Lakshminivasa: ಹುಷಾರಪ್ಪ ವಿಶ್ವ, ಜಾಹ್ನವಿ ಗೆಳೆಯ ನೀನೆ ಅಂತ ಜಯಂತ್‌ಗೆ ಗೊತ್ತಾದ್ರೆ ಗೋವಿಂದ!
'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಜಯಂತ್ ಬದಲಾಗಿದ್ದಾನೆ ಅಂತ ಅನ್ನಿಸುತ್ತೆ. ಆದರೆ ಆಗಾಗ ಮತ್ತೆ ತನ್ನ ಸೈಕೋ ವರ್ತನೆಯನ್ನ ತೋರಿಸುತ್ತಾ ಇರುತ್ತಾನೆ. ಜಾಹ್ನವಿ ಯಾರ ಜೊತೆಗೂ ಮಾತನಾಡದೆ, ತನ್ನ ಜಪ ಮಾಡುತ್ತಾ, ಹೆಚ್ಚು ಪ್ರೀತಿ ಮಾಡುತ್ತಾ ಇರಬೇಕು. ಮನೆಯವರ ಜೊತೆಗೆ ಮಾತನಾಡುವುದು, ತವರು ಮನೆಗೆ ಹೋಗ್ತೀನಿ ಅನ್ನೋದನ್ನೆಲ್ಲ ಮಾಡಬಾರದು. ಆಗ ಮಾತ್ರ ಜಯಂತ್ ನಾರ್ಮಲ್ ಆಗಿ ಇರುತ್ತಾನೆ. ಇದೆಲ್ಲವೂ ಉಲ್ಟಾ ಆದಾಗ ಅವ್ನು ಅಬ್ನಾರ್ಮಲ್ ಆಗಿ ಬಿಡುತ್ತಾನೆ.
ಗೂಬೆ ಯಾರು ಅನ್ನೋ ಹುಡುಕಾಟದಲ್ಲಿಯೇ ಇದ್ದ ಜಯಂತ್. ಆದರೆ ಈಗ ಅದೇ ಗೂಬೆ ಮನೆಯಲ್ಲಿಯೇ ವ್ಯವಹಾರ ನಡೆಸುತ್ತಿದ್ದಾನೆ. ಜಯಂತ್ ಯಾರೆಂದು ವಿಶ್ವನಿಗೆ ಮಾತ್ರ ಗೊತ್ತು. ವಿಶ್ಚ ಯಾರೆಂದು ಜಯಂತ್‌ಗೆ ಗೊತ್ತಿಲ್ಲ. ಅಷ್ಟೇ ಯಾಕೆ ಜಯಂತ್ ಯಾರೆಂಬುದು ವಿಶ್ವನ ತಾಯಿಗೆ, ಅತ್ತೆಯ ಮಗಳಿಗೂ ಗೊತ್ತಿಲ್ಲ.

ವಿಶ್ವನ ಮನೆಗೆ ಬಂದ ಜಯಂತ್
ಜಯಂತ್ ಖರೀದಿ ಮಾಡುತ್ತಿರುವ ಜಮೀನಿನ ಎಲ್ಲಾ ತಾಪತ್ರಯಗಳು ಈಗ ಮುಗಿದಿವೆ. ಲಕ್ಷ್ಮೀ ಕೂಡ ತವರು ಮನೆಯಿಂದ ನನಗೆ ಯಾವ ಆಸ್ತಿಯೂ ಬೇಡ ಎಂದು ಸಹಿ ಮಾಡಿ ಕಳುಹಿಸಿದ್ದಾಳೆ. ಈಗ ಜಮೀನಿನ ಪೇಪರ್ ಪಡೆಯುವುದಕ್ಕೆ, ಮಾತನಾಡುವುದಕ್ಕೆ ಜಯಂತ್, ನರಸಿಂಹನ ಮನೆಗೆ ಬಂದಿದ್ದಾನೆ.
ತಿನ್ನಲು ತಂಬಿಟ್ಟುಕೊಟ್ಟ ಲಲಿತಾ
ಮನೆಗೆ ಬಂದ ಅತಿಥಿಗಳನ್ನು ಲಲಿತಾ ಚೆನ್ನಾಗಿಯೇ ನೋಡಿಕೊಳ್ಳುತ್ತಾಳೆ. ಹೀಗಾಗಿ ತಿನ್ನುವುದಕ್ಕೆಂದು ತಂಬಿಟ್ಟು ನೀಡಿದ್ದಾಳೆ. ಜಾಹ್ನವಿ ತಂಬಿಟ್ಟು ಎಂದರೆ ಬಲು ಇಷ್ಟ. ತಂಬಿಟ್ಟು ನೋಡಿದ ಕೂಡಲೇ ಇಬ್ಬರು ಹಳೆಯ ನೆನಪುಗಳಿಗೆ ಜಾರಿದ್ದಾರೆ. ತವರು ಮನೆಯಿಂದ ಜಾನು ತಂಬಿಟ್ಟು ತರುತ್ತಾ ಇದ್ದದ್ದನ್ನ ಜಯಂತ್ ನೆನೆಸಿಕೊಂಡರೆ, ಕಾಲೇಜಿನಲ್ಲಿ ತಂಬಿಟ್ಟನ್ನ ಇಷ್ಟ ಪಟ್ಟು ತಿನ್ನುತ್ತಾ ಇದ್ದದ್ದು, ವಿಶ್ವ ಡಬ್ಬಿ ತೆಗೆದುಕೊಂಡು ಹೋಗಿದ್ದನ್ನ ನೆನೆಸಿಕೊಂಡಿದ್ದಾನೆ ವಿಶ್ವ.

ಜಾಹ್ನವಿಗಾಗಿ ತಂಬಿಟ್ಟು ಕೊಟ್ಟ ವಿಶ್ವ
ಜಯಂತ್ ಅದೇ ಸಮಯಕ್ಕೆ ಜಾಹ್ನವಿ ಕಾಲ್ ಮಾಡಿದ್ದಾನೆ. ಇಲ್ಲಿ ತಂಬಿಟ್ಟು ಇದೆ. ನೀನೆ ನೆನಪಾಗ್ತಾ ಇದ್ದೀಯ ಚಿನ್ನುಮರಿ ಎಂದಿದ್ದಾನೆ. ಮೊದಲೇ ತಂಬಿಟ್ಟು ಎಂದರೆ ಪ್ರಾಣ ಬಿಡುವ ಜಾಹ್ನವಿ, ಅವರನ್ನ ಕೇಳಿನೆ ತಗೊಂಡು ಬನ್ನಿ ಎಂದಿದ್ದಾಳೆ. ಸರಿ ತಗೊಂಡು ಬರ್ತೀನಿ ಎನ್ನುವಷ್ಟರಲ್ಲಿ ವಿಶ್ವ, ತಂಬಿಟ್ಟನ್ನ ಒಂದು ಬಾಕ್ಸಿಗೆ ಹಾಕಿ ಜಯಂತ್ ಬಳಿ ಕೊಟ್ಟಿದ್ದಾನೆ. ನಿಮ್ಮ ಹೆಂಡತಿಗೆ ಈ ತಂಬಿಟ್ಟನ್ನ ತೆಗೆದುಕೊಂಡು ಹೋಗಿ ಕೊಡಿ ಅಂತ. ಅಂದ್ರೆ ವಿಶ್ವನಿಗೆ ಹಳೆಯ ಪ್ರೀತಿ ಆಗಾಗ ನೆನಪಾಗುತ್ತಲೇ ಇರುತ್ತದೆ ಎಂಬುದಕ್ಕೆ ಉದಾಹರಣೆ ಇದು.
ವಿಶ್ವ ಹುಷಾರು ಎಂದ ಫ್ಯಾನ್ಸ್
ಇದನ್ನೆಲ್ಲಾ ನೋಡಿ ವೀಕ್ಷಕರು ಮೊದಲು ವಿಶ್ವನಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಜಯಂತ್ ಹೇಗೆ ಎಂಬುದನ್ನು ಪ್ರೇಕ್ಷಕರು ನೋಡಿಕೊಂಡು ಬಂದಿದ್ದಾರೆ. ಹೀಗಾಗಿ ವಿಶ್ವನಿಗೆ ಎಚ್ಚರಿಕೆ ನೀಡಿದ್ದಾರೆ. ವಿಶ್ವ ಜೋಪಾನ ಕಣೋ. ಅವನಿಗೆ ನೀನೆ ಜಾಹ್ನವಿ ಗೂಬೆ ಎಂಬುದು ಗೊತ್ತಾಗಿ ಹೋದರೆ ನಿನ್ನನ್ನೇ ತಂಬಿಟ್ಟು ಮಾಡಿ ಬಿಡುತ್ತಾನೆ ಎಂದು ಎಚ್ಚರಿಸಿದ್ದಾರೆ. ಸಾಕಷ್ಟು ಜನ ವಿಶ್ವನ ಕಾಳಜಿ ಬಗ್ಗೆಯೇ ಕಮೆಂಟ್ ಹಾಕಿದ್ದಾರೆ. ಆಗಾಗ ಜಯಂತನ ಸೈಕೋ ಬೇಬಿ ಎಚ್ಚರವಾಗುತ್ತಾನೆ. ಹೀಗಾಗಿ ವಿಶ್ವನಿಗೆ ವೀಕ್ಷಕರೇ ಸಲಹೆ ನೀಡಿದ್ದಾರೆ.


Click it and Unblock the Notifications











