Lakshminivasa: ಊರ ಜಾತ್ರೆಯಲ್ಲಿ ಸಿದ್ದೇಗೌಡ್ರು - ಭಾವನಾ ಮದುವೆ ಫಿಕ್ಸ್; ವೀಕ್ಷಕರದ್ದೇ ಲೆಕ್ಕಾಚಾರ!
ಅತ್ತ ಕಡೆ ತನ್ನ ನಿರ್ಧಾರವನ್ನೇ ಕೇಳದೇ ಪೂರ್ವಿ ಜೊತೆಗೆ ಸಿದ್ದೇಗೌಡ್ರ ಎಂಗೇಜ್ಮೆಂಟ್ ಮಾಡಿ ಮುಗಿಸಿದ್ದಾರೆ. ಮನೆಯವರ ಎದುರು ಏನನ್ನು ಹೇಳುವುದಕ್ಕೆ ಆಗುತ್ತಿಲ್ಲ. ನನಗೆ ಮದುವೆ ಬೇಡ ಅಂತಾನು ಹೇಳುವಷ್ಟು ಧೈರ್ಯ ಇಲ್ಲ. ಹೀಗಾಗಿ ಪೂರ್ವಿ ಮತ್ತು ಸಿದ್ದೇಗೌಡ್ರೇ ಮದುವೆ ನಿಲ್ಲಿಸುವ ಪ್ಲ್ಯಾನ್ ಮಾಡುತ್ತಿದ್ದಾರೆ. ಆದರೆ ಅದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಎಂಬುದು ಗೊತ್ತಿಲ್ಲ. ಯಾಕಂದ್ರೆ ಪೂರ್ವಿ ಡಬ್ಬಲ್ ಗೇಮ್ ಆಡ್ತಾ ಇದ್ದಾಳೆ ಅಂತಾನೆ ಅನ್ನಿಸ್ತಾ ಇದೆ.
ಸಿದ್ದೇಗೌಡ್ರಿಗೆ ಭಾವನಾಳನ್ನು ಬಿಟ್ಟಿರೋದು ಅಷ್ಟು ಸುಲಭವಲ್ಲ. ಎಂಗೇಜ್ಮೆಂಟ್ ಆಗಿರೋದನ್ನ ಯಾರಿಗೂ ತಿಳಿಸಿಲ್ಲ. ಭಾವನಾಳಿಗೆ ಪ್ರೀತಿ ಹೇಳಿಕೊಳ್ಳುವ ಚಡಪಡಿಕೆಯಲ್ಲಿದ್ದಾನೆ. ಅದಕ್ಕೆ ರಾತ್ರೋ ರಾತ್ರಿ ಭಾವನಾ ಮನೆ ಬಳಿ ಬಂದು ಸಿಕ್ಕಿಬೀಳುವಷ್ಟರಲ್ಲಿ ತನ್ನ ಸ್ನೇಹಿತನನ್ನೇ ಸಿಕ್ಕಿಬೀಳಿಸಿದ್ದ. ಈಗ ಊರ ಹಬ್ಬ ಬೇರೆ ಬಂದಿದೆ. ದೇವರೇ ಇಬ್ಬರಿಗೂ ಆಶೀರ್ವಾದ ಮಾಡುವ ಸಾಧ್ಯತೆ ಇದೆ.

ತಪ್ಪದೇ ಬರಬೇಕೆಂದು ಹೇಳಿದ ನಾದಿನಿ
ಸಿಂಚನಾ ತಂದೆಯ ಊರಲ್ಲಿ ಊರ ಹಬ್ಬ ಏರ್ಪಡಿಸಲಾಗಿದೆ. ಊರ ಹಬ್ಬಕ್ಕೆ ಜವರೇಗೌಡ ಅವರು ಬೀಗರನ್ನು ಕರೆದಿದ್ದಾರೆ. ಆ ಆಹ್ವಾನ ಪತ್ರಿಕೆ ನೋಡಿ ಲಕ್ಷ್ಮೀ ಒಂದು ಕ್ಷಣ ಶಾಕ್ ಆಗಿದ್ದಾಳೆ. ಅದೇ ಊರ ಹಬ್ಬಕ್ಕೆ ಲಕ್ಷ್ಮೀ ಅಣ್ಣ ಕೂಡ ಬರ್ತಿದ್ದಾರೆ. ಆದರೂ ಆ ಆತಂಕ ತೋರಿಸಿಕೊಳ್ಳದೆ ಸುಮ್ಮನಾಗಿದ್ದಾಳೆ. ಇದೇ ಊರಹಬ್ಬಕ್ಕೆ ಸಿಂಚನಾ ಭಾವನಾಳನ್ನು ಕರೆದಿದ್ದಾಳೆ.
ಎಂಗೇಜ್ಮೆಂಟ್ ಭಾವನಾಗೆ ಗೊತ್ತಾಯ್ತು
ಭಾವನಾಗೆ ಊರ ಹಬ್ಬಕ್ಕೆ ಹೋಗುವ ಖುಷಿಗಿಂತ ಅಲ್ಲಿ ಸಿದ್ದೇಗೌಡ್ರು ಇರ್ತಾರಲ್ಲ ಎಂಬ ಬೇಸರ. ಈ ಬಾರಿ ಯಾಕೆ ಅಷ್ಟು ಗ್ರ್ಯಾಂಡ್ ಆಗಿ ಮಾಡುತ್ತಾ ಇರೋದು ಎಂಬುದನ್ನು ಕೇಳಿದ್ದಾಳೆ. ಆಗ ಸಿಂಚನಾ ಸಿದ್ದೇಗೌಡ್ರ ಬದುಕಲ್ಲಿ ಆಗಿದ್ದನ್ನು ವಿವರಿಸಿದ್ದಾಳೆ. ಸಿದ್ದೇಗೌಡ್ರು - ಪೂರ್ವಿಗೆ ನಿಶ್ಚಿತಾರ್ಥ ಆಯ್ತು. ಹೀಗಾಗಿ ಜಾತ್ರೆಗೆ ಎಲ್ಲರೂ ಹೋಗ್ತಾ ಇದ್ದೀವಿ. ವಿಶೇಷ ಪೂಜೆಯನ್ನು ಮಾಡಿಸುತ್ತಾ ಇದ್ದೀವಿ ಎಂದಿದ್ದಾಳೆ.
ಸಿದ್ದೇಗೌಡ್ರ ಬಗ್ಗೆ ಭಾವನಾ ಪಶ್ಚಾತ್ತಾಪ
ಸಿದ್ದೇಗೌಡ್ರ ಎಂಗೇಜ್ಮೆಂಟ್ ವಿಚಾರ ಕೇಳಿ ಭಾವನಾ ಖುಷಿಯಾಗಿದ್ದಾಳೆ. ಸಿದ್ದುಗೆ ಎಂಗೇಜ್ಮೆಂಟ್ ಆಗಿದೆ ಎಂದರೆ ಇನ್ಮೇಲೆ ಅವರು ನನ್ನ ಹಿಂದೆ ಬರೋದಿಲ್ಲ. ನಾನೇ ತಪ್ಪಾಗಿ ತಿಳಿದುಕೊಂಡಿದ್ದೆ ಅನ್ನಿಸುತ್ತೆ. ಅವರು ನನ್ನ ಹಿಂದೆ ಬಂದಿದ್ದು, ಮಾತನಾಡಿಸುತ್ತಾ ಇದ್ದಿದ್ದು ಎಲ್ಲವನ್ನು ಅಪಾರ್ಥ ಮಾಡಿಕೊಂಡಿದ್ದೆ ಎನಿಸುತ್ತದೆ ಅಂತ ಭಾವನಾ ಯೋಚನೆ ಮಾಡಿದ್ದಾಳೆ. ಈಗ ಸಿದ್ದೇಗೌಡ್ರ ಬಗ್ಗೆ ಭಾವನಾ ಮನಸ್ಸಲ್ಲಿ ಭಾವನೆ ಬದಲಾಗಲಿದೆ. ಗೌಡ್ರು ಮಾತನಾಡಿಸಿದರು ನಗು ಮುಖದಿಂದಲೇ ಮಾತನಾಡುವ ಸಾಧ್ಯತೆ ಇದೆ.
ವೀಕ್ಷಕರ ಅಭಿಪ್ರಾಯವೇನು..?
ಗೌಡ್ರಿಗೆ ಎಂಗೇಜ್ಮೆಂಟ್ ಆಗಿರುವುದನ್ನು ತಿಳಿದು ಭಾವನಾ ಏನೋ ಖುಷಿಯಾದಳು, ನಿಟ್ಟುಸಿರು ಬಿಟ್ಟಳು. ಆದರೆ ದೇವರ ಇಚ್ಛೆ ಏನಿದೆಯೋ ಏನೋ. ಸಿದ್ದೇಗೌಡ್ರು- ಭಾವನಾ ತನ್ನ ಸನ್ನಿಧಾನದಲ್ಲೇ ಮದುವೆಯಾಗಬೇಕು ಎಂಬುದು ಇದೆಯೇನೋ. ಈ ಬಗ್ಗೆ ವೀಕ್ಷಜರು ಕೂಡ ಅನುಮಾನ ಪಡುತ್ತಿದ್ದಾರೆ. ಊರ ಹಬ್ಬಕ್ಕೆ ಹೋದಾಗಲೇ ಭಾವನಾ ಹಾಗೂ ಸಿದ್ದೇಗೌಡ್ರಿಗೆ ಮದುವೆಯಾಗಬಹುದು. ದೇವರು ಕೊಡುವ ಹಾರದಲ್ಲಿ ತಾಳಿ ಇರಬಹುದು. ಆ ತಾಳಿ ಸಿದ್ದೇಗೌಡ್ರ ಕೈಯಿಂದ ಭಾವನಾ ಕುತ್ತಿಗೆಗೆ ಬೀಳಬಹುದು. ಹೀಗೆ ನಾನಾ ರೀತಿಯಲ್ಲಿ ಐಡಿಯಾಗಳನ್ನು ಕೊಡುತ್ತಾ, ಸಿದ್ದು-ಭಾವನಾ ಪ್ರೀತಿ ಯಶಸ್ಸಿಗೆ ಹಾರೈಸುತ್ತಿದ್ದಾರೆ.


Click it and Unblock the Notifications











