Lakshminivasa: ನರಸಿಂಹ ಮುಚ್ಚಿಟ್ಟ ಜಾಹ್ನವಿ ತಾಯಿ ಸತ್ಯವನ್ನ ಹೊರ ತರ್ತಾನಾ ಜಯಂತ್?
ಜಯಂತ್ ನಡವಳಿಕೆ ಈಗ ಹೆದರಿಕೆ ಉಂಟು ಮಾಡುತ್ತಿಲ್ಲ. ಜಾಹ್ನವಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾನೆ. ಜಾನು ಕೂಡ ಮೊಬೈಲ್, ಕಾಲ್ಸ್ ಬಿಟ್ಟು ಗಂಡ-ಮನೆ ಅಂತ ಇದ್ದು ಬಿಟ್ಟಿದ್ದಾಳೆ. ಈಗ ಜಯಂತ್ ಒಬ್ಬ ಬಿಸಿನೆಸ್ ಮ್ಯಾನ್ ಆಗಿ ಎಲ್ಲರಿಗೂ ಕಾಣಿಸುತ್ತಿದ್ದಾನೆ. ಜಾಹ್ನವಿಗಾಗಿ ಏನು ಬೇಕಾದರೂ ಮಾಡುತ್ತಾನೆ. ಹೊಸದಾಗಿ ಕಂಪನಿಯೊಂದನ್ನು ಶುರು ಮಾಡಿದ್ದು, ಅದನ್ನು ಜಾನು ಹೆಸರಲ್ಲೇ ಮಾಡುತ್ತಿದ್ದಾನೆ.
ಎಲ್ಲೆಲ್ಲೋ ಕಂಪನಿ ಮಾಡುವ ಬದಲು ನಮ್ಮ ಊರಲ್ಲಿಯೇ ಮಾಡಿ ಎಂದು ಹೇಳಿದ್ದೆ ತಡ, ಜಯಂತ್ ಅದಕ್ಕೂ ಒಪ್ಪಿಗೆ ಸೂಚಿಸಿದ್ದಾನೆ. ಅದರಂತೆ ನರಸಿಂಹನ ಜಮೀನನ್ನು ಕೇಳಿದ್ದಾನೆ. ಆತನು ಜಮೀನು ಕೊಡಲು ಒಪ್ಪಿದ್ದಾನೆ. ದಾಖಲೆಗಳನ್ನೆಲ್ಲಾ ನೀಡಿದ್ದಾನೆ. ಆದರೆ ಈಗ ತಂಗಿಯ ಸಹಿಯೊಂದು ಬೇಕು ಎಂಬ ಕಾರಣಕ್ಕೆ ಅಪ್ಸೆಟ್ ಆಗಿದ್ದಾನೆ. ಜಯಂತ್‌ಗೂ ಅನುಮಾನ ಶುರುವಾಗಿದ್ದು, ಅದರ ಹಿಂದೆ ಬಿದ್ದು ಸತ್ಯ ತಿಳಿದುಕೊಳ್ಳದೆ ಇರುವವನಲ್ಲ.

ತಂಗಿ ಹೆಸರು ಪತ್ತೆ ಮಾಡಿದ ಜಯಂತ್
ಜಯಂತ್, ನರಸಿಂಹನ ಬಳಿ ದೊಡ್ಡಮಟ್ಟದ ಜಮೀನನ್ನೇ ಖರೀದಿಸುತ್ತಿದ್ದಾನೆ. ಹೀಗಾಗಿ ಎಲ್ಲಾ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡಿಸುತ್ತಿದ್ದಾನೆ. ಮುಂದೆ ಯಾರೂ ಜಮೀನಿಗೆ ಚಕಾರ ಎತ್ತಬಾರದು ಎಂಬ ಕಾರಣಕ್ಕೆ ವಂಶವೃಕ್ಷ ಬೇಕು ಎಂದು ಕೇಳಿದ್ದಾನೆ ಜಯಂತ್. ಕಡೆಗೂ ಲಕ್ಷ್ಮೀ ಹೆಸರು ಕೈ ಬಿಟ್ಟು ವಂಶವೃಕ್ಷ ಮಾಡಿಸಿದ್ದಾನೆ ನರಸಿಂಹ.
ತಂಗಿಯ ಸಹಿ ಬೇಕೇಬೇಕು ಎಂದ ಜಯಂತ್
ಜಯಂತ್‌ಗೆ ನರಸಿಂಹನ ಮನೆಯ ನಿಜವಾದ ವಂಶವೃಕ್ಷ ಕೈಸೇರಿದೆ. ಹೀಗಾಗಿ ಅದರಲ್ಲಿ ಲಕ್ಷ್ಮೀ ಅವರ ತಂಗಿ ಎಂಬುದರ ಸತ್ಯವೂ ಬಯಲಾಗಿದೆ. ಅದನ್ನೇ ನರಸಿಂಹನ ಬಳಿಯೂ ಕೇಳಿದ್ದಾನೆ. ಆದರೆ ನರಸಿಂಹ ಅದರ ಬಗ್ಗೆ ಹೆಚ್ಚು ಮಾತನಾಡುವುದಕ್ಕೂ ಇಷ್ಟಪಡಲಿಲ್ಲ. ಕೋಪ ನಾಲಿಗೆ ತುದಿಗೆ ಬಂದಿದ್ದರು, ಅದನ್ನು ತಡೆದು ಸರಿ ಇವ್ರೆ ಕೊಡ್ತೀನಿ ಅಂತ ಹೇಳಿ ಫೋನಿಟ್ಟಿದ್ದಾನೆ. ಆಮೇಲೆ ಜಾನು ಬಳಿಯೂ ಈ ವಿಚಾರ ಮಾತನಾಡಿದ್ದು, ನಿಮ್ಮ ಅಮ್ಮನ ಹೆಸರೇ ಇಲ್ಲಿದೆ ನೋಡು ಎಂದಿದ್ದಾನೆ.
ನರಸಿಂಹನ ನಿರ್ಧಾರ ಬದಲು!
ಲಕ್ಷ್ಮೀ ಹೆಸರು ಎತ್ತಿದರೇನೆ ನರಸಿಂಹ ಉಗ್ರ ಸ್ವರೂಪಿಯಾಗುತ್ತಾನೆ. ಅವಳ ಹೆಸರು ಬಂದಾಗೆಲ್ಲಾ ಅಂದು ಮದುವೆ ಮಾಡಿಕೊಂಡು ಬಂದ ದಿನ, ಅಪ್ಪ ಅನಾರೋಗ್ಯಕ್ಕೆ ಈಡಾಗಿದ್ದು, ಮನೆ ಕಟ್ಟಿಯೇ ಕಟ್ಟುತ್ತೀವಿ ಅಂತ ಸವಾಲು ಎಸೆದು ಹೋಗಿದ್ದು ಎಲ್ಲವೂ ನೆನಪಾಗುತ್ತವೆ. ಆಗ ಲಕ್ಷ್ಮೀ ಮೇಲೆ ಕೋಪ ಮತ್ತಷ್ಟು ಹೆಚ್ಚಾಗುತ್ತದೆ. ಈಗ ಲಕ್ಷ್ಮೀ ಕಡೆಯಿಂದ ಸಹಿ ಬೇಕೆ ಬೇಕು ಎಂದು ಹೇಳುತ್ತಿರುವಾಗ ಆ ಜಮೀನು ಮಾರುವ ತಂಟೆಗೆ ಹೋಗುವುದಿಲ್ಲ ಅನ್ಸುತ್ತೆ ನರಸಿಂಹ.

ಅಸಲಿ ಕಥೆ ಜಯಂತ್‌ಗೆ ಗೊತ್ತಾಗುತ್ತಾ?
ಜಯಂತ್‌ಗೆ ಈಗಾಗಲೇ ನರಸಿಂಹ ಹೇಳಿದ್ದು ಕುತೂಹಲಕ್ಕೆ ಕಾರಣವಾಗಿದೆ. ಹೀಗಾಗಿ ಜಮೀನು ಕೊಡಲ್ಲ ಎಂದಾಗಲೀ, ಸಹಿ ಸಿಗಲ್ಲ ಎಂದಾಗಲಿ ಆ ಸತ್ಯವನ್ನು ಹುಡುಕದೆ ಬಿಡುವುದಿಲ್ಲ. ಅದರ ಹಿಂದೆ ಬಿದ್ದೇ ಬೀಳುತ್ತಾನೆ. ಆ ಕಡೆ ನರಸಿಂಹನ ಮಗ ವಿಶ್ವನಿಗಾಗಲೀ ಈ ಕಡೆ ಲಕ್ಷ್ಮೀ ಮಕ್ಕಳಿಗಾಗಿ ತನ್ನ ಮಾವ ಇಷ್ಟು ದೊಡ್ಡ ಮನುಷ್ಯ, ಇಷ್ಟು ಶ್ರೀಮಂತ ಎಂಬುದು ಗೊತ್ತಿಲ್ಲ. ಅದರಲ್ಲೂ ಜಾನುಗೆ ವಿಶ್ವ ತನ್ನ ಮಾವನ ಮಗನೇ ಎಂಬುದು ಗೊತ್ತಿಲ್ಲ. ಜಯಂತ್‌ನ ಹುಡುಕಾಟದಿಂದ ಈ ಎಲ್ಲಾ ಸತ್ಯ ಬಯಲಾಗಬಹುದು.


Click it and Unblock the Notifications











