Lakshminivasa: ಭಾವನಾ ಮುಂದೆಯೇ ಪೂರ್ವಿ ಜೊತೆ ತಗಲಾಕಿಕೊಂಡ ಸಿದ್ದೇಗೌಡ್ರ ಪಾಡು ನೋಡೋಕೆ ಆಗ್ತಿಲ್ಲ!

By ಎಸ್ ಸುಮಂತ್

ಸಿದ್ದೇಗೌಡ್ರು ತನ್ನ ಪ್ರೀತಿಯನ್ನು ಹೇಳಿಕೊಳ್ಳುವುದಕ್ಕೆ ಆಗದೇ ಒದ್ದಾಡುತ್ತಿದ್ದಾರೆ. ಭಾವನಾ ಕಂಡರೆ ಮನಸ್ಸೊಳಗೆ ಬೆಟ್ಟದಷ್ಟು ಪ್ರೀತಿ ತುಂಬಿಕೊಂಡಿದ್ದಾನೆ. ದೇವತೆಯಂತೆ ಆರಾಧಿಸುತ್ತಾನೆ. ಭಾವನಾಗೆ ಕಷ್ಟ ಎಂದರೆ ಸಾಕು ಸಿದ್ದು ಮನ ಮಿಡಿಯುತ್ತದೆ. ಭಾವನಾಗೆ ಗೊತ್ತಾಗದ ರೀತಿ ಸಹಾಯಕ್ಕೆ ನಿಲ್ಲುತ್ತಾನೆ. ಈಗಷ್ಟೇ ಖುಷಿಯ ಖರ್ಚು ನೋಡಿಕೊಂಡಿದ್ದಾನೆ. ಭಾವನಾಗೆ ಒಳ್ಳೆ ಸ್ಯಾಲರಿ ಕೊಡಿಸಿದ್ದಾನೆ. ಆದರೆ ಅದ್ಯಾವುದನ್ನು ಹೇಳಿಕೊಳ್ಳುವಷ್ಟು ಧೈರ್ಯ ಸಿದ್ದುಗೆ ಇಲ್ಲ.

ಭಾವನಾಗೆ ಪ್ರೀತಿ ಪ್ರೇಮ ಅಂತ ಹುಟ್ಟೋದು ಅನುಮಾನ. ಯಾಕಂದ್ರೆ ಒಂದು ಅವಳ ಜಾತಕವೇ ಅವಳಿಗೆ ಹಿಂದೇಟು ಹಾಕುವಂತೆ ಮಾಡುತ್ತಿದೆ. ಈಗಾಗಲೇ ಒಮ್ಮೆ ಲವ್ ನಲ್ಲಿ ಬಿದ್ದು ವ್ಯಕ್ತಿಯನ್ನು ಕಳೆದುಕೊಂಡು ಆಗಿದೆ. ಹೀಗಾಗಿ ಸಿದ್ದು ಹಿಂದೆ ಹಿಂದೆ ಬಿದ್ದರು ಭಾವನಾ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಈಗ ಬೇರೆ ಸಿದ್ದು ಎಂಗೇಜ್ಮೆಂಟ್ ವಿಚಾರ ತಿಳಿದು ಖುಷಿಯಾಗಿದ್ದಾಳೆ.

Zee kannada serial Lakshmi nivasa Written Update on june 12th episode

ಲಕ್ಷ್ಮೀ, ಜವರೇಗೌಡ್ರ ಫ್ಯಾಮಿಲಿ ಒಟ್ಟಿಗೆ

ಊರ ಜಾತ್ರೆಗೆ ಯಾರೊಬ್ಬರು ತಪ್ಪಿಸಿಕೊಂಡಿಲ್ಲ. ಲಕ್ಷ್ಮೀಯ ಇಡೀ ಕುಟುಂಬ, ಜವರೇಗೌಡನ ಕುಟುಂಬ, ಬೀಗರು, ಲಕ್ಷ್ಮೀ ತವರು ಮನೆಯವರು ಬಂದಿದ್ದಾರೆ. ಎಲ್ಲರೂ ಖುಷಿ ಖುಷಿಯಾಗಿ ಓಡಾಡುತ್ತಿದ್ದಾರೆ. ಪ್ರಸಾದ ತೆಗೆದುಕೊಳ್ಳಲೆಂದು ಲಕ್ಷ್ಮೀ ಸಾಲಿನಲ್ಲಿ ಬಂದಾಗ ಪ್ರಸಾದಕ್ಕಿಂತ ಅಣ್ಣನ ತಿರಸ್ಕಾರ ಸಿಕ್ಕಿದೆ. ಅಣ್ಣ ಆಡಿದ ಮಾತುಗಳಿಂದ ಲಕ್ಷ್ಮೀ ನೊಂದುಕೊಂಡಿದ್ದಾಳೆ.

ಸಿದ್ದೇಗೌಡ್ರ ಬಳಿ ಪೂರ್ವಿ ಮನವಿ

ಎಲ್ಲರಿಗೂ ಜಾತ್ರೆ ನೋಡುವುದು ಖುಷಿಯಾದರೆ ಸಿದ್ದೇಗೌಡ್ರಿಗೆ ಟೆನ್ಷನ್ ಅಂದ್ರೆ ಟೆನ್ಶನ್. ಭಾವನಾ ಮೇಡಂ ಬೇರೆ ಹತ್ತಿರ ಬಂದು ಎಂಗೇಜ್ಮೆಂಟ್ ಆಗಿರುವುದಕ್ಕೆ ಶುಭ ಕೋರಿ ಹೋಗಿದ್ದಾಳೆ. ಸತ್ಯ ಗೊತ್ತಾಯ್ತಲ್ಲ ಅನ್ನೋ ಟೆನ್ಷನ್‌ನಲ್ಲಿ ಓಡಾಡುತ್ತಿದ್ದ ಸಿದ್ದೇಗೌಡ್ರನ್ನ ಪೂರ್ವಿ ಬಂದು ಕಾಡಿದ್ದಾಳೆ. ಆದಷ್ಟು ಬೇಗ ಮದುವೆ ನಿಲ್ಲಿಸುವುದಕ್ಕೆ ಪರಿಹಾರ ತಿಳಿಸಿ. ಜಾತ್ರೆಯಲ್ಲಿ ಎಲ್ಲರಿಗೂ ವುಚಾರ ಗೊತ್ತಾಗಿ ಬಿಟ್ಟರೆ ಆಮೇಲೆ ಕಷ್ಟವಾಗುತ್ತೆ ಎಂದೇ ಹೇಳಿದ್ದಾಳೆ. ಗೌಡ್ರಿಗೂ ಹೇಗೆ ನಿಲ್ಲಿದಬೇಕೆಂಬ ಪ್ಲ್ಯಾನ್ ತಲೆಗೆ ಹೊಳೆಯುತ್ತಿಲ್ಲ. ಅದೇ ಯೋಚನೆಯಲ್ಲಿದ್ದಾರೆ.

Zee kannada serial Lakshmi nivasa Written Update on june 12th episode

ಜೋಡಿ ಚೆನ್ನಾಗಿದೆ ಎಂದ ಭಾವನಾ

ಇಬ್ಬರು ಮದುವೆ ನಿಲ್ಲಿಸುವುದು ಹೇಗೆ ಎಂಬ ಡೀಪ್ ಡಿಸ್ಕಷನ್‌ನಲ್ಲಿ ಇದ್ದಾಗಲೇ ಅಲ್ಲಿಗೆ ಭಾವನ ಎಂಟ್ರಿ ಕೊಟ್ಟಿದ್ದಾಳೆ. ಗೌಡ್ರೆ ಎಂದಾಗಲೇ ಶಾಕ್ ಆಗಿದ್ದಾರೆ. ಭಾವನಾಗೆ ಫುಲ್ ಖುಷಿ. ಜೋಡಿ ತುಂಬಾ ಚೆನ್ನಾಗಿದೆ, ಇಬ್ಬರಿಗೂ ಒಳ್ಳೆಯದಾಗಲೀ ಎಂದು ಹೇಳಿ ಅಲ್ಲಿಂದ ಹೊರಡುತ್ತಾಳೆ. ಸಿದ್ದೇಗೌಡ್ರು ಯಾವುದು ಆಗಬಾರದು ಎಂದುಕೊಂಡರೋ ಜಾತ್ರೆಯಲ್ಲಿ ಅದೇ ಆಗಿದೆ. ಅಕ್ಕ ಸಿಂಚನಾಳಿಂದ ತಾನೂ ಪ್ರೀತಿಸುತ್ತಿರುವ ಹುಡುಗಿಗೆ ಎಲ್ಲವೂ ತಿಳಿಯುವಂತೆ ಆಗಿದೆ.

ಸಿದ್ದು ಅತ್ತಿಗೆಯಿಂದ ಪಿತೂರಿ

ಯಾವುದೋ ಲಾಭಕ್ಕೋಸ್ಕರ ಸೌಪರ್ಣಿಕಾ ಹಾಗೂ ನೀಲೂ ಒಂದಾಗಿದ್ದಾರೆ. ಅದಕ್ಕಾಗಿಯೇ ನೀಲೂ ಅತ್ತೆಯ ತಲೆಗೆ ಪೂರ್ವಿ ಬಗ್ಗೆ ಇನ್ನಿಲ್ಲ ಗುಣಗಳನ್ನು ತುಂಬಿದ್ದಾರೆ. ಅತ್ತೆ ಬಯಸಿದ ಎಲ್ಲಾ ಗುಣಗಳು ಆಕೆಯಲ್ಲಿದ್ದಾವೆ ಅಂತ ನಂಬಿಸಿ, ಎಂಗೇಜ್ಮೆಂಟ್ ಕೂಡ ಮಾಡಿದ್ದಾರೆ. ಈಗ ಸಿದ್ದೇಗೌಡ್ರು ಹಾಗೂ ಪೂರ್ವಿ ಮದುವೆಯನ್ನು ನಿಲ್ಲಿಸುವ ಪ್ಲ್ಯಾನ್ ಮಾಡುತ್ತಿದ್ದಾರೆ. ಪೂರ್ವಿ ಒಬ್ಬಳೆ ಇದ್ದದ್ದನ್ನು ಕಂಡ ನೀಲೂ ಹಾಗೂ ಸೌಪರ್ಣಿಕಾ ಆಕೆಯ ಬಳಿ ಬಂದು ಸಿದ್ದು ಬಗ್ಗೆ ಗುಣಗಾನ ಮಾಡಿದ್ದಾರೆ. ಸಿದ್ದುಗೆ ಎಷ್ಟೋ ಜನ ಪ್ರಪೋಸ್ ಮಾಡಿದರೂ ಅವನೇ ಒಪ್ಪಿಲ್ಲ. ತುಂಬಾ ಒಳ್ಳೆಯ ಹುಡುಗ. ಅವನನ್ನು ಪಡೆಯುವುದಕ್ಕೆ ಪುಣ್ಯ ಮಾಡಿರಬೇಕು. ಹಾಗೇ ಹೀಗೆ ಅಂತ ಪೂರ್ವಿ ಇಂಪ್ರೆಸ್ ಆಗುವಂತ ಗುಣಗಳನ್ನೇ ಹೇಳಿದ್ದಾರೆ.

More from Filmibeat

English summary
Lakshmi nivasa kannada serial today episode. Here is the details about Siddhagowda and Poorvi, who were trapped in front of Bhavana;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X