Lakshminivasa: ಭಾವನಾಗೆ ತಾಳಿ ಕಟ್ಟಿದವ ವೆಂಕಿ ಮುಂದೆ ಬಂದೇಬಿಟ್ಟನಾ?

By ಎಸ್ ಸುಮಂತ್

ಭಾವನಾ ಜಾತಕದಲ್ಲಿ ದೋಷ ಇದೆ ಎಂದು ಸಾಕಷ್ಟು ಜನ ಮದುವೆಯಾಗುವುದಕ್ಕೆ ಹಿಂದೇಟು ಹಾಕುತ್ತಿದ್ದರು. ಹುಡುಗಿ ಓಕೆಯಾದರೂ ಜಾತಕದ ವಿಚಾರಕ್ಕೆ ಮದುವೆ ಕ್ಯಾನ್ಸಲ್ ಆಗುತ್ತಿತ್ತು.

ಮನೆಯಲ್ಲಿ ಇರುವ ಎಲ್ಲರಿಗೂ ಮದುವೆ ಆಗಿತ್ತು. ಈ ಕೊರಗು ಲಕ್ಷ್ಮೀ ಹಾಗೂ ಶ್ರೀನಿವಾಸನಿಗೆ ಹೆಚ್ಚು ಕಾಡುತ್ತಿದೆ. ಗಂಡು ಹುಡುಕುವ ಕಾರ್ಯವನ್ನು ಮಾತ್ರ ನಿಲ್ಲಿಸಿಲ್ಲ. ಆದರೆ ಈಗ ವಿಚಾರ ಲಕ್ಷ್ಮೀಗೂ ತಿಳಿದಿದೆ. ಹೀಗಾಗಿ ಮಗಳ ಪರವಾಗಿ ನಿಂತಿದ್ದಾಳೆ.

Zee kannada serial Lakshmi nivasa Written Update on july 29th episode

ಭಾವನಾ ತಾಳಿ ವಿಚಾರವನ್ನು ಮನೆಯಲ್ಲಿ ಯಾರಿಗೂ ಹೇಳಲಾಗದೆ ಸಂಕಟ ಪಡುತ್ತಿದ್ದಾಳೆ. ದೇವಸ್ಥಾನದಲ್ಲಿಯೇ ಲಕ್ಷ್ಮೀಗೂ ವಿಚಾರ ಗೊತ್ತಾಗಿದೆ. ಅದೇ ರೀತಿ ದೇವಸ್ಥಾನದಲ್ಲಿಯೇ ಭಾವನಾ ತಾಳಿ ವಿಚಾರ ವೆಂಕಿಗೂ ಗೊತ್ತಾಗಿದೆ. ಈಗ ತಾಯಿಯ ತಾಳಿ ಕಟ್ಟಿರೋದು ಯಾರು ಅನ್ನೋದು ವೆಂಕಿಗೆ ತಿಳಿಯುವ ಸಮಯ ಬಂದಿದೆ.

ತಲೆ ಸುತ್ತಿ ಬೀಳುತ್ತಿದ್ದ ಚೆಲ್ವಿ ತಾಯಿ

ಚೆಲ್ವಿ ತಾಯಿ ದೇವಸ್ಥಾನದಲ್ಲಿ ಹೂ ಮಾರುತ್ತಾರೆ. ಕಣ್ಣು ಕಾಣಿಸುವುದಿಲ್ಲ. ಸ್ಪರ್ಶದಲ್ಲಿಯೇ ಯಾರೆಂಬುದನ್ನು ನೆನಪಿಟ್ಟಿಲುಕೊಳ್ಳುತ್ತಾಳೆ. ಕಣ್ಣು ಇಲ್ಲವಾದರೂ ಧ್ವನಿಯಲ್ಲಿಯೇ ಕಂಡು ಹಿಡಿದು ಬಿಡುತ್ತಾಳೆ. ದೇವಸ್ಥಾನಕ್ಕೆ ಹೂ ತೆಗೆದುಕೊಂಡು ಹೋಗುವಾಗ ಕಾಲು ಜಾರಿ ಬಿದ್ದಿದ್ದಾರೆ. ಸಿದ್ದೇಗೌಡ್ರು ಕೂಡ ದೇವಸ್ಥಾನಕ್ಕೆ ಬಂದಿದ್ದರಿಂದ ತಕ್ಷಣ ಚೆಲ್ವಿ ಅಮ್ಮನನ್ನು ಕಾಪಾಡಿದ್ದಾನೆ. ಕೈ ಹಿಡಿದು, ಮೇಲಕ್ಕೆ ಎತ್ತಿ ಕೂರಿಸಿದ್ದಾನೆ.

ಚೆಲ್ವಿ ತಾಯಿಗೆ ಮತ್ತೆ ಆತನ ಸ್ಪರ್ಶ

ಊರಿನ ಉತ್ಸವಕ್ಕೆ ಚೆಲ್ವಿ ಹಾಗೂ ಆಕೆಯ ಕಣ್ಣಿಲ್ಲದ ತಾಯಿ‌ಕೂಡ ಹೋಗಿದ್ದರು. ಎಲ್ಲರೂ ಒಂದೇ‌ಕಡೆ ಮಲಗಿದ್ದರು. ಸಿದ್ದೇಗೌಡ್ರಿಗೆ ಅಂದು ತಾನೆಲ್ಲಿ ಭಾವನಾಳನ್ನು‌ ಮಿಸ್ ಮಾಡಿಕೊಳ್ಳುತ್ತೀನೋ ಎಂಬ ಆತಂಕ ಕಾಡಿತ್ತು. ಅದಕ್ಕಾಗಿಯೇ ಎಲ್ಲರೂ ಮಲಗಿದ್ದಾಗಲೇ ದೇವಿಯ ಕುತ್ತಿಗೆಯಲ್ಲಿದ್ದ ತಾಳಿಯನ್ನು ತೆಗೆದು, ಭಾವನಾಳಿಗೂ ಗೊತ್ತಾಗದಂತೆ ತಾಳಿ ಕಟ್ಟಿದ್ದ. ಆ ಭಯದಲ್ಲಿ ಓಡಿ ಹೋಗುವಾಗ ಚೆಲ್ವಿಯ ತಾಯಿಗೆ ಸಿದ್ದೇಗೌಡ್ರ ಕಾಲು ತಾಗಿತ್ತು. ಸಿದ್ದೇಗೌಡ್ರ ಕೈ ಹಿಡಿದುಕೊಂಡಳು. ಹಾಗೋ ಹೀಗೋ ಸಿದ್ದೇಗೌಡ್ರು ಕೈ ಬಿಡಿಸಿಕೊಂಡು ಓಡಿ ಹೋಗಿದ್ದರು. ಆದರೆ ಆ ಸ್ಪರ್ಶ ಚೆಲ್ವಿ ತಾಯಿಗೆ ಚೆನ್ನಾಗಿಯೇ ನೆನಪಿತ್ತು. ಈಗ ಸಿದ್ದೇಗೌಡ್ರ ಕೈ ಹಿಡಿದಿದ್ದು ಮತ್ತೆ ನೆನಪಾಗಿದೆ.

Zee kannada serial Lakshmi nivasa Written Update on july 29th episode

ವೆಂಕಿ ಬಳಿ ಹೇಳಿದ ಚೆಲ್ವಿ ತಾಯಿ

ಚೆಲ್ವಿ ತಾಯಿ ಬಿದ್ದಿದ್ದನ್ನು ಕಂಡು ವೆಂಕಿ ಓಡಿ ಬಂದ. ಅಷ್ಟರಲ್ಲಿ ಚೆಲ್ವಿ ತಾಯಿ ಆತ ಯಾರು ಎಂಬ ಆತಂಕದಲ್ಲಿದ್ದಳು. ಈಗಾಗಲೇ ಎರಡನೇ ಬಾರಿ ಆತನ ಸ್ಪರ್ಶವಾಗಿದ್ದು. ವೆಂಕಿ ಬಂದಿಡನೆ ಆತನಿಗೆ ವಿಚಾರವನ್ನು ಹೇಳಿದ್ದಾಳೆ. ನನ್ನನ್ನು ಕಾಪಾಡಿದವರು ಯಾರು ಎಂಬುದನ್ನು ನೋಡಿಕೊಂಡು ಬರುವಂತೆ ತಿಳಿಸಿದ್ದಾಳೆ. ಆತನ ಹಿನ್ನೆಲೆ ತಿಳಿದರೆ ತಾಳಿ ಕದ್ದವನು ಯಾರು ಎಂಬುದು ಅರ್ಥವಾಗುತ್ತದೆ.

ಸಿದ್ದೇಗೌಡ್ರನ್ನು ನೋಡಿ ವೆಂಕಿ ಶಾಕ್

ಚೆಲ್ವಿ ತಾಯಿಗೆ ಕಳ್ಳನ ಸುಳಿವು ಸಿಗುತ್ತಿದೆ. ವೆಂಕಿ ಆತನನ್ನು ಹುಡುಕಿಕೊಂಡು ಬರುವುದಕ್ಕೆ ಹೋಗಿದ್ದಾನೆ. ಸಿದ್ದೇಗೌಡ್ರು ಪೂರ್ವಿಯ ಜೊತೆಗೆ ನಿಂತು ಮಾತನಾಡುತ್ತಿದ್ದರು. ವೆಂಕಿ ಆತನನ್ನು ಕಂಡು ಶಾಕ್ ಆಗಿದ್ದಾನೆ. ಒಂದು ವೇಳೆ ಚೆಲ್ವಿ ತಾಯಿ ತಾಳಿ ಕದ್ದಿರುವವ ಈತನೇ ಎಂದು ಹೇಳಿದರು, ವೆಂಕಿಗೆ ಅಷ್ಟೊಂದು ಅನುಮಾನ ಬರಲ್ಲ.

ವೆಂಕಿಗೆ ಗೊತ್ತಾಗುತ್ತಾ ಸತ್ಯ

ಭಾವನಾಗೆ ತಾಳಿ ಕಟ್ಟಿದವನು ಯಾರು ಎಂಬುದು ಗೊತ್ತಾಗುವುದು ಕಷ್ಟ ಸಾಧ್ಯ. ದೇವರ ತಾಳಿಯನ್ನು ಕದ್ದು ತನ್ನ ಕುತ್ತಿಗೆಗೆ ಕಟ್ಟಿರುವುದು ಆತ ಎಂಬುದು ಭಾವನಾಗೆ ಮಾತ್ರ ಗೊತ್ತು. ದೇವಿಯ ತಾಳಿ ಭಾವನಾ ಕುತ್ತಿಗೆಯಲ್ಲಿರುವುದು ಯಾರಿಗೂ ಗೊತ್ತಿಲ್ಲ.

More from Filmibeat

English summary
Lakshmi nivasa kannada serial episode. Here is the details about Will Venki come to know the truth that Siddegowda himself made the thali..?
Read more about: filmbeat original sumanth tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X