Lakshminivasa: ಅತ್ತ ಸಿದ್ದೇಗೌಡ್ರನ್ನ ಟಾರ್ಗೆಟ್ ಮಾಡಿದ ರವಿ; ಇತ್ತ ಜಯಂತ್‌ನಿಂದ ಸೆಕ್ಯೂರಿಟಿ ಪ್ರಾಣಕ್ಕೆ ಅಪಾಯ!

By ಎಸ್ ಸುಮಂತ್

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್ ಆರಂಭದಿಂದ ಸೈಕೋ ಮನಸ್ಥಿತಿಯಲ್ಲಿಯೇ ನಡೆದುಕೊಳ್ಳುತ್ತಿದ್ದಾನೆ. ಆದರೆ ಜಾನು ಕೊಂಚ ಬದಲಾದಂತೆ ಜಯಂತ್ ಕೂಡ ಬದಲಾಗಿದ್ದಾನೆ. ಜಯಂತ್ ಹೇಗೆ ಎಂಬುದನ್ನು ಜಾಹ್ನವಿ ಅರ್ಥ ಮಾಡಿಕೊಂಡಂತೆ ಇದೆ. ಹೀಗಾಗಿಯೇ ಅವನಿದ್ದಾಗ ಅವನಿಗಾಗಿಯೇ ಸಮಯ ನೀಡುತ್ತಾಳೆ. ಜಾಹ್ನವಿ ಹೊರಗೆ ಏನು ಮಾಡ್ತಾಳೆ ಅಂತ ನೋಡುವುದಕ್ಕೇನೆ ಹೊರಗಡೆಯೂ ಸಿಸಿಟಿವಿ ಹಾಕಿಸಿದ್ದಾನೆ.

ಜಾಹ್ನವಿಯದ್ದು ಸೈಕೋ ಗಂಡನ ಸಮಸ್ಯೆಯಾದರೆ ಭಾವನಾದು ಇನ್ನೊಂದು ರೀತಿಯ ಸಮಸ್ಯೆಯಾಗಿದೆ. ಶ್ರೀನಾಥ್ ಸತ್ತು ಹೋದರೂ ಅವನ ತಂಗಿ- ತಂಗಿ ಗಂಡ ಅವಳ ಹಿಂದೆ ಬಿದ್ದಿದ್ದಾರೆ. ಆಸ್ತಿಯನ್ನೆಲ್ಲಾ ತನ್ನ ಹೆಸರಿಗೆ ಬರೆದುಕೊಡುವಂತೆ ಕಿಡ್ನ್ಯಾಪ್ ಅನ್ನೇ ಮಾಡಿಸಿದ್ದ. ಹೇಗೋ ಸಿದ್ದೇಗೌಡ್ರು ಕಾಪಾಡಿದ್ದಾರೆ.

zee kannada serial Lakshmi nivasa Written Update on August 16th episode

ಭಾವನಾ ಬಿಡಿಸಿದ್ದಕ್ಕೆ ಕೋಪ

ಭಾವನಾಳನ್ನು ಕಿಡ್ನ್ಯಾಪ್ ಮಾಡಿ, ಹೆದರಿಸಿ, ಬೆದರಿಸಿ ಆಸ್ತಿ ಬರೆಸಿಕೊಳ್ಳುವ ಪ್ಲ್ಯಾನ್ ನಲ್ಲಿದ್ದ ರವಿ. ಭಾನಾ ಕಿಡ್ನ್ಯಾಪ್ ಆಗಿದ್ದನ್ನ ನೋಡಿದ್ದ ಲಕ್ಷ್ಮೀ, ಗೌಡ್ರಿಗೆ ಹೇಳಿದ್ದಳು. ಗೌಡ್ರು ತಕ್ಷಣ ಭಾವನಾ ಇರುವ ಜಾಗಕ್ಕೆ ಹೋಗಿ ಕಾಪಾಡಿದ್ದಾನೆ. ಇದು ರವಿಯ ಕೋಪಕ್ಕೆ ಕಾರಣವಾಗಿದೆ. ಎಲ್ಲಾ ಪ್ಲ್ಯಾನ್ ಹಾಳು ಮಾಡಿಬಿಟ್ಟ, ಅವಳಿಗೂ ಇವನಿಗೂ ಏನು ಸಂಬಂಧ ಎಂದು ಅನುಮಾನ ಪಟ್ಟಿದ್ದಾನೆ. ಆದ್ರೆ ಸೌಪರ್ಣಿಕಾ ಜೊತೆಗೆ ನೀಲೂ ಸೇರಿನೆ ಪೂರ್ವಿಯನ್ನ ಗಂಟಾಕುತ್ತಿದ್ದಾಳೆ. ಆದ್ರೆ ಭಾವನಾ ವಿಚಾರ ಸೌಪರ್ಣಿಕಾಗೆ ಗೊತ್ತೆ ಇಲ್ಲ.

ಆ ವಿಡಿಯೋ ಒಂದೇ ಅಸ್ತ್ರ

ರವಿಶಂಕರ್ ಏನೇ ಕಿತಾಪತಿ ಮಾಡಿದರೂ ಅಲ್ಲಿ ಅಡ್ಡಗಾಲು ಹಾಕುತ್ತಿರುವುದು ಸಿದ್ದೇಗೌಡ್ರು. ಈಗ ರವಿಗೆ ಬಂದಿರುವ ಕೋಪಕ್ಕೆ ಗೌಡ್ರಿಗೆ ಪಾಠ ಕಲಿಸಬೇಕು ಅಂತ ಕಾಯುತ್ತಿದ್ದಾನೆ. ಅವನ ಬಳಿ ಇರುವುದು ಒಂದೇ ವಿಡಿಯೋ. ಶ್ರೀನಾಥ್‌ನ ಕೊಲೆ ಮಾಡಿದ್ದು ರವಿ ಹೇಳಿದ ಹುಡುಗರೇ ಆದರೂ, ಸಿದ್ದೇಗೌಡ್ರಿಗೆ ನಾನೇ ಮಾಡಿದ್ದು ಎಂಬಂತ ಭಾವನೆ ಇದೆ. ಅದೇ ತಪ್ಪಿತಸ್ಥ ಭಾವನೆ ಇರುವ ವಿಡಿಯೋ ರವಿ ಬಳಿ ಇದೆ. ಅದನ್ನ ಸರಿಯಾದ ಸಮಯಕ್ಕೆ ಉಪಯೋಗಿಸುವ ಯೋಜನೆ ಹಾಕಿಕೊಂಡಿದ್ದಾನೆ. ಒಂದ್ವೇಳೆ ಆ ವಿಡಿಯೋ ಸಿಕ್ಕರೆ ಭಾವನಾಗೆ ಮತ್ತೆ ಅವರ ಫ್ಯಾಮಿಲಿ ಗೌಡ್ರ ಮೇಲೆ ಕೋಪ ಬರೋದು ಗ್ಯಾರಂಟಿ.

zee kannada serial Lakshmi nivasa Written Update on August 16th episode

ಜಾನು ವಿರುದ್ಧ ಜಯಂತ್ ಕೋಪ

ಜಾನು ತುಂಬು ಕುಟುಂಬದಿಂದ ಬಂದವಳು. ಸದಾ ಮಾತಾಡುತ್ತಾ ಇದ್ದವಳು. ಈಗ ಮಾತಾಡುವುದಕ್ಕೂ ಯಾರೂ ಇಲ್ಲ. ಹೊರಗೆ ಓಡಾಡಲು ಜಯಂತ್ ಅನುಮತಿ ಕೊಟ್ಟಿದ್ದೇ ಹೆಚ್ಚು. ಈಗ ಸೆಕ್ಯೂರಿಟಿ ಊಟ ಕೊಡುವ ಮಟ್ಟಿಗೆ ಬೆಳೆದಿದ್ದಾಳೆ. ಇದು ಜಯಂತ್‌ಗೆ ಇಷ್ಟ ಆಗಲ್ಲ. ಪ್ರೀತಿಯಿಂದ ಮಾಡಿರುವುದನ್ನು ಮೊದಲು ಸೆಕ್ಯೂರಿಟಿಗೆ ಕೊಟ್ಟಿದ್ದಾಳೆ. ಈಗ ಜಯಂತ್ ಟೇಸ್ಟ್ ನೋಡುವುದಕ್ಕೂ ಒಪ್ಪುತ್ತಿಲ್ಲ.

ಜಾನು ಮಾಡಿದ್ದಕ್ಕೆ ಸೆಕ್ಯೂರಿಟಿಗೆ ಶಿಕ್ಷೆ

ಜಾಹ್ನವಿ ಕೂಡ ಜಯಂತ್ ವಿಚಾರದಲ್ಲಿ ಭಯ ಪಡುತ್ತಿದ್ದಾಳೆ. ಸೆಕ್ಯೂರಿಟಿ ಪ್ಲೇಟ್ ಕೊಡಲು ಬಂದಾಗಲೇ ಅವಳ ಮುಖದಲ್ಲಿ ಭಯ ಇತ್ತು. ಆದರೂ ಗಂಡನ ಮುಂದೆ ಕೊಂಚ ಸೆಕ್ಯೂರಿಟಿ ಪರವಾಗಿಯೇ ಮಾತಾಡಿದಳು. ಜಯಂತ್ ಮನಸ್ಸು ಕುದಿಯುತ್ತಿದೆ. ಯಾರೂ ಜಾನು ತಂಟೆಗೆ ಬರಬಾರದು, ಜಾನುಳನ್ನು ಪ್ರೀತಿಯಿಂದ ಮಾತಾಡಬಾರದು. ಈಗ ಸೆಕ್ಯೂರಿಟಿಗೆ ಪ್ರತಿದಿನ ಊಟ ಹೋಗುತ್ತದೆ ಅಂದ್ರೆ ಜಯಂತ್ ಸುಮ್ಮನೆ ಬಿಡುತ್ತಾನಾ..? ಜಾಹ್ನವಿಯದ್ದೇ ತಪ್ಪಿದ್ದರೂ ಶಿಕ್ಷೆ ಅನುಭವಿಸುವುದು ಮಾತ್ರ ಸೆಕ್ಯೂರಿಟಿನೇ.

More from Filmibeat

English summary
Lakshmi nivasa kannada serial today episode. Here is the details about Siddu who saved Bhavna.. security life is in danger.
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X