Lakshminivasa: ಪೆಟ್ರೋಲ್ ಆಟೋ ಇಲ್ವಾ? ಆ ಒಂದು ಡೈಲಾಗ್‌ಗೆ 'ಲಕ್ಷ್ಮೀ ನಿವಾಸ' ವೀಕ್ಷಕರ ಗೊಂದಲ..?
ಲಕ್ಷ್ಮೀ ಪ್ರೀತಿಸಿ ಶ್ರೀನಿವಾಸನನ್ನ ಮದುವೆಯಾದಳು. ಅಂದಿನಿಂದ ತವರು ಮನೆಯ ಋಣವನ್ನು ಕಳೆದುಕೊಂಡಳು. ಈಗಲೂ ನರಸಿಂಹ ಎದುರು ಬಂದ್ರೆ ತಂಗಿಯ ಮುಖವನ್ನು ನೋಡದೆ ಹೊರಟೇ ಹೋಗುತ್ತಾನೆ. ಅಷ್ಟು ದ್ವೇಷ ಮಾಡುತ್ತಾನೆ.
ಅಂದು ಪ್ರೀತಿಸಿ ಮದುವೆಯಾಗಿ ಬಂದಾಗಲೂ ಅವನ ಬಳಿ ಏನು ಇಲ್ಲ, ಹೇಗೆ ಬದುಕುತ್ತಾಳೆ ಎಂಬ ಪ್ರಶ್ನೆ ಕೇಳಿದ್ದ. ನಾವೂ ದುಡಿದು ಒಂದೊಳ್ಳೆ ಮನೆ ಕಟ್ಟಿಸುತ್ತೀವಿ ಅಂತಾನು ಹಠ ಮಾಡಿ ಬಂದಿದ್ದಳು ಲಕ್ಷ್ಮೀ. ಆದರೆ ಈಗ ಮಕ್ಕಳ ಮದುವೆಯಾಗಿದೆ. ಆದರೂ ಮನೆ ಕಟ್ಟಿಸಲು ಆಗುತ್ತಿಲ್ಲ.

ಹೀಗಿರುವಾಗಲೇ ಶ್ರೀನಿವಾಸನ ಕೆಲಸವೂ ಹೋಗಿದೆ. ಸ್ನೇಹಿತನನ್ನು ಪ್ರಾಣಾಪಾಯದಿಂದ ಕಾಪಾಡಿದ್ದರ ಪರಿಣಾಮ ಆತ ಓಡಿಸುತ್ತಿದ್ದ ಆಟೋವನ್ನೇ ಓಡಿಸಲು ನೀಡಿದ್ದಾನೆ. ಮನೆಯಲ್ಲಿ ಕೆಲಸ ಕಳೆದುಕೊಂಡ ವಿಚಾರ ಹೇಳಿಲ್ಲ. ಬದಲಿಗೆ ಆಟೋದಲ್ಲಿ ದುಡಿದು ಸಂಬಳವಾಗಿ ನೀಡುತ್ತಿದ್ದಾನೆ. ಈಗ ಲಕ್ಷ್ಮೀ ಕೈಗೆ ಸಿಕ್ಕಿಬೀಳ್ತಾನಾ ನೋಡ್ಬೇಕು.
ಸಿದ್ದೇಗೌಡ್ರ ಮನೆಗೆ ಹೊರಟ ಲಕ್ಷ್ಮೀ
ಭಾವನಾಳ ಸಮಸ್ಯೆಗೆ ಪರಿಹಾರ ಹುಡುಕುವುದಕ್ಕೆ ಲಕ್ಷ್ಮೀ, ಸಿದ್ದೇಗೌಡ್ರಿಗೆ ಹೇಳಿದ್ದಾಳೆ. ಅವನೇ ತಾಳಿ ಕಟ್ಟಿರುವುದು ಎಂದು ಗೊತ್ತಾದರೆ ಅದೇಗೆ ರಿಯಾಕ್ಟ್ ಮಾಡುತ್ತಾಳೋ ಏನೋ? ಜವರೇಗೌಡರು ಬೀಗರಾಗಬೇಕು. ಸಿಂಚನಾಳ ತಂದೆ. ಯಾವತ್ತು ಅವರ ಮನೆಗೆ ಹೋದವಳೇ ಅಲ್ಲ ಲಕ್ಷ್ಮೀ. ಮಗಳ ಮದುವೆಗೆ ಕರೆಯುವುದಕ್ಕೆ ಮಾತ್ರ ಹೋಗಿದ್ದಾಳೆ. ಈಗ ಇದ್ದಕ್ಕಿದ್ದ ಹಾಗೇ ಜವರೇಗೌಡನ ಮನೆಗೆ ಹೋಗಲು ಆಟೋ ಹತ್ತಿದ್ದಾಳೆ.
ಲಕ್ಷ್ಮೀ ಹತ್ತಿದ ಆಟೋ ನಿಂತು ಹೋಯ್ತು
ಮನೆ ಬಳಿಯೇ ಆಟೋ ಹತ್ತಿ ಸ್ವಲ್ಪ ದೂರ ಹೋದಾಗಲೇ ಅದು ನಿಂತು ಹೋಯ್ತು. ಇದಕ್ಕೆ ಲಕ್ಷ್ಮೀಗೂ ಬೇಸರ. ಯಾವುದೋ ಅರ್ಜೆಂಟ್ ಕೆಲಸದಲ್ಲಿ ಇದ್ದಳು. ಅದೇ ಸಮಯಕ್ಕೆ ಶ್ರೀನಿವಾಸ ತನ್ನ ಆಟೋ ಓಡಿಸಿಕೊಂಡು ಬಂದಿದ್ದಾನೆ. ದಾರಿಯಲ್ಲಿ ಕಷ್ಪಪಡುತ್ತಿದ್ದ ಆಟೋ ಡ್ರೈವರ್‌ಗೆ ತಾನೂ ಸಹಾಯ ಮಾಡಿದ್ದಾನೆ. ಆದರೆ ಧ್ವನಿ ಕೇಳಿಯೂ ಲಕ್ಷ್ಮೀಗೆ ಅನುಮಾನವೇ ಬಂದಿಲ್ಲ.

ಪೆಟ್ರೋಲ್ ಖಾಲಿ ಎಂದ ಡ್ರೈವರ್
ಆಟೋ ಡ್ರೈವರ್‌ಗೆ ಲಕ್ಷ್ಮೀಯೇ ಮೊದಲ ಬೋಣಿ. ಹೀಗಾಗಿ ಖುಷಿಯಿಂದ ಹೊರಟವನಿಗೆ ಅರ್ಧದಲ್ಲಿಯೇ ಗಾಡಿ ನಿಂತಿದೆ. ಏನಾಯ್ತಪ್ಪ ಎಂದು ಕೇಳಿದ್ದಕ್ಕೆ ಪೆಟ್ರೋಲ್ ಖಾಲಿ ಆಗಿದೆ ಎಂದಿದ್ದಾರೆ. ಸರಿ ಬೇರೆ ಆಟೋದಲ್ಲಿ ಹೋಗ್ತೀನಿ ಎಂದಾಗಲೂ ಇಲ್ಲೇ ಹತ್ತಿರದಲ್ಲಿ ಪೆಟ್ರೋಲ್ ಬಂಕ್ ಇದೆ, ತಳ್ಳುತ್ತೀನಿ ಕುಳಿತುಕೊಳ್ಳಿ ಎಂದಿದ್ದಾನೆ. ಶ್ರೀನಿವಾಸ ಬಂದಾಗಲೂ ಪೆಟ್ರೋಲ್ ಖಾಲಿ ಆಗಿದೆ ಅಣ್ಣ ಎಂದಿದ್ದಾನೆ. ಬಳಿಕ ಆಟೋ ತಳ್ಳುವುದಕ್ಕೆ ಶ್ರೀನಿವಾಸ ಕೂಡ ಸಹಾಯ ಮಾಡಿದ್ದಾನೆ. ಆಟೋ ಮುಂದಕ್ಕೆ ಸಾಗಿದೆ.
ಆಟೋಗೆ ಪೆಟ್ರೋಲ್ ಬಳಸ್ತಾರಾ?
ಡ್ರೈವರ್ ಹೇಳಿದ ಒಂದೇ ಒಂದು ಮಾತಿಗೆ ಪ್ರೋಮೋಗೆ ಸಿಕ್ಕಾಪಟ್ಟೆ ಕಮೆಂಟ್ಸ್ ಬಂದಿವೆ. ಆಟೋಗೆ ಪೆಟ್ರೋಲ್ ಹಾಕ್ತಾರಾ?. ಏನು ಮಾತು ಅಂತ ಆಡ್ತೀರಾ ಅಂತ ಒಬ್ಬರು ಕೇಳಿದ್ರೆ, ನೋಡ್ರಪ್ಪ ನೋಡ್ರಿ ಗ್ಯಾಸ್ ಆಟೋಗೆ ಪೆಟ್ರೋಲ್ ಹಾಕ್ತಾರಂತೆ ಅಂತ ಇನ್ನೊಬ್ಬರು ವ್ಯಂಗ್ಯವಾಡಿದ್ದಾರೆ. ಆಟೋಗೆ ಪೆಟ್ರೋಲ್ ಹಾಕ್ತಾರಾ? ಎಂದು ಇನ್ನೊಬ್ಬರು ಕೇಳಿದ್ದಾರೆ.
ಕಾಮೆಂಟ್ಸ್ ಸುರಿಮಳೆ
ಈ ಎಲ್ಲಾ ಪ್ರಶ್ನೆಗಳಿಗೆ ಒಬ್ಬರು ಉತ್ತರವನ್ನು ಕೊಟ್ಟಿದ್ದಾರೆ. ಪೆಟ್ರೋಲ್ ಹಾಕುವ ಆಟೋಗಳು ಕೂಡ ಇದಾವೆ ಎಂದು ಕ್ಲಾರಿಟಿ ಕೊಟ್ಟಿದ್ದಾರೆ. ಒಟ್ಟಾರೆ ಡ್ರೈವರ್ ಹೇಳಿದ ಪೆಟ್ರೋಲ್ ಮಾತಿಗೆ ಎಲ್ಲಾ ವೀಕ್ಷಕರು ರೊಚ್ಚಿಗೆದ್ದಿದ್ದಾರೆ.


Click it and Unblock the Notifications











