Lakshminivasa: ಖುಷಿಗೆ ಗೊತ್ತಾಯ್ತು ತಾಳಿ ವಿಚಾರ; ಪುಟ್ಟ ಹೋಗಿ ಹೇಳು ಅಂತಿದ್ದಾರೆ ಫ್ಯಾನ್ಸ್

By ಎಸ್ ಸುಮಂತ್

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಭಾವಾನಳನ್ನು ಕಂಡರೆ ಸಿದ್ದೇಗೌಡ್ರಿಗೆ ಭಲೇ ಇಷ್ಟ. ಆದರೆ ಅದನ್ನು ಹೇಳಿಕೊಳ್ಳುವಷ್ಟು ಧೈರ್ಯ ಇಲ್ಲ. ಮನೆಯಲ್ಲಿ ನೋಡಿದ್ರೆ ಬೇರೆ ಮದುವೆ ಮಾಡಲು ಹೊರಟಿದ್ದಾರೆ. ಪೂರ್ವಿಗೂ ಈ ಮದುವೆ ಇಷ್ಟವಿಲ್ಲದೆ ಹೋದರೂ ಮನೆಯವರ ಮಾತಿಗೆ ಕಟ್ಟು ಬಿದ್ದಿದ್ದಾಳೆ.

ಅತ್ತ ನೀಲು ಮದುವೆ ನಡೆದೇ ತೀರಬೇಕೆಂದು ಪಕ್ಕಾ ಪ್ಲ್ಯಾನ್ ಮಾಡುತ್ತಿದ್ದಾಳೆ. ಇದೆಲ್ಲ ಸಂಕಷ್ಟಗಳ ನಡುವೆ ಸಿಲುಕಿದ ಸಿದ್ದೇಗೌಡ್ರು, ದೇವರ ಮೇಲೆ ಭಾರ ಹಾಕಿ ತಾಳಿಯನ್ನು ಕಟ್ಟಿಯೇ ಬಿಟ್ಟಿದ್ದಾರೆ.

Zee kannada serial Lakshmi nivasa Written Update on june 26th episode

ಕುತ್ತಿಗೆಗೆ ತಾಳಿ ಬಿದ್ದಾಗಿನಿಂದ ಭಾವನಾ ಮಂಕಾಗಿ ಹೋಗಿದ್ದಾಳೆ‌. ಆ ತಾಳಿಯನ್ನು ಯಾರ ಮುಂದೆಯೂ ತೋರಿಸುವ ಧೈರ್ಯವನ್ನು ಮಾಡುತ್ತಿಲ್ಲ. ಮನೆಯಲ್ಲಿ ಸತ್ಯವನ್ನು ಹೇಳುವುದಕ್ಕೆ ಆಗುತ್ತಿಲ್ಲ. ಅಂಥಹ ಪರಿಸ್ಥಿತಿಯಲ್ಲಿ ಸಿಕ್ಕಿದ್ದಾಳೆ ಭಾವನಾ. ಆದರೆ ಈಗ ಖುಷಿಯ ಎದುರು ಸಿಕ್ಕಿಬಿದ್ದಿದ್ದಾಳೆ.

ಮನೆಯಲ್ಲಿ ಭಾವನಾ ಮದ್ವೆ ಚಿಂತೆ

ಮನೆಯಲ್ಲಿರುವ ಎಲ್ಲರಿಗೂ ಮದುವೆಯಾಗಿದೆ. ಚಿಕ್ಕಮಗಳು ಜಾಹ್ನವಿಗೂ ಮದುವೆಯಾಗಿದೆ. ಎಲ್ಲರೂ ಅವರವರ ಜೀವನ ನೋಡಿಕೊಳ್ಳುತ್ತಿರುವಾಗ ಭಾವನಾ ಒಬ್ಬಂಟಿಯಾಗಿ ಬಿಡುತ್ತಾಳೆ ಎಂಬ ಭಯ ಲಕ್ಷ್ಮೀಯದ್ದು. ಹೀಗಾಗಿ ಅವಳಿಗೊಂದು ಮದುವೆ ಮಾಡಬೇಕೆಂದು, ಒಳ್ಳೆಯ ವರ ಸಿಕ್ಕರೆ ಹೇಳಿ ಎಂದು ಲಕ್ಷ್ಮೀ ದೇವಸ್ಥಾನದ ಅರ್ಚಕರಿಗೂ ಹೇಳಿ ಬಂದಿದ್ದಾಳೆ.

ಗಂಡಿನ ಜಾತಕ ಕೊಟ್ಟ ಅರ್ಚಕರು

ಕುತ್ತಿಗೆಗೆ ತಾಳಿ ಬಿದ್ದಾಗಿಂದ ಭಾವನಾಗೆ ಮನಸ್ಸು ಸರಿ ಇಲ್ಲ. ಹೀಗಾಗಿ ದೇವಸ್ಥಾನಕ್ಕೆ ಬಂದರೆ ಸರಿಯಾಗಬಹುದು ಎಂದುಕೊಂಡು ದೇವಸ್ಥಾನಕ್ಕೆ ಬಂದಿದ್ದಾಳೆ. ದೇವರ ಮುಂದೆ ಕೂತು ಕಣ್ಣೀರು ಹಾಕಿದ್ದಾಳೆ. ಅದೇ ಸಮಯಕ್ಕೆ ಅರ್ಚಕರು ಬಂದು ಇದು ಗಂಡಿನ ಮಾಹಿತಿ. ಒಳ್ಳೆಯ ವರ ಇದ್ದರೆ ಹೇಳಿ ಎಂದಿದ್ದರು‌. ನಿಮ್ಮ ತಾಯಿಗೆ ಕೊಟ್ಟುಬಿಡಿ ಎಂದಿದ್ದಾರೆ. ಒಂದು ಕಡೆ ಗೊತ್ತಿಲ್ಲದೆಯೇ ಕುತ್ತಿಗೆಗೆ ತಾಳಿ ಬಿದ್ದಿದೆ. ಈಗ ನೋಡಿದ್ರೆ ಮತ್ತೊಂದು ಗಂಡನ್ನು ತೋರಿಸುತ್ತಿದ್ದೀಯಾ ಏನು ನಿನ್ನ ನಿರ್ಧಾರ ಎಂದು ದೇವರ ಮುಂದೆ ಮತ್ತೆ ಕಣ್ಣೀರು ಹಾಕಿದ್ದಾಳೆ.

Zee kannada serial Lakshmi nivasa Written Update on june 26th episode

ದಾರ ನೋಡಿ ಏನೆಂದು ಕೇಳಿದ ಖುಷಿ

ತಾಳಿ ಕಟ್ಟಿದಾಗಿನಿಂದ ಭಾವನಾ, ಖುಷಿಯ ಜೊತೆಗೂ ಅಷ್ಟೊಂದು ಚೆನ್ನಾಗಿ ಮಾತನಾಡಿರಲಿಲ್ಲ. ಈಗ ರೂಮಿನಲ್ಲಿ ಬಂದು ಆರಾಮವಾಗಿ ಕುಳಿತಿದ್ದಾಳೆ. ತಾಳಿ ಹಾಕಿರುವುದನ್ನು ಮರೆತು ಬಿಟ್ಟಿದ್ದಾಳೆ. ಖುಷಿ ಒಳಗೆ ಬಂದು ಮಾತನಾಡಿಸಿದ್ದಾಳೆ. ಅಜ್ಜಿ ಏನೋ ಘಮಘಮ ಅನ್ನಿಸ್ತಿರೋ ತಿಂಡಿ ಮಾಡ್ತಾ ಇದಾರೆ ಎಂದು ಹೇಳಿದ್ದಾಳೆ. ಹೀಗೆ ಇಬ್ಬರು ನಗುತ್ತಾ ಮಾತನಾಡುತ್ತಾ ಕುಳಿತಾಗ ಖುಷಿಯ ಕಣ್ಣಿಗೆ ಭಾವನಾಳ ತಾಳಿ ಕಾಣಿಸುತ್ತದೆ. ಭಾವನಾಮ್ಮ ಏನಿದು ಎಂದು ತಾಳಿ ತೆಗೆದು ನೋಡುವುದಕ್ಕೆ ಪ್ರಯತ್ನ ಪಟ್ಟಿದ್ದಾಳೆ.

ಮರುಗುತ್ತಿರುವ ಸಿದ್ದು

ಸಿದ್ದು ತನ್ನ ಪ್ರೀತಿ ಉಳಿಯಬೇಕು, ಭಾವಾನರನ್ನು ಬಿಟ್ಟು ಬೇರೆ ಯಾರನ್ನು ಮದುವೆಯಾಗಬಾರದು ಎಂಬ ಕಾರಣಕ್ಕೆ ತಾಳಿಯನ್ನೇನೋ ಕಟ್ಟಿದ್ದಾನೆ. ಆದರೆ ಭಾವಾನಳ ಕಣ್ಣೀರನ್ನು ನೋಡುಗರಿಗೆ ನೋಡುವುದಕ್ಕೆ ಆಗುತ್ತಿಲ್ಲ‌. ಭಾವನಾ ಕೂಡ ಖುಷಿಯಾಗಿದ್ದಾಳೆ ಅಂತ ಸಿದ್ದೇಗೌಡ್ರು ಭಾವಿಸಿದ್ದರು.

ಖುಷಿಗೆ ವೀಕ್ಷಕರ ಸಲಹೆ

ಭಾವನಾ ನಿನ್ನೆ ಕಣ್ಣೀರು ಹಾಕಿದಾಗಲೇ ಅರಿವಾಗಿದ್ದು‌ ಅವರು ಎಷ್ಟು ನೋವಲ್ಲಿದ್ದಾರೆ ಎಂಬುದು. ಈಗ ಖುಷಿ ತಾಳಿ ನೋಡುವುದಕ್ಕೆ ಹೊರಟಾಗಲೇ ಅಭಿಮಾನಿಗಳೆಲ್ಲಾ ಮೊದಲು ಹೋಗಿ ಮನೆಯವರಿಗೆಲ್ಲಾ ಹೇಳು. ಆಮೇಲೆ ಆದ್ರೂ ಭಾವನಾಳ ನಗುವನ್ನು ನೋಡಬಹುದು ಎಂದು ಖುಷಿಗೆ ಸಲಹೆ ನೀಡಿದ್ದಾರೆ.

More from Filmibeat

English summary
zee kannada serial Lakshmi nivasa today episode. Here is the details about The audience who advised kushi to tell the truth to the household;
Read more about: filmbeat original sumanth tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X