Lakshmi nivasa: ಲಕ್ಷ್ಮೀ-ಶ್ರೀನಿವಾಸ್‌ನ ಸ್ಟೇಷನ್‌ನಿಂದ ಬಿಡಿಸಿದ್ದು ಯಾರು? ಫುಲ್ ಕನ್ಫ್ಯೂಷನ್ ಗುರು..!

By ಎಸ್ ಸುಮಂತ್

ಭಾವನಾ ಮದುವೆ ನಿಂತು ಹೋಯುತಲ್ಲ ಎಂಬ ಚಿಂತೆಗಿಂತ ಮಗು ಅನಾಥವಾಗಿ ಬಿಟ್ಟಿತ್ತಲ್ಲ ಎಂಬ ಚಿಂತೆಯೇ ಲಕ್ಷ್ಮೀ ಮನೆಯವರಲ್ಲಿ ಸ್ವಲ್ಪ ಜನಕ್ಕೆ ಕಾಡುತ್ತಿದೆ. ಆದರೆ ಆ ಕಡೆ ಸೌಪರ್ಣಿಕಾಗೆ ಮಗುವನ್ನು ಹೇಗೆ ಕಿತ್ತುಕೊಳ್ಳಬೇಕು ಹಣ - ಆಸ್ತಿ ಆಗ ಸಂಪೂರ್ಣವಾಗಿ ತಮ್ಮದಾಗುತ್ತದೆ ಎಂಬ ಭಾವನೆ. ಹೀಗಾಗಿ ಭಾವನಾಳ ಬಳಿಯಿದ್ದ ಖುಷಿಯನ್ನು ಕಿತ್ತುಕೊಂಡು ಬಂದಿದ್ದಾಳೆ.

ಖುಷಿಗೆ ಭಾವನಾಳನ್ನು ಬಿಟ್ಟು ಬರುವುದಕ್ಕೆ ಇಷ್ಟವಿಲ್ಲ. ಅದರಲ್ಲೂ ಸೌಪರ್ಣಿಕಾ ಹಾಗೂ ರವಿ ಬಳಿ ಇರುವುದಕ್ಕೆ ಕಿಂಚಿತ್ತು ಇಷ್ಟವಿಲ್ಲ. ಯಾಕಂದ್ರೆ ರವಿ, ಬೇಡ ಬೇಡ ಎಂದರೂ ಖುಷಿಗೆ ಇಷ್ಟವಾಗದ, ಅನಾರೋಗ್ಯಕ್ಕೆ ದಾರಿ ಮಾಡಿಕೊಡುವಂತ ತಿಂಡಿಯನ್ನೇ ನೀಡುತ್ತಾನೆ. ಹೀಗಾಗಿ ಖುಷಿಗೆ ಇಷ್ಟವಿರಲಿಲ್ಲ. ಆದರೆ ಖುಷಿಯನ್ನು ಪಡೆಯಲು ಪೊಲೀಸರ ಮೊರೆ ಹೋಗಿ ಸಕ್ಸಸ್ ಕೂಡ ಆಗಿದ್ದಾಳೆ.

Zee kannada serial Lakshmi nivasa Written Update on February 12th episode

ದಾರಿ ಕಾಣದೆ ಮನೆಗೆ ಬಂದ ಭಾವನಾ

ಖುಷಿಯನ್ನು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ ಕಾರಣ, ಲಕ್ಷ್ಮೀ-ಶ್ರೀನಿವಾಸ್ ಗೆ ಸಂಕಟ ಬಂದೊದಗಿದೆ. ಮಗುವನ್ನು ಕಳುಹಿಸಿಕೊಡುವುದಕ್ಕೆ ಆಗಲ್ಲ ಎಂದು ಮನವಿ ಮಾಡುವಾಗಲೇ ಇಬ್ಬರನ್ನು ಸೆಲ್‌ ಒಳಗೆ ಹಾಕಿದ್ದಾರೆ. ಈ ಸಮಯದಲ್ಲಿ ಭಾವನಾ ಎಷ್ಟೇ ಬೇಡಿಕೊಂಡರು ಪೊಲೀಸರ ಮನಸ್ಸು ಕರಗಲೇ ಇಲ್ಲ. ಇತ್ತ ಖುಷಿಯನ್ನು ಕರೆದುಕೊಂಡು ಸೌಪರ್ಣಿಕಾ ಹಾಗೂ ರವಿ ತಿರುಗಿಯೂ ನೋಡದೆ ಹೊರಟೆ ಹೋಗಿದ್ದಾರೆ.

ಅಣ್ಣನ ಬಳಿ ಸಹಾಯ ಕೇಳಿದ ಭಾವನಾ

ಇತ್ತ ವಿಚಾರ ತಿಳಿಯುತ್ತಿದ್ದಂತೆ ದೊಡ್ಡ ಮಗ ಕೋಪ ಮಾಡಿಕೊಂಡಿದ್ದಾನೆ. ಖುಷಿಯನ್ನು ದೂಷಿಸಿದ್ದಾನೆ. ಆ ಮಗುವಿನಿಂದಾನೇ ಹೀಗೆ ಆಗಿದ್ದು ಎಂದಿದ್ದಾನೆ. ವೆಂಕಿ, ಅಪ್ಪ ಅಮ್ಮನಿಗೆ ಸಹಾಯ ಮಾಡಿ ಎಂದಾಗಲೂ, ನನ್ನಿಂದ ಆಗಲ್ಲ. ನೀನು ಬೇಕಾದರೆ ಮಾಡು ಹೋಗು ಎಂದೇ ಗದರಿದ್ದಾನೆ. ಅಳುತ್ತಾ ಮನೆಗೆ ಓಡೋಡಿ ಬಂದ ಭಾವನಾಳಿಗೂ ಕ್ಲಾಸ್ ತೆಗೆದುಕೊಂಡಿದ್ದಾನೆ. ಸಹಾಯ‌ ಮಾಡು ಅಣ್ಣ ಎಂದರೂ ದೊಡ್ಡ ಮಗನ ಮನಸ್ಸು ಕರಗಿಲ್ಲ.

ಲಕ್ಷ್ಮೀ-ಶ್ರೀನಿವಾಸ ಬಿಡುಗಡೆ

ಸ್ಟೇಷನ್ ಒಳಗೆ ದಿಕ್ಕೆ ತೋಚದೆ ಕುಳಿತಿದ್ದ ಲಕ್ಷ್ಮೀ-ಶ್ರೀನಿವಾಸ ಬಿಡುಗಡೆಯಾಗಿದೆ. ಕರೆಯೊಂದು ಬಂದಿದ್ದು, ಅವರನ್ನು ಬಿಡುಗಡೆ ಮಾಡಿದೆ. ಮನೆಯ ತನಕ ಪೊಲೀಸರೇ ಕರೆದುಕೊಂಡು ಬಂದು ಬಿಟ್ಟು, ನೀವೂ ದೊಡ್ಡವರ ಕಡೆಯವರು ಅಂತ ಹೇಳುವುದಲ್ಲವಾ ಎಂದು ಕೇಳು, ಗೌರವಯುತವಾಗಿ ಬಿಟ್ಟು ಹೋಗಿದ್ದಾರೆ. ಆದರೆ ಮನೆಯಲ್ಲಿನ ಗಂಡು ಮಕ್ಕಳ ನಡೆಗೆ ನೋಡುಗರು ಆಕ್ರೋಶಗೊಂಡಿದ್ದಾರೆ. ಇಂಥ ಮಕ್ಕಳು ಬೇಕಾ ಅಂತೆಲ್ಲಾ ಕಮೆಂಟ್ ಹಾಕಿದ್ದಾರೆ. ಮನೆಯಲ್ಲಿ ಏನೇ ಸಮಸ್ಯೆಯಾದರೂ ಸ್ವಾರ್ಥದಿಂದಾನೇ ಯೋಚಿಸುತ್ತಾರಲ್ಲ ಎಂದು ಬೈದಿದ್ದಾರೆ.

ವೀಕ್ಷಕರಲ್ಲಿ ಭಾರೀ ಗೊಂದಲ

ಈ ಪ್ರೋಮೊ ಸಿಕ್ಕಾಪಟ್ಟೆ ಕುತೂಹಲವನ್ನು ಹುಟ್ಟು ಹಾಕುವಂತೆ ಮಾಡಿದೆ. ಲಕ್ಷ್ಮೀ-ಶ್ರೀನಿವಾಸ್ ಅವರನ್ನು ಬಿಡಿಸಿದ್ದು ಯಾರು ಎಂಬ ಪ್ರಶ್ನೆ ಕಾಡುವುದಕ್ಕೆ ಶುರುವಾಗಿದೆ. ಒಂದು ಜಯಂತ್ ಅಥವಾ ಸಿದ್ದೇಗೌಡರು ಎಂಬುದು. ನೋಡುಗರು ಇಬ್ಬರ ಹೆಸರನ್ನು ಪ್ರಸ್ತಾಪಿಸುತ್ತಿದ್ದಾರೆ. ಸಿದ್ದೇಗೌಡರಿಗೆ ವಿಷಯ ಗೊತ್ತಾಗಿ, ಲಕ್ಷ್ಮಕ್ಕನ ಮೇಲಿನ ಪ್ರೀತಿಗೆ ಬಿಡಿಸಿದರಾ..? ಅಥವಾ ಜಯಂತ್ ಬಿಡಿಸಿದರಾ? ಎಂಬುದೇ ಗೊಂದಲ. ಈ ಗೊಂದಲಕ್ಕೆ ತೆರೆ ಬೀಳಬೇಕು ಎಂದರೆ ಹೊಸ ಎಪಿಸೋಡ್ ನೋಡಲೇಬೇಕಾಗುತ್ತದೆ. ಅಷ್ಟೊಂದು‌ ಕುತೂಹಲವನ್ನು ಕಾಯ್ದಿರಿಸಿದೆ. ಈ ಒಂದು ಸನ್ನಿವೇಶವೇ ಒಬ್ಬರ ಪ್ರೀತಿಗೆ ದಾರಿ‌ ಮಾಡಿಕೊಡಬಹುದಾಗಿದೆ. ಹೀಗಾಗಿ ಯಾರವರು ಎಂಬ ಪ್ರಶ್ನೆ ಎದ್ದಿದೆ.

More from Filmibeat

English summary
Lakshmi nivasa Written today episode; Here is the details about Who released Lakshmi Srinivas from jail?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X