Lakshminivasa: ತಾಳಿ ಸತ್ಯ ಹೇಳುವಂತಿಲ್ಲ, ಮದುವೆಗೆ ಒಪ್ಪುವಂತಿಲ್ಲ, ಪರಿಹಾರ ಕೊಡ್ತಾರಾ ಸಿದ್ದೇಗೌಡ್ರು?
ಸಿದ್ದೇಗೌಡ್ರು ಅಂದ್ರೆ ಲಕ್ಷ್ಮಕ್ಕನಿಗೆ ದೊಡ್ಡ ನಂಬಿಕೆ. ಸಾಕಷ್ಟು ಬಾರೀ ಲಕ್ಷ್ಮಕ್ಕ ಕಷ್ಟದಲ್ಲಿದ್ದಾಗೆಲ್ಲಾ ಸಹಾಯ ಮಾಡಿದ್ದು ಇದೇ ಸಿದ್ದೇಗೌಡ್ರೇ. ಹೀಗಾಗಿ ಲಕ್ಷ್ಮೀ, ಸಿದ್ದೇಗೌಡ್ರನ್ನ ಕಣ್ಮುಚ್ಚಿ ನಂಬುತ್ತಾಳೆ. ಆದರೆ ಇದೇ ಸಿದ್ದೇಗೌಡ್ರು ಭಾವನಾ ಕುತ್ತಿಗೆಗೆ ತಾಳಿ ಕಟ್ಟಿರುವುದು ಎಂಬ ಸತ್ಯ ತಿಳಿದರೆ, ಕ್ಷಮಿಸುವುದು ಇಲ್ಲ, ನಂಬುವುದು ಇಲ್ಲ. ಯಾಕಂದ್ರೆ ಭಾವನಾ ಎಂದರೆ ಲಕ್ಷ್ಮೀಗೆ ಎಲ್ಲಾ ಮಕ್ಕಳಿಗಿಂತ ಕೊಂಚ ಪ್ರೀತಿ ಜಾಸ್ತಿ.
ಉತ್ಸವದಲ್ಲಿ ಆದ ಅನಾಹುತವನ್ನು ಭಾವನಾ ಇಲ್ಲಿಯ ತನಕ ಮನೆಯಲ್ಲಿ ಯಾರಿಗೂ ಹೇಳಿಲ್ಲ. ತಾಳಿಯನ್ನು ಕಾಣದಂತೆ ಮುಚ್ಚಿಕೊಂಡೆ ಓಡಾಡುತ್ತಾಳೆ. ಕಾಲಜ್ಞಾನಿಗಳು ಹೇಳಿದಾಗಲೂ ಲಕ್ಷ್ಮೀಗೆ ಅರ್ಥವಾಗಲಿಲ್ಲ. ಖುಷಿ ಹೇಳಿದಾಗಲೂ ಲಕ್ಷ್ಮೀಗೆ ಅರ್ಥವಾಗಲಿಲ್ಲ. ದೇವಸ್ಥಾನದಲ್ಲಿ ಭಾವನಾ ಕುತ್ತಿಗೆಯಲ್ಲಿರುವ ತಾಳಿಯನ್ನು ಕಂಡು ಶಾಕ್ ಆಗಿದ್ದಾಳೆ. ಮಗಳ ಬಳಿ ಕೇಳುವುದಕ್ಕೂ ಆಗದೆ.. ಬಂದ ಗಂಡನ್ನು ಒಪ್ಪುವುದಕ್ಕೂ ಆಗದೆ ಲಕ್ಷ್ಮೀ ಒದ್ದಾಡುತ್ತಿದ್ದಾಳೆ.

ಮಾನಸಿಕವಾಗಿ ಕುಗ್ಗಿದ ಲಕ್ಷ್ಮೀ
ಭಾವನಾಳ ಕೊರಳಲ್ಲಿ ತಾಳಿ ಇರುವುದನ್ನು ಕಂಡು ಲಕ್ಷ್ಮೀಗೂ ಆತಂಕವಾಗಿದೆ. ಆ ತಾಳಿಯ ಬಗ್ಗೆ ಭಾವನಾ ಬೇರೆ ಏನನ್ನು ಹೇಳುತ್ತಿಲ್ಲ. ತಿಳಿದುಕೊಳ್ಳುವುದಾದರೂ ಹೇಗೆ ಎಂಬ ಚಿಂತೆಯಾಗಿದೆ. ಇದು ಉತ್ಸವದಲ್ಲಿಯೇ ನಡೆದಿರುವ ಘಟನೆ ಎಂಬುದು ಲಕ್ಷ್ಮೀಗೆ ಅರ್ಥವಾಗಿದೆ. ಅದಕ್ಕೆ ಸಿದ್ದೇಗೌಡರನ್ನೇ ಕರೆದು, ಸಿದ್ದು ನೀನೆನಾದರೂ ಭಾವನಾಗೆ ತಾಳಿ ಕಟ್ಟಿದ್ದು ಯಾರು ಅಂತ ನೋಡಿದ್ಯಾ ಅಂತ ಕೇಳಿದ್ದಾಳೆ. ಅವನನ್ನ ಹುಡುಕಿಕೊಡು ಎಂದಾಗ ಸಿಧದೇಗೌಡ್ರಿಗೆ ಏನು ಹೇಳಬೇಕು ಎಂಬುದೇ ಗೊತ್ತಾಗಿಲ್ಲ.
ಭಾವನಾಗೆ ಮದುವೆ ಬೇಡ ಎಂದ ಲಕ್ಷ್ಮೀ
ಭಾವನಾ ವಿಚಾರದಲ್ಲಿ ಲಕ್ಷ್ಮೀ ಸಾಕಷ್ಟು ಯೋಚನೆ ಮಾಡುತ್ತಿದ್ದಾಳೆ. ಊಟ ಬಡಿಸುವಾಗಲೂ ಆ ತಾಳಿಯ ಬಗ್ಗೆಯೇ ಯೋಚಿಸಿ, ಊಟವನ್ನು ಸರಿಗೆ ಬಡಿಸಿಲ್ಲ. ಲಕ್ಷ್ಮೀ ಯಾವುದೋ ಯೋಚನೆಯಲ್ಲಿದ್ದಾಳೆ ಎಂಬುದಂತು ಮನೆಯಲ್ಲಿ ಹಲವರಿಗೆ ಅರ್ಥವಾಗಿದೆ. ಲಕ್ಷ್ಮೀಗೆ ಅದನ್ನು ಕೇಳಿದರು ಸತ್ಯ ಹೇಳುವುದಕ್ಕೆ ರೆಡಿ ಇಲ್ಲ. ಒಬ್ಬಳೆ ಕೊರಗುತ್ತಿದ್ದಾಳೆ.
ತಲೆ ಸುತ್ತಿ ಬಿದ್ದ ಲಕ್ಷ್ಮೀ
ಲಕ್ಷ್ಮೀ ಅದೆಷ್ಟು ಸುಸ್ತಾಗಿದ್ದಾಳೆ ಎಂದರೆ ತಲೆ ಸುತ್ತಿ ಬಿದ್ದಿದ್ದಾಳೆ. ಭಾವನಾ ಮನೆಯಲ್ಲಿ ಹೆಚ್ಚು ಮಾತನಾಡಲ್ಲ. ಇದು ಬೇಕು ಅದು ಬೇಕು ಎಂದು ಕೇಳಲ್ಲ. ತುಂಬಾ ಅಂದ್ರೆ ತುಂಬಾ ಮೃದು ಸ್ವಭಾವದವಳು. ಅವಳಿಗಿಂತ ಚಿಕ್ಕವಳು ಜಾನು. ಅವಳಿಗೂ ಮದುವೆ ಆಯ್ತು. ತಮ್ಮ ಹರೀಶನಿಗೂ ಮದುವೆ ಆಗಿದೆ. ಹೀಗಿರುವಾಗ ಅವಳಿಗೊಂದು ಮದುವೆ ಮಾಡಿ, ಅವಳ ಲೈಫ್ ಸರಿ ಮಾಡಬೇಕು ಎನ್ನುತ್ತಿರುವಾಗಲೇ ಯಾರೋ ಕದ್ದು ತಾಳಿ ಕಟ್ಟಿ ಹೋಗಿರುವುದು ಲಕ್ಷ್ಮೀಯನ್ನು ತೀರಾ ಬಾಧಿಸುತ್ತಿದೆ.

ಸತ್ಯ ಹೇಳಲಾಗದೆ ಒದ್ದಾಟ
ಭಾವನಾ ತಾಳಿ ವಿಚಾರದ ಯೋಚನೆಯಲ್ಲಿ ಲಕ್ಷ್ಮಿ ತಲೆ ಸುತ್ತಿ ಬಿದ್ದಿದ್ದಾಳೆ. ಕೇಳಿದರೆ ಮನೆಯಲ್ಲಿ ಕೆಲಸ ಜಾಸ್ತಿ, ಅದಕ್ಕೆ ಸುಸ್ತಾಗಿದೆ ಅಷ್ಟೇ ಎನ್ನುತ್ತಾಳೆ. ಭಾವನಾಗೆ ಇತ್ತಿಚೆಗಷ್ಟೆ ಗಂಡಿನ ಕಡೆಯವರು ನೋಡುವುದಕ್ಕೆ ಬಂದಿದ್ದರು. ಅವರಿಗೂ ಭಾವನಾ ಕಂಡರೆ ಇಷ್ಟವಾಗಿದೆ. ಮದುವೆಗೆ ಒಪ್ಪಿದ್ದಾರೆ. ಲಕ್ಷ್ಮೀ ಕೂಡ ಭಾವನಾ ಮದುವೆ ಬೇಡ ಎಂದಾಗೆಲ್ಲಾ ಅವಳನ್ನು ಸಮಾಧಾನ ಮಾಡಿ ಮದುವೆಗೆ ಒಪ್ಪಿಸಿದ್ದಾಳೆ. ಆದರೆ ಈಗ ಮನೆಯವರೆಲ್ಲ ಆ ಹುಡುಗ ಒಕೆ ಎಂದರೆ ಲಕ್ಷ್ಮೀಗೆ ಬೇಡ ಎನಿಸಿದೆ.
ಲಕ್ಷ್ಮಿ ಮಾತಿನಿಂದ ಭಾವನಾಗೆ ಸಮಾಧಾನ
ಭಾವನಾಗೆ ಆ ಹುಡುಗ ಬೇಡ ಎಂದೇ ಲಕ್ಷ್ಮಿ ಹೇಳಿದ್ದಾಳೆ. ಇದನ್ನು ಕೇಳಿ ಭಾವನಾ ಕೊಂಚ ಸಮಾಧಾನಗೊಂಡರು ಮನೆಯವರಿಗೆ ಆತಂಕ ಶುರುವಾಗಿದೆ. ಅಮ್ಮನ ಬಳಿ ಒಪ್ಪಿಸುವುದಕ್ಕೆ ಗಂಡು ಮಕ್ಕಳೇ ಬಂದಿದ್ದಾರೆ. ಆದರೆ ಯಾರ ಮಾತನ್ನು ಒಪ್ಪದ ಲಕ್ಷ್ಮೀ, ಅವಳಿಗೆ ಈಗಾಗಲೇ ಮದುವೆ ಆಗಿದೆ ಅಂತ ಹೇಗೆ ಹೇಳಲಿ ಅಂತ ಕೊರಗುತ್ತಿದ್ದಾಳೆ.


Click it and Unblock the Notifications











