Disha Madan: ಭಾವನಾ ವಿಡಿಯೋಗೆ ಸೌಪರ್ಣಿಕಾ ಕ್ಯೂಟ್ ಕಮೆಂಟ್: ಸೌಪರ್ಣಿಕಾಗೆ ನೋ ರಿಪ್ಲೇ!

By ಎಸ್ ಸುಮಂತ್

ಲಕ್ಷ್ಮೀ ನಿವಾಸ ಧಾರಾವಾಹಿ ಯಾರಿಗೆ ಇಷ್ಟ ಇಲ್ಲ ಹೇಳಿ. ಆರಂಭದಲ್ಲಿ ಫಾಸ್ಟ್ ಆಗಿ ಓಡಿದ ಧಾರಾವಾಹಿ ಇದೀಗ ಎಲ್ಲರನ್ನು ಸೆಳೆಯುವಂತೆ ಮಾಡುತ್ತಿದೆ. ಮೂರ್ನಾಲ್ಕು ಕಥೆಯನ್ನು ಹೊತ್ತು ಸಾಗುತ್ತಿರುವ ಲಕ್ಷ್ಮೀ ನಿವಾಸ ಎಲ್ಲರಿಗೂ ಅಚ್ಚುಮೆಚ್ಚು.

ಈ ಧಾರಾವಾಹಿಯಲ್ಲಿ ಎಲ್ಲರೂ ಹೆಚ್ಚು ಕನಿಕರ ತೋರುವುದು, ಹೆಚ್ಚು ಒಳ್ಳೆಯದಾಗಲಿ ಎಂದು ಬಯಸುವುದು ಒಂದು ಭಾವನಾಗೆ, ಮತ್ತೊಂದು ಲಕ್ಷ್ಮೀ ಹಾಗೂ ಶ್ರೀನಿವಾಸ್ ಅವರಿಗೆ. ಆದರೆ ಸೌಪರ್ಣಿಕಾ ಯಾವಾಗಲೂ ಭಾವನಾಳ ನೆಮ್ಮದಿಯನ್ನು ಹಾಳು ಮಾಡುವುದಕ್ಕೇನೆ ಕಾಯುತ್ತಾ ಇರುತ್ತಾಳೆ. ಸಿದ್ದೇಗೌಡ್ರು, ಹೋದ ನೆಮ್ಮದಿಯನ್ನೆಲ್ಲಾ ವಾಪಾಸ್ ಏನೋ ತಂದುಕೊಟ್ಟಿದ್ದಾರೆ.


ಸೌಪರ್ಣಿಕಾ-ಭಾವನಾ ದುಷ್ಮನಿ

ಸೌಪರ್ಣಿಕಾ ಅಣ್ಣನದ್ದು ಭಾರೀ ಆಸ್ತಿ ಇತ್ತು. ಅವನಿಗೆ ಖುಷಿ ಎಂಬ ಮಗಳಿದ್ದಳು. ಅವಳಿಗಾಗಿ ಭಾವನಾಳನ್ನು ಮದುವೆ ಮಾಡಿಕೊಳ್ಳುವುದಕ್ಕೂ ರೆಡಿಯಾಗಿದ್ದರು. ಆದರೆ ಆಸ್ತಿಯ ಆಸೆಗೆ ರವಿ, ಶ್ರೀಕಾಂತ್ ಹಾಗೂ ಜಾನವಿಯನ್ನು ಕೊಂದೇ ಬಿಟ್ಟ. ಆದ್ರೆ ಸಾಯುವ ಮೊದಲೇ ಶ್ರೀಕಾಂತ್ ತನ್ನ ಆಸ್ತಿಯನ್ನು ಭಾವನಾ ಹೆಸರಿಗೆ ಬರೆದಿದ್ದ. ಹೀಗಾಗಿಯೇ ಸೌಪಾರ್ಣಿಕಾ ಸದಾ ಭಾವನಾ ಮೇಲೆ ಕೆಂಡಕಾರುತ್ತಲೇ ಇರುತ್ತಾಳೆ, ಮಾನಸಿಕವಾಗಿ ಹಿಂಸೆ ಕೊಡುತ್ತಲೇ ಇರುತ್ತಾಳೆ.

ಅಮ್ಮ-ಮಗಳ ಮುದ್ದಾದ ವಿಡಿಯೋ

ಭಾವನಾ ಪಾತ್ರ ಮಾಡಿರುವುದು ದಿಶಾ ಮದನ್. ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಮಗುವಿನ ಜೊತೆಗೆ ಐಸ್ ಕ್ರೀಂ ತಿನ್ನುವುದು. ಮೊದಲೇ ಶೆಕೆ ಕಾಲ. ಕಾಂಪಿಟೇಶನ್ ಮೇಲೆ ಐಸ್ ಕ್ರೀಂ ತಿಂದಿದ್ದಾರೆ. ದಿಶಾ ಮದನ್ ಮಗುವಿಗೆ ತಿನ್ನಿಸಿದರೆ,ಗು ದಿಶಾ ಮದನ್ ಗೂ ತಿನ್ನಿಸುತ್ತಾ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ಕ್ಯೂಟ್ ಆಗಿದೆ.

ಎಲ್ಲರಿಗೂ ರಿಪ್ಲೇ ಮಾಡಿರುವ ಭಾವನಾ

ಈ ವಿಡಿಯೋ ನೋಡಿದಾಗ ದಿಶಾ ಮದನ್ ಮಹಳ ಮೇಲೆ ಎಲ್ಲರಿಗೂ ಮುದ್ದು ಹೆಚ್ಚಾಗುತ್ತದೆ. ಅಷ್ಟು ಕ್ಯೂಟ್ ಕ್ಯೂಟ್ ಆಗಿದೆ. ಹೀಗಾಗಿಯೇ ಎಲ್ಲರೂ ಕಮೆಂಟ್ ಮಾಡಿದ್ದಾರೆ. ಸೌಪರ್ಣಿಕಾ ಕೂಡ ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಸೌಪರ್ಣಿಕಾ ಪಾತ್ರವನ್ನು ಯಶಸ್ವಿನಿ ನಿರ್ವಹಿಸಿದ್ದಾರೆ. ಮೊದಲ ಕಮೆಂಟ್ ಅವರದ್ದೇ ಆಗಿದೆಮ ಬಳಿಕ ಲಕ್ಷ್ಮೀ ನಿವಾಸ ತಂಡದವರು ಕಮೆಂಟ್ ಮಾಡಿದ್ದು, ಎಲ್ಲರಿಗೂ ದಿಶಾ ಮದನ್ ರಿಪ್ಲೇ ಮಾಡಿದ್ದಾರೆ. ಆದರೆ ಸೌಪರ್ಣಿಕಾ ಕಮೆಂಟ್ ಗೆ ಮಾತ್ರ ನೋ ರಿಪ್ಲೇ. ಹಾಗಂತ ಸೀರಿಯಲ್‌ನಲ್ಲಿ ದ್ವೇಷ ಮಾಡುವವರು ರಿಯಲ್ ಆಗಿ ಕೂಡ ಮಾಡ್ತಾರೆ ಅಂತ ಅಲ್ಲ.. ಕಮೆಂಟ್ ನೋಡುವುದೇ ಮಿಸ್ ಆಗಿರಬಹುದು. ಆದ್ರೆ ನೆಟ್ಟಿಗರು ರೇಗಿಸುವಂತಿದೆ ಈ ಕಾಮೆಂಟ್.

zee kannada serial Lakshmi nivasa Written Update on Disha Madan social media story

ಸೆಟ್‌ನಲ್ಲಿ ಫುಲ್ ರೀಲ್ಸ್ ಫುಲ್ ಎಂಜಾಯ್

ದಿಶಾ ಮದನ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಸೀರಿಯಲ್‌ನಲ್ಲಿ ಇರುವಂತ ಸಾಫ್ಟ್ ಭಾವನಾ, ರಿಯಲ್ ಆಗಿ ಆ ಥರ ಇಲ್ಲ. ರಿಯಲ್ ಲೈಫ್‌ನಲ್ಲಿ ಫುಲ್ ಜಾಲಿ ಜಾಲಿ. ಮಾಡ್ರನ್ ಗರ್ಲ್. ಅದರಲ್ಲೂ ಶೂಟಿಂಗ್ ಸೆಟ್‌ನಲ್ಲಿ ಗ್ಯಾಪ್ ಸಿಕ್ಕಿದ್ರೆ ಸಾಕು ಲಕ್ಷ್ಮೀ ನಿವಾಸ ತಂಡದವರೆಲ್ಲಾ ರೀಲ್ಸ್ ಮಾಡಿಕೊಂಡು, ಫನ್ ಮಾಡಿಕೊಂಡು ಕೂತು ಬಿಡುತ್ತಾರೆ. ದಿಶಾ ಮದನ್ ಸೋಷಿಯಲ್ ಮೀಡಿಯಾದಲ್ಲಿ 816 ಸಾವಿರ ಫಾಲೋವರ್ಸ್ ಹೊಂದಿದ್ದು, ಡ್ಯಾನ್ಸರ್ ಕೂಡ ಆಗಿದ್ದಾರೆ. ಅದಕ್ಕೆ ಆಗಾಗ ಒಳ್ಳೊಳ್ಳೆ ಡ್ಯಾನ್ಸ್ ವಿಡಿಯೋಗಳನ್ನು ಹಾಕುತ್ತಾ ಇರುತ್ತಾರೆ.

More from Filmibeat

English summary
zee kannada serial Lakshmi nivasa Written Update on Disha Madan social media story. Here is the details about Bhavna did not reply to Souparnika's comments
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X