Lakshminivasa: ಮತ್ತೆ ಸೈಕೋ ಅವತಾರ ಶುರು ಮಾಡಿದ ಜಯಂತ್; ಬಿಕ್ಕಳಿಕೆ ಬರದೆ ಹೋದ್ರೆ ಜಾನು ಕಥೆ ಅಷ್ಟೇ!

By ಎಸ್ ಸುಮಂತ್

ಜಾಹ್ನವಿಯನ್ನು ನೋಡಿದ ಮೊದಲ ದಿನವೇ ಜಯಂತ್ ಸೋತು ಹೋಗಿದ್ದ. ಕಾಲೇಜಿಗೆ ಗೆಸ್ಟ್ ಆಗಿ ಹೋಗಿದ್ದವ, ಮದುವೆಗೆ ಹುಡುಗಿಯನ್ನು ನೋಡಿಕೊಂಡು ಬಂದುಬಿಟ್ಟ. ಪ್ರೋಗ್ರಾಂ ಮುಗಿಸಿಕೊಂಡು ಅಂದೇ ಹುಡುಗಿಯನ್ನು ಕೇಳಲು ಹೋಗಿ ಮನೆಯವರ ಮನಸ್ಸೆಲ್ಲವನ್ನು ಗೆದ್ದು ಬಿಟ್ಟ. ಹುಡುಗ ಶ್ರೀಮಂತನ ಜೊತೆಗೆ ವಿನಯತೆ, ವಿಧೇಯತೆ ಇದೆ ಅಂತ ಲಕ್ಷ್ಮೀ-ಶ್ರೀನಿವಾಸ ಇಬ್ಬರು ಒಪ್ಪಿ ಮಗಳನ್ನು ಮದುವೆ ಮಾಡಿ ಕೊಟ್ಟೇ ಬಿಟ್ಟರು.

ಜಯಂತ್ ಈಗಲೂ ಅದೇ ವಿನಯವಂತನೇ, ಆದ್ರೆ ಸಿಕ್ಕಾಪಟ್ಟೆ ಸೈಕೋಪಾತ್ ಗುಣಗಳನ್ನು ಮೈಗೂಡಿಸಿಕೊಂಡಿದ್ದಾನೆ. ಇದರಿಂದಾಗಿ ಜಾನು ನೆಮ್ಮದಿಯಾಗಿರುವುದಕ್ಕಿಂತ ಆಗಾಗ ಆತಂಕದಲ್ಲಿಯೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಾನುಗೆ ಭಯ ಆಗುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ನೋಡುಗರಿಗಂತು ಸಿಕ್ಕಾಪಟ್ಟೆ ಭಯವಾಗುತ್ತದೆ. ಈಗ ಬಿಕ್ಕಳಿಕೆಯ ಪರ್ವ ಶುರುವಾಗಿದೆ.

Zee kannada serial Lakshmi nivasa Written Update on August 1st episode

ಊಟ ಮಾಡುವಾಗ ಜಾನುಗೆ ಬಿಕ್ಕಳಿಕೆ

ಜಾನು ಕಂಡರೆ ಜಯಂತ್‌ಗೆ ತುಂಬಾನೇ ಪ್ರೀತಿ. ಜಾನು ತನ್ನನ್ನು ಬಿಟ್ಟು ಎಲ್ಲಿಯೂ ಹೋಗಬಾರದು, ಯಾರನ್ನು ಹೆಚ್ಚು ಅಚ್ಚಿಕೊಳ್ಳಬಾರದು ಎಂಬ ಆಸೆ. ಹೀಗಾಗಿ ಜಾಹ್ನವಿಯನ್ನು ಎಲ್ಲಿಯೂ ಬಿಡದಂತೆ ನೋಡಿಕೊಳ್ಳುತ್ತಾ ಇರುತ್ತಾನೆ. ರಾತ್ರಿ ಜಾನು-ಜಯಂತ್ ಕುಳಿತು ಊಟ ಮಾಡುತ್ತಿದ್ದರು. ಈ ವೇಳೆ ಜಾನುಗೆ ಬಿಕ್ಕಳಿಕೆ ಬಂದಿದೆ. ಆಗ ಯಾರೋ ನೆನೆಸಿಕೊಂಡಿರಬೇಕು ಎಂದು ಜಾನು ಹೇಳಿದ್ದಾಳೆ. ಅಲ್ಲಿಯೂ ಜಾನುಳನ್ನು ನಾನು ಬಿಟ್ಟು ಬೇರೆ ಯಾರು ನೆನೆಸಿಕೊಳ್ಳಬಾರದು ಎಂದೇ ನಿರ್ಧಾರ ಮಾಡಿದ್ದಾನೆ.

ಮನೆಗೆ ಹುಡುಕಿಕೊಂಡು ಬಂದ ಜಯಂತ್

ಜಯಂತ್ ಗೆ ಪ್ರತಿದಿನ ಜಾನುಳದ್ದೇ ಚಿಂತೆ. ಆಫೀಸಲ್ಲಿ ಕೂತಾಗಲೂ ಜಾಹ್ನವಿ ಬಗ್ಗೆಯೇ ಯೋಚನೆ ಮಾಡುತ್ತಾ ಇರುತ್ತಾನೆ. ಸಿಸಿಟಿವಿ ಚೆಕ್ ಮಾಡುತ್ತಾ ಇರುತ್ತಾನೆ. ಮುದ್ದು ಮಾಡುತ್ತಾನೆ, ಚಿನ್ನುಮರಿ ಅಂತಾನೇ. ಆದರೆ ಪಂಜರದೊಳಗೆ ಕೂಡಿ ಹಾಕಿ, ನಮ್ಮ ಚಿನ್ನುಮರಿ ಇನ್ನೆಲ್ಲಿಯೂ ಹೋಗಬಾರದು ಎಂದು ಗೆರೆ ಎಳೆದಿದ್ದಾನೆ. ಹೇಗೋ ಅದೃಷ್ಟ ಚಿನ್ನುಮರಿಗೆ ಗಾರ್ಡನ್ ಗೆ ಹೋಗುವುದಕ್ಕೆ ಅನುಮತಿ ಕೊಟ್ಟಿದ್ದಾನೆ. ಈಗ ಚಿನ್ನುಮರಿಯನ್ನು ಪರೀಕ್ಷೆ ಮಾಡುವುದಕ್ಕೆ ಮನೆಗೆ ಬಂದಿದ್ದಾನೆ. ತರಕಾರಿ ಕಟ್ ಮಾಡುತ್ತಾ ನಿಂತ ಜಾನು

ಜಾನು ಹಾಡಿಗೆ ಮೈಮರೆತ ಜಯಂತ್

ಜಾನುಗೆ ಜಯಂತ್ ಮನೆಗೆ ಬಂದಿರುವುದು ಗೊತ್ತೆ ಆಗಿಲ್ಲ. ಜಯಂತ್ ಹಾಗೂ ಜಾಹ್ನವಿ ಇಬ್ಬರೇ ಇದ್ದಾಗ ನಾರ್ಮಲ್ ಮನುಷ್ಯನಂತೆಯೇ ಇರುವ ಜಯಂತ್, ಜಾನುಳಲ್ಲಿ ಸ್ವಲ್ಪ ಬದಲಾವಣೆಯಾದರು ಹುಚ್ಚನಾಗಿ ಬಿಡುತ್ತಾನೆ. ಈಗ ಮನೆಗೆ ಬಂದು ಬಿಕ್ಕಳಿಕೆಯ ಪರೀಕ್ಷೆ ಮಾಡುತ್ತಿದ್ದಾನೆ. ಅಲ್ಲ ನಾನು ಆಫೀಸಲ್ಲೂ ಇವರನ್ನೇ ನೆನೆಸಿಕೊಂಡಿದ್ದೀನಿ, ಇಲ್ಲಿಯೂ ಇವರದ್ದೇ ಧ್ಯಾನ ಮಾಡ್ತಾ ಇದ್ದೀನಿ. ಈಗ ಬಿಕ್ಕಳಿಕೆ ಬರಬಹುದಾ ಎಂದು ಮರೆಯಲ್ಲಿ ನಿಂತು ಕಾಯುತ್ತಿದ್ದಾನೆ. ಜಾನು ಹಾಡಿನಲ್ಲಿ ಮುಳುಗಿದ್ದಾಳೆ.

Zee kannada serial Lakshmi nivasa Written Update on August 1st episode

ಜಾನುಗೆ ಬಿಕ್ಕಳಿಕೆಯೇ ಬರಲಿಲ್ಲ

ಜಯಂತ್‌ಗಾಗಿ ಅಡುಗೆ ಮಾಡುತ್ತಿರುವ ಜಾನು, ಹಾಡನ್ನು ಹೇಳುತ್ತಾ ಕೆಲಸ ಮಾಡುತ್ತಿದ್ದಾಳೆ. ಜಯಂತ್ ಆ ಹಾಡಿನಲ್ಲಿ ಮೈಮರೆತಿದ್ದಾನೆ. ಇದರ ನಡುವೆ ಜಾನು ಒಳಗೆ ಹೋಗಿದ್ದಾಳೆ. ಜಯಂತ್ ಕಣ್ಣಿಂದ ದೂರವಾಗಿದ್ದಕ್ಕೇನೆ ಟೆನ್ಶನ್ ಆಗಿದ್ದಾನೆ. ಬೇರೆಯವರಿಗೆ ಹೋಲಿಕೆ ಮಾಡಿಕೊಂಡು ಜಯಂತ್ ಈ ಮೊದಲೇ ಜಾನುಗೆ ಅದೆಷ್ಟು ನೋವು ಕೊಟ್ಟಿದ್ದಾನೆ ಎಂಬುದು ಕಣ್ಣ ಮುಂದೆ ಇದೆ. ಈಗ ಜಾಹ್ನವಿಗೆ ಬಿಕ್ಕಳಿಕೆ ಬಾರದೆ ಹೋದರೆ ಕಥೆ ಅಷ್ಟೇ. ಬೇರೆ ಯಾರೋ ನೆನೆಸಿಕೊಂಡರೆ ಮಾತ್ರ ಬಿಕ್ಕಳಿಕೆ ಬರೋದಾ..? ನಾನು ನೆನೆಸಿಕೊಂಡರೆ ಯಾಕೆ ಬರಲ್ಲ ಅಂತ ಹಿಂಸೆ ಕೊಟ್ಟರು ಕೊಡಬಹುದು.

More from Filmibeat

English summary
Lakshmi nivasa kannada serial today episode. Here is the details about It is true that Jayant will get angry if Janu does not come to hiccups;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X