Lakshminivasa: ಮಗನ ಮಾಜಿ ಲವ್ವರ್ ನೋಡ್ತಾಳಾ ಲಲಿತಾ? ಲಕ್ಷ್ಮೀ ಮಗಳು ಎಂದು ಗೊತ್ತಾದರೆ ನೊಂದುಕೊಳ್ತಾಳೇನೋ?

By ಎಸ್ ಸುಮಂತ್

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಅದೆಷ್ಟೋ ಸಂಬಂಧಿಕರು ಮುಖಗಳನ್ನೇ ನೋಡಿಕೊಂಡಿಲ್ಲ. ಲಕ್ಷ್ಮೀಯನ್ನು ಕಂಡರೆ ಆಕೆಯ ಅಣ್ಣನಿಗೆ ಆಗೋದೆ ಇಲ್ಲ. ಪ್ರೀತಿಸಿ ಮದುವೆಯಾದಳು ಎಂಬ ಕಾರಣಕ್ಕೆ ಅವಳನ್ನು ದೂರವೇ ಇಟ್ಟ. ಅವಳಿಗೆ ಮಕ್ಕಳಾದರೂ ಯಾರೂ ಕೂಡ ನೋಡುವುದಕ್ಕೆ ಬರಲಿಲ್ಲ. ಆಕೆಯ ಅತ್ತಿಗೆಗೆ ಮಕ್ಕಳು ಹೇಗಿದ್ದಾರೆಂಬುದು ಗೊತ್ತಿಲ್ಲ. ಹೀಗಾಗಿ ವಿಶ್ವ ಇಷ್ಟಪಟ್ಟ ಹುಡುಗಿ ಯಾರ ಮಗಳೆಂಬುದು ಗೊತ್ತಿಲ್ಲ.

ಈಗ ಮನೆಯ ಜಮೀನು ಮಾರಾಟ ಮಾಡುವುದಕ್ಕೆ ಎಲ್ಲಾ ತಯಾರಿ ನಡೆದಿದೆ. ಆದರೆ‌ ಲಕ್ಷ್ಮೀಯ ಸಹಿ ಇಲ್ಲದೆ ಏನೇನು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಈಗ ಲಕ್ಷ್ಮೀ ಸಹಿಗಾಗಿ ಅವಳ‌ಮನೆ ಬಾಗಿಲ ತನಕ ಅತ್ತಿಗೆ ಬಂದಿದ್ದಾರೆ. ಇದು ಲಕ್ಷ್ಮೀಗೂ ಖುಷಿ ತಂದಿದೆ. ಲಲಿತಾಗಂತೂ ಇನ್ನಿಲ್ಲದ ಸಂತಸ ನೀಡಿದೆ.

Zee kannada serial Lakshmi nivasa Written Update on july 15th episode

ಲಕ್ಷ್ಮೀ ಮನೆಯವ ಒಳಗೆ ಬಂದ ಲಲಿತಾ

ಲಕ್ಷ್ಮೀ ಮದುವೆಯಾಗಿ ಬಂದಾಗಿನಿಂದ ತವರಿನ ಸಂಬಂಧ ಕಡಿದು ಹೋಗಿದೆ. ಲಲಿತಾಗೆ ಲಕ್ಷ್ಮೀ ಕಂಡರೆ ತುಂಬಾ ಇಷ್ಟ. ಬೇರೆ ಅತ್ತಿಗೆಯಂತೆ ಅಲ್ಲ‌. ಹೀಗಾಗಿ ಈಗ ಅವಕಾಶ ಸಿಕ್ಕಿದ ತಕ್ಷಣ ಲಕ್ಷ್ಮೀ ಮನೆಗೆ ಓಡೋಡಿ ಬಂದಿದ್ದಾಳೆ. ಲಕ್ಷ್ಮೀಯ ಮನೆಯ ಒಳಗೆ ಹೋಗಲೇಬೇಡ ಎಂದು ಹೇಳಿ ಕಳುಹಿಸಿದ್ದ ಗಂಡ. ಆದರೂ ಅದೆಲ್ಲವನ್ನು ಮೀರಿ ಲಲಿತಾ, ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾಳೆ.

ಮನೆಯಲ್ಲಿ ಅತ್ತಿಗೆ ಎಂದು ಹೇಳದ ಲಕ್ಷ್ಮೀ

ಮನೆಯಲ್ಲಿ ದೇವಸ್ಥಾನಕ್ಕೆ ಹೋಗುತ್ತೀವಿ ಎಂದು ಹೇಳಿದ್ದ ಲಲಿತಾ, ನಾಮಕಾವಸ್ಥೆಗೆ ದೇವಸ್ಥಾನಕ್ಕೆ ಹೋಗಿ ಬಂದಿದ್ದಾಳೆ. ಮನೆಯಲ್ಲಿಯೇ ಇದ್ದ ಲಲಿತಾಗೆ ಕಾಲ್ ಬಂದಿತ್ತು. ನರಸಿಂಹ ಇನ್ನು ಎಷ್ಟೊತ್ತಿನ ತನಕ ಬರುವುದು ಎಂದು ಪ್ರಶ್ನೆ ಮಾಡಿದಾಗ, ನಾನು ದೇವಸ್ಥಾನದಲ್ಲಿಯೇ ಇದ್ದೀನಿ. ಈಗ ಹೊರಡ್ತೀನಿ. ಲಕ್ಷ್ಮೀ ಮನೆಗೆ ಹೋಗಿಲ್ಲ. ನಿಮಗೆ ಇಷ್ಟವಿಲ್ಲದೆ ಇರುವ ಕೆಲಸವನ್ನು ನಾನು ಮಾಡುವುದಿಲ್ಲ ಎಂದಿದ್ದಾಳೆ. ಆದರೆ ಅದೇ ಸಮಯಕ್ಕೆ ಖುಷಿ ಬೇರೆ ಮಾತನಾಡಿದ್ದಾಳೆ. ಆಂಟಿ ಯಾರು ಎಂದು ಕೇಳಿದಾಗ ನರಸಿಂಹ ಕೇಳಿಸಿಕೊಂಡಿದ್ದಾನೆ.

ದಾರಿ ಮಧ್ಯೆ ಸಿಕ್ಕ ಜಯಂತ್

ಖುಷಿ‌ ಮಧ್ಯೆ ಮಾತನಾಡಿದ್ದನ್ನು ಹೇಗೋ ಯಾಮಾರಿಸಿದ ಲಲಿತಾ, ದೇವಸ್ಥಾನಕ್ಕೆ ಹೊರಟಿದ್ದಾಳೆ. ಯಾಕಂದ್ರೆ ಡ್ರೈವರ್ ಅಲ್ಲಿ ಕಾಯುತ್ತಿರುವುದಾಗಿ ಹೇಳಿದ್ದಾರೆ. ಗಂಡನಿಗೆ ಇನ್ನೆಲ್ಲಿ ಸತ್ಯ ಗೊತ್ತಾಗುತ್ತದೋ ಎಂಬ ಭಯಕ್ಕೆ ಲಕ್ಷ್ಮೀ ಮನೆಯಿಂದ ಹೊರಟಿದ್ದಾಳೆ. ಆದರೆ ಆಗಲೂ ಯಾವ ಮಕ್ಕಳನ್ನು ನೋಡುವುದಕ್ಕೆ ಆಗಿಲ್ಲ. ಫಾಸ್ಟ್ ಆಗಿ ನಡೆಯುತ್ತಿರುವಾಗಲೇ ಲಲಿತಾಗೆ ಜಯಂತ್ ಸಿಕ್ಕಿದ್ದಾನೆ. ಜಯಂತ್ ಗೆ ಲಲಿತಾ ಯಾರು ಎಂಬುದು ಗೊತ್ತಿರುವ ಕಾರಣ ಕಾರು ನಿಲ್ಲಿಸಿ, ಮಾತನಾಡಿಸಲು ಹೋಗಿದ್ದಾನೆ.

Zee kannada serial Lakshmi nivasa Written Update on july 15th episode

ಜಾಹ್ನವಿಯೇ ಲಕ್ಷ್ಮೀ ಮಗಳೆಂದು ತಿಳಿದರೆ?

ಜಾಹ್ನವಿಯನ್ನು ಕಾರಿನಲ್ಲಿಯೇ ಬಿಟ್ಟು ಬಂದಿದ್ದ ಜಯಂತ್, ಲಲಿತಾ ಅವರನ್ನು ಕಂಡು ನನ್ನ ಪತ್ನಿಯನ್ನು ಪರಿಚಯ ಮಾಡಿಕೊಡ್ತೀನಿ ಎಂದು ಕರೆದ. ಲಲಿತಾಗೆ ತನ್ನ ಮಗ ಇಷ್ಟ ಪಡುತ್ತಿದ್ದ ಜಾಹ್ನವಿ ಬಗ್ಗೆ ಗೊತ್ತು. ಈಗ ಅದೇ ಹುಡುಗಿ ಜಯಂತ್ ನನ್ನು ಮದುವೆಯಾಗಿದ್ದಾಳೆ ಎಂದರೆ ಅದನ್ನು ಆಕೆ ಸಹಿಸುವುದು ಕಷ್ಟ. ಮಗನ ಸ್ಥಿತಿ ಹೇಗಿದೆ ಅನ್ನೋದು ಈಗಾಗಲೇ ಲಲಿತಾ ನೋಡಿದ್ದಾಳೆ. ಇನ್ನು ಅದೇ ಜಾಹ್ನವಿ, ಲಕ್ಷ್ಮೀಯ ಮಗಳೆಂದು ತಿಳಿದರೆ ಬೇಸರ ಮಾಡಿಕೊಳ್ಳದೆ ಇರಲಾರಲು. ನಮ್ಮ ಲಕ್ಷ್ಮೀ ಮಗಳೆಂದು ಮೊದಲೇ ಗೊತ್ತಿದ್ದರೆ ನಾವೇ ಕೇಳಬಹುದಿತ್ತು ಅಂತಾನು ಯೋಚಿಸುತ್ತಾಳೇನೋ. ಆದರೆ ಜಾಹ್ನವಿಯನ್ನು ಭೇಟಿ ಮಾಡುವ ಸನ್ನಿವೇಶ ಕಡಿಮೆ ಎನಿಸುತ್ತದೆ. ಅಷ್ಟರಲ್ಲಿ ಲಲಿತಾಳ ಕಾರು ಬರಬಹುದು.

More from Filmibeat

English summary
Zee kannada serial Lakshmi nivasa Written Update on July 15th episode. Here is the details about Will Lalitha meet Jahnavi;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X