Lakshminivasa: ಜಾನು ಜೊತೆ ಲಕ್ಷ್ಮೀ; ಎಲ್ರೂ ಭೇಟಿ ಆಗ್ತಾರಾ ಅಥವಾ ಕಾರಣಗಳು ಸಿಕ್ತಾವಾ?

By ಎಸ್ ಸುಮಂತ್

ನರಸಿಂಹನ ಆಸ್ತಿಯನ್ನ ಜಯಂತ್ ತೆಗೆದುಕೊಂಡಿದ್ದಾನೆ. ಆದರೆ ಜಯಂತ್, ಲಕ್ಷ್ಮೀ ಅಳಿಯ ಎಂಬುದು ನರಸಿಂಹನಿಗೆ ಗೊತ್ತೇ ಇಲ್ಲ. ಗೊತ್ತಾಗಿದ್ದರೆ ಖಂಡಿತ ಆ ಆಸ್ತಿಯನ್ನು ಜಯಂತ್‌ಗೆ ಕೊಡುವುದಕ್ಕೆ ನರಸಿಂಹ ಒಪ್ಪುತ್ತಿರಲಿಲ್ಲ.

ತಂಗಿಯ ನೆರಳು ತನ್ನ ಮನೆ ಮೇಲೆ ಬೀಳಬಾರದು ಎಂದು ತೀರ್ಮಾನಿಸಿದ್ದಾನೆ ನರಸಿಂಹ. ಮನೆಯವರು ಮಾತನಾಡಿಸುವುಕ್ಕೆ ಹೋದಾಗಲೂ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ.

Zee kannada serial Lakshmi nivasa Written Update on july 26th episode

ಲಕ್ಷ್ಮೀ ಮನೆಯಲ್ಲಿ ಬಡತನವಿದೆ. ಆಸೆಗಳು ಹೆಚ್ಚಿದೆ, ಕನಸುಗಳು ದೊಡ್ಡದಿದೆ. ಆದರೂ ತವರು ಮನೆಯ ಆಸ್ತಿಗೆ ಸ್ವಲ್ಪವೂ ಆಸೆ ಪಡಲಿಲ್ಲ‌ ಸಹಿ ಮಾಡು ಎಂದಾಕ್ಷಣ ಸಹಿ ಮಾಡಿದಳು‌. ಇದು ಅಣ್ಣನಿಗೆ ಅರ್ಥವಾಗದೆ ಇದ್ದರೂ, ಅತ್ತಿಗೆಗೆ ಅರ್ಥವಾಗಿತ್ತು. ಲಕ್ಷ್ಮೀ ಮೇಲೆ ಅಪಾರ ಗೌರವ ಬಂದಿತ್ತು. ಉಡುಗೊರೆಯಾಗಿ ಏನನ್ನೋ ಕೊಡುವುದಕ್ಕೆ ಹೋದಾಗಲೂ ಅದನ್ನು ಸ್ವೀಕರಿಸಲಿಲ್ಲ.

ಅಳಿಯನ ಕಣ್ತಪ್ಪಿಸಲು ಹೊರಟ ಲಕ್ಷ್ಮೀ

ರಿಜಿಸ್ಟರ್ ಆಫೀಸಿಗೆ ಬಂದ ಲಕ್ಷ್ಮೀ ಮೊದಲು ಹೇಳಿದ ಪೇಪರ್ ಮೇಲೆ ಸಹಿ ಹಾಕಿದಳು. ಅತ್ತಿಗೆ ಜೊತೆಗೆ ಸ್ವಲ್ಪ ಸಮಯ ಮಾತಾಡಿ, ದೇವಸ್ಥಾನಕ್ಕೆ‌ ಹೋಗುತ್ತೇನೆಂದು ಸುಳ್ಳು ಹೇಳಿ ಬಂದಿದ್ದರಿಂದ ಅಲ್ಲಿಂದ ಬೇಗ ಹೊರಟಳು. ಎದುರು ಅಣ್ಣ ನರಸಿಂಹ ಸಿಕ್ಕಿದ್ದ. ಆದರೆ ಮುಖ ಕೊಟ್ಟು ಮಾತನಾಡಲಿಲ್ಲ. ಅಲ್ಲಿಯೇ ನಿಂತರೆ ಜಾನು ಮತ್ತು ಜಯಂತ್ ನೋಡಿ ಬಿಡಬಹುದು ಎಂದು ಬೇಗನೆ ಅಲ್ಲಿಂದ ಹೊರಟಳು.

ಜಾನು ಕಣ್ಣಿಗೆ ಕಂಡೇ ಬಿಟ್ಟಳು ಲಕ್ಷ್ಮೀ

ತಲೆ‌ ಮೇಲೆ ಸೆರಗು ಹಾಕಿಕೊಂಡು ಹೋದರು ಲಕ್ಷ್ಮೀಯನ್ನು ಜಾನು ನೋಡಿದ್ದಾಳೆ. ಅಮ್ಮನ ಜೊತೆಗೆ ಹರಟೆ ಹೊಡೆಯುತ್ತಾ, ಟೀ ಸವಿಯುತ್ತಾ ಇಬ್ಬರು ನಿಂತಿದ್ದರು. ಲಕ್ಷ್ಮೀ ಏನೋ ಒಂದು ಕಾರಣ ನೀಡಿ ಜಾಹ್ನವಿಗೆ ಒಪ್ಪಿಸಿದ್ದಾಳೆ. ಜಾನು ಯಾವ ವಿಚಾರವನ್ನು ಹೆಚ್ಚು ಕೆದಕುವುದಕ್ಕೆ ಹೋಗಲ್ಲ. ಹೇಳಿದ ಮೇಲೆ ಹೌದಾ ಓಕೆ ಅಂತ ಒಪ್ಪಿಕೊಂಡು ಬಿಡುತ್ತಾಳೆ. ಈಗ ಲಕ್ಷ್ಮೀ ವಿಚಾರಕ್ಕೂ ಹಾಗೇ ಸುಮ್ಮನೆ ಆಗಿದ್ದಾಳೆ.

Zee kannada serial Lakshmi nivasa Written Update on july 26th episode

ಎಲ್ಲರೂ ಕಾರಿನತ್ತ ಹೆಜ್ಜೆ ಹಾಕಿದ್ರು

ಜಾಹ್ನವಿ ಹೆಸರಲ್ಲಿ ರಿಜಿಸ್ಟರ್ ಮಾಡಿಸುತ್ತೀನಿ ಎಂದು ಬಂದವನು ಜಯಂತ್. ಆದರೆ ಕಡೆಗೆ ಕಂಪನಿ ಹೆಸರಲ್ಲಿ ರಿಜಿಸ್ಟರ್ ಆಗಿದೆ. ಇದು ನರಸಿಂಹ ಹಾಗೂ ಲಲಿತಾಗೂ ಪ್ರಶ್ನೆಯಾಗಿತ್ತು. ಅದನ್ನೇ ಜಯಂತ್ ಬಳಿ ಕೇಳಿದಾಗ ಕಡೆ ಗಳಿಗೆಯಲ್ಲಿ ನನ್ನ ಹೆಂಡತಿ ಒಪ್ಪಲಿಲ್ಲ. ಇದನ್ನೆಲ್ಲ ನೀವೆ ಅವಳ ಬಳಿ ಕೇಳಿವ್ರಂತೆ, ಕಾರಲ್ಲಿ ಕೂತಿದ್ದಾಳೆ ಬನ್ನಿ ಎಂದು ಕರೆದುಕೊಂಡು ಹೊರಟಿದ್ದಾನೆ. ಆಯ್ತು ನಡೀರಿ ನಿಮ್ಮ ಪತ್ನಿಯನ್ನು ಮಾತನಾಡಿಸಿದಂತೆ ಆಗುತ್ತದೆ ಎಂದು ನರಸಿಂಹ, ಲಲಿತಾ, ವಿಶ್ವ ಜೊತೆಗೆ ಹೊರಟಿದ್ದಾರೆ.

ವೀಕ್ಷಕರಿಗೆ ಭಾರೀ ಕಾತುರ

ಜಾಹ್ನವಿಯನ್ನು ಭೇಟಿ ಮಾಡುವುದಕ್ಕೆ ಲಲಿತಾಗೆ ಸಮಯವೇ ಕೂಡಿ ಬರುತ್ತಿಲ್ಲ. ಕಳೆದ ಬಾರಿ ಲಕ್ಷ್ಮೀ ಮನೆಗೆ ಹೋಗಿ ಬರುವಾಗಲೂ ಜಯಂತ್ ಗೆ ಅಡ್ಡ ಸಿಕ್ಕಿದ್ದಳು ಲಲಿತಾ. ಆಗಲೂ ಭೇಟಿ ಮಾಡಲು ಹೋದಾಗ ಇನ್ಯಾವುದೋ ಕರೆ ಬಂತು. ಈಗ ಲಕ್ಷ್ಮೀ ಹಾಗೂ ಜಾಹ್ನವಿ ಇಬ್ಬರು ಒಟ್ಟಿಗೆ ನಿಂತಿದ್ದಾರೆ. ಆ ಜಾಗಕ್ಕೆ ಹೋದರೆ ಸತ್ಯವೆಲ್ಲಾ ಹೊರಗೆ ಬರಲಿದೆ. ಆದರೆ ಆ ರೀತಿ ಆಗುವುದಕ್ಕೆ ಡೈರೆಕ್ಟರ್ ಬಿಡ್ತಾರಾ. ಈಗಲೇ ಆ ಸಂದರ್ಭವನ್ನು ಸೃಷ್ಟಿ ಮಾಡಲ್ಲ ಬಿಡಿ ಎಂದು ಹಲವರು ಬೇಸರ ಮಾಡಿಕೊಂಡಿದ್ದಾರೆ. ಇನ್ನು ಒಬ್ಬರು, ಅದೇಗೆ ಏಕಾಏಕಿ ಖಾತೆ ಕಂಪನಿ ಹೆಸರಿಗೆ ಆಯ್ತು. ಡಾಕ್ಯುಮೆಂಟ್ ಎಲ್ಲಾ‌ ಜಾಹ್ನವಿ ಹೆಸರಲ್ಲಿ ರೆಡಿ ಆಗಿತ್ತು ಅಲ್ವಾ ಅಂತ ಪ್ರಶ್ನೆ ಮಾಡಿದ್ದಾರೆ.

More from Filmibeat

English summary
Lakshmi nivasa kannada serial today episode. Here is the details about Will everyone meet at the register office?
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X