Lakshminivasa: ಸಿದ್ದೇಗೌಡ್ರು, ಗೌಡ್ರ ವಾಯ್ಸ್ ಒಂದೇ ಅಲ್ವಾ; ಭಾವನಾಗ್ಯಾಕೆ ಇದು ಅರ್ಥ ಆಗ್ತಿಲ್ಲ?
ಸೀರಿಯಲ್ ಆಗ್ಲಿ ಸಿನಿಮಾ ಆಗಲಿ ನಡೆಯುವುದು ಡೈರೆಕ್ಟರ್ ಮಾತಿನಿಂದ. ಅವರು ಮೊದಲೇ ಮಾಡಿಕೊಂಡ ಸ್ಕ್ರಿಪ್ಟ್ ಮೇಲೆ. ಒಮ್ಮೊಮ್ಮೆ ಪ್ರೇಕ್ಷಕರ ನಾಡಿಮಿಡಿತ ಅರಿತು ಕಥೆಯಲ್ಲಿ ಬದಲಾವಣೆಯಾಗುತ್ತೆ. ಆದರೆ ದಡ್ಡಿ ಮಾಡುವುದು ಮಾತ್ರ ನಿರ್ದೇಶಕರಿಗೆ ಬಿಟ್ಟಿದ್ದು. ರಿಯಲ್ ಲೈಫ್‌ನಲ್ಲಿ ಬಬ್ಲಿ ಬಬ್ಲಿ ಆಗಿರುವ ಹುಡುಗಿಯನ್ನು ಪೆದ್ದಿ ಮಾಡಿಬಿಡುತ್ತಾರೆ ಒಮ್ಮೊಮ್ಮೆ. ಈಗ ಭಾವನಾಳ ಸ್ಥಿತಿ ಕಂಡು ವೀಕ್ಷಕರು ತಲೆ ಕೆಡಿಸಿಕೊಂಡಿದ್ದಾರೆ.
ಭಾವನಾ ಮೂಲ ನಕ್ಷತ್ರದಲ್ಲಿ ಹುಟ್ಟಿದಂತ ಹುಡುಗಿ. ಹೀಗಾಗಿ ಮದುವೆ ಆಗುವುದುಕ್ಕೆ ಯಾವ ಗಂಡಿನ ಕಡೆಯವರು ಮುಂದೆ ಬರಲೇ ಇಲ್ಲ. ಸಾವಿಗೆ ಭಯ ಪಟ್ಟವರೇ ಹೆಚ್ಚು. ಆದರೆ ಈಗ ಸಿದ್ದೇಗೌಡ್ರು, ಯಾರಿಗೂ ಗೊತ್ತಾಗದೆ ದೇವರ ಕುತ್ತಿಗೆಯಲ್ಲಿದ್ದ ತಾಳಿಯನ್ನೇ ತೆಗೆದು ಕಟ್ಟಿದ್ದಾನೆ. ಭಾವನಾಳ ಜಾತಕ ದೋಷದ ಬಗೆಗಿನ ತಪ್ಪು ಕಲ್ಪನೆಯನ್ನು ಅಳಿಸಿ ಹಕಿದ್ದಾನೆ. ಆದರೆ ಭಾವನಾ ಮಾತ್ರ ಯಾರೂ ಎಂಬುದು ತಿಳಿಯದೆ ಕಂಗಲಾಗಿದ್ದಾಳೆ.

ಸಂತೋಷವನ್ನೇ ಮರೆತಿರುವ ಭಾವನಾ
ಕುತ್ತಿಗೆಗೆ ತಾಳಿ ಬಿದ್ದಾಗಿನಿಂದ ಭಾವನಾ ಮುಖದಲ್ಲಿ ನಗು ಹೋಗಿದೆ. ಯಾವುದೋ ಚಿಂತೆಯಲ್ಲಿಯೇ ಇರುತ್ತಾಳೆ. ಊಟ-ತಿಂಡಿಯನ್ನು ಸರಿಯಾಗಿ ಮಾಡುತ್ತಿಲ್ಲ. ಸೀರೆ ಹಾಕಿದರೂ ಸೆರಗು ಕುತ್ತಿಗೆಯನ್ನು ಮುಚ್ಚಿಯೇ ಇರುತ್ತದೆ. ಆದರೆ ಮನೆಯವರ್ಯಾರು ಇದನ್ನು ಗಮನಿಸುತ್ತಲೇ ಇಲ್ಲ. ಸದಾ ತಾಳಿ ಕಟ್ಟಿದವನ ಬಗ್ಗೆಯೇ ಚಿಂತಿಸಿ, ನಗುವನ್ನೇ ಮರೆತಿದ್ದಾಳೆ.
ಗೌಡ್ರಿಗೆ ಕರೆ ಮಾಡಿ ಹೇಳಿದ ಭಾವನಾ
ಭಾವನಾಗೆ ಒಳ್ಳೆಯ ಸ್ನೇಹ ಇರುವುದು ಗೌಡ್ರ ಬಳಿ. ತಾನೂ ಏನನ್ನೇ ಆದರೂ ಹೇಳಿಕೊಳ್ಳಬಹುದು ಎಂಬ ನಂಬಿಕೆ ಇಟ್ಟುಕೊಂಡಿದ್ದಾಳೆ. ಈ ತಾಳಿ ವಿಚಾರವನ್ನು ಮನೆಯಲ್ಲಿ ಯಾರ ಬಳಿಯೂ ಹೇಳಿಕೊಳ್ಳುವುದಕ್ಕೆ ಆಗುತ್ತಿಲ್ಲ. ಆದರೆ ಮನಸ್ಸು ಹಗುರಾಗುತ್ತಿಲ್ಲ, ಯಾವುದೇ ದಾರಿಯೂ ಸಿಗುತ್ತಿಲ್ಲ. ಹೀಗಾಗಿ ಗೌಡ್ರ ಬಳಿ ಮಾತನಾಡುವುದಕ್ಕೆ ಅಂತ ಕಾಲ್ ಮಾಡಿದ್ದಾಳೆ. ಅಂದು ನಡೆದಿದ್ದೆಲ್ಲವನ್ನು ಹೇಳಿದ್ದಾಳೆ. ಗೊತ್ತಿಲ್ಲದೇ ತಾಳಿ ಕಟ್ಟಿ ಹೋದ ಅವನು ಹೇಡಿ ಎಂದು ಗೌಡ್ರ ಬಳಿಯೇ ಬೈದಿದ್ದಾಳೆ.
ಭಾವನಾ ಮಾತಿಗೆ ಕುಸಿದ ಸಿದ್ದೇಗೌಡ್ರು
ಗೌಡ್ರು, ಭಾವನಾಗೆ ತಾಳಿಯ ಮಹತ್ವ ತಿಳಿಸಲು ಹೋಗಿದ್ದಾರೆ. ಹೀಗೆ ಗೊತ್ತಿಲ್ಲದೆ ತಾಳಿ ಕಟ್ಟಿದ್ದಾನೆ ಎಂದರೆ ಅದು ದೇವರ ಇಚ್ಚೆಯೇ ಇರಬಹುದು ಅಲ್ಲವೇ ಎಂದಿದ್ದಾನೆ. ಆದರೆ ಗೌಡ್ರ ಮಾತನ್ನು ಕೇಳದ ಭಾವನಾ, ತಾಳಿ ಕಟ್ಟಿದ ಮೇಲೆ ತನ್ನ ಸ್ಥಿತಿ ಹೇಗಾಗಿದೆ ಎಂಬುದನ್ನು ವಿವರಿಸಿದ್ದಾಳೆ. ಖುಷಿಯ ಜೊತೆಗೂ ಮಾತನಾಡುವುದಕ್ಕೆ ಆಗದಷ್ಟು ಸಂಕಟ ಪಡುತ್ತಿರುವ ಬಗ್ಗೆಯೂ ಹೇಳಿದ್ದಾಳೆ. ತಾಳಿ ಕಟ್ಟಿದವನ ಬಗ್ಗೆ ಕೋಪದಲ್ಲಿ ಮಾತನಾಡಿ, ಸಮಾಧಾನ ಮಾಡಿಕೊಳ್ಳಿ ಎಂದರು ಕೇಳದೆ ಕಣ್ಣೀರು ಹಾಕುತ್ತಲೇ ಕಾಲ್ ಕಟ್ ಮಾಡಿದ್ದಾಳೆ. ಭಾವನಾಳ ಅಳು ಕೇಳಿಸಿಕೊಂಡ ಗೌಡ್ರು ಕುಸಿದು ಬಿದ್ದಿದ್ದಾರೆ.
ಭಾವಾನಾಗೆ ವಾಯ್ಸ್ ಗೊತ್ತಾಗ್ತಿಲ್ವಾ?
ಗೌಡ್ರ ಜೊತೆ ಸಾಕಷ್ಟು ಸಲ ಮಾತನಾಡಿದ್ದಾಳೆ ಭಾವನಾ. ಹಾಗೇ ಸಿದ್ದೇಗೌಡ್ರನ್ನ ಬಹಳ ಹತ್ತಿರದಿಂದ ನೋಡಿದ್ದಾಳೆ. ಅವನ ಮಾತನ್ನು ಕೇಳಿಸಿಕೊಂಡಿದ್ದಾಳೆ. ಆದರೂ ಇಬ್ಬರ ವಾಯ್ಸ್ ಮೇಲೆ ಭಾವನಾಗ್ಯಾಕೆ ಅನುಮಾನ ಬರ್ತಿಲ್ಲ ಅನ್ನೋದು ಪ್ರೇಕ್ಷಕರ ಪ್ರಶ್ನೆ. ಇದೆಲ್ಲಾ ನಿರ್ಧಾರ ಮಾಡುವುದು ನಿರ್ದೇಶಕರೇ ಎಂಬುದು ಅವರಿಗೂ ಗೊತ್ತು. ಆದರೂ ಭಾವನಾಳನ್ನು ಇಷ್ಟೊಂದು ದಡ್ಡಿ ಮಾಡಿಬಿಟ್ಟರಲ್ಲ ನಿರ್ದೇಶಕರು ಎಂಬುದೇ ನೋಡುಗರ ಬೇಸರ. ಜೊತೆಗೆ ಭಾವನಾಳ ನೋವನ್ನು ನೋಡುವುದಕ್ಕೆ ಆಗ್ತಿಲ್ಲ, ಗೌಡ್ರು ಬೇಗ ಸತ್ಯ ಹೇಳಲಿ ಅಂತಿದ್ದಾರೆ.


Click it and Unblock the Notifications











