Lakshminivasa: ದೇವರ ತಾಳಿ ಭಾವನಾ ಕುತ್ತಿಗೆಯಲ್ಲಿ; ವೀಕ್ಷಕರು ಫುಲ್ ಕನ್ಫ್ಯೂಸ್
ಊರ ಜಾತ್ರೆಗೆ ಅಂತ ಎಲ್ಲಾ ಕುಟುಂಬದವರು ಸೇರಿದ್ದರು. ಊರ ಜಾತ್ರೆ ಕೂಡ ತುಂಬಾ ಚೆನ್ನಾಗಿ ಆಯ್ತು. ಭಾವನಾ ಜಾತ್ರೆಗೆ ಬಂದಿದ್ದಾಳೆ ಅಂತ ಸಿದ್ದೇಗೌಡ್ರು ಖುಷಿ ಪಡಬೇಕೋ, ಪೂರ್ವಿ ಹಿಂದೆ ಹಿಂದೆಯೆ ಇರುತ್ತಾಳೆ ಅಂತ ದುಃಖ ಪಡಬೇಕೋ ಒಂದು ತಿಳಿಯದಂತೆ ಆಗಿತ್ತು ಗೌಡ್ರಿಗೆ. ಅದರ ಜೊತೆಗೆ ಭಾವನಾ ಮೇಡಂಗೆ ತಮ್ಮ ಫ್ಯಾಮಿಲಿ ಕಡೆಯಿಂದಾನೇ ಎಲ್ಲಾ ಸತ್ಯ ಗೊತ್ತಾಗಿದೆ. ಪೂರ್ವಿ ಜೊತೆ ಎಂಗೇಜ್ಮೆಂಟ್ ಆದ ವಿಚಾರ ತಿಳಿದು ಭಾವನಾ ಖುಷಿಯಾಗಿದ್ದಾಳೆ.
ಸಿದ್ದೇಗೌಡ್ರ ಪ್ರೀತಿ ಗೊತ್ತಿದ್ದ ನೀಲೂ ಕೈಕೊಟ್ಟಿದ್ದಳು. ಸಿದ್ದೇಗೌಡ್ರಿಗೆ ಏನು ಮಾಡಬೇಕೆಂದು ದಾರಿ ತಿಳಿದಿರಲಿಲ್ಲ. ಯೋಚನೆ ಮಾಡಿ ಮಾಡಿ ಕಡೆಗೆ ದೇವರ ಸನ್ನಿಧಾನದಲ್ಲಿಯೇ ತಾಳಿ ಕಟ್ಟಬೇಕೆಂದು ನಿರ್ಧಾರ ಮಾಡಿದವ, ಎಲ್ಲರೂ ಮಲಗಿದ್ದ ಸಮಯದಲ್ಲಿ ತಾಳಿ ಕಟ್ಟಿಯೇ ಬಿಡುತ್ತಾನೆ. ಬೆಳಗ್ಗೆದ್ದು ನೋಡಿಕೊಂಡರೆ ಕುತ್ತಿಗೆಯಲ್ಲಿ ತಾಳಿ ಇದೆ. ಕಟ್ಟಿದ ವ್ಯಕ್ತಿ ಮಾತ್ರ ಎಲ್ಲಿಯೂ ಪತ್ತೆ ಇಲ್ಲ. ಮನೆಯವರಿಗೂ ಅದನ್ನು ಹೇಳುವುದಕ್ಕೆ ಸಾಧ್ಯವಾಗಿಲ್ಲ.

ಖುಷಿಯಿಂದ ಕಾಲ ಕಳೆದ ಸಿದ್ದು
ಭಾವನಾ ತಾಳಿ ವಿಚಾರಕ್ಕೆ ತುಂಬಾನೇ ಯೋಚನೆ ಮಾಡುತ್ತಿದ್ದಾಳೆ. ಮನೆಯವರಿಗೆ ಹೇಳಿಕೊಳ್ಳುವುದಕ್ಕೂ ಆಗದೇ ಸಂಕಟ ಪಡುತ್ತಿದ್ದಾಳೆ. ಮೊದಲೇ ನನ್ನ ಜಾತಕ ಸರಿ ಇಲ್ಲ ಅಂತಾರೆ, ಯಾರು ಈ ರೀತಿ ಮಾಡಿದ್ದು ಎಂಬ ಆತಂಕದಲ್ಲಿದ್ದಾಳೆ. ಅತ್ತ ಸಿದ್ದೇಗೌಡ್ರಿಗೆ ಫುಲ್ ಖುಷಿ. ಭಾವನಾ ಇನ್ನು ಮುಂದೆ ನನ್ನವಳು ಎಂಬ ಖುಷಿಯಲ್ಲಿ ತೇಲುತ್ತಿದ್ದಾನೆ.
ತಾಳಿ ಕಟ್ಟಿದವರನ್ನು ಹುಡುಕುವುದು ಹೇಗೆ?
ಭಾವನಾಗೆ ತಾಳಿ ಕಟ್ಟಿದ ವ್ಯಕ್ತಿಯನ್ನು ಹುಡುಕುವುದೇ ದೊಡ್ಡ ತಲೆ ನೋವಾಗಿದೆ. ಎಲ್ಲಿದ್ದಾನೋ, ಏನೋ. ಹುಡುಕುವುದಾದರೂ ಹೇಗೆ..? ಎಂದು ಯೋಚನೆ ಮಾಡುತ್ತಿದ್ದಾಳೆ. ಆದರೆ ಸಿದ್ದೇಗೌಡ್ರು ಮಾತ್ರ, ಭಾವನಾ ಮೇಡಂ ಯಾರು ಏನೇ ಹೇಳಲಿ. ನಾನು ಮಾತ್ರ ನಿಮ್ಮನ್ನ ಬಿಟ್ಟು ಕೊಡುವುದಿಲ್ಲ. ಯಾವಾಗಲೂ ನಿಮ್ಮನ್ನ ಚೆನ್ನಾಗಿಯೇ ನೋಡಿಕೊಳ್ಳುತ್ತೇನೆ ಎಂದು ಮನಸ್ಸಲ್ಲಿಯೇ ಭರವಸೆ ಕೊಟ್ಟಿದ್ದಾನೆ.
ಸೇವಂತಿ ಸೇವಂತಿ ಸಿನಿಮಾ ನೆನಪು
ಸಿದ್ದು ಎತ್ತಿಕೊಂಡು ಬಂದಿದ್ದು ದೇವರ ಕುತ್ತಿಗೆಯಲ್ಲಿದ್ದ ತಾಳಿ. ಜಾತ್ರೆ ಮುಗಿದು ಒಂದು ದಿನವಾಗಿದೆ. ಎಲ್ಲರೂ ಅವರವರ ಊರುಗಳಿಗೆ ಬಂದಿದ್ದಾರೆ. ಆದರೂ ಅರ್ಚಕರು ಆ ತಾಳಿಯನ್ನು ನೋಡಿಲ್ಲವಾ..? ಅದರಲ್ಲೂ ದೇವರ ತಾಳಿ ಕಳೆದೋಗಿದ್ದರೂ ಯಾಕೆ ಯಾರೂ ಇನ್ನು ಕೂಡ ಪೊಲೀಸ್ ದೂರು ನೀಡಿಲ್ಲ ಎಂದೇ ಪ್ರಶ್ನೆ ಮಾಡುತ್ತಿದ್ದಾರೆ. ಇದರ ಜೊತೆಗೆ ಸುಮಾರು ಜನ ಇದು 'ಸೇವಂತಿ ಸೇವಂತಿ' ಸಿನಿಮಾದ ಕಥೆಯನ್ನು ತೋರಿಸುತ್ತಿದ್ದಾರೆ ಎಂದು ಕಮೆಂಟ್ ಹಾಕಿದ್ದಾರೆ.

ಖುಷಿ ಎಲ್ಲಿ ಎಂದು ಪ್ರಶ್ನಿಸಿದ ಫ್ಯಾನ್ಸ್
ಇನ್ನು ಮುಖ್ಯವಾಗಿ ಖುಷಿ ಎಲ್ಲರ ಗಮನ ಸೆಳೆದಿದ್ದಾಳೆ. ಭಾವನಾ ಬದುಕು ನಿಂತಿರುವುದೇ ಖುಷಿಯ ಮೇಲೆ. ಊರ ಜಾತ್ರೆಗೆ ಎಲ್ಲರೂ ಹೋದಾಗಲೂ ಖುಷಿ ಕಂಡಿರಲಿಲ್ಲ. ಜಾತ್ರೆ ಅಲ್ವಾ, ಮಕ್ಕಳು ಬೇಡ ಅಂತ ಅಜ್ಜಿ ಹಾಗೂ ಅತ್ತಿಗೆ ಜೊತೆಗೆ ಮನೆಯಲ್ಲಿಯೇ ಬಿಟ್ಟು ಬಂದಿರಬೇಕು ಎಂದುಕೊಂಡರು. ಆದರೆ ಈಗ ಭಾವನಾ ಮನೆಗೆ ಬಂದರೂ ಖುಷಿ ಕಂಡಿಲ್ಲ. ಇದು ಪ್ರೇಕ್ಷಕರಿಗೆ ಪ್ರಶ್ನೆಯಾಗಿ ಕಾಡಿದೆ. ಪೇಮೆಂಟ್ ಜಾಸ್ತಿ ಆಗುತ್ತೆ ಅಂತ, ಅಲ್ಲಲ್ಲಿ ಪಾತ್ರಗಳನ್ನೇ ಕಟ್ ಮಾಡ್ತಿರಬಹುದಾ ಎಂದು ಅನುಮಾನಿಸಿದ್ದಾರೆ. ಖುಷಿ ಎಲ್ಲಿ ಎಂದು ಹಲವರು ಪ್ರಶ್ನೆ ಕೇಳಿದ್ದಾರೆ.


Click it and Unblock the Notifications











