Lakshminivasa: ಜಾನು.. ಜಯಂತ್ ಬಗ್ಗೆ ಅಷ್ಟೆಲ್ಲ ಸತ್ಯ ತಿಳ್ಕೋಬೇಡ.. ಆಮೇಲೆ ನೀನೆ ಇರಲ್ಲ..!
ಜಾಹ್ನವಿಗೆ ಇನ್ನು ಜಯಂತ್ ಬಗ್ಗೆ ಚೆನ್ನಾಗಿ ಅರ್ಥವೇ ಆಗಿಲ್ಲ. ಜಾನು ಬರೀ ಜಯಂತ್ ಬಗ್ಗೆ ಮಾತ್ರ ಯೋಚನೆ ಮಾಡಬೇಕು. ಬೇರೆ ಯಾರ ಬಗ್ಗೆಯೂ ಥಿಂಕ್ ಕೂಡ ಮಾಡಬಾರದು. ಅಷ್ಟು ಸ್ವಾರ್ಥಿ. ಇನ್ನು ಜಾಹ್ನವಿ ಯಾರ ಜೊತೆಗಾದರೂ ಕ್ಲೋಸ್ ಆದ್ರೆ ಅವರ ಕಥೆಯನ್ನೇ ಮುಗಿಸಿ ಬಿಡುತ್ತಾನೆ. ಈಗ ಸೆಕ್ಯೂರಿಟಿಯ ಕಥೆಯೂ ಜಾಹ್ನವಿಯಿಂದಾನೇ ಮುಗಿದಿದೆ.
ಜಾಹ್ನವಿಯನ್ನು ಮೊದಲು ಹೊರಗಡೆಯೇ ಬಿಡುತ್ತಿರಲಿಲ್ಲ. ಆದರೆ ಅವಳ ಮನವಿ ಮೇರೆಗೆ ಹೊರಗೆ ಬಿಟ್ಟ. ಸೆಕ್ಯೂರಿಟಿಗೆ ಕನ್ನಡವೇ ಬರದಿದ್ದರು ಜಾಹ್ನವಿ ಅವರ ಜೊತೆಗೆ ಕ್ಲೋಸ್ ಆಗಿದ್ದಳು. ತಾನೂ ಏನೇ ಅಡುಗೆ ಮಾಡಿದರೂ ಮೊದಲು ಸೆಕ್ಯೂರಿಟಿಗೆ ನೀಡುತ್ತಿದ್ದಳು. ಇದು ಜಯಂತ್‌ಗೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ಅವಳು ಬಾಯ್ತುಂಬಾ ಅಣ್ಣ ಎಂದರೂ ಅವನನ್ನೇ ಮುಗಿಸಿದ್ದಾನೆ.

ಸಿಸಿಟಿವಿ ನೋಡಿ ಜಾಹ್ನವಿ ಶಾಕ್
ಜಾಹ್ನವಿ ಸೆಕ್ಯೂರಿಟಿ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡಿದ್ದಳು. ಮುಂದಕ್ಕೆ ಏನಾದರೂ ಯೋಚನೆ ಮಾಡುತ್ತಾಳೆ ಎಂಬ ಕಾರಣಕ್ಕೆ ಜಯಂತ್ ಸಿಸಿಟಿವಿ ಫುಟೇಜ್ ತಂದಿದ್ದ. ಪೊಲೀಸರಿಗೆ ದೂರು ನೀಡುವ ನೆಪ ಮಾಡಿದ್ದಾನೆ. ಆ ಹಾರ್ಡ್ ಡಿಸ್ಕನ್ನು ತಂದು ಜಾಹ್ನವಿ ಕೈಗೆ ಇಟ್ಟಿದ್ದಾನೆ. ಜಾಹ್ನವಿಗೆ ಮೊದಲೇ ಆತಂಕವಿದ್ದ ಕಾರಣ ಸಿಸಿಟಿವಿ ಫೂಟೇಜ್ ಅನ್ನು ನೋಡಿದ್ದಾಳೆ. ಮನೆಗೆ ಬಂದ ಆ ಮುಸುಕುಧಾರಿಯನ್ನು ಕಂಡು ಶಾಕ್ ಆಗಿದ್ದಾಳೆ.
ಕಳ್ಳನನ್ನು ಜೂಮ್ ಮಾಡುವ ಪ್ರಯತ್ನ
ಜಾಹ್ನವಿ ಸಿಸಿಟಿವಿ ಫುಟೇಜ್ ನೋಡುತ್ತಿದ್ದಾಗಲೇ ಜಯಂತ್ ಬಂದಿದ್ದಾನೆ. ಜಾನು ಅದನ್ನು ನೋಡುತ್ತಾಳೆ ಎಂದು ನಿರೀಕ್ಷೆ ಕೂಡ ಮಾಡಿರಲಿಲ್ಲ. ತಕ್ಷಣ ಅವನು ಬಂದು ಅಲ್ಲಿಯೇ ಕುಳಿತುಕೊಳ್ಳುತ್ತಾನೆ. ಆ ಕಳ್ಳನ ಮುಖ ಜೂಮ್ ಮಾಡಿ ಎಂದಾಗ ಒಂದು ಕ್ಷಣ ಆತಂಕಗೊಳ್ಳುತ್ತಾನೆ. ಆದರೆ ಸರಿಯಾಗಿ ಕಾಣದೆ ಇದ್ದಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾನೆ. ಆಯ್ತು ಪೊಲೀಸರಿಗೆ ಹೇಳಿ ಹುಡುಕಿಸೋಣ ಎಂದವನು, ಆ ಫುಟೇಜ್ ಅನ್ನು ಪೊಲೀಸರಿಗೆ ನೀವೆ ಕೊಡಿ ಎಂದು ಹೇಳಿ ಹೋಗಿದ್ದಾನೆ. ಅಂದ್ರೆ ಫುಟೇಜ್ ತೆಗೆದುಕೊಳ್ಳಲು ಬರುವವರು ಜಯಂತ್ ಸೃಷ್ಟಿಸಿದ ಪೊಲೀಸರೇ ಆಗಿರುತ್ತಾರೆ.

ಸೆಕ್ಯೂರಿಟಿಯನ್ನೇ ಮುಗಿಸಿರುವ ಜಯಂತ್
ಭಾಷೆ ಬರಲ್ಲ, ಜಾನು ಮಾತಾಡಿಸಲ್ಲ ಎಂದುಕೊಂಡಿದ್ದ. ಆದರೆ ದಿನೇ ದಿನೇ ಅದ್ಯಾವಾಗ ಜಾಹ್ನವಿಗೆ ಮನೆಯ ಸೆಕ್ಯೂರಿಟಿ ಕ್ಲೋಸ್ ಆದನೋ ಅಂದೇ ಜಯಂತ್‌ನ ಟಾರ್ಗೆಟ್ ಆಗಿ ಬಿಟ್ಟ ಸೆಕ್ಯೂರಿಟಿ. ಅತಿಯಾದಾಗ ಒಂದು ರಾತ್ರಿ ಆತನ ಪ್ರಾಣವನ್ನೇ ತೆಗೆದಿದ್ದಾನೆ. ಜಾಹ್ನವಿಯ ಜೊತೆಗೆ ಯಾರೇ ಮಾತಾಡಿದರೂ ಜಯಂತ್ ಅದನ್ನು ಸಹಿಸುವುದಿಲ್ಲ. ಜಾನು ಸದಾ ಜಯಂತ್‌ನ ಧ್ಯಾನದಲ್ಲೇ ಇರಬೇಕು.
ಜಾನುಗೆ ಬುದ್ದಿ ಹೇಳಿದ ವೀಕ್ಷಕರು
ಜಾಹ್ನವಿ ಈ ಮಿಸ್ಸಿಂಗ್ ಕೇಸಿನ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಂಡಿದ್ದಾಳೆ. ಮನೆಗೆ ಬಂದ ಜಯಂತ್ ಗೆ ಸೆಕ್ಯೂರಿಟಿಯ ಬಗ್ಗೆಯೇ ಹೇಳಿ ತಲೆ ತಿನ್ನುತ್ತಾಳೆ. ಅದಕ್ಕೆ ಜಾಹ್ನವಿಯ ಹಿತ ಬಯಸುವ ವೀಕ್ಷಕರು ಕಿವಿ ಮಾತನ್ನ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಜಯಂತ್‌ನ ಕರಾಳ ಮುಖದ ಚಾಪ್ಟರ್ ಓಪನ್ ಮಾಡುವುದಕ್ಕೆ ಪ್ರಯತ್ನ ಮಾಡವೇಡ ಜಾಹ್ನವಿ. ಅವನ ಸತ್ಯ ತಿಳಿಯಲು ಹೋದರೆ ಆಮೇಲೆ ನೀನೆ ಇರಲ್ಲ ಅಂತ ಎಚ್ಚರಿಕೆಯ ಮಾತುಗಳನ್ನ ಹೇಳಿದ್ದಾರೆ.


Click it and Unblock the Notifications











