Lakshminivasa: ಸಿದ್ದೇಗೌಡ್ರು & ಪೂರ್ವಿ ಹೋದಲೆಲ್ಲಾ ಭಾವನಾ ಎಂಟ್ರಿ; ಏನಿದು ಟ್ವಿಸ್ಟ್?
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇಗೌಡ್ರಿಗಂತು ಇಕ್ಕಟ್ಟಿನ ಪರಿಸ್ಥಿತಿ. ಅತ್ತಿಗೆಯನ್ನು ಅಮ್ಮನಂತೆ ನಂಬಿದ್ದಾರೆ ಗೌಡ್ರು. ಆದರೆ ಗೌಡ್ರಿಗೆ ಅತ್ತಿಗೆಯೇ ಶತ್ರುವಾಗಿದ್ದಾಳೆ. ಸಿದ್ದುನನ್ನು ಸಂಭಾಳಿಸಿಕೊಂಡು, ಪೂರ್ವಿ ಜೊತೆಗೆ ಮದುವೆ ತಯಾರಿ ಆಗುವಂತೆ ಮಾಡುತ್ತಿರುವುದೇ ಇದೇ ನೀಲು. ಮನೆಯಲ್ಲಿ ಸಿದ್ದು ತಾಯಿಯ ಕಿವಿ ಊದಿ, ಪೂರ್ವಿಯೇ ಪರ್ಫೆಕ್ಟ್ ಎಂಬುದನ್ನು ಬಿಂಬಿಸುತ್ತಿದ್ದಾಳೆ. ಅತ್ತ ಸಿದ್ದೇಗೌಡ್ರಿಗೆ ನಿಂಗೆ ಎಲ್ಲಾ ಒಳ್ಳೆಯದ್ದೇ ಆಗಲಿ ಅಂತ ಈ ರೀತಿ ಮಾಡುತ್ತಿದ್ದೇನೆ ಎನ್ನುತ್ತಿದ್ದಾಳೆ.
ಆರಂಭದಲ್ಲಿ ಈ ಮದುವೆ ಪೂರ್ವಿಗೂ ಇಷ್ಟ ಇರಲಿಲ್ಲ. ಆದರೆ ಪೂರ್ವಿಯ ತಲೆಗೆ ಸಿದ್ದು ಬಗ್ಗೆ ಒಳ್ಳೆಯ ಅಭಿಪ್ರಾಯ ತುಂಬಿದ್ದು ಇದೇ ನೀಲೂ ಹಾಗೂ ಸೌಪರ್ಣಿಕಾ. ಈಗ ಸಿದ್ದುನನ್ನು ಬೆಂಬಿಡದೆ ಅಂಟಿಕೊಂಡಿದ್ದಾಳೆ ಪೂರ್ವಿ. ಜೊತೆಗೆ ಸಿದ್ದೇಗೌಡ್ರು ಪೂರ್ವಿ ಹೋದಲ್ಲೆಲ್ಲಾ ಭಾವನಾ ಎಂಟ್ರಿಕೊಟ್ಟು ಕೊಟ್ಟು ಸಿದ್ದೇಗೌಡ್ರ ಮನಸ್ಸಿಗೆ ಅಗಾಧ ನೋವು ಕೊಡುತ್ತಿದ್ದಾಳೆ.

ಪೂರ್ವಿ ಜೊತೆ ಬರಲು ಗೌಡ್ರಿಗೆ ಇಷ್ಟವಿಲ್ಲ
ಜವರೇಗೌಡ ತನ್ನ ಮನೆಯ ಸೊಸೆಯನ್ನ ಮಗನ ಜೊತೆಗೆ ಕಳುಹಿಸಿದ್ದಾರೆ. ಪೂರ್ವಿಗೆ ಇನ್ನಿಲ್ಲದ ಸಂಭ್ರಮ. ಸಿದ್ದೇಗೌಡರ ಜೊತೆಗೆ ಓಡಾಡೋದಕ್ಕೆ ಸಮಯ ಕಾಯುತ್ತಾ ಇರುತ್ತಾಳೆ. ಹೀಗಾಗಿ ಭಾವಿ ಮಾವ ಹೇಳಿದ್ದೇ ತಡ ಓಡೋಡಿ ಬಂದಿದ್ದಾಳೆ. ಗೌಡ್ರು ಇರಿಸು ಮುರಿಸಿನಿಂದಾನೇ ಪೂರ್ವಿಯನ್ನು ಕರೆದುಕೊಂಡು ಬಂದಿದ್ದಾರೆ.
ಪೂರ್ವಿ ಮಾತಿಗೆ ಸಿಟ್ಟಾದ ಗೌಡ್ರು
ಜವರೇಗೌಡರು ಹೇಳಿದ ಜಾಗಕ್ಕೆ ಪೂರ್ವಿ ಹಾಗೂ ಸಿದ್ದೇಗೌಡರ ಬೈಕ್ ಸವಾರಿ ಬಂದಾಯ್ತು. ಆದ್ರೆ ಮುಂದಕ್ಕೆ ಬೈಕ್ ಸಾಗುವುದಿಲ್ಲ. ಕೆಳಗೆ ಇಳಿದು, ಇನ್ನು ಬಹಳಷ್ಟು ದೂರ ಆಗುತ್ತೆ ಅನ್ಸುತ್ತೆ. ಆದ್ರೆ ನಿಮ್ಮ ಕೈನಲ್ಲಿ ನಡೆಯೋದಕ್ಕೆ ಆಗುತ್ತಾ ಅಂತ ಗೌಡ್ರು ಪೂರ್ವಿಯನ್ನ ಕೇಳಿದ್ರೆ, ಗೌಡ್ರಿಗೆ ಉರಿಯೋ ಮಾತಾಡಿದ್ದಾಳೆ. ನಿಮ್ಮ ಜೊತೆಗೆ ಸಪ್ತಪದಿ ತುಳಿಯೋದಕ್ಕೆ ರೆಡಿಯಾಗಿದ್ದೀನಿ. ಇನ್ನು ನಡೆದುಕೊಂಡು ಬರಲ್ವಾ ಎಂದಿದ್ದಾಳೆ. ಇದು ಸಿದ್ದೇಗೌಡರಿಗೆ ಮನಸ್ಸಿಗೆ ನೋವನ್ನುಂಟು ಮಾಡಿದೆ. ಯಾಕೆ ಇವ್ರು ಎಲ್ಲಾ ಉಲ್ಟಾ ಮಾತಾಡ್ತಾ ಇದ್ದಾರಲ್ಲ ಎಂದುಕೊಂಡು ಮುಂದೆ ಸಾಗುವುದಕ್ಕೆ ರೆಡಿಯಾಗಿದ್ದಾನೆ.
ಗೌಡ್ರುಗೆ ಭಾವನಾ ಕಂಡರೆ ಖುಷಿ
ಪೂರ್ವಿ ಜೊತೆಗೆ ಇರುವುದು ಗೌಡ್ರಿಗೆ ಅಷ್ಟೇನು ಖುಷಿ ಕೊಡಲ್ಲ. ಆದ್ರೆ ಭಾವನಾಳನ್ನು ಕಂಡರೆ ಸಾಕು ಮುಖದಲ್ಲಿ ಹಾಗೇ ನಗು ಬೀರುತ್ತೆ. ಈಗಲೂ ಅದೇ ಆಯ್ತು. ಪೂರ್ವಿ ಜೊತೆಗೆ ಮುಖ ಗಂಟಾಕಿಕಿಂಡು ಹೋಗುತ್ತಿದ್ದ ಸಿದ್ದೇಗೌಡ್ರಿಗೆ ತಕ್ಷಣ ಆಟೋ ಸದ್ದು ಕೇಳಿಸಿದೆ. ಹಿಂದೆ ತಿರುಗಿ ನೋಡಿದರೆ ಭಾವನಾ ಮೇಡಂ. ಗೌಡ್ರ ಮುಖದಲ್ಲಿ ನಗು ನೋಡಿ ಪೂರ್ವಿಗೆ ಆಶ್ಚರ್ಯವಾಗಿದೆ. ಅವಳು ನೋಡಿದಾಗ ಭಾವನಾ ಕಂಡಿದ್ದಾಳೆ. ಅಲ್ಲಿಗೆ ಭಾವನಾ ಬರಬಹುದು ಎಂಬ ಅಂದಾಜು ಗೌಡ್ರಿಗೆ ಇರಲಿಲ್ಲ.

ಗೌಡ್ರ ಸ್ಥಿತಿ ನೋಡಿ ವೀಕ್ಷಕರ ಮರುಕ
ಪೂರ್ವಿ ಹಾಗೂ ಗೌಡ್ರು ಎಲ್ಲಿಯೇ ಹೋದರೂ ಜೊತೆ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಾರೆ. ಅದು ಭಾವನಾಳ ಎದುರಿಗೆ. ಇದರಿಂದ ಭಾವನಾಳ ಮನಸ್ಸಲ್ಲಿ ಈ ಇಬ್ಬರು ತುಂಬಾ ಆತ್ಮೀಯರಾಗಿದ್ದಾರೆ. ಒಬ್ಬರಿಗೊಬ್ಬರು ತುಂಬಾ ಅರ್ಥ ಮಾಡಿಕೊಳ್ಳುತ್ತಾರೆ ಎಂಬುದೇ ಬರುತ್ತದೆ. ಇದು ಗೌಡ್ರುಗೆ ಕೊಂಚವೂ ಇಷ್ಟವಿಲ್ಲ. ಗೌಡ್ರಿಗಷ್ಟೇ ಅಲ್ಲ ವೀಕ್ಷಕರಿಗೂ ಇಷ್ಟವಿಲ್ಲ. ಗೌಡ್ರನ್ನ ಇಕ್ಕಟ್ಟಲ್ಲಿ ಸಿಲುಕಿಸಬೇಡಿ, ಭಾವನಾ ಗೌಡ್ರು ಒಂದಾಗುವಂತೆ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ. ಅಷ್ಟೇ ಯಾಕೆ ಗೌಡ್ರನ್ನ ಇಬ್ಬರ ಹುಡುಗಿಯರ ಮಧ್ಯೆ ಸಿಲುಕಿಸಿ, ಹಿಂಸೆ ಕೊಡಬೇಡಿ, ನೆಗೆಟಿವ್ ಆಗಿ ಅಂತು ಯಾವತ್ತಿಗೂ ತೋರಿಸಬೇಡಿ ಎಂದು ಮನವಿ ಮಾಡಿದ್ದಾರೆ.


Click it and Unblock the Notifications











