Lakshminivasa: 'ಲಕ್ಷ್ಮೀ ನಿವಾಸ' ಅಲ್ಲ ಇದು 'ಗುಪ್ತನಿವಾಸ'; ವೀಕ್ಷಕರು ಹಿಂಗ್ಯಾಕಂದ್ರು?

By ಎಸ್ ಸುಮಂತ್

ಲಕ್ಷ್ಮೀ ನಿವಾಸ ಧಾರಾವಾಹಿ ದಿನದಿಂದ ದಿನಕ್ಕೆ ವೀಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. ಮಧ್ಯಮ ವರ್ಗದವ ಕುಟುಂಬವದು. ಹೆಣ್ಣು ಮಕ್ಕಳ ಮದುವೆಯಾಗಿದೆ. ಗಂಡು ಮಕ್ಕಳು ಸೆಟಲ್ ಆಗಿಲ್ಲ. ಗಂಡನಿಗೆ ಕೆಲಸ ಹೋಗಿದೆ. ಒಬ್ಬ ಮಗಳಿಗೆ ತಾಳಿ ಕಟ್ಟಿದವನು ಯಾರೆಂದು ತಿಳಿದಿಲ್ಲ. ಹೀಗೆ ನೂರೆಂಟು ಸಮಸ್ಯೆಯ ಜೊತೆಗೇನೆ ಧಾರಾವಾಹಿ ಸಾಗುತ್ತಿದೆ.

ಈ ಧಾರಾವಾಹಿ ನೋಡಿದ ವೀಕ್ಷಕರಿಗೆ ತಲೆಯಲ್ಲಿ ಪ್ರಶ್ನೆಗಳ ಸುರಿಮಳೆಯೇ ಸುರಿದಿದೆ. ಯಾಕಂದ್ರೆ ಒಂದಷ್ಟು ಸಮಸ್ಯೆಗಳಿಗೆ ಇಲ್ಲಿ ಪರಿಹಾರವನ್ನೇ ನೀಡಲ್ಲ. ದೃಶ್ಯಗಳೇ ಸ್ಕಿಪ್ ಆಗಿರುತ್ತವೆ. ಹೀಗಾಗಿ ನೋಡುಗರು ಈ ಧಾರಾವಾಹಿಯ ಟೈಟಲ್ ಅನ್ನೇ ಬದಲಾಯಿಸಿದ್ದಾರೆ. ಇದು ಲಕ್ಷ್ಮೀ ನಿವಾಸ ಅಲ್ಲ ಗುಪ್ತ ನಿವಾಸ ಎಂದಿದ್ದಾರೆ.

zee kannada serial Lakshmi nivasa Written Update on August 27th episode

ಬಾಗಿಲಿನಲ್ಲೇ ತಡೆದ ಸಂತೋಷ

ಸಾಯಲು ಹೋದ ಚೆಲ್ವಿಯನ್ನು ಬದುಕಿಸಿ, ವೆಂಕಿ ತಾನೇ ಮದುವೆ ಮಾಡಿಕೊಂಡು ಬಂದಿದ್ದಾನೆ. ಮನೆಯವರ ಮುಂದೆ ಬಂದು ನಿಂತಿದ್ದಾನೆ. ಒಂದು ಕ್ಷಣ ಲಕ್ಷ್ಮೀ ಶಾಕ್ ಆದರೂ, ಮನೆಯ ಒಳಗೆ ಕರೆದಿದ್ದಾಳೆ. ಆದರೆ ಸಂತೋಷನೇ ಎಗರಾಡಿದ್ದಾನೆ. ನಮಗೆ ಹೇಳದೆ ಅದೇಗೆ ಮದುವೆಯಾದೆ ಎಂದು ಪ್ರಶ್ನೆ ಮಾಡಿದ್ದಾನೆ. ಆದರೆ ಅಜ್ಜಿಯ ಬೈಗುಳ ಹೊರ ಬಂದ ಮೇಲೆ ತಣ್ಣಗಾಗಿದ್ದಾನೆ. ವೆಂಕಿ ಮತ್ತು ಚೆಲ್ವಿಯನ್ನು ಮೊದಲು ಮನೆಯ ಒಳಗೆ ಕರೆದುಕೊಂಡಿದ್ದಾರೆ.

ಜಯಂತನ ದೋಸ್ತನೇ ಈ ವೆಂಕಿ?

ಈ ಧಾರಾವಾಹಿಯಲ್ಲಿ ಸಾಕಷ್ಟು ಕೌತುಕಗಳಿವೆ. ವೆಂಕಿ ಎಲ್ಲಿ ಸಿಕ್ಕಿದ ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ. ದೇವರ ಮಗ ಅಂತಷ್ಟೇ ಹೇಳಿದ್ದಾರೆ. ವೆಂಕಿಯನ್ನು ನೋಡಿದಾಗ ಜಯಂತನಿಗೆ ಆಗಾಗ ಅವನ ಮೂಗ ದೋಸ್ತ ನೆನಪಾಗುತ್ತಾನೆ. ಅವನೇ ಇವನ ಎಂಬುದು ಮಾತ್ರ ಇನ್ನು ಸ್ಪಷ್ಟವಾಗಿಲ್ಲ. ಅವನೇ ಆದರೆ ವೆಂಕಿ ಮತ್ತು ಜಯಂತ್ ದೂರಾಗಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಬೇಕಿದೆ.

zee kannada serial Lakshmi nivasa Written Update on August 27th episode

ಸಂತೋಷನ ಹಣ ಬಗ್ಗೆ ಚಿಂತೆಯೇ ಇಲ್ಲ

ಲಕ್ಷ್ಮೀ ನಿವಾಸದಲ್ಲಿ ಅದಷ್ಟೇ ಅಲ್ಲ ಸಾಕಷ್ಟು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಕೊಂಡು ಬಿಟ್ಟಿದೆ. ಸಂತೋಷನದ್ದು ಐದು ಲಕ್ಷ ಹಣ ಕಳೆದು ಹೋಗಿದೆ. ಅದರ ಬಗ್ಗೆ ಆತಂಕವೇ ಇಲ್ಲ. ಏನೋ ಸಣ್ಣ ವಸ್ತುವನ್ನು ಕಳೆದುಕೊಂಡವನಂತೆ ಇದ್ದಾನೆ. ಆ ಹಣ ಎಲ್ಲಿ ಹೋಯ್ತು ಅಂತ ಹುಡುಕುತ್ತಲೇ ಇಲ್ಲ. ಇನ್ನು ಹಣ ಕದ್ದ ಹರೀಶನು ಆರಾಮವಾಗಿ ಇದ್ದಾನೆ. ಆದರೆ ಇದರ ನಡುವೆ ಹರೀಶನ ಬಿಸಿನೆಸ್ ಹಳ್ಳ ಹಿಡಿದಿದೆ. ಅದರ ಬಗ್ಗೆಯೂ ಮನೆಯವರಿಗೆ ಗಮನಕ್ಕೆ ಬರುತ್ತಿಲ್ಲ. ಇನ್ನು ಭಾವನಾ ವಿಚಾರಕ್ಕೆ ಬರುವುದಾದರೆ ಅವಳ ಮದುವೆಯಾದ ಸಿದ್ದು ಮುಂದೆ ಬರೋದು ಯಾವಾಗ ಅನ್ನೋದು. ಹಾಗೇ ಜಯಂತ್ ಬಗ್ಗೆ ಹೆಚ್ಚು ಏನು ತಿಳಿಯುತ್ತಿಲ್ಲ. ಅಜ್ಜಿಗೆ ಅನುಮಾನ ಬಂದಿತ್ತು. ಆದರೆ ಅದು ಅಲ್ಲಿಗೆ ನಿಂತಿದೆ‌.

ಗುಪ್ತ ನಿವಾಸ ಎಂದಿದ್ದೇಕೆ..?

ಹೀಗೆ 'ಲಕ್ಷ್ಮೀ ನಿವಾಸ'ದ ಬಗ್ಗೆ ಪ್ರಶ್ನೆಗಳು ಒಂದೆರಡಲ್ಲ. ಅದಕ್ಕೆ ವೀಕ್ಷಕರು ಲಕ್ಷ್ಮೀ ನಿವಾಸವನ್ನು 'ಗುಪ್ತ ನಿವಾಸ' ಎಂದೇ ಕರೆಯುತ್ತಿದ್ದಾರೆ. ಈ ಪೋಸ್ಟ್ ಇನ್ನೊಂದಷ್ಟು ಜನ ಪ್ರತಿಕ್ರಿಯೆ ನೀಡಿದ್ದಾರೆ. ಈಗಲೇ ಎಲ್ಲದಕ್ಕೂ ಸತ್ಯ ಗೊತ್ತಾಗಿ ಬಿಟ್ಟರೆ ಸೀರಿಯಲ್ ಓಡುವುದು ಹೇಗೆ? ಕಥೆಯನ್ನು ಈಗಲೇ ಮುಗಿಸಿ ಬಿಡುವುದಕ್ಕೆ ಆಗುತ್ತಾ? ಎಂದೇ ಸಮಾಧಾನ ಮಾಡಿದ್ದಾರೆ. ಅದೆಲ್ಲ ಬಿಟ್ಟು ಸದ್ಯ ವೆಂಕಿ ಹಾಗೂ ಚೆಲ್ವಿ ಮದುವೆ ಆಗಿರುವುದು ಹಲವರಿಗೆ ತುಂಬಾ ಇಷ್ಟವಾಗಿದೆ.

More from Filmibeat

English summary
zee kannada serial Lakshmi nivasa Written Update on August 27th episode. Here is the details about fans called It is not Lakshmi's nivasa, it is a Gupta nivasa;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X