ ಹುಚ್ಚು ಪ್ರೇಮಿ ಜಯಂತ್. ಈಗ ಜಾಹ್ನವಿಯನ್ನು ಮುಟ್ಟಿದ್ದಕ್ಕಾಗಿ ಡಾಕ್ಟರ್‌ಗೆ ಬಿದ್ದಿದೆ ಏಟು.

ನೀರು ಬದಲಾವಣೆಯಿಂದ ಅನಾರೋಗ್ಯ
ಇತ್ತಿಚೆಗಷ್ಟೇ ಯುಗಾದಿ ಹಬ್ಬ ಮುಗಿದಿದೆ. ಜಾಹ್ನವಿ ಹಾಗೂ ಜಯಂತ್‌ಗೆ ಇದು ಮೊದಲ ಹಬ್ಬವಾಗಿತ್ತು. ಹೀಗಾಗಿ ಲಕ್ಷ್ಮೀ ಹಾಗೂ ಶ್ರೀನಿವಾಸ್, ಅಳಿಯ ಮಗಳನ್ನು ಹಬ್ಬಕ್ಕೆಂದು ಕರೆದಿದ್ದರು. ಮದುವೆಯಾಗಿ ಗಂಡನ ಮನೆಯಲ್ಲಿದ್ದ ಜಾಹ್ನವಿ, ಹಬ್ಬಕ್ಕಾಗಿ ಗಂಡನನ್ನು ಕರೆದುಕೊಂಡು ತವರು ಮನೆಗೆ ಬಂದಿದ್ದಳು. 4 ದಿನಗಳ ಕಾಲ ಅಲ್ಲಿಯೇ ಇದ್ದರು.
ವೈದ್ಯರ ಬಳಿ ಬಂದ ದಂಪತಿ
ಹಬ್ಬ ಮುಗಿಸಿಕೊಂಡು ಗಂಡನ ಮನೆಗೆ ಹಿಂತುರುಗಿದ ಜಾಹ್ನವಿ ಆರೋಗ್ಯದಲ್ಲಿ ಏರು ಪೇರಾಗಿತ್ತು. ನೀರಿನ ಸಮಸ್ಯೆಯಿಂದಾಗಿ ಗಂಟಲು ನೋವು ಕಾಣಿಸಿಕೊಂಡಿತ್ತು. ತಕ್ಷಣ ಜಯಂತ್, ಜಾಹ್ನವಿಯನ್ನು ಆಸ್ಪತ್ರೆಗೆ ಕರೆತಂದಿದ್ದನು. ವೈದ್ಯರು ಜಾಹ್ನವಿಯನ್ನು ಪರೀಕ್ಷೆ ಮಾಡಿದರು. ನಾಲಿಗೆ ತೆರೆಸಿ ನೋಡಿದರು, ಬೆನ್ನಿಗೆ ಸ್ಟೆತಾಸ್ಕೋಪ್ ಇಟ್ಟು ಪರಿಶೀಲನೆ ಮಾಡಿದರು. ಹೀಗೆ ಪರೀಕ್ಷೆ ಮಾಡುವಾಗ ಕೊಂಚ ಸಲಿಗೆ ತೆಗೆದುಕೊಂಡಂತೆ ಕಂಡಿತ್ತು.

ಮಾತಿನ ಮಧ್ಯೆ ಊರಿನ ಬಗ್ಗೆ ಚರ್ಚೆ
ವೈದ್ಯರು, ರೋಗಿಗಳ ಜೊತೆಗೆ ಮಾತನಾಡುವಂತೆಯೇ ಸಹಜವಾಗಿಯೇ ಈ ವೈದ್ಯರು ಮಾತನಾಡಿಕೊಳ್ಳುತ್ತಾ ಪರೀಕ್ಷೆ ಮಾಡಿದ್ದರು. ತವರು ಮನೆಯ ನೀರನ್ನೇ ಇಷ್ಟು ವರ್ಷ ಕುಡಿದಿದ್ದೀರಿ. ಆದರೆ ಈಗ ಗಂಡನ ಮನೆಗೆ ಹೋಗಿ, ಅಲ್ಲಿನ ನೀರಿಗೆ ಅಡ್ಜೆಸ್ಟ್ ಆಗಿ, ಈಗ ವಾಪಾಸ್ ತವರು ಮನೆಯ ನೀರು ಕುಡಿದಾಕ್ಷಣ ಹೇಗಾಗಿದೆ ನೋಡಿ. ಯಾವ ಊರು ನಿಮ್ಮದು ಎಂಬಂತೆ ಕ್ಯಾಶುವಲ್ ಆಗಿನೇ ವೈದ್ಯರು ಜಾಹ್ನವಿಯನ್ನು ಕೇಳಿದರು. ಅದಕ್ಕೆ ಜಾನು, ನಮ್ಮದು ತುಮಕೂರು ಎಂದಿದ್ದಾಳೆ. ತಕ್ಷಣ ವೈದ್ಯರು, ಓ ಹೌದಾ , ನಮ್ಮದು ಅಲ್ಲೇ ಗುಬ್ಬಿ ಎಂದಿದ್ದಾರೆ. ಇದೆಲ್ಲವನ್ನು ನೋಡುತ್ತಾ ನಿಂತ ಜಯಂತ್‌ಗೆ ಅಷ್ಟರಲ್ಲಾಗಲೇ ಕೋಪ ನೆತ್ತಿಗೆ ಏರಿತ್ತು.
ಡಾಕ್ಟರ್‌ಗೆ ಬಿತ್ತು ಗೂಸಾ
ವೈದ್ಯರು ಮಾತ್ರೆಯನ್ನು ಬರೆದುಕೊಟ್ಟು, ಯಾವಾಗ, ಯಾವ ಮಾತ್ರೆ ಕೊಡಬೇಕು ಎಂಬುದನ್ನು ಹೇಳಿ ಕಳುಹಿಸಿದರು. ಜಾಹ್ನವಿಯನ್ನು ಹೊರಗೆ ಕೂರಿಸಿ, ಮತ್ತೆ ಡಾಕ್ಟರ್ ಕ್ಯಾಬಿನ್‌ಗೆ ಬಂದ ಜಯಂತ್, ಥ್ಯಾಂಕ್ಸ್ ಹೇಳುವ ನೆಪದಲ್ಲಿ ವೈದ್ಯರ ಕೈಯ್ಯನ್ನು ಹಿಡಿದ. ಹಿಂದಕ್ಕೆ ತಿರುಚಿ, ಅವಳು ನನ್ನ ಹೆಂಡತಿ. ಅವಳ ಕೈ ಮುಟ್ಟುವುದಕ್ಕೆ ಎಷ್ಟು ಧೈರ್ಯ. ನಾನು ಮಾತ್ರ ಅವಳನ್ನ ಮುಟ್ಟಬೇಕು ಅಂತ ಹೇಳಿ, ಲೊಟಕ್ ಲೊಟಕ್ ಎಂಬ ಸೌಂಡ್ ಬರುವ ಲೆವೆಲ್‌ಗೆ ಕೈ ಮುರಿದಿದ್ದಾನೆ.


Click it and Unblock the Notifications











