Lakshminivasa: ಚೆಲ್ವಿಯನ್ನು ಮದುವೆಯಾದ ವೆಂಕಿ; ಮನೆಗೋದ್ರೆ ಸಂತೋಷ ಹಬ್ಬ ಮಾಡ್ತಾನೆ ಎಂದ ವೀಕ್ಷಕರು!

By ಎಸ್ ಸುಮಂತ್

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ವೆಂಕಿಗೆ ಮಾತು ಬರುವುದಿಲ್ಲ. ಆದರೆ ಎಲ್ಲರ ಕಷ್ಟಗಳನ್ನು ಚೆನ್ನಾಗಿಯೇ ಅರ್ಥ ಮಾಡಿಕೊಳ್ಳುತ್ತಾನೆ. ಸ್ವಲ್ಪ ಪ್ರೀತಿ ಕೊಟ್ಟರು ಹೆಚ್ಚು ಪ್ರೀತಿ ತೋರಿಸುತ್ತಾನೆ. ಆ ರೀತಿಯ ಗುಣವಂತ. ಲಕ್ಷ್ಮೀ ಹಾಗೂ ಶ್ರೀನಿವಾಸ ಅನಾಥಶ್ರಮದಿಂದ ಸಿಕ್ಕ ವೆಂಕಿಯನ್ನು ಸಾಕಿ ಸಲಹಿದ್ದಾರೆ. ಯಾಕಂದ್ರೆ ಲಕ್ಷ್ಮೀ ಹಾಗೂ ಶ್ರೀನಿವಾಸನನ್ನ ಗಂಡು ಮಕ್ಕಳು ಅರ್ಥ ಮಾಡಿಕೊಳ್ಳದೇ ಹೋದರೂ ವೆಂಕಿ ಅವರ ಕಷ್ಟಕ್ಕೆ ಆಗುತ್ತಾನೆ.

ವೆಂಕಿಗೆ ದೇವಸ್ಥಾನದಲ್ಲಿ ಕೆಲಸ ಸಿಕ್ಕಾಗಿನಿಂದ ಖುಷಿಯಾಗಿದ್ದಾನೆ. ಅಲ್ಲಿ ಚೆಲ್ವಿ ಮತ್ತು ಅವರ ಅಮ್ಮನನ್ನು ಕಂಡರೆ ಖುಷಿ. ಚೆಲ್ವಿಗೂ ವೆಂಕಿ ಮೇಲೆ ಪ್ರೀತಿ ಇದೆ. ಆದರೆ ಅದನ್ನ ಹೇಳಿಕೊಂಡಿಲ್ಲ ಅಷ್ಟೇ. ವೆಂಕಿ ಗೆ ಜಾಹ್ನವಿಯಿಂದ ಇದು ಅರ್ಥವಾಗಿದೆ. ಇದೀಗ ತನ್ನ ಪ್ರೀತಿಯನ್ನ ಉಳಿಸಿಕೊಂಡಿದ್ದಾನೆ ವೆಂಕಿ. ಚೆಲ್ವಿಗೆ ತಾಳಿ ಕಟ್ಟಿದ್ದಾನೆ.

Zee kannada serial Lakshmi nivasa Written Update on August 26th episode

ಸಾಯಲು ಹೋದ ಚೆಲ್ವಿ

ಚೆಲ್ವಿ ದೇವಸ್ಥಾನದಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾಳೆ. ಆದರೆ ಫೈನಾನ್ಸ್ ಕೊಟ್ಟ ವ್ಯಕ್ತಿ ಅವಳ ಬಳಿ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಇದನ್ನು ನೋಡಿದವರೆಲ್ಲ ಈಗ ಚೆಲ್ವಿಯ ಬಗ್ಗೆಯೇ ಕೆಟ್ಟದಾಗಿ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ. ಇದನ್ನು ಸಹಿಸದ ಚೆಲ್ವಿ ಸಾಯುವ ನಿರ್ಧಾರಕ್ಕೆ ಬಂದಿದ್ದಾಳೆ. ಬದುಕಿದ್ದರೆ ತಾನೇ ಇವರೆಲ್ಲ ಮಾತನಾಡುವುದು, ಸಾಯಬೇಕು ಎಂದು ಗಟ್ಟಿ ನಿರ್ಧಾರ ಮಾಡಿದ್ದಾಳೆ.

ಚೆಲ್ವಿಯನ್ನು ಕಾಪಾಡಿದ ವೆಂಕಿ

ಯಾರಿಗೂ ಹೇಳದೇ ಸೀದಾ ಸಾಯಲು ಬಾವಿಯ ಬಳಿ ಹೋಗಿದ್ದಾಳೆ. ವೆಂಕಿಗೆ ಚೆಲ್ವಿ ಕಾಣದೆ ಇರುವುದನ್ನು ಕಂಡು ಆತಂಕವಾಗಿದೆ. ತಕ್ಷಣ ಅವಳನ್ನು ಹುಡುಕುತ್ತಾ ಹೊರಟಿದ್ದಾನೆ. ಚೆಲ್ವಿ ಬಾವಿಯ ಬಳಿ ಇದ್ದದ್ದು ಕಂಡಿದೆ. ಅಲ್ಲಿಗೆ ಓಡಿ ಹೋದವನೇ, ಇನ್ನೇನು ಬಾವಿಗೆ ಬೀಳಲು ಹೋದ ಚೆಲ್ವಿಯನ್ನು ಕಾಪಾಡಿದ್ದಾನೆ. ಆಮೇಲೆ ಕಪಾಳಕ್ಕೆ ಹೊಡೆಯಲು ಹೋಗಿ ಕೋಪವನ್ನು ಕಂಟ್ರೋಲ್ ಮಾಡಿಕೊಂಡಿದ್ದಾನೆ. ಮಾತು ಬಾರದೆ ಹೋದರೂ ಮೂಕಾಭಿನಯದಿಂದಾನೇ ಜೀವನದ ಅರ್ಥ ತಿಳಿಸಿದ್ದಾನೆ. ಅಲ್ಲಿಂದ ಸೀದಾ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾನೆ.

ಚೆಲ್ವಿ ಮಾನ ಉಳಿಸಲು ಮದುವೆ

ಚೆಲ್ವಿಗೂ ವೆಂಕಿ ಎಂದರೆ ಪ್ರೀತಿ.. ವೆಂಕಿಗೂ ಚೆಲ್ವಿ ಮೇಲೆ ಲವ್ವಾಗಿದೆ. ಈಗ ಪರಿಸ್ಥಿತಿ ಬೇರೆ ಕೆಟ್ಟದಾಗಿದೆ. ಚೆಲ್ವಿಯನ್ನು ಆ ರಾಕ್ಷಸನ ಕೈಯಿಂದ ಕಾಪಾಡಲೇಬೇಕಿದೆ. ಹೀಗಾಗಿ ಹಿಂದು ಮುಂದು ಯೋಚನೆಯನ್ನು ಮಾಡದೆ, ಮನೆಯವರಿಗೂ ಒಂದು ಮಾತು ತಿಳಿಸದೆ ಚೆಲ್ವಿಯ ಕುತ್ತುಗೆಗೆ ತಾಳಿ ಕಟ್ಟಿದ್ದಾನೆ. ಚೆಲ್ವಿಯ ತಾಯಿಗೆ ಕಣ್ಣು ಕಾಣುವುದಿಲ್ಲ. ಆದರೆ ಚೆಲ್ವಿಯ ಮದುವೆ ಮಾಡಬೇಕೆಂಬ ಆಸೆ ಅವಳದ್ದು. ವೆಂಕಿಯ ಬಗ್ಗೆ ಚೆಲ್ವಿಯ ತಾಯಿಗೆ ಅಪಾರ ಅಭಿಮಾನವಿತ್ತು. ಹೀಗಾಗಿ ಸಂತಸದಿಂದಾನೇ ಧಾರೆ ಎರೆದುಕೊಟ್ಟಿದ್ದಾಳೆ.

Zee kannada serial Lakshmi nivasa Written Update on August 26th episode

ಮನೆಗೋಗು ಇದೆ ಹಬ್ಬ ಎಂದ ವೀಕ್ಷಕರು

ಚೆಲ್ವಿ ಹಾಗೂ ವೆಂಕಿ ಮದುವೆ ಏನೋ ಆಯ್ತು. ಈ ಧಾರಾವಾಹಿ ನೋಡುವ ಹಲವು ವೀಕ್ಷಕರು ಇದು ಜೋಡಿ ಅಂದ್ರೆ, ನಮಗಂತು ತುಂಬಾನೇ ಖುಷಿ ಆಯ್ತು ಎಂದಿದ್ದಾರೆ. ಇನ್ನು ಹಲವರು ಮನೆಗೆ ಹೋಗಪ್ಪ ವೆಂಕಿ ನಿಂಗಿದೆ ಮಾರಿ ಹಬ್ಬ ಎಂದು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆಲ್ಲಾ ಕಾರಣ ಸಂತೋಷ. ಶ್ರೀನಿವಾಸ ಹಾಗೂ ಲಕ್ಷ್ಮೀಯ ಮೊದಲ ಮಗ.

ಚೆಲ್ವಿ - ವೆಂಕಿ ಮದುವೆಗೆ ಹಾರೈಸಿದ ವೀಕ್ಷಕರು

ಸ್ವಾರ್ಥ ಭಾವನೆಯುಳ್ಳ ಸಂತೋಷ. ಸದಾ ತನಗೇನು ಸಿಗುತ್ತೆ ಎಂದು ನೋಡುತ್ತಾನೆಯೇ ವಿನಃ ಅಪ್ಪ ಅಮ್ಮನ ಕಷ್ಟ ಏನು ಎಂಬುದು ನೋಡಲ್ಲ. ಈಗ ವೆಂಕಿ ಮದುವೆಯಾಗಿ ಬಂದರೆ ಇವನನ್ನೇ ನೋಡಿಕೊಳ್ಳುತ್ತಿರುವುದು ಹೆಚ್ಚು, ಈಗ ಅವನೊಂದಿಗೆ ಇನ್ನೊಬ್ಬಳು ಬೇಕಾ? ಎಂದೇ ರಾಗ ತೆಗೆಯುತ್ತಾನೆ.

More from Filmibeat

English summary
Lakshmi nivasa kannada serial today episode. Here is the details about Venki married Chelvi without informing the family;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X