Lakshmi nivasa: ನಿರ್ಮಾಪಕರ ಜೊತೆಗೆ ಚೇಷ್ಠೆ ಮಾಡಿದ ಸೌಪರ್ಣಿಕಾ, ಸಿದ್ದೇಗೌಡ್ರ ಅತ್ತಿಗೆ!
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಎಲ್ಲಾ ಕಲಾವಿದರು ರೀಲ್ಸ್ ಮಾಡುವುದರಲ್ಲೂ ಮುಂದು. ಸೈಕಲ್ ಗ್ಯಾಪ್ ಸಿಕ್ಕಿದರೆ ಸಾಕು ಸಹ ಕಲಾವಿದರೇ ಸೇರಿಕೊಂಡು ರೀಲ್ಸ್ ಮಾಡುತ್ತಾ ಇರುತ್ತಾರೆ. ಅದರಲ್ಲೂ ನಿರ್ಮಾಪಕರನ್ನೇ ಎಳೆದುಕೊಂಡು ರೀಲ್ಸ್ ಮಾಡುತ್ತಾರೆ. ಭಂಡ ನನ್ನ ಗಂಡ ಅನ್ನೋ ಸ್ಟೈಲ್‌ನಲ್ಲಿ ರೀಲ್ಸ್ ಮಾಡಿದ್ದಾರೆ.
ಮಾನಸ ಮನೋಹರ್ ಈ ಮೊದಲು ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿ ಪಕ್ಕಾ ಗೌಡರ ಸೊಸೆಯಂತೆ ಕಾಣಿಸಿಕೊಂಡಿದ್ದಾರೆ. ಸದಾ ತಲೆ ಬಾಚಿ, ಹೂ ಮುಟ್ಟು, ಹಣೆ ತುಂಬಾ ಕುಂಕುಮವಿಟ್ಟು, ಸೀರೆಯಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಟೀಂ ನಿಂದ ಹೊಸದೊಂದು ರೀಲ್ಸ್ ಹೊರಗೆ ಬಂದಿದೆ.

ಗೌಡ್ರಿಗೂ ಸೌಪರ್ಣಿಕಾಗೂ ಪರಿಚಯ
ಜವರೇಗೌಡ ಹಾಗೂ ಸೌಪರ್ಣಿಕಾ ಫ್ಯಾಮಿಲಿಗೆ ಪರಿಚಯವಿದೆ. ಜಾಹ್ನವಿ ಮದುವೆಗೆ ಬಂದಾಗಲೂ ಅವರ ಮುಖಾಮುಖಿಯಾಗಿತ್ತು. ಈಗ ಖುಷಿ, ಭಾವನಾಳ ಮನೆಯಲ್ಲಿದ್ದಾಳೆ. ನಮಗೂ ಅವರಿಗೂ ಒಂದು ಭಿನ್ನಾಭಿಪ್ರಾಯವಾಗಿತ್ತು ಎಂದೇ ಹೇಳಿದ್ದಳು. ಗೌಡ್ರಿಗೂ ಭಾವನಾಗೂ ಬೀಗರ ಸಂಬಂಧ ಎಂಬುದು ಇನ್ನು ಸೌಪರ್ಣಿಕಾಗೆ ತಿಳಿದಂತೆ ಇಲ್ಲ. ಈಗ ಯಾವುದೋ ಸಹಾಯಕ್ಕೆ ಜವರೇಗೌಡರ ಮನೆಗೆ ಬಂದಿದ್ದಾರೆ. ರವಿ ಹಾಗೂ ಸೌಪರ್ಣಿಕಾ ಇಬ್ಬರು ಬಂದಿದ್ದಾರೆ. ಈ ಸೈಕಲ್ ಗ್ಯಾಪ್‌ನಲ್ಲಿಯೇ ಕುಟುಂಬಸ್ಥರ ಜೊತೆಗೆ ರೀಲ್ಸ್ ಮಾಡಿದ್ದಾರೆ.
ನಿರ್ಮಲಾ ಚಂಗಪ್ಪ ಜೊತೆಗೆ ರೀಲ್ಸ್
ಲಕ್ಷ್ಮೀ ನಿವಾಸ ಧಾರಾವಾಹಿಗೆ ಬಿಗ್ ಬಾಸ್ ಖ್ಯಾತಿಯ ನಿರ್ಮಲಾ ಚೆನ್ನಪ್ಪ ಹಾಗೂ ಸತ್ಯ ನಿರ್ಮಾಪಕರಾಗಿದ್ದಾರೆ. ಅವರ ಜೊತೆಗೂ ಸೇರಿ ರೀಲ್ಸ್ ಮಾಡಿದ್ದಾರೆ. ರವಿ, ಮಾನಸ ಗಂಡ, ಮಾನಸ ಕುಳಿತು ಹರಟೆ ಹೊಡೆಯುತ್ತಾ ಇರುತ್ತಾರೆ. ಅಲ್ಲಿಗೆ ಸೌಪರ್ಣಿಕಾಳನ್ನು ಕರೆದುಕೊಂಡು ಬಂದಂತ ನಿರ್ಮಾಲಾ, ಏನೋ ನನ್ನ ತಂಗಿಯನ್ನ ಏನೋ ಅಂದಂತೆ ಎಂದಿದ್ದಾರೆ. ಆಗ ಮಾನಸ ಗಂಡ, ಈಗ ಊಟ ಮಾಡುವಾಗ ಯಾರಾದ್ರೂ ಬಂದ್ರೆ ಊಟ ಮಾಡಿ ಅಂತ ಕರಿತೀವಿ ಹಾಗೇ ಮಲಗುವಾಗ ಬಂದ್ರು ಮಲಗೋಣಾ ಬಾ ಅಂತ ಕರಿದೆ ಎಂದು ಕಾಮಿಡಿ ಮಾಡಿದ್ದಾರೆ. ಈ ರೀಲ್ಸ್ ಎಲ್ಲರನ್ನು ನಕ್ಕು ನಗಿಸಿದ್ದಾರೆ.

ಸಿದ್ದೇಗೌಡ್ರ ಜೊತೆಗೆ ಮಾನಸ ರೀಲ್ಸ್
ಮಾನಸ ಮನೋಹರ್ ಈ ಧಾರಾವಾಹಿಯಲ್ಲಿ ಪಕ್ಕಾ ಗೃಹಿಣಿ ಪಾತ್ರ ಮಾಡಿದ್ದರು, ತೆರೆಯ ಹಿಂದೆ ಸಿಕ್ಕಾಪಟ್ಟೆ ಜೋಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಸಿದ್ದೇಗೌಡರ ಜೊತೆಗೆ ಫನ್ ರೀಲ್ಸ್ ಮಾಡುತ್ತಾ ಎಂಜಾಯ್ ಮಾಡುತ್ತಾ ಇರುತ್ತಾರೆ. ಅಷ್ಟೇ ಅಲ್ಲ ಗ್ಲಾಮರಸ್ ಫೋಟೋಶೂಟ್ ಅನ್ನು ಮಾಡಿಸುತ್ತಾ ಇರುತ್ತಾರೆ. ಅಭಿಮಾನಿಗಳು ಫಿದಾ ಆಗುವಂತಹ ಫೋಟೋಗಳನ್ನೇ ಹಂಚಿಕೊಳ್ಳುತ್ತಾ ಇರುತ್ತಾರೆ. ಇತ್ತಿಚೆಗಷ್ಟೇ ಫುಲ್ ಫಿಟ್ನೆಸ್ ಫ್ರೀಕ್ ಎನಿಸುವಂತ ಫೋಟೋವನ್ನು ಹಂಚಿಕೊಂಡಿದ್ದರು.
ಸೌಪರ್ಣಿಕಾ ಫುಲ್ ಗ್ಲಾಮರ್
ಇನ್ನು ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೌಪರ್ಣಿಕಾ ಖಳನಾಯಕಿ. ಆಸ್ತಿಗಾಗಿ ಎಲ್ಲಾ ಸಂಬಂಧವನ್ನು ಮುತಿದುಕೊಳ್ಳುವ ಸ್ವಾರ್ಥಿ. ಫುಲ್ ಗ್ಲಾಮರಸ್ ಗೊಂಬೆ. ಇದು ಧಾರಾವಾಹಿಯಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲು ಸ್ಟೈಲ್ ಐಕಾನ್ ಎಂದರೆ ತಪ್ಪಾಗಲಾರದು. ಸಿಕ್ಕಾಪಟ್ಟೆ ಮುದ್ದು ಮುದ್ದಾಗಿ ಕಾಣುವ ಸೌಪರ್ಣಿಕಾ ಅಲಿಯಾಸ್ ಯಶಸ್ವಿನಿ ಕೆ ಸ್ವಾಮಿ, ಸೋಷಿಯಲ್ ಮೀಡಿಯಾದಲ್ಲಿ ಸದಾ ಮಿಂಚುತ್ತಾ ಇರುತ್ತಾರೆ. ಲಕ್ಷ್ಮೀ ನಿವಾಸದ ಲಕ್ಷ್ಮೀ ಶ್ರೀನಿವಾಸರ ಕುಟುಂಬ ಎಂದರೆ ಸೌಪರ್ಣಿಕಾಗೆ ಒಂಚೂರು ಇಷ್ಟವಿಲ್ಲ. ಇದು ಕ್ಯಾಮಾರ ಮುಂದೆ. ಆದರೆ ಶೂಟಿಂಗ್ ಮುಗಿದರೆ ಮುಗೀತು, ಲಕ್ಷ್ಮೀ ಮಕ್ಕಳ ಜೊತೆಗೆ ಕುಣಿದು ಕುಪ್ಪಳಿಸುವುದೇ. ಹೀಗೆ ಎಲ್ಲರೂ ಜಾಲಿಯಾಗಿ ಶೂಟಿಂಗ್ ಮುಗಿಸುತ್ತಾರೆ.


Click it and Unblock the Notifications











