Lakshminivasa: ಭಾವನಾ ಮುಂದೆ ಬರುವ ಧೈರ್ಯ ಮಾಡಿದ ಸಿದ್ದು; ಸೀರೆ ಇಟ್ಟು ಮರೆಯಾದ!
ಭಾವನಾ ದಿನೇ ದಿನೇ ಕುಗ್ಗಿ ಹೋಗುತ್ತಿದ್ದಾಳೆ. ಮನೆಯಲ್ಲಿಯೂ ಅದು ಗಮನಕ್ಕೆ ಬರುತ್ತಿದೆ. ಎಲ್ಲರು ನಗುತ್ತಾಬಿದ್ದರೆ ಭಾವನಾ ಮಾತ್ರ ಯಾವುದೋ ಲೋಕದಲ್ಲಿ ಇರುತ್ತಾಳೆ. ಯೋಚನೆಯಲ್ಲಿ ಮುಳುಗಿರುತ್ತಾಳೆ. ಭಾವನಾಳ ಕಷ್ಟ ವೆಂಕಿಗೆ ಮತ್ತು ಲಕ್ಷ್ಮೀಗೆ ಮಾತ್ರ ಗೊತ್ತು. ಆದರೆ ಅದನ್ನು ಯಾರಿಗೂ ಹೇಳುವಂತೆ ಇಲ್ಲ. ಆ ಹುಡುಗ ಸಿಕ್ಕಾದ ಮೇಲೆ ವುಚಾರ ತಿಳಿಸುವ ಯೋಚನೆಯಲ್ಕಿದ್ದಾರೆ.
ಅತ್ತ ಸಿದ್ದೇಗೌಡ್ರಿಗೇನೆ ಆ ಹುಡುಗನನ್ನ ಹುಡುಕಲು ಹೇಳಿದ್ದಾಳೆ ಲಕ್ಷ್ಮೀ. ಈಗಾಗಲೇ ಆ ಸಿದ್ದೇಗೌಡ್ರೇ, ಭಾವನಾ ಕುತ್ತಿಗೆಗೆ ತಾಳಿ ಕಟ್ಟಿರುವುದು ಎಂಬುದು ವೆಂಕಿಗೆ ಗೊತ್ತಾಗಿದೆ. ಆತನು ಹೇಳುತ್ತಿಲ್ಲ, ಗೌಡ್ರೂ ಧೈರ್ಯ ಮಾಡುತ್ತಿಲ್ಲ. ಆದರೆ ಭೀಮನ ಅಮಾವಾಸ್ಯೆಗೆ ಭಾವನಾಗೆ ಸೇರಬೇಕಾದ ಉಡುಗೊರೆಯನ್ನು ನೀಡಿದ್ದಾನೆ.

ಭಾವನಾಳನ್ನ ನೆನಪಿಸಿಕೊಂಡ ಗೌಡ್ರು
ಪೂರ್ವಿಗೆ ಈಗ ಸಿದ್ದೇಗೌಡ್ರ ಮೇಲೆ ಲವ್ವಾಗಿದೆ. ಅದನ್ನ ಹೇಳಿಕೊಂಡಿದ್ದಾಳೆ ಕೂಡ. ಅದರೆ ಗೌಡ್ರಿಗೆ ಅದು ಸ್ವಲ್ಪವೂ ಇಷ್ಟವಿಲ್ಲ. ಭಾವನಾಗೆ ಆಗಲೇ ತಾಳಿಯನ್ನು ಕಟ್ಟಿ ಹೆಂಟತಿಯೆಂದು ಸ್ವೀಕಾರ ಮಾಡಿದ್ದಾರೆ. ಭೀಮನ ಅಮಾವಾಸ್ಯೆ ಎಂದು ಪೂರ್ವಿ ಪೂಜೆಗೆ ಕರೆದಿದ್ದಾಳೆ.ಆದರೆ ಮದುವೆಗೂ ಮುನ್ನ ಇದೆಲ್ಲ ಬೇಡವೆಂದದು ಸಿದ್ದೇಗೌಡ್ರ ತಾಯಿ ಹೇಳಿದ್ದಾರೆ. ಆಗ ತಕ್ಷಣಕ್ಕೆ ಗೌಡ್ರಿಗೆ ಭಾವನಾ ನೆನಪಾಗಿದ್ದಾಳೆ. ಅವಳಿಗೇನಾದರೂ ಉಡುಗೊರೆ ಕೊಡಬೇಕೆಂದುಕೊಂಡು, ಬಂದಿದ್ದಾನೆ.
ಭಾವನಾಗೆ ಪತ್ರ ಕೊಟ್ಟ ಸಿದ್ದೇಗೌಡ
ರಸ್ತೆಯಲ್ಲಿ ಭಾವನಾ ಹೋಗುತ್ತಿದ್ದನ್ನು ಗಮನಿಸಿದ್ದಾನೆ. ತಕ್ಷಣ ಅಲ್ಲಿಯೇ ಒಂದು ಮಗು ಕೂಡ ಸಿಕ್ಕಿದ್ದು, ಮಗುವಿನ ಕೈಯಿಂದ ಪತ್ರ ಕೊಡಿಸಿದ್ದಾನೆ. ಆ ಪತ್ರವನ್ನು ನೋಡಿ ಭಾವನಾಗೆ ಇವತ್ತು ಅವನು ಸಿಕ್ಕೆ ಸಿಗುತ್ತಾನೆ, ನನ್ನ ಕುತ್ತುಗೆಗೆ ಯಾಕೆ ತಾಳಿ ಕಟ್ಟಿದ್ದು, ನಾನೇನು ಅನ್ಯಾಯ ಮಾಡಿದೆ ಎಂದು ಕೇಳುತ್ತೇನೆಂದು ಅವನು ಪತ್ರದಲ್ಲಿ ಬರೆದ ದೇವಸ್ಥಾನಕ್ಕೆ ಹೋಗಿದ್ದಾಳೆ. ಭಾವಾನಗೆ ಅವನು ಯಾರೆಂದು ತಿಳಿದರೆ ಮನೆಯವರ ಮುಂದೆಲ್ಲ ಸತ್ಯ ಆದರೂ ಹೇಳಬಹುದು. ಜೊತೆಗೆ ಆ ತಾಳಿಯನ್ನು ಮುಚ್ಚಿಟ್ಟುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.

ಸೀರೆಯಿಟ್ಟು ಮರೆಯಲ್ಲಿ ನಿಂತ ಗೌಡ್ರು
ಭಾವನಾ ಆ ದೇವಸ್ಥಾನಕ್ಕೆ ಬಂದಿದ್ದಾಳೆ. ಸುತ್ತಲು ಹುಡುಕಾಡಿದ್ದಾಳೆ. ಆದರೆ ಯಾರು ಕಾಣುವುದಿಲ್ಲ. ಬಳಿಕ ಅಲ್ಲೊಂದು ಸೀರೆ ಕಾಣಿಸುತ್ತದೆ. ಆ ಸೀರೆ ಜೊತೆಗೆ ಪತ್ರವೊಂದು ಸಿಕ್ಕಿದೆ. ಅದರಲ್ಲಿ, ಇಲ್ಲಿಯ ತನಕ ನೀವೂ ಹುಡುಕಿಕೊಂಡು ಬಂದಿರೋದನ್ನ ನೋಡಿದರೇನೆ ನನ್ನನ್ನು ನೋಡುವುದಕ್ಕೆ ನಿಮಗೆ ಎಷ್ಟು ಕುತೂಹಲ ಇದೆ ಅನ್ನೋದು ಗೊತ್ತಾಗುತ್ತೆ. ಇವತ್ತು ಭೀಮನ ಅಮಾವಾಸ್ಯೆ. ಎಲ್ಲವೂ ಚೆನ್ನಾಗಿದ್ದಿದ್ದರೆ ನೀವೂ ನನ್ನ ಪಾದಪೂಜೆ ಮಾಡ್ತಾ ಇದ್ರಿ, ನಾನು ಈ ಸೀರೆಯನ್ನು ಉಡುಗೊರೆಯಾಗಿ ಕೊಡ್ತಾ ಇದ್ದೆ. ಆದರೆ ಈ ರೀತಿ ಸೀರೆಯನ್ನು ಕೊಡಬೇಕಾಗಿದೆ. ಈ ಸೀರೆಯನ್ನು ಜೋಪಾನವಾಗಿಟ್ಟುಕೊಳ್ಳಿ ಎಂದು ಪತ್ರದಲ್ಲಿ ಬರೆದಿದ್ದಾನೆ.
ಸಂಪ್ರದಾಯಕ್ಕೆ ಬೆಲೆ ಕೊಡುವ ಭಾವನಾ
ಭಾವನಾ ಈಗಲಾದರೂ ಆತ ನನ್ನ ಕಣ್ಣ ಮುಂದೆ ಬರಬಹುದು ಎಂದೇ ನಂಬಿದ್ದಳು. ಆದರೆ ಕೋಪದಲ್ಲಿ ಸೀರೆಯನ್ನು ಬಿಸಾಡಲು ನೋಡಿದಳು. ಸಂಪ್ರದಾಯಕ್ಕೆ ಕಟ್ಟು ಬಿದ್ದು ಬದುಕುವ ಹುಡುಗಿ. ಹೀಗಾಗಿ ಆ ಸೀರೆ ಮೇಲಿನ ಗೌರವದಿಂದ ತನ್ನ ಬಳಿಯೇ ಇಟ್ಟುಕೊಂಡಿದ್ದಾಳೆ. ಮರೆಯಲ್ಲಿ ಕೂತು ಎಲ್ಲವನ್ನು ನೋಡುತ್ತಿದ್ದ ಸಿದ್ದೇಗೌಡ್ರಿಗೆ ಭಾವನಾ ಕಣ್ಣೀರು ಬೇಸರ ತರಿಸಿದರೆ, ಸೀರೆ ಇಟ್ಟುಕೊಂಡಿದ್ದು ಖುಷಿ ನೀಡಿದೆ. ಮರೆಯಲ್ಲಿಯೇ ನಕ್ಕು ಸುಮ್ಮನಾಗಿದ್ದಾನೆ. ಮುಂದೆ ಬರುವ ಧೈರ್ಯ ಮಾಡಿಲ್ಲ.


Click it and Unblock the Notifications











