Lakshminivasa: ಲಕ್ಷ್ಮೀ, ನರಸಿಂಹ, ‌ಜಯಂತ್ ಒಂದೇ ಕಡೆ; 3 ಫ್ಯಾಮಿಲಿ ಬಗ್ಗೆ ವೀಕ್ಷಕರ ಪ್ರಶ್ನೆ ಒಂದೊಂದಲ್ಲ!

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮೂರು ಸಂಬಂಧಗಳು ಅಲ್ಲಲ್ಲಿಯೇ ಗಿರಕಿ ಹೊಡೆಯುತ್ತಿವೆ. ಲಕ್ಷ್ಮೀ ಮದುವೆಯಾಗಿ ಬಂದಾಗಿನಿಂದ ತನ್ನ ತವರು ಮನೆಯವರು ಯಾರು..? ಯಾವೂರು ಅಂತ ಏನನ್ನು ಮಕ್ಕಳಿಗೆ ಹೇಳಿಲ್ಲ. ಪ್ರೀತಿಸಿ ಮದುವೆಯಾಗಿದ್ದೆ ಮಹಾಪರಾಧ ಎಂಬಂತೆ ನರಸಿಂಹ ನಡೆದುಕೊಂಡ. ಲಕ್ಷ್ಮೀ ಮದುವೆಯಾಗಿದ್ದನ್ನು ಕಂಡು ಅನಾರೋಗ್ಯಕ್ಕೆ ಈಡಾಗಿದ್ದು, ಇನ್ನು ಚೇತರಿಸಿಕೊಂಡಿಲ್ಲ.

ಹೀಗಾಗಿಯೇ ನರಸಿಂಹ ಈಗಲೂ ಲಕ್ಷ್ಮೀಯನ್ನು ಕ್ಷಮಿಸಿಲ್ಲ. ತಂಗಿ ಎಂದು ಒಪ್ಪಿಕೊಂಡಿಲ್ಲ, ಮನೆಗೆ ಕರೆಯಲ್ಲ. ಯಾವಾಗಲೇ ಎದುರಿಗೆ ಸಿಕ್ಕರೂ ಮನೆ ಕಟ್ಟಿದ್ರಾ ಅಂತ ವ್ಯಂಗ್ಯ ಮಾಡುತ್ತಲೇ ಇರುತ್ತಾನೆ. ಕೆಲಸವನ್ನು ಕಳೆದುಕೊಂಡು ಮನೆ ನಡೆಸಲು ಕಷ್ಟಪಡುತ್ತಿರುವ ಶ್ರೀನಿವಾಸ ಏನು ಮಾತನಾಡದೆ ಸುಮ್ಮನೆ ಇರುವಂತೆಯೇ ಆಗಿದೆ.

zee kannada serial Lakshmi nivasa Written Update on july 25th episode
ನರಸಿಂಹನ ಆಸ್ತಿ ವಿಚಾರ ಇತ್ಯರ್ಥ

ನರಸಿಂಹ ಜನರಿಗೆ ಅನುಕೂಲವಾಗಲೆಂದು ಫ್ಯಾಕ್ಟರಿ ಕಟ್ಟಲು ನೂರು ಎಕರೆ ಜಮೀನನ್ನು ಮಾರಾಟ ಮಾಡುತ್ತಿದ್ದಾನೆ. ಆದರೆ ಈ ಆಸ್ತಿಗೆ ಲಕ್ಷ್ಮೀಯ ಸಹಿ ಕೂಡ ಬೇಕಾಗಿದೆ. ಆಸ್ತಿಯನ್ನ ಜಯಂತ್‌ಗೆ ಮಾರಾಟ ಮಾಡುತ್ತಿದ್ದಾನೆ. ಇವತ್ತು ಒಂದು ಕುತೂಹಲಕಾರಿ ಘಟ್ಟವಾಗಿದೆ. ಯಾರ್ಯಾರು ಯಾರನ್ನ ಭೇಟಿ ಮಾಡಬಾರದು ಎಂದುಕೊಂಡಿದ್ದರೋ ಅವರೆಲ್ಲ ಒಟ್ಟಿಗೆ ಒಂದೇ ಜಾಗದಲ್ಲಿ ಸೇರಿದ್ದಾರೆ. ವಿಶ್ವನಿಗೆ ಇಂದು ಜಾನು ಬಂದೇ ಬರುತ್ತಾಳೆ ಎಂಬುದು ಗೊತ್ತಿತ್ತು. ನಾನು ಹೋದರೆ ಅವಳಿಗೆ ಎದುರಾಗಬೇಕಾಗುತ್ತದೆ ಎಂಬುದು ಅರ್ಥವಾಗಿತ್ತು. ಆದರೂ ವಿಧಿ ಇಲ್ಲದೆ ಹೊರಟಿದ್ದ.


ರಿಜಿಸ್ಟರ್ ಆಫೀಸಲ್ಲಿ ಎಲ್ಲರೂ ಭೇಟಿ

ಎಲ್ಲಾ ಪ್ರೊಸಿಜರ್ ಮುಗಿದಿದೆ. ಈಗ ಯಾರ ತಾಪತ್ರಯವೂ ಇಲ್ಲ. ಲಕ್ಷ್ಮೀ ಕೂಡ ಸಹಿ ಹಾಕಿ ಆಗಿದೆ. ಈಗ ಉಳಿದಿರುವುದು ರಿಜಿಸ್ಟರ್ ಮಾಡಿಸಿಕೊಡಬೇಕು ಅಷ್ಟೇ. ಹೀಗಾಗಿ ಎಲ್ಲರೂ ರಿಜಿಸ್ಟರ್ ಆಫೀಸಿಗೆ ಬಂದಿದ್ದಾರೆ. ಆಸ್ತಿಯನ್ನು ಜಾಹ್ನವಿ ಹೆಸರಿಗೆ ಮಾಡಿಸಲು ಜಯಂತ್ ತೀರ್ಮಾನ ಮಾಡಿದ್ದಾನೆ. ಪ್ರಾಜೆಕ್ಟ್ ಕುಇಡ ಅವಳ ಹೆಸರಲ್ಲಿಯೇ ಮಾಡುತ್ತಿರುವ ಕಾರಣ, ರಿಜಿಸ್ಟರ್ ಆಫೀಸಿಗೆ ಜಾಹ್ನವಿಯನ್ನು ಕರೆದುಕೊಂಡು ಬಂದಿದ್ದಾನೆ. ಜಾಹ್ನವಿ-ಜಯಂತ್, ಲಕ್ಷ್ಮೀ, ವಿಶ್ವ-ನರಸಿಂಹ-ಲಲಿತಾ ಈ ಮೂರಿ ಕುಟುಂಬದವರು ಕೂಡ ಬಂದಿದ್ದಾರೆ.


ಲಲಿತಾಗೆ ಎಚ್ಚರಿಕೆ ಕೊಟ್ಟ ನರಸಿಂಹ

ನರಸಿಂಹನಿಗೆ ಯಾವುದೇ ಕಾರಣಕ್ಕೂ ಲಕ್ಷ್ಮೀಯನ್ನು ನೋಡುವ ಆಸೆ ಇಲ್ಲ. ಆದರೆ ಒಳ್ಳೆ ಕೆಲಸಕ್ಕೆ ಜಯಂತ್ ಜಮೀನು ತೆಗೆದುಕೊಳ್ಳುತ್ತಿದ್ದಾನೆ. ಹೀಗಾಗಿ ಸಹಿಗೋಸ್ಕರ ಮಾತ್ರ ಅವಳನ್ನು ಭೇಟಿ ಮಾಡಲು ಹೇಳಿದ್ದಾನೆ ನರಸಿಂಹ. ಲಲಿತಾಗೆ ಅವಳನ್ನು ಕಂಡರೆ ಸಾಫ್ಟ್ ಕಾರ್ನರ್ ಎಂಬುದು ನರಸಿಂಹನಿಗೆ ಗೊತ್ತು. ಅದಕ್ಕೆ ಈಗ ರಿಜಿಸ್ಟರ್ ಆಫೀಸಲ್ಲಿ ಎಚ್ಚರಿಕೆಯನ್ನು ನೀಡಿದ್ದಾನೆ. ಇಲ್ಲಿ ನಾವೂ ಬಂದ್ವಾ ಹೋದ್ವಾ ಅಂತಷ್ಟೇ ಇರಬೇಕು. ಹೆಚ್ಚು ಮಾತನಾಡುವಂತೆ ಇಲ್ಲ ಎಂದಿದ್ದಾನೆ. ಲಲಿತಾ ಕೂಡ ಆಯ್ತು ಎಂದು ಸುಮ್ಮನೆ ಆಗಿದ್ದಾನೆ.

zee kannada serial Lakshmi nivasa Written Update on july 25th episode
ಜಯಂತ್‌ಗೆ ತಿಳಿಯುತ್ತಾ ಸತ್ಯ..?

ಇಲ್ಲಿ ಮೂರು ಸಂಸಾರಗಳು ಇರುವುದರಿಂದ ನೋಡುಗರಿಗೆ ಸಿಕ್ಕಾಪಟ್ಟೆ ಕುತೂಹಲ ಉಂಟಾಗಿದೆ. ಯಾಕಂದ್ರೆ ಜಯಂತ್, ಲಕ್ಷ್ಮೀ ಅಳಿಯ ಎಂಬುದು ನರಸಿಂಹನಿಗೆ ಗೊತ್ತಿಲ್ಲ. ಇದು ಗೊತ್ತಾದರೆ ಖಂಡಿತ ಈ ಆಸ್ತಿಯನ್ನ ಅವನಿಗೆ ಮಾರದೆ ಇದ್ದು ಬಿಡುವ ನಿರ್ಧಾರಕ್ಕೆ ಬಂದು ಬಿಡುತ್ತಾನೆ. ಈಗ ಎಲ್ಲರೂ ಒಂದೇ ಕಡೆ ಬಂದಿದ್ದಾರೆ. ಒಬ್ಬರಿಗೊಬ್ಬರು ಮುಖ ನೋಡುತ್ತಾರಾ ಎಂಬ ಕುತೂಹಲ. ನೋಡಿದರೆ ಸಖತ್ ಟ್ವಿಸ್ಟ್. ಆದರೆ ಆ ಟ್ವಿಸ್ಟ್ ಗಾಗಿ ಕಾದವರಿಗೆ ಇಂದು ನಿರಾಸೆಯಾಗಿದೆ. ಆರಾಮವಾಗಿ ರಿಜಿಸ್ಟರ್ ಆಗಿ ಹೋಗ್ಬಿಟ್ಟಿದೆ.

More from Filmibeat

English summary
zee kannada serial Lakshmi nivasa Written Update on July 25th episode
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X