Lakshminivasa: ಪೂರ್ವಿ ತುಂಬಾ ಆಸೆ ಬೇಡ, ಸಿದ್ದೇಗೌಡ್ರಿಗೆ ಭಾವನಾಳನ್ನ ಬಿಟ್ರೆ ಯಾರ ಮೇಲೂ ಮನಸ್ಸಾಗಲ್ಲ!

By ಎಸ್ ಸುಮಂತ್

ಪೂರ್ವಿಗೆ ಬೇಗ ಯಾಮಾರಿಸಬಹುದು ಎಂಬುದನ್ನು ನೀಲೂ ಹಾಗೂ ಸೌಪರ್ಣಿಕಾ ಚೆನ್ನಾಗಿಯೇ ಅರಿತಿದ್ದಾರೆ. ಅದಕ್ಕೆ ಈಗ ಪೂರ್ವಿಯ ತಲೆ ತಿಂದು ತಿಂದು ಆಕೆ ತನ್ನ ನಿರ್ಧಾರವನ್ನೇ ಬದಲಾಗುವಂತೆ ಮಾಡಿದ್ದಾರೆ. ಅಪ್ಪ ಅಮ್ಮನ ಮಾತಿಗೆ ಕಟ್ಟು ಬಿದ್ದು ಎಂಗೇಜ್ಮೆಂಟ್ ಮಾಡಿಕೊಂಡ ಪೂರ್ವಿ, ಈಗ ನೀಲೂ-ಸೌಪರ್ಣಿಕಾ ಮಾತಿನಿಂದ ಬೇರೆಯ ನಡವಳಿಕೆಯನ್ನೇ ತೋರುತ್ತಿದ್ದಾಳೆ.

ಪೂರ್ವಿಗೂ ಮದುವೆಗೆ ಇಷ್ಟ ಇಲ್ಲ ಎಂಬುದನ್ನು ಅರಿತ ನೀಲೂ ಹಾಗೂ ಸೌಪರ್ಣಿಕ ತನ್ನ ಬೇಳೆ ಬೇಯಿಸಿಕೊಳ್ಳುವುದಕ್ಕರ ಶುರು ಮಾಡಿದರು. ಅದಕ್ಕೆಂದೆ ಪೂರ್ವಿಯ ಮುಗ್ದತೆಯನ್ನ ಬಳಸಿಕೊಂಡರು. ಪೂರ್ವಿ ಹಾಗೂ ಸಿದ್ದೇಗೌಡರ ಮದುವೆಯಾಗುವುದರಿಂದ ಆ ಇಬ್ಬರಿಗೂ ಲಾಭವಿದೆ. ಹೀಗಾಗಿ ಪೂರ್ವಿಯ ಮನಸ್ಥಿತಿ ಅರಿತು, ಆಟವಾಡುವುದಕ್ಕೆ ಶುರು ಮಾಡಿದ್ದಾರೆ.

Zee kannada serial Lakshmi nivasa Written Update on july 22nd episode

ಪೂರ್ವಿಯ ನಡೆಗೆ ಅನುಮಾನ

ಎಂಗೇಜ್ಮೆಂಟ್ ಆದ ಮೇಲೆ ಪೂರ್ವಿ ಕೂಡ ಸಿದ್ದೇಗೌಡರ ಪರವಾಗಿಯೇ ಇದ್ದಳು. ನನಗೂ ಮದುವೆ ಬೇಡ ಎಂದಿದ್ದಳು. ಹೀಗಾಗಿ ಮದುವೆ ನಿಲ್ಲಿಸುವ ಪ್ಲ್ಯಾನ್ ಮಾಡಲು ಇಬ್ಬರು ಕೈ ಜೋಡಿಸಿದ್ದರು. ಆದರೆ ನೀಲೂ ಹಾಗೂ ಸೌಪರ್ಣಿಕಾ ಸೇರಿ ಪೂರ್ವಿ ಮುಂದೆ ಸಿದ್ದು ಗುಣಗಾನ ಮಾಡಿದ್ದರು. ಸಿದ್ದು ಯಾವ ಹುಡುಗಿಯನ್ನು ಕಣ್ಣೆತ್ತಿ ನೋಡಿಲ್ಲ ಎಂದಿದ್ದರು. ಪೂರ್ವಿಗೆ ಇಂಪ್ರೆಸ್ ಆಗುವಂತೆ ಮಾತನಾಡಿದ್ದರು. ಈಗ ಪೂರ್ವಿಯ ನಡೆ ನೋಡುತ್ತಿದ್ದರೆ ಲವ್ ಆಗುತ್ತಿರುವಂತೆ ಕಾಣಿಸುತ್ತಿದೆ.

ತಂದೆ ಹೆಸರೇಳಿ ಸಿದ್ದು ಜೊತೆ ಓಡಾಟ

ಸಿದ್ದು ಜೊತೆಗೆ ಸಮಯ ಕಳೆದರೆ ಸಿದ್ದು ಏನೆಂದು ನಿನಗೆ ಅರ್ಥವಾಗುತ್ತೆ ಎಂಬುದನ್ನು ಇಬ್ಬರು ತಲೆಗೆ ತುಂಬಿದ್ದಾರೆ. ಹೀಗಾಗಿ ಈಗ ಸಿದ್ದು ಜೊತೆಗೆ ಸಮಯ ಕಳೆಯುವುದಕ್ಕೆ ಪೂರ್ವಿ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾಳೆ. ಸಿದ್ದೇಗೌಡ್ರ ಮನೆಗೆ ಬಂದು ಅವರ ಜೊತೆಗೆ ಹೋಗಬೇಕು ಎಂದಿದ್ದಾಳೆ. ಇದಕ್ಕೆ ವಿರೋಧಿಸಿದ್ದಕ್ಕೆ ಅಪ್ಪನೇ ಹೇಳಿ ಕಳುಹಿಸಿರುವುದು, ದೇವಸ್ಥಾನಕ್ಕೆ ಹೋಗಿ ಬನ್ನಿ ಎಂದಿದ್ದಾರೆ ಅಂತ ನೆಪ ಹೇಳಿದ್ದಾಳೆ‌.

ಭಾವನಾ ಮುಂದೆ ಲಾಕ್ ಆದ ಗೌಡ್ರು

ಸಿದ್ದೇಗೌಡ್ರು ಪದೇ ಪದೇ ಭಾವನಾ ಬಳಿ ತಗಲಾಕಿಕೊಳ್ಳುತ್ತಲೇ ಇರುತ್ತಾಳೆ. ಅದರಲ್ಲೂ ಪೂರ್ವಿ ಜೊತೆಗೆ ಇದ್ದಾಗಲೇ ಪರಿಸ್ಥಿತಿ ಆ ರೀತಿ ಬರುತ್ತದೆ. ಈಗ ದೇವಸ್ಥಾನ ಹೋಗಿ ಬರುವಾಗಲೂ ಲಾಕ್ ಆಗಿದ್ದಾರೆ. ಭಾವನಾ ಇಬ್ಬರನ್ನು ನೋಡಿ ಖುಷಿ ಪಟ್ಟಿದ್ದಾಳೆ. ಇಬ್ಬರನ್ನು ನಿಲ್ಲಿಸಿ ಮಾತನಾಡಿಸಿದ್ದಾಳೆ‌. ಯಾವ ವಿಚಾರ ಭಾವನಾಗೆ ತಿಳಿಯಬಾರದು ಎಂದುಕೊಂಡಿದ್ದನೋ ಸಿದ್ದು ಅದೇ ವಿಚಾರ ತಿಳಿದಿದೆ. ಇಬ್ಬರು ಯಾವಾಗಲೂ ಜೊತೆಯಾಗಿಯೇ ಸಿಕ್ಕಾಗ ಭಾವನಾಗೆ ಅವರ ಆತ್ಮೀಯತರ ಇನ್ನು ಅರ್ಥವಾಗುತ್ತದೆ. ಆದರೆ ಇದು ಸಿದ್ದೇಗೌಡ್ರಿಗೆ ಬೇಡವಾಗಿದೆ.

Zee kannada serial Lakshmi nivasa Written Update on july 22nd episode

ಜಾಸ್ತಿ ಆಸೆ ಬೇಡ ಎಂದ ವೀಕ್ಷಕರು

ಭಾವನಾಳನ್ನು ಸಿದ್ದೇಗೌಡ್ರು ಮನಸ್ಸಾರೆ ಪ್ರೀತಿಸುತ್ತಿದ್ದಾರೆ. ಅದಕ್ಕೆ ಭಾವನಾಳನ್ನು ಇನ್ನೆಲ್ಲಿ ಕಳೆದುಕೊಂಡು ಬಿಡುತ್ತೀನೋ ಅನ್ನೋ ಭಯದಲ್ಲಿ ರಾತ್ರೋ ರಾತ್ರಿ ತಾಳಿ ಕಟ್ಟಿದ್ದಾನೆ. ಅದನ್ನು ಒಪ್ಪಿಕೊಳ್ಳುವುದಕ್ಕೆ ಸಮಯಕ್ಕಾಗಿ ಕಾಯುತ್ತಿದ್ದಾನೆ. ಆದರೆ ಸತ್ಯ ಹೇಳುತ್ತೇನೆಂದು ಹೋದಾಗೆಲ್ಲಾ ಭಯದಿಂದಾನೇ ವಾಪಸ್ ಬಂದಿದ್ದಾನೆ. ಈಗ ಪೂರ್ವಿ ಬೇರೆ ತನ್ನ ಮನಸ್ಸನ್ನು ಬದಲಾಯಿಸುತ್ತಿದ್ದಾಳೆ. ಹೀಗಾಗಿ ಪ್ರೇಕ್ಷಕರೆಲ್ಲ ಸಮಾಧಾನ ಮಾಡುತ್ತಿದ್ದಾರೆ. ಪೂರ್ವಿ ನೀನು ಹೆಚ್ಚು ಆಸೆ ಇಟ್ಟುಕೊಳ್ಳಬೇಡ. ನಮ್ಮ ಸಿದ್ದೇಗೌಡ್ರು ನಿಂಗೆ ಸಿಗಲ್ಲ. ಅವರು ಭಾವನಾ ಅವರನ್ನ ಮನಸ್ಸಾರೆ ಪ್ರೀತಿ ಮಾಡ್ತಾ ಇದ್ದಾರೆ ಅಂತ ಸಲಹೆ ನೀಡಿದ್ದಾರೆ.

More from Filmibeat

English summary
zee kannada serial Lakshmi nivasa Written Update on July 22nd episode. Here is the details about Purvi falling in love with Siddegowda;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X