Lakshminivasa: ಜಾನು ಮನೆಗೆ ವಿಶ್ವ; ಡೈರೆಕ್ಟ್ರೇ ಜಯಂತ್ ಗೂಬೆ ನಂಬರ್ ಸೇವ್ ಮಾಡ್ಕೊಂಡಿದ್ದು ಮರೆತೋಯ್ತಾ?

By ಎಸ್ ಸುಮಂತ್

ಜಯಂತ್ ಮದುವೆಯಾದ ಆರಂಭದಲ್ಲಿ ಅದೆಷ್ಟು ಕ್ರೂರಿಯಾಗಿದ್ದ. ನೋಡುವ ಹೆಣ್ಣು ಮಕ್ಕಳಿಗೆ ಭಯ ಆಗ್ತಾ ಇತ್ತು. ಈ ಸೈಕೋ ಜೊತೆಗೆ ಜಾಹ್ನವಿ ಹೇಗಪ್ಪ ಸಂಸಾರ ಮಾಡ್ತಾಳೆ ಎಂಬ ಆತಂಕವಾಗುತ್ತಿತ್ತು. ಅನುಮಾನದ ಪಿಶಾಚಿಯಾಗಿದ್ದ. ಹೊರಗಡೆ ಹೋಗುವುದಕ್ಕೆ ಬಿಡ್ತಾ ಇರಲಿಲ್ಲ, ಫೋನ್ ನೆಟ್ವರ್ಕ್ ಕಟ್ ಮಾಡಿದ್ದ, ತವರು ಮನೆಯವರ ಜೊತೆಗೂ ಮಾತನಾಡುವುದಕ್ಕೆ ಇಷ್ಟಪಡುತ್ತಿರಲಿಲ್ಲ. ಆದರೆ ಈಗ ಕಂಪ್ಲೀಟ್ ಬದಲಾಗಿದ್ದಾನೆ.

ಸದಾ‌ ಕಣ್ಣೀರಲ್ಲೇ ಕೈ ತೊಳೆಯುತ್ತಿದ್ದ ಜಾಹ್ನವಿ ಮುಖದಲ್ಲಿ ಈಗ ನಗು ಮೂಡಿದೆ. ಜಯಂತ್ ಬದಲಾಗಿದ್ದಾನೆ. ಜಾಹ್ನವಿಯನ್ನು ನಗು ನಗುತ್ತಾ ನೋಡಿಕೊಳ್ಳುತ್ತಿದ್ದಾನೆ. ಇಬ್ಬರು ಆಯಾಗಿರುವಾಗಲೇ ವಿಶ್ವನ ಎಂಟ್ರಿಯಾಗಿದೆ. ಜಯಂತ್ ಮನಸ್ಸೊಳಗೆ ಮಲಗಿದ್ದ ಕ್ರೂರಿ ಮತ್ತೆ ಆಕ್ಟೀವ್ ಆಗ್ತಾನಾ ಎಂಬುದನ್ನು ನೋಡಬೇಕಿದೆ‌.

Zee kannada serial Lakshmi nivasa Written Update on july 3rd episode

ಆಸ್ತಿ ಪತ್ರ ತೋರಿಸಲು ಬಂದ ವಿಶ್ವ

ಒಂದು ಹೊಸ ಕಂಪನಿಯನ್ನು ಶುರು ಮಾಡಬೇಕು ಎಂದು ಜಯಂತ್ ಜಮೀನು ಹುಡುಕುತ್ತಾ ಇದ್ದಾಗ, ಜಾಹ್ನವಿ ನಮ್ಮ ಊರಲ್ಲೇ ಯಾಕೆ ಆ ಫ್ಯಾಕ್ಟರಿ ತೆರೆಯಬಾರದು ಎಂದು ಕೇಳಿದ್ದಾಳೆ. ಹೆಂಡತಿಯ ಮಾತಿಗೆ ಓಕೆ ಎಂದ ಜಯಂತ್ ಜಮೀನು ಹುಡುಕಾಟದಲ್ಲಿದ್ದಾಗ ವಿಶ್ವನ ಮನೆಯವರ ಜಮೀನು ಇರುವುದು ತಿಳಿದು, ಬೇರೊಬ್ಬರ ಮೂಲಕ ಅಪ್ರೋಚ್ ಮಾಡಿದ್ದಾನೆ. ಮೊದಲಿಗೆ ಜಮೀನು ಮಾರಲು ಒಪ್ಪದ ವಿಶ್ವನ ತಂದೆ, ವಿಶ್ವನ ಮಾತಿಗೆ ಓಕೆ ಎಂದಿದ್ದಾರೆ. ಇದೀಗ ಜಮೀನಿನ ಪತ್ರ ತೋರಿಸಲು ವಿಶ್ವ ಬಂದಿದ್ದಾನೆ.

ಜಯಂತ್‌ ಭೇಟಿ ಮಾಡಿದ ವಿಶ್ವ

ಈ ಆಸ್ತಿಯನ್ನು ತೆಗೆದುಕೊಳ್ಳುತ್ತಿರುವುದು ಜಯಂತ್ ಎಂಬುದು ವಿಶ್ವನಿಗೆ ಗೊತ್ತಿರಲಿಲ್ಲ. ನಂಬರ್ ಕೊಟ್ಟ ಮೇಲೆ ಅದಕ್ಕೆ ಕರೆ ಮಾಡಿ ಆ ಸ್ಥಳಕ್ಕೆ ಬಂದಿದ್ದಾನೆ. ಆದರೆ ಆ ಸಮಯಕ್ಕೆ ಜಯಂತ್ ಮನೆಯಲ್ಲಿ ಇರಲಿಲ್ಲ. ಸೆಕ್ಯೂರಿಟಿಗೆ ಹೇಳಿ ಒಳಗೆ ಕೂರಿಸುವಂತೆ ಹೇಳಿದ್ದ. ಬಳಿಕ ಬಂದ ಜಯಂತ್, ಜಾಹ್ನವಿ ಬಳಿ ಗೆಸ್ಟ್‌ಗೆ ಅಡುಗೆ ಮಾಡಲು ಹೇಳಿ, ಮಾತುಕತೆಗೆ ಬಂದು‌ಕೂತಿದ್ದಾನೆ.

ವಿಶ್ವನಿಗಾಗಿ ಅಡುಗೆ ಮಾಡುತ್ತಿರುವ ಜಾನು

ಬಂದಿರುವ ಗೆಸ್ಟ್ ವಿಶ್ವ ಎಂಬುದನ್ನು ತಿಳಿಯದ ಜಾಹ್ನವಿ ಬೇಗ ಬೇಗ ಅಡುಗೆ ಮಾಡುವುದರಲ್ಲಿ ಬ್ಯುಸಿಯಾಗಿದ್ದಾಳೆ. ಗೆಸ್ಟ್ ಯಾರು ಎಂಬುದು ಮಾತ್ರ ಗೊತ್ತಿಲ್ಲ, ‌ಆಮೇಲೆ ನೋಡಿದರಾಯ್ತು ಎಂದು ಸಮಾಧಾನ ಮಾಡಿಕೊಂಡಿದ್ದಾಳೆ. ವಿಶ್ವ ಮನಸ್ಸಾರೆ ಇಷ್ಟಪಟ್ಟ ಹುಡುಗಿ ಜಾನು, ಅದನ್ನು ಹೇಳುವುದಕ್ಕೂ ಆಗದೇ, ಮುಚ್ಚಿಡುವುದಕ್ಕೆ ಆಗದ ಸ್ಥಿತಿ ವಿಶ್ವನದ್ದು. ಹೀಗಾಗಿ ಜಾನು ಮುಂದೆ ಬಂದರೆ ಅವಳ ಪರಿಚಯವೇ ಇಲ್ಲವೆಂಬಂತೆ ಹೋಗುತ್ತಾನೆ. ಈಗಲೂ ಜಾಹ್ನವಿಯನ್ನುವಿಶ್ವ ಭೇಟಿ ಮಾಡುವುದಿಲ್ಲ, ಊಟ ಮಾಡುವುದು ಅನುಮಾನವೇ.

Zee kannada serial Lakshmi nivasa Written Update on july 3rd episode

ಜಯಂತ್ ಬಳಿ ವಿಶ್ವ ನಂಬರ್?

ಆರಂಭದಲ್ಲಿ ಜಯಂತ್ ಎಲ್ಲದಕ್ಕೂ ಅನುಮಾನ ಪಡ್ತಾ ಇದ್ದ. ಜಾನು ಫ್ರೆಂಡ್ಸ್ ಜೊತೆ ಇರುವಂತೆ ನನ್ನ ಜೊತೆ ಇರಬೇಕು ಎಂದು ಬಯಸುತ್ತಿದ್ದ. ತನ್ನ ಸ್ನೇಹಿತರಿಗೆಲ್ಲಾ ಜಾಹ್ನವಿ ಅಡ್ಡ ಹೆಸರುಗಳನ್ನು ಇಟ್ಟಿದ್ದಳು. ಹಾಗೇ ನನಗೂ ಇಡುವಂತೆ ಬಲವಂತ ಮಾಡಿದ್ದ. ಅದರಲ್ಲೂ ಆ ಗೂಬೆ ಯಾರು ಎಂಬುದರ ಹುಡುಕಾಟವನ್ನು ನಡೆಸುತ್ತಿದ್ದ.

ಜಾನುಗೆ ಗೊತ್ತಿಲ್ಲದೆ ಗೂಬೆ(ವಿಶ್ವ) ನಂಬರ್ ತೆಗೆದುಕೊಂಡು ತನ್ನ ಮೊಬೈಲ್‌ನಲ್ಲಿ ಸೇವ್ ಮಾಡಿಕೊಂಡಿದ್ದ. ಒಮ್ಮೆ ಸ್ಟೋರ್ ಒಂದರಲ್ಲಿ ಆ ನಂಬರ್‌ಗೆ ಕರೆ ಕೂಡ ಮಾಡಿದ್ದ. ಆದರೆ ಸ್ವಿಚ್ ಆಫ್ ಆಗಿತ್ತು. ಈಗ ವಿಶ್ವನೇ ಜಯಂತ್‌ಗೆ ಕಾಲ್ ಮಾಡಿದರೂ ಆ ನಂಬರ್ ಯಾಕೆ ಗೊತ್ತಾಗಲಿಲ್ಲ ಎಂಬುದು ನೋಡುಗರ ಪ್ರಶ್ನೆಯಾಗಿ ಕಾಡುತ್ತಿದೆ. ವೀಕ್ಷಕರು ಮರೆತಿರಬಹುದು ಅಂತ ಡೈರೆಕ್ಟರ್ ಮರೆತೋದ್ರಾ?

More from Filmibeat

English summary
Zee kannada serial Lakshmi nivasa Written Update on July 3rd episode. Here is the details about Jayant, who had saved the Vishwa number that day, called but did not get the mark;
Read more about: filmbeat original sumanth tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X