Lakshminivasa: ಬಿಸಿಬೇಳೆ ಬಾತ್‌ಗೆ ಮೂಲಂಗಿ? ಭಾವನಾ ತಾಳಿ ಟೆನ್ಷನ್ ಮಧ್ಯೆಯೂ ವೀಕ್ಷಕರಿಗೆ ತರಕಾರಿ ಚಿಂತೆ!
ಸೀರಿಯಲ್ ಒಂದು ಮನರಂಜನೆಯ ಮಹಾಪರ್ವ. ನೋಡಿ ಎಂಜಾಯ್ ಮಾಡಬೇಕು. ಜೀವನಕ್ಕೆ ಅಳವಡಿಸಿಕೊಳ್ಳಲು ಪಾಸಿಟಿವ್ ಅಂಶಗಳೇನಾದರೂ ಸಿಕ್ಕಿದರೆ ಖಂಡಿತ ಅವುಗಳನ್ನು ಆಯ್ದುಕೊಳ್ಳಬೇಕು. ಆದರೆ ಜನ ಸೀರಿಯಲ್ ನೋಡುವ ರೀತಿಯೇ ಬೇರೆ. ಪಾತ್ರಗಳು ನಮ್ಮ ಹತ್ತಿರವೇ ಇದ್ದಾರೇನೋ ಅಂದುಕೊಳ್ಳುತ್ತಾರೆ. ತಮ್ಮಿಷ್ಟದ ನಟಿಗೆ ನೋವಾದರೆ ಟಿವಿ ಮುಂದೆ ಕೂತು ಕೊರಗುತ್ತಾರೆ. ಇದೆಲ್ಲಾ ಎಮೋಷನಲ್ ಕಥೆಯಾದರೆ, ಕಾಮಿಡಿ ಕಮೆಂಟ್‌ಗಳು ಸಿಕ್ಕಾಪಟ್ಟೆ ಬರ್ತಾ ಇರ್ತವೆ.
ಸೋಷಿಯಲ್ ಮೀಡಿಯಾ ಈಗ ಸ್ಟ್ರಾಂಗ್ ಆಗಿದೆ. ಟೈಮ್ ಪಾಸ್ ಅಂತ ಬಂದಾಗ ಪ್ರತಿಯೊಬ್ಬರು ತಮ್ಮಲ್ಲಿರುವ ಮೊಬೈಲ್‌ನಲ್ಲಿ ಶಾರ್ಟ್ಸ್ ನೋಡುತ್ತಾ ಕುಳಿತು ಬಿಡುತ್ತಾರೆ. ಇನ್ನು ಧಾರಾವಾಹಿ ಪ್ರಿಯರು ಪ್ರೋಮೋಗಳನ್ನು ನೋಡಿಯೇ ಇಂದಿನ ಕಥೆ ಏನಾಗಬಹುದೆಂದು ಲೆಕ್ಕಚಾರ ಹಾಕುತ್ತಾರೆ. ಸೀರಿಯಸ್, ಫನ್ನಿ ಎನಿಸುವ ಕಮೆಂಟ್‌ಗಳನ್ನ ಹಾಕುತ್ತಾ ಇರುತ್ತಾರೆ.

ಮಕ್ಕಳೆಲ್ಲಾ ಸೇರಿ ಅಡುಗೆ ಮಾಡಲು ಸಿದ್ಧ
ಭಾವನಾ ಕುತ್ತಿಗೆಯಲ್ಲಿ ತಾಳಿ ನೋಡಿದಾಗಿನಿಂದ ಲಕ್ಷ್ಮೀ ಮನಸ್ಥಿತಿ ಸರಿ ಇಲ್ಲ. ಯಾರ ಬಳಿಯೂ ಕಷ್ಟ ಹೇಳಿಕೊಳ್ಳುವುದಕ್ಕೂ ಆಗುತ್ತಿಲ್ಲ. ಹೀಗಾಗಿ ಅನಾರೋಗ್ಯಕ್ಕೆ ಒಳಗಾಗಿದ್ದಳು. ಅಮ್ಮನಿಗೆ ಹುಷಾರಿಲ್ಲ ಎಂದು ಕೇಳಿ ಜಾನು ಕೂಡ ಓಡಿ ಬಂದಿದ್ದಾಳೆ. ಮನೆಯಲ್ಲಿ ಈಗ ಜನ ಜಾಸ್ತಿ. ಇಂಥ ಸಂದರ್ಭದಲ್ಲಿ ಲಕ್ಷ್ಮೀ ರೆಸ್ಟ್ ಮಾಡದೇ ಅಡುಗೆ ಮಾಡುವುದಕ್ಕೆ ಬಂದಿದ್ದಾಳೆ. ಆದರೆ ಮಕ್ಕಳೆಲ್ಲಾ ಸೇರಿ ಆಕೆಗೆ ಅಡುಗೆ ಮಾಡದಂತೆ ತಾಕೀತು ಮಾಡಿದ್ದಾರೆ. ಕುಳಿತುಕೊಂಡು ಸಲಹೆ ನೀಡಿದರೆ ನಾವೇ ಮಾಡ್ತೀವಿ ಎಂದಿದ್ದಾರೆ.
ಬಿಸಿಬೇಳೆ ಬಾತ್‌ಗೆ ಮೂಲಂಗಿ ಹಾಕ್ತಾರಾ?
ಮಕ್ಕಳ ಮಾತಿಗೆ ಓಕೆ ಎಂದ ಲಕ್ಷ್ಮೀ ಬಿಸಿಬೇಳೆ ಬಾತ್ ಮಾಡುವುದಕ್ಕೆ ಹೇಳಿದ್ದಾಳೆ. ಜಾಹ್ನವಿ ಅದಕ್ಕೆ ಬೇಕಾದ ತರಕಾರಿ ಕಟ್ ಮಾಡುವುದಕ್ಕೆ ಮುಂದಾಗಿದ್ದಾಳೆ. ಲಕ್ಷ್ಮೀ ಒಂದು ಮೂಲಂಗಿಯನ್ನು ಕೊಟ್ಟಿದ್ದಾಳೆ. ಇದನ್ನೆಲ್ಲಾ ಪ್ರೇಕ್ಷಕರು ಅದೆಷ್ಟು ಚೆನ್ನಾಗಿ ಗಮನಿಸಿದ್ದಾರೆ ಎಂದರೆ, ಬಿಸಿಬೇಳೆ ಬಾತ್‌ಗೆ ಯಾರಾದ್ರೂ ಮೂಲಂಗಿ ಹಾಕ್ತಾರಾ ಎಂದು ಪ್ರಶ್ನಿಸಿದ್ದಾರೆ.

ಮಗಳ ತಾಳಿ ಮುಚ್ಚಿಟ್ಟ ಲಕ್ಷ್ಮೀ
ಭಾವನಾ ತನ್ನ ಕುತ್ತಿಗೆಯಲ್ಲಿರುವ ತಾಳಿ ವಿಚಾರವನ್ನು ಯಾರ ಬಳಿಯೂ ಹೇಳಿರಲಿಲ್ಲ. ಅಮ್ಮನಿಗೆ ಗೊತ್ತು ಅಂತಾನೂ ಆಕೆಗೆ ಗೊತ್ತಿಲ್ಲ. ತಾಳಿ ನೋಡಿದ್ದ ಲಕ್ಷ್ಮೀ ಯಾವತ್ತೂ ಆ ವಿಚಾರ ಪ್ರಸ್ತಾಪ ಮಾಡಿರಲಿಲ್ಲ. ಭಾವನಾ ಕೀಡ ತಾಳಿಯನ್ನ ಜೋಪಾನವಾಗಿಟ್ಟುಕೊಂಡಿದ್ದಳು. ಆದರೆ ಇವತ್ತು ಭಾವನಾಗು ಗಮನಕ್ಕೆ ಬಾರದೇ ತಾಳಿ ಹೊರಗೆ ಬಂದಿತ್ತು. ಲಕ್ಷ್ಮೀ ಅದನ್ನು ನೋಡಿ, ಗಾಬರಿಯಾದಳು. ಅಲ್ಲಿಯೇ ಜಾನು, ವೀಣಾ ಇದ್ದಿದ್ದರಿಂದ ಅವರೆಲ್ಲಿ ನೋಡಿ ಬಿಡುತ್ತಾರೋ ಎಂಬ ಆತಂಕ ಅವಳನ್ನು ಕಾಡಿ, ಹತ್ತಿರ ಹೋಗಿ ತಾಳಿ ಒಳಗೆ ಹಾಕಿದಳು.
ಲಕ್ಷ್ಮೀ ನಡೆಗೆ ವೀಕ್ಷಕರ ಹೊಗಳಿಕೆ
ಅಮ್ಮನಿಗೆ ತಾಳಿ ವಿಚಾರ ಗೊತ್ತಿದೆ ಎಂಬುದೇ ಭಾವನಾಗೆ ಶಾಕಿಂಗ್. ವೀಣಾ ಮತ್ತು ಜಾಹ್ನವಿಯನ್ನು ಹಿರಗೆ ಕಳುಹಿಸಿದ ಲಕ್ಷ್ಮೀ, ತಾಳಿಯನ್ನ ಯಾರಿಗೂ ಕಾಣದಂತೆ ನೋಡಿಕೊಳ್ಳುವುದಕ್ಕೆ ಆಗಲ್ವಾ ಎಂದೇ ರೇಗಿದಳು. ಭಾವನಾಗೆ ಏನು ಹೇಳಬೇಕು ಎಂದು ತೋಚದೇ ಅಲ್ಲಿಂದ ಹೊರಟು ಬಿಟ್ಟಳು. ಲಕ್ಷ್ಮೀಯ ನಡೆಗೆ ವೀಕ್ಷಕರು ಶಬ್ಬಾಶ್ ಎಂದರು. ಒಬ್ಬ ತಾಯಿಗೆ ಮಾತ್ರ ಮಗಳನ್ನು ಆ ರೀತಿ ನೋಡಿಕೊಳ್ಳುವುದಕ್ಕೆ ಸಾಧ್ಯ ಎಂದು ಕೊಂಡಾಡುತ್ತಿದ್ದಾರೆ.


Click it and Unblock the Notifications











