Lakshminivasa: ಒಬ್ಬೊಬ್ಬರಿಗೆ ಗೊತ್ತಾಗ್ತಿದೆ ಭಾವನಾ ತಾಳಿ ವಿಚಾರ; ವೆಂಕಿ ಮುಂದೇನ್ ಮಾಡ್ತಾನೆ?
ಭಾವನಾ ಕುತ್ತಿಗೆಯಲ್ಲಿ ತಾಳಿ ಇರುವುದು ಹೇಗೆ ಅಂದ್ರೆ ಕೆಂಡದಲ್ಲಿ ಸೆರಗು ಕಟ್ಟಿಕೊಂಡಂತೆ ಆಗಿದೆ. ಭಾವನಾ ಅದನ್ನ ಯಾರಿಗೂ ಕಾಣದಂತೆ ಸುರಕ್ಷಿತವಾಗಿ ಮುಚ್ಚಿಟ್ಟುಕೊಳ್ಳುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ಹೇಗೋ ಸೆರಗನ್ನು ಕವರ್ ಮಾಡಿಕೊಂಡೆ ದಿನದೂಡುತ್ತಿದ್ದಾಳೆ. ಆದರೆ ಮನೆಯಲ್ಲಿ ಒಬ್ಬೊಬ್ಬರೇ ತಾಳಿಯನ್ನು ನೋಡುತ್ತಿದ್ದಾರೆ.
ಮೈಮೇಲೆ ಹಾಕಿಕೊಳ್ಳುವ ಒಡವೆಯ ಮೇಲೆ ಸದಾ ಕಾಲ ಗಮನ ಹರಿಸುವುದು ಕಷ್ಟಸಾಧ್ಯ. ಕೆಲವೊಮ್ಮೆ ಆ ವಸ್ತು ಇರುವುದೇ ಮರೆತು ಹೋಗುತ್ತದೆ. ಭಾವನಾಳಿಗೂ ಈಗ ಅದೇ ರೀತಿ ಆಗುತ್ತಿದೆ. ತಾಳಿಯನ್ನ ಸಾಧ್ಯವಾದಷ್ಟು ಸಮಯ ಎಚ್ಚರದಿಂದ ನೋಡಿಕೊಳ್ಳುತ್ತಾಳೆ. ಇನ್ನೊಮ್ಮೆ ತಾಳಿ ಪ್ರದರ್ಶನವಾಗುತ್ತಿದ್ದರು ಭಾವನಾಗೆ ಅದು ಗೊತ್ತೆ ಆಗುವುದಿಲ್ಲ. ಈಗ ಅಂಥದ್ದೇ ಪರಿಸ್ಥಿತಿಯಲ್ಲಿ ವೆಂಕಿ ಮುಂದೆಯೂ ತಾಳಿ ಕಂಡಿದೆ.

ತಾಳಿ ನೋಡಿದ ವೆಂಕಿ ಓಡಿ ಬಂದ
ಭಾವನಾ ಕುತ್ತಿಗೆಯಲ್ಲಿರುವ ತಾಳಿಯನ್ನು ಲಕ್ಷ್ಮೀ ನೋಡಿದ್ದು ಕೂಡ ತಡವಾಗಿಯೇ. ಆದರೆ ಕೇಳಿರಲಿಲ್ಲ. ಮೊನ್ನೆ ಮನೆಗೆ ಎಲ್ಲರೂ ಬಂದಾಗ ಹೊರಗಿದ್ದ ತಾಳಿಯಿಂದ ಅಮ್ಮ ಮಗಳ ನಡುವೆ ಸಮಸ್ಯೆಯ ಬಗ್ಗೆ ಚರ್ಚೆಯಾಗಿದೆ. ಮಗಳ ಅಸಹಾಯಕತೆಗೆ ಲಕ್ಷ್ಮೀ ಬೆಂಬಲವಾಗಿ ನಿಂತಿದ್ದಾಳೆ. ಈಗ ನೋಡಿದ್ರೆ ವೆಂಕಿ ಕಣ್ಣಿಗೂ ಆ ತಾಳಿ ಬಿದ್ದಿದೆ. ತಾಳಿ ಕಂಡೊಡನೆ ಗಾಬರಿಯಾದ ವೆಂಕಿ, ಲಕ್ಷ್ಮೀ ಬಳಿ ವಿಷಯ ಹೇಳಲು ಬಂದಿದ್ದಾನೆ.
ವೆಂಕಿಗೆ ಸಮಾಧಾನ ಮಾಡಿದ ಲಕ್ಷ್ಮೀ
ಇನ್ನು ವೆಂಕಿಗೆ ಸತ್ಯ ಗೊತ್ತಾಗಿದೆ ಎಂಬುದು ಲಕ್ಷ್ಮೀಗೆ ಗೊತ್ತಾಗಿದೆ. ಆದರೆ ಇದನ್ನ ಯಾರಿಗೂ ಹೇಳದಂತೆ ವೆಂಕಿಗೆ ಬುದ್ದಿ ಹೇಳಿದ್ದಾಳೆ. ಇದು ಭಾವನಾಳ ತಪ್ಪು ಅಲ್ಲ. ಆ ತಾಳಿಯನ್ನು ಯಾರೂ ಕಟ್ಟಿದರು ಎಂಬುದು ಕೂಡ ಗೊತ್ತಿಲ್ಲ. ಪಾಪ ಅವಳಿಗೆ ಏನು ಮಾಡಬೇಕೆಂಬುದು ತಿಳಿಯದೆ ಕಂಗಾಲಾಗಿದ್ದಾಳೆ ಅಂತ ವೆಂಕಿಗೆ ತಿಳಿ ಹೇಳಿದ್ದಾಳೆ. ಲಕ್ಷ್ಮೀಯ ಮಾತು ಕೇಳಿ ವೆಂಕಿ ಕೂಡ ಶಾಕ್ ಆಗಿದ್ದಾನೆ. ಈ ತಾಳಿ ಕಟ್ಟಿದವನೇ ಭಾವನಾಗೆ ಗೊತ್ತಿಲ್ವಾ ಎಂದು ಮನಸ್ಸಲ್ಲಿಯೇ ಬೇಸರ ಮಾಡಿಕೊಂಡಿದ್ದಾನೆ.
ಸಿದ್ದೇಗೌಡ್ರಿಗೆ ಲಕ್ಷ್ಮೀ ಜವಾಬ್ದಾರಿ
ಭಾವನಾಳನ್ನು ಮನಸ್ಸಾರೆ ಇಷ್ಟಪಡುತ್ತಿರುವ ಸಿದ್ದೇಗೌಡ್ರೇ ತಾಳಿ ಕಟ್ಟಿರುವುದು. ಇನ್ನೆಲ್ಲಿ ಭಾವನಾ ಬೇರೆಯವರನ್ನು ಮದುವೆಯಾಗಿ ಬಿಡುತ್ತಾಳೋ ಎಂಬ ಭಯಕ್ಕೆ ತಾಳಿ ಕಟ್ಟಿದ್ದ. ಈಗ ಲಕ್ಷ್ಮಕ್ಕ ಕೂಡ ಸಿದ್ದೇಗೌಡ್ರಿಗೆ ಆತನನ್ನ ಹುಡುಕಲು ಹೇಳಿದ್ದಾಳೆ. ಬೇಲಿಯೇ ಎದ್ದು ಹೊಲ ಮೇಯ್ದ ಹಾಗೇ ಆಗೋಗಿದೆ ಸಿದ್ದೇಗೌಡ್ರ ಪರಿಸ್ಥಿತಿ. ಲಕ್ಷ್ಮಕ್ಕ ನೋಡಿದರೆ ಇಷ್ಟೊಂದು ನಂಬಿಕೆ ಇಟ್ಟುಕೊಂಡಿದ್ದಾರೆ. ನಾನೇ ಈ ಕೆಲಸ ಮಾಡಿದ್ದು ಎಂದು ಗೊತ್ತಾದರೇ ಏನಾಗಬಹುದು ಎಂಬ ಆತಂಕದಲ್ಲಿದ್ದಾನೆ.

ವೆಂಕಿಗೆ ಅವಾರ್ಡ್ ಸಿಗಬೇಕೆಂದ ಫ್ಯಾನ್ಸ್
ಈ ಧಾರಾವಾಹಿಯಲ್ಲಿ ಮೂಕ ಪಾತ್ರಧಾರಿ ವೆಂಕಿ. ಆದರೆ ಅದೆಷ್ಟು ಚೆನ್ನಾಗಿ ಆ ಪಾತ್ರದಲ್ಲಿ ಅಭಿನಯಿಸುತ್ತಾರೆ ಎಂಬುದಕ್ಕೆ ಬರುತ್ತಿರುವ ಕಮೆಂಟ್‌ಗಳೇ ಸಾಕ್ಷಿ. ಚೆಲ್ವಿಯನ್ನ ಲವ್ ಮಾಡುತ್ತಿರುವ ವೆಂಕಿ, ಎಲ್ಲರಿಗೂ ಆಕ್ಷನ್‌ನಲ್ಲೇ ತನ್ನ ಭಾವನೆಯನ್ನು ಅರ್ಥ ಮಾಡಿಸುತ್ತಾನೆ. ಆ ನಟನೆಯನ್ನೇ ಎಲ್ಲರು ಮೆಚ್ಚಿಕೊಂಡಿದ್ದಾರೆ. ವೆಂಕಿಯ ಕಾಮಿಡಿ, ಎಲ್ಲರನ್ನು ಅರ್ಥ ಮಾಡಿಕೊಳ್ಳುವ ಗುಣಕ್ಕೆ ಎಲ್ಲರೂ ಚಪ್ಪಾಳೆ ತಟ್ಟಿದ್ದಾರೆ. ಹಾಗೇ ವೆಂಕಿಯ ನಟನೆಗೂ ಶಬ್ಬಾಶ್ ಎಂದಿದ್ದಾರೆ. ಬೆಂಕಿ, ಹಾರ್ಟ್, ಲವ್ಲಿ ಹೀಗೆ ಪಾಸಿಟಿವ್ ಕಮೆಂಟ್‌ಗಳನ್ನೇ ಹಾಕಿದ್ದಾರೆ.


Click it and Unblock the Notifications











