Lakshminivasa: ವೀಕ್ಷಕರ ಜಡ್ಜ್‌ಮೆಂಟ್ ಅಂದ್ರೆ ಜಡ್ಜ್‌ಮೆಂಟ್: ಭಾವನಾಗೆ ತಾಳಿ ಕಟ್ಟಲು ಸಿದ್ದು ಪ್ಲ್ಯಾನ್!
'ಲಕ್ಷ್ಮೀ ನಿವಾಸ'ದಲ್ಲಿ ಊರ ಜಾತ್ರೆಯ ಸಂಭ್ರಮ ಮನೆ ಮಾಡಿದೆ. ಈ ಜಾತ್ರೆಯಲ್ಲಿ ಹಳೆ ಸಂಬಂಧಗಳು ಎದುರಾಗುವುದರ ಜೊತೆಗೆ ನೋವು, ಖುಷಿ, ಟೆನ್ಷನ್ ಒಟ್ಟೊಟ್ಟಿಗೆ ಕಾಣಿಸುತ್ತಿದೆ. ಊರ ಜಾತ್ರೆಗೆ ಎಲ್ಲರೂ ನೆಂಟರೆ. ಲಕ್ಷ್ಮೀ-ಶ್ರೀನಿವಾಸ ಕುಟುಂಬ, ಲಕ್ಷ್ಮೀ ತವರು ಮನೆ, ಜವರೇಗೌಡರ ಕುಟುಂಬ, ಪೂರ್ವಿ ಕುಟುಂಬ. ಅಬ್ಬಬ್ಬಾ ಎಲ್ಲರೂ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಜಯಂತ್ ಜಾತ್ರೆಗೆ ಹೋಗುವುದು ಬೇಡ ಎಂದಿದ್ದ. ಆದರೆ ಜಾಹ್ನವಿಯ ಮುನಿಸು ಅವನನ್ನು ಜಾತ್ರೆಗೆ ಕರೆದುಕೊಂಡು ಹೋಗುವಂತೆ ಮಾಡಿದೆ. ಮದುವೆಗೂ ಬಾರದೆ, ಫೋನ್ ಕರೆಗೂ ಸಿಗದ ವಿಶ್ವ ಜಾತ್ರೆಯಲ್ಲಿ ಸಿಗುತ್ತಾನೆಂಬ ನಂಬಿಕೆ ಜಾಹ್ನವಿಯದ್ದು. ನಿರೀಕ್ಷೆಯಂತೆ ವಿಶ್ವ ಸಿಕ್ಕಿದ. ಆದರೆ ಜಾಹ್ನವಿಯನ್ನೇ ಮರೆತವನಂತೆ ನಟಿಸಿ ಮುಂದೆ ಹೋದ. ಇದು ಜಾಹ್ನವಿಯ ಕಣ್ಣೀರಿಗೆ ಕಾರಣವಾಯ್ತು. ಭಾವನಾ ಕಥೆ ಇನ್ನೊಂದು ರೀತಿ ಆಗಿದೆ.

ಟೆನ್ಷನ್‌ನಲ್ಲೇ ಓಡಾಡಿದ ಸಿದ್ದು
ಎಲ್ಲರೂ ಜಾತ್ರೆಯಲ್ಲಿ ಖುಷಿ ಖುಷಿಯಾಗಿ ಓಡಾಡಿದರೆ ಸಿದ್ದು, ಪೂರ್ವಿ, ವಿಶ್ವ ಮಾತ್ರ ನೆಮ್ಮದಿ ಇಲ್ಲದ ರೀತಿ ಓಡಾಡುತ್ತಾ ಇದ್ದದ್ದು. ವಿಶ್ವನಿಗೆ ಜಾಹ್ನವಿ ಕಣ್ಣ ಮುಂದೆ ಬಂದ ನೋವು, ಪೂರ್ವಿಗೆ ಐಡಿಯಾ ಸಿಕ್ತಾ ಇಲ್ಲ ಎಂಬ ಬೇಸರ, ಸಿದ್ದೇಗೌಡ್ರಿಗೆ ಎಲ್ಲಾ ವಿಚಾರ ಭಾವನಾ ಮುಂದೆ ಅನಾವರಣವಾದ ಕೋಪ. ಹೀಗಾಗಿ ಜಾತ್ರೆಯನ್ನ ಎಂಜಾಯ್ ಮಾಡುವುದಕ್ಕೆ ಆಗಲೇ ಇಲ್ಲ
ಅತ್ತಿಗೆ ಬಳಿಯೂ ಪರಿಹಾರವಿಲ್ಲ
ಸಿದ್ದು ಪ್ರೀತಿ ವಿಚಾರದಲ್ಲಿ ಬಹಳ ನಂಬಿದ್ದು ಅತ್ತಿಗೆ ನೀಲೂಳನ್ನು. ಆದರೆ ನೀಲೂ ತನ್ನ ಲಾಭಕ್ಕೋಸ್ಕರ ಸಿದ್ದುಗೆ ಗೊತ್ತಾಗದ ಹಾಗೆಯೇ ಒಳ್ಳಗೊಳಗೆ ಪ್ಲ್ಯಾನ್ ಮಾಡಿ, ಪೂರ್ವಿ ಜೊತೆಗೆ ಎಂಗೇಜ್ಮೆಂಟ್ ಮಾಡಿ ಮುಗಿಸಿದ್ದಾಳೆ. ಇದ್ಯಾವುದರ ಅರಿವಿಲ್ಲದ ಸಿದ್ದು ಮತ್ತೆ ಅತ್ತಿಗೆ ಬಳಿಯೇ ಸಹಾಯ ಕೇಳಲು ಹೋಗಿದ್ದಾನೆ. ನೀಲೂ ಏನು ಗೊತ್ತಿಲ್ಲದವಳಂತೆ, ನೀನು ಭಾವನಾಳ ಬಳಿ ಪ್ರೀತಿ ವಿಚಾರ ಹೇಳಬೇಕಿತ್ತು. ಈಗ ಕಾಲ ಮಿಂಚಿ ಹೋಗಿದೆ ಎಂದಿದ್ದಾಳೆ.

ದೇವಿ ಬಳಿ ಕ್ಷಮೆ ಕೇಳಿ ತಾಳಿ ತೆಗೆದ
ಸಿದ್ದುಗೆ ಟೆನ್ಷನ್ ತಡೆಯುವುದಕ್ಕೆ ಆಗಲಿಲ್ಲ. ಭಾವನಾಳನ್ನು ಕಳೆದುಕೊಳ್ಳುವುದಕ್ಕೂ ಇಷ್ಟವಿಲ್ಲ. ಭಾವನಾಳ ವಿಚಾರಕ್ಕೆ ಪದರುಗುಟ್ಟಿದ್ದಾನೆ. ಕಡೆಗೆ ಅವನ ತಲೆಯಲ್ಲಿ ಹೊಳೆದದ್ದು ಭಾವಾನಗೆ ತಾಳಿ ಕಟ್ಟಿ ಬಿಡಬೇಕೆಂಬ ವಿಚಾರ. ನೇರವಾಗಿ ದೇವಿ ಮುಂದೆ ಹೋಗಿ ನಿಂತಿದ್ದಾನೆ. ಅಲ್ಲಿ ದೇವಿಯ ಬಳಿ ತನ್ನ ಪ್ರೀತಿ ಹೇಳಿಕೊಂಡಿದ್ದಾನೆ. ನನ್ನನ್ನು ಕ್ಷಮಿಸು, ಬೇರೆ ದಾರಿಯಿಲ್ಲ ಎಂದು ದೇವಿ ಬಳಿ ಮನವಿ ಮಾಡಿದ್ದಾನೆ. ಕೈ ಮುಗಿದು ತಾಳಿಯನ್ನು ಕೈಗೆತ್ತಿಕೊಂಡಿದ್ದಾನೆ.
ವೀಕ್ಷಕರ ಊಹೆಯೇ ಕರೆಕ್ಟ್
ಜನ ಧಾರಾವಾಹಿಯನ್ನು ಎಷ್ಟು ಸೂಕ್ಷ್ಮವಾಗಿ ನೋಡುತ್ತಾರೆ ಎಂದರೆ ಸ್ಟೋರಿ ರೈಟರ್ ಹಿಂಗೆ ಬರೆದಿರಬಹುದು ಎಂದು ಜಡ್ಜ್ ಮಾಡುವ ಲೆವೆಲ್‌ಗೆ ಆ ಧಾರಾವಾಹಿಯನ್ನು ಗಮನಿಸುತ್ತಾರೆ. ಹಿಂದಿನ ದಿನ ಕಮೆಂಟ್ ಹಾಕಿದ ಕೂಡಲೇ ನಿರ್ದೇಶಕರು ಸ್ಟೋರಿ ಚೇಂಜ್ ಮಾಡಿಕೊಳ್ಳುವುದು ಕಷ್ಟ. ಇಲ್ಲಿ ವೀಕ್ಷಕರ ತಲೆ ಹಾಗೂ ಸ್ಟೋರಿ ರೈಟರ್ ತಲೆ ಒಂದೇ ರೀತಿ ಓಡುತ್ತಿದೆ ಎಂಬುದಕ್ಕೆ 'ಲಕ್ಷ್ಮೀ ನಿವಾಸ' ಧಾರಾವಾಹಿಯೇ ಉದಾಹರಣೆ. ಊರ ಹಬ್ಬ ಇದೆ ಎಂದು ಗೊತ್ತಾದಾಗ, ಎಲ್ಲರೂ ಜಾತ್ರೆಗೆ ಹೊರಟಾಗಲೇ ಒಂದಷ್ಟು ಜನ ಕಮೆಂಟ್ ಹಾಕಿದ್ದರು. ಈ ಊರ ಜಾತ್ರೆಯಲ್ಲಿ ಸಿದ್ದೇಗೌಡ್ರು ಭಾವನಾಗೆ ತಾಳಿ ಕಟ್ಟುತ್ತಾರೆ ಎಂದೇ ಕಮೆಂಟ್ ಹಾಕಿದ್ದರು. ಇದೀಗ ಆ ಕಮೆಂಟ್ ಸತ್ಯವಾಗುತ್ತಿದೆ.


Click it and Unblock the Notifications











