Lakshminivasa: ತವರನ್ನೇ ಬಿಟ್ಟ ಲಕ್ಷ್ಮೀ ಆಸ್ತಿಗೆ ಆಸೆ ಪಡೋದು ಸುಳ್ಳು; ಬಟ್ ಗಂಡು ಮಕ್ಳು ಸುಮ್ನಿರ್ತಾನಾ?

By ಎಸ್ ಸುಮಂತ್

ಜಯಂತ್ ಒಂದು ದೊಡ್ಡ ಕಂಪನಿ ಶುರು ಮಾಡಬೇಕೆಂದು ಎಲ್ಲಾ ರೀತಿಯ ಪ್ಲ್ಯಾನ್ ಹಾಕಿಕೊಳ್ಳುತ್ತಿದ್ದಾನೆ. ಅದರಲ್ಲೂ ಜಾಹ್ನವಿ ಹೇಳಿದ್ದಕ್ಕೆ ಅವರ ಊರಲ್ಲಿಯೇ ಕಂಪನಿ ತೆರೆದಿದ್ದು, ಜಾಹ್ನವಿ ಹೆಸರಿಗೇನೆ ಎಲ್ಲಾ ದಾಖಲೆಗಳನ್ನು ಮಾಡಿಸಿದ್ದಾನೆ. ಅದರಲ್ಲೂ ಅವರು ಕಂಪನಿ ಮಾಡುವುದಕ್ಕೆ ತೆಗೆದುಕೊಂಡಿರುವ ಜಮೀನು ಅತ್ತೆಯ ತವರು ಮನೆಯ ಕಡೆಯದ್ದೆ. ಆದರೆ ಅದು ಯಾರಿಗೂ ಗೊತ್ತಿಲ್ಲ. ಜಯಂತ್‌ಗೆ ಅತ್ತೆಯ ತವರು ಮನೆ ಎಂಬುದು ಗೊತ್ತಿಲ್ಲ. ನರಸಿಂಹನಿಗೆ ಲಕ್ಷ್ಮೀ ಅಳಿಯ ಎಂಬುದು ಗೊತ್ತಿಲ್ಲ.

ವಂಶವೃಕ್ಷದಲ್ಲಿ ಲಕ್ಷ್ಮೀ ಹೆಸರು ಬರಬೇಕೆಂದಾಗ ನಿರಾಕರಿಸಿದ. ಲಕ್ಷ್ಮೀಯ ಸಹಿ ಬೇಕೆ ಬೇಕೆಂದಾಗ ಆಸ್ತಿಯನ್ನು ಮಾರುವ ನಿರ್ಧಾರವನ್ನೇ ಕೈಬಿಡುವುದಕ್ಕೆ ನಿರ್ಧಾರ ಮಾಡಿದ. ಆದರೆ ಮಗ ಮರ್ಯಾದೆ ವಿಚಾರಕ್ಕೆ ಅಂಜಿದ. ಕಂಪನಿ ಶುರು ಮಾಡುವುದರಿಂದ ಅದೆಷ್ಟೋ ಕುಟುಂಬಗಳಿಗೆ ಒಳೀತಾಗುತ್ತಾ ಇತ್ತು. ಆದರೆ ಈಗ ಆ ನಿರ್ಧಾರದಿಂದ ಹಿಂದೆ ಸರಿದರೆ ಕೊಟ್ಟ ಮಾತಿಗೆ ತಪ್ಪಿದಂತೆಯೇ ಸರಿ ಎಂದು ಮಗ ಆಡಿದ ಮಾತಿನಿಂದ, ನರಸಿಂಹ ನಿರ್ಧಾರ ಬದಲಿಸಿ, ಈಗ ಹೆಂಡತಿಯನ್ನು ತಂಗಿ ಮನೆಗೆ ಕಳುಹಿಸಿದ್ದಾನೆ.

zee kannada serial Lakshmi nivasa Written Update on july 12th episode

ಲಕ್ಷ್ಮೀ ಮನೆಗೆ ಬಂದ ಲಲಿತಾ

ಮಗನ ಮಾತಿಗೆ ಬೆಲೆ ಕಿಟ್ಟು ನರಸಿಂಹ ತಂಗಿ ಬಳಿ ಸಹಿ ಹಾಕಿಸಿಕೊಂಡು ಬರಲು ಕಳುಹಿಸಿದ್ದಾನೆ. ಲಲಿತಾ ಮೊದಲ ಬಾರಿಗೆ ಲಕ್ಷ್ಮೀ ಮನೆಗೆ ಬಂದಿದ್ದಾಳೆ. ಬಾಗಿಲಿನಲ್ಲಿ ಶ್ರೀನಿವಾಸನೇ ಎದುರಾಗಿದ್ದು, ನೀವೂ ದಾರಿ ತಪ್ಪಿ ಬಂದಿರಬೇಕು. ಸರಿಯಾದ ಅಡ್ರೆಸ್ ಹೇಳಿ ನಾನೇ ಬಿಟ್ಟು ಬರ್ತೀನಿ ಎಂದಿದ್ದಾನೆ.

ಮನೆಗೆ ಕರೆದು ಉಪಚಾರ

ಅದೇ ಸಮಯಕ್ಕೆ ಹೊರಗೆ ಬಂದ ಲಕ್ಷ್ಮೀಗೆ ಅತ್ತಿಗೆಯನ್ನು ಕಂಡು ಸಿಕ್ಕಾಪಟ್ಟೆ ಖುಷಿಯಾಗಿದೆ. ಆದರೆ ಅತ್ತಿಗೆ ಮನೆ ಬಾಗಿಲಿಗೆ ಬಂದಿರುವುದು ನಿಮ್ಮ ಅಣ್ಣನಿಗೆ ತಿಳಿದರೆ ನೋವಾಗುವುದು ನಿನಗೇನೆ. ಅದು ನನಗೆ ಇಷ್ಟವಿಲ್ಲ ಅಂತ ಹೇಳಿ ಶ್ರೀನಿವಾಸ ಹೊರಡುತ್ತಾನೆ. ಆದರೆ ಅತ್ತುಗೆಯನ್ನು ನೋಡಿದ ಖುಷಿಗೆ ಲಕ್ಷ್ಮೀ ಮನೆ ಒಳಗೆ ಕರೆದು ಉಪಚರಿಸುತ್ತಾಳೆ.

zee kannada serial Lakshmi nivasa Written Update on july 12th episode

ಸಹಿ ಮಾಡಲು ಒಪ್ಪುತ್ತಾಳಾ ಲಕ್ಷ್ಮೀ

ಆಸ್ತಿ ಮಾರಾಟಕ್ಕೆ ಲಕ್ಷ್ಮೀಯ ಸಹಿ ಬೇಕಿರುವ ಕಾರಣ ದಾಖಲೆ ಸಮೇತ ಬಂದಿದ್ದಾಳೆ ಲಲಿತಾ. ಮದುವೆ ಆದಾಗಿನಿಂದ ಶ್ರೀನಿವಾಸನ ಬಳಿ ಏನು ಆಸ್ತಿ ಅಂತಸ್ತು ಇಲ್ಲ ಎಂಬ ಕಾರಣಕ್ಕೆ ನರಸಿಂಹ ಮನೆಯಿಂದ ಹೊರಗೆ ಹಾಕಿದ್ದ. ಅದರಲ್ಲೂ ಲಕ್ಷ್ಮೀಯನ್ನು ಮದುವೆಯಾಗಿದ್ದಕ್ಕೆ ಕಾಲಿನಲ್ಲಿ ಒದ್ದು ಹೊರಗೆ ಹಾಕಿದ್ದ. ಅಂದು ಸ್ವಂತ ದುಡಿಮೆಯಿಂದಾನೇ ಮನೆ ಕಟ್ಟುತ್ತೀವಿ ಎಂದು ಬಂದ ಲಕ್ಷ್ಮೀ-ಶ್ರೀನಿವಾಸನಿಂದ ಅದು ಸಾಧ್ಯವೂ ಆಗಿಲ್ಲ, ತವರು ಸರಿ ಹೋಗಿಲ್ಲ. ಹೀಗಾಗಿ ಈಗ ತವರಿನ ಆಸ್ತಿಗೆ ಲಕ್ಷ್ಮೀ ಮನಸ್ಸು ಆಸೆ ಪಡುವುದಿಲ್ಲ.

ಮಗನಿಗೆ ತಿಳಿದರೆ ಸುಮ್ನೆ ಇರ್ತಾನಾ?

ಲಕ್ಷ್ಮೀ ಹೆಣ್ಣು ಮಕ್ಕಳಲ್ಲಿ ಭಾವನಾ ಹಾಗೂ ಜಾನು ಆಸ್ತಿಗೆಲ್ಲಾ ಆಸೆ ಪಡುವವರಲ್ಲ. ಅಪ್ಪ ಅಮ್ಮ ಹೇಗೆ ಹೇಳುತ್ತಾರೋ ಹಾಗೇ ಕೇಳ್ತಾರೆ. ಆದರೆ ದೊಡ್ಡ ಮಗಳು ಮಂಗಳಾ, ದೊಡ್ಡ ಮಗ ಸಂತೋಷನಿಗೇನಾದರೂ ಆಸ್ತಿ ಬರುತ್ತೆ ಎಂದರೆ ಸಾಕು ಬೇಕು ಬೇಕು ಅಂತಾರೆ‌. ಹರೀಶ ಕೊಟ್ಟರು ಓಕೆ ಕೊಡದೆ ಇದ್ದರು ಓಕೆ ಎಂಬ ಗುಣದವನು. ಭಾವನಾ ಮದುವೆಯಾಗಬೇಕಿದ್ದ ಶ್ರೀಕಾಂತ್ ಆಸ್ತಿಯನ್ನೇ ಬೇಕು ಎಂದು ಕೇಳಿದವನು ಸಂತೋಷ. ಅಮ್ಮನ ತವರು ಮನೆಯ ಬಗ್ಗೆ ಮಕ್ಕಳಿಗೆ ಏನು ಗೊತ್ತಿಲ್ಲ. ಈಗ ಅಮ್ಮನ ತವರು ಮನೆ ಕಡೆ ಅಷ್ಟೊಂದು ಶ್ರೀಮಂತಿಕೆ ಇದೆ ಅಂದ್ರೆ ಸುಮ್ನೆ ಬಿಡ್ತಾನಾ..?

More from Filmibeat

English summary
zee kannada serial Lakshmi nivasa Written Update on July 12th episode. Here is the details about Lakshmi said, "I don't want the property of my hometown." Santosh does not leave the property;
Read more about: filmbeat original sumanth tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X