Lakshminivasa: ಗೌಡ್ರಿಗೆ ಪೂರ್ವಿ ಪ್ರಪೋಸ್, ರೊಚ್ಚಿಗೆದ್ದ ದಿಶಾ, ಕಮೆಂಟ್ ಬಾಕ್ಸ್ ಚಿಂದಿ!

By ಎಸ್ ಸುಮಂತ್

ಒಂದೇ ಧಾರಾವಾಹಿಯಲ್ಲಿ ನಟಿಸಿದ ಕಲಾವಿದರು ಆತ್ಮೀಯರಾಗುವುದು ಸಾಮಾನ್ಯ. ಬೆಸ್ಟ್ ಫ್ರೆಂಡ್ಸ್ ಕೂಡ ಆಗಿ ಬಿಡುತ್ತಾರೆ. ಈಗಾಗಲೇ ಹಲವು ಧಾರಾವಾಹಿಗಳಲ್ಲಿ ಆ ಆತ್ಮೀಯತೆಯನ್ನು ನೋಡಿದ್ದೇವೆ.

ಧಾರಾವಾಹಿ ಮುಗಿದ ಮೇಲೆ ಟ್ರಿಪ್ ಹೋಗೋದು, ಗೆಟ್ ಟುಗೆದರ್ ಪಾರ್ಟಿಗಳನ್ನು ಮಾಡುವುದು ಎಲ್ಲವನ್ನು ನೋಡಿದ್ದೇವೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಒಬ್ಬರಿಗೊಬ್ಬರು ಕಾಲು ಕೂಡ ಎಳೆದಾಡಿಕೊಳ್ಳುತ್ತಾರೆ. ಅಷ್ಟು ಬಾಂಡಿಂಗ್ ಬೆಳೆದಿರುತ್ತೆ ಕಲಾವಿದರ ನಡುವೆ.

zee kannada serial Lakshmi nivasa Written Update on july 24th episode

ಹೀಗ್ಯಾಕೆ ಈ ಟಾಪಿಕ್ ಅಂತ ನಿಮಗೆ ಅನ್ನಿಸಬಹುದು. ಅಥವಾ ಟೈಟಲ್ ನೋಡಿಯೇ ಕೊಂಚ ಅರ್ಥವೂ ಆಗಿರಬಹುದು. ಹೌದು ಲಕ್ಷ್ಮೀ ನಿವಾಸ ಧಾರಾವಾಹಿಯ ಪೂರ್ವಿ, ಸಿದ್ದೇಗೌಡ್ರು ಹಾಗೂ ಭಾವನಾ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಮಾತುಕತೆ ನಡೆದಿದೆ. ಯಾಕೆ ಈ ಮಾತುಕತೆ ಶುರುವಾಗಿದ್ದು ಎಂಬುದನ್ನು ನೋಡಲು ಮುಂದೆ ಓದಿ.

ಸಿದ್ದೇಗೌಡ್ರಿಗೆ ಸರ್ಪೈಸ್ ಕೊಟ್ಟ ಪೂರ್ವಿ

ಪೂರ್ವಿ ಬದಲಾಗಿದ್ದಾಳೆ. ಸಿದ್ದೇಗೌಡ್ರು ಓದಿಲ್ಲ ಎಂಬ ಕಾರಣಕ್ಕೆ ಇಷ್ಟಪಡದೆ ಮದುವೆ ಕ್ಯಾನ್ಸಲ್ ಮಾಡಿಕೊಳ್ಳುವುದಕ್ಕೆ ರೆಡಿಯಾಗಿದ್ದ ಪೂರ್ವಿ ಇದೀಗ, ಗೌಡ್ರ ಒಳ್ಳೆ ಗುಣಕ್ಕೆ ಮನಸೋತಿದ್ದಾಳೆ. ಸರ್ಪೈಸ್ ಪಾರ್ಟಿ ಅರೆಂಜ್ ಮಾಡಿ, ಪ್ರಪೋಸ್ ಮಾಡಿದ್ದಾಳೆ. ಗೌಡ್ರು ಇದನ್ನ ನಿರೀಕ್ಷೆಯೇ‌ ಮಾಡಿರಲಿಲ್ಲ. ಪೂರ್ವಿಯ ಸರ್ಪೈಸ್‌ಗೆ ಶಾಕ್ ಆಗಿದ್ದಾರೆ.

ಪ್ರೋಮೋಗೆ ದಿಶಾ ಕಮೆಂಟ್

ಪೂರ್ವಿ ಸಖತ್ ಅರೆಂಜ್ಮೆಂಟ್ ಮಾಡಿಸಿ, ಸರ್ಪೈಸ್ ಕೊಟ್ಟಂತ ಪ್ರೋಮೋವನ್ನು ಜೀ ಕನ್ನಡ ತನ್ನ ಅಧಿಕೃತ ಪೇಜ್‌ನಲ್ಲಿ ಹಂಚಿಕೊಂಡಿದೆ. ಆ ಪ್ರೋಮೋಗೆ ದಿಶಾ‌ ಮದನ್ ಕಮೆಂಟ್ ಹಾಕಿದ್ದಾರೆ. ಹಲೋ..ಹಲೋ.. ಏನಿದು ಎಂದು ಪ್ರಶ್ನೆ ಮಾಡಿದ್ದಾರೆ. ಪೂರ್ವಿ ಮದುವೆ ಬೇಡ ಅಂತೇಳಿ ಈಗ ದಿಢೀರನೇ ಪ್ರಪೋಸ್ ಮಾಡಿದ ವಿಡಿಯೋ ಇದಾಗಿದೆ. ಇದನ್ನ ನೋಡಿದ ಭಾವನಾ ಪಾಪ ಫುಲ್ ಶಾಕ್ ಆಗಿದ್ದಾರೆ. ಅದಕ್ಕೆ ಸೋಷಿಯಲ್ ಮೀಡಿಯಾದಲ್ಲಿಯೇ ಪ್ರಶ್ನೆ ಮಾಡಿದ್ದಾರೆ.

zee kannada serial Lakshmi nivasa Written Update on july 24th episode

ನೆಟ್ಟಿಗರೆಲ್ಲ ಭಾವನಾ ಪರ ಶುರು

ಭಾವನಾ ಈ ಪ್ರಶ್ನೆ ಕೇಳುತ್ತಿದ್ದಂತೆ ನೆಟ್ಟಿಗರೆಲ್ಲ ಭಾವನಾ ಪರವಾಗಿ ನಿಂತಿದ್ದಾರೆ. 'ಲವ್ ಆಗಿದೆ ಅಂತೆ ಅಕ್ಕ. ಮತ್ತೇ ಈಗ ನಿಮ್ಮ ಕಥೆ ಏನು. ನೋಡಿ‌ ನಿಮ್ಗೆ ಆಗುತ್ತಿರುವ ಅನ್ಯಾಯ ಇದು, ಅಲ್ಲ ಮೇಡಮ್ಮೋರೇ ನೀವೆ ಅವರಿಬ್ಬರನ್ನ ಸುತ್ತಾಡಿ ಅಂತ ಕಳಿಸ್ತೀರಾ. ಈಗ ಇಲ್ಲಿ ಬಂದು ಏನಿದೆಲ್ಲ ಅಂತ ಪ್ರಶ್ನೆ ಮಾಡ್ತೀರಾ. ಎಲ್ಲಾ‌ ನೀವೇ ಹೇಳ್ಬೇಕು ಮೇಡಮ್ಮೋರೆ. ನಿಮ್ಗೆ ನಮ್ಮ ಗೌಡ್ರ ಮೇಲೆ ಲವ್ ಆಗೋದು ಯಾವಾಗ' ಅಂತೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ.

'ನಾನು ನಿಮ್ಮೋನು ನೀವೂ ನಮ್ಮೋರು'

ಇನ್ನು ಅದೇ ಕಮೆಂಟ್‌ಗೆ ಸಿದ್ದೇಗೌಡ್ರು ಕೂಡ ಉತ್ತರ ನೀಡಿದ್ದಾರೆ. 'ಮೇಡೋಮ್ಮೋರೆ ನಂಗು ಅದೇ ಗೊತ್ತಾಗಿಲ್ಲ. ಏನು ಹೇಳ್ಬೇಕು ಅಂತಾನು ತಿಳಿತಿಲ್ಲ. ಆದ್ರೂ ನೀವೇನು ಟೆನ್ಶನ್ ಮಾಡ್ಕೋಬೇಡಿ. ನಾನು ನಿಮ್ಮೋನೆ ನೀವೂ ನಮ್ಮೋರೆ. ನಮ್ಮ ಭಾವನಾ ಅವರಿಗೆ ಈ ಸಿದ್ದೇಗೌಡ್ರು ಮೋಸ ಮಾಡೋದಾ ಹೇಳಿ..?' ಎಂದು ಭಾವನಾ ಮೇಡಂಗೆ ಸಿದ್ದೇಗೌಡ್ರು ಸಮಾಧಾನ ಮಾಡಿದ್ದಾರೆ. ಹೀರೋ-ಹೀರೋಹಿನ್ ಮಾತುಕತೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಕಲಾವಿದರ ನಡುವಿನ ಬಾಂಧವ್ಯ ಹೀಗಿರಬೇಕು ಅಂತಾನೇ ಮಾತನಾಡಿಕೊಂಡಿದ್ದಾರೆ. ಶಬ್ಬಾಶ್ ಹೇಳಿದ್ದಾರೆ.

More from Filmibeat

English summary
zee kannada serial Lakshmi nivasa today episode. Here is the details about Super conversation between Siddegowda and Bhavana on social media
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X