Lakshmi nivasa: ರಾಕ್ಷಸ.. ಉಗ್ರಪ್ರತಾಪಿ.. ಅಬ್ಬಬ್ಬಾ.. ಜಯಂತ್ ಸೈಕೋ ವರ್ತನೆಗೆ ಮಹಿಳೆಯರ ಆಕ್ರೋಶ!

By ಎಸ್ ಸುಮಂತ್

ಜಯಂತ್ ವ್ಯಕ್ತಿತ್ವದಂತ ವ್ಯಕ್ತಿಗಳು ನಿಜ ಜೀವನದಲ್ಲಿ ಇಲ್ಲ ಅಂತೇನಿಲ್ಲ.‌ ಎಷ್ಟೋ ಹೆಣ್ಣು ಮಕ್ಕಳ ಲೈಫ್‌ನಲ್ಲಿ ಇಂಥ ರಾಕ್ಷಸರು ಗಂಡನಾಗಿ ಬಂದಿದ್ದಾರೆ. ಆದರೆ ಹೇಳಿಕೊಳ್ಳಲಾಗದೇ ಸಂಕಟಪಟ್ಟುಕೊಂಡು ಅಲ್ಲೇ ಸಂಸಾರ ಮಾಡುವವರು ಒಂದಷ್ಟು ಹೆಣ್ಣು ಮಕ್ಕಳಾದರೆ, ಮನೆಯವರ ಬೆಂಬಲದಿಂದ ಅಂಥ ಸೈಕೋಗಳನ್ನು ಬಿಟ್ಟು ಬಂದು, ನೆಮ್ಮದಿಯಾಗಿ ಜೀವನ ನಡೆಸುತ್ತಿರುವವರು ಹಲವು ಹೆಣ್ಣು ಮಕ್ಕಳು.

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಇಂಥ ಕ್ರೂರತೆಯನ್ನು ತೆರೆಮೇಲೆ ನೋಡುತ್ತಿದ್ದೀವಿ. ಜಯಂತ್ ಪಾತ್ರ ಮಾಡಿರಯವ ದೀಪಕ್ ರಿಯಲ್‌ ಲೈಫ್‌ನಲ್ಲಿ ಸಾಫ್ಟ್ ಮನುಷ್ಯ. ಆದರೆ ಅಂಥ ಸೈಕೋ ಗಂಡಂದಿರ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಜಯಂತ್ ವರ್ತನೆಯೇ ಟಿವಿ ಮುಂದೆ ಕುಳಿತು ನೋಡುವ ಹೆಣ್ಣು ಮಕ್ಕಳಿಗೆ ಭಯ ಹುಟ್ಟಿಸಿದೆ.

Zee kannada serial Lakshmi nivasa Written Update on May 10th episode

ಜಾಹ್ನವಿ ಜೊತೆಗೂಡಿ ವಾಕ್

ಜಯಂತ್ ಒಂಥರ ಸೈಕೋ ಪ್ರೇಮಿ. ಜಾಹ್ನವಿ ಸದಾ ತನ್ನದೇ ಧ್ಯಾನದಲ್ಲಿರಬೇಕು, ತನ್ನನ್ನೇ ಪ್ರೀತಿಸಬೇಕು, ತನ್ನ ಜೊತೆಗೆ ಮಾತನಾಡಬೇಕು, ಸಣ್ಣ ಪುಟ್ಟ ವಿಚಾರಗಳನ್ನು ತನ್ನ ಬಳಿ ಹೇಳಬೇಕು. ಹೀಗೆ ಜಾಹ್ನವಿಗೆ ತನ್ನ ಹೊರತು ಪಡಿಸಿ ಬೇರೆ ಪ್ರಪಂಚವೇ ಇರಬಾರದು ಎಂಬ ಮನಸ್ಥಿತಿ. ಜಾಹ್ನವಿಯನ್ನು ಅತಿಯಾಗಿ ಪ್ರೀತಿಸುತ್ತಾನೆ. ಸಮಯ ಸಿಕ್ಕಾಗೆಲ್ಲಾ ಅವಳೊಂದಿಗೆ ಕಳೆಯುವುದಕ್ಕೆ ಇಷ್ಟಪಡುತ್ತಾನೆ. ಈಗ ಮನೆಗೆ ಬೇಗ ಬಂದಿದ್ದು ಹೆಂಡತಿ ಜೊತೆಗೂಡಿ ವಾಕ್ ಮಾಡಲು ಹೊರಟಿದ್ದಾನೆ.

ಪಂಜರದ ಗಿಳಿ ಎಂದ ಜಾಹ್ನವಿ

ಜಾಹ್ನವಿ ಇರುವ ಮನೆ ದೊಡ್ಡದೆ ಇರಬಹುದು, ಮನೆಯ ಒಳಗಡೆಯೇ ಎಲ್ಲಾ ಸೌಕರ್ಯ ಇರಬಹುದು. ಆದರೆ ಮಾತನಾಡೋದಕ್ಕೆ ಮನುಷ್ಯನು ಇಲ್ಲ. ಹೊರಗೆ ಹೋಗೋಣಾ ಎಂದರೆ ತನ್ನ ಬಳಿ ಲಾಕ್ ಕೂಡ ಇಲ್ಲ. ಹುಚ್ಚು ಹಿಡಿದಂತೆ ಫೀಲ್ ಆಗುವುದಿಲ್ಲವೆ. ಟಿವಿ ಕೂಡ ಇಲ್ಲ. ಪಂಜರದಲ್ಲಿ ಹಾಕಿದ ಗಿಳಿಯಂತೆ ಫೀಲ್ ಮಾಡುತ್ತಿದ್ದಾಳೆ. ಅದನ್ನೆ ಇಂದು ಜಯಂತ್ ಬಳಿ ಕೂಡ ಹೇಳಿದ್ದಾಳೆ.

ಜಾಹ್ನವಿಯನ್ನು ಅಪಾಯಕ್ಕೆ ನೂಕಿ ನಗು

ಜಯಂತ್ ಹಂಗೆಲ್ಲ ಏನು ಪ್ಲ್ಯಾನ್ ಇಲ್ಲದೇ ಮನೆಯಿಂದ ಹೊರಗೆ ಕರೆದುಕೊಂಡು ಬರಲ್ಲ. ಬೇಕಂತಾನೇ ಇವತ್ತು ಹೊರಗಡೆ ವಾಕ್ ಮಾಡೋಣ ಎಂದು ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಜಾಹ್ನವಿ, ಪಂಜರದೊಳಗಿನಿಂದ ಹೊರಗೆ ಬಂದಷ್ಟು ಖುಷಿ ಆಯ್ತು ಎಂದಿದ್ದಾಳೆ. ಆಗ ಜಯಂತ್‌ನನ್ನ ಪುಟ್ಟ ಹೃದಯದಲ್ಲಿ ನಿನ್ನ ಇಟ್ಟುಕೊಂಡಿದ್ದೀನಿ. ಅದನ್ನ ಪಂಜರ ಅಂತಾ ಇದ್ದೀಯ ಎಂದಿದ್ದಾನೆ. ಜಾಹ್ನವಿ ಹೇಳಿದ್ದೇ ಒಂದು ಜಯಂತ್ ಅರ್ಥ ಮಾಡಿಕೊಂಡಿದ್ದೆ ಒಂದು. ಏನೇನೋ ಕಲ್ಪನೆ‌ ಮಾಡಿಕೊಳ್ಳಬೇಡಿ ಎಂದು ಹೇಳಿದ ಜಾಹ್ನವಿಯನ್ನು ರೊಮ್ಯಾನ್ಸ್ ಮಾಡುವಂತೆ ನಾಟಕವಾಡಿ ಸ್ವಿಮ್ಮಿಂಗ್ ಪೂಲ್ ಗೆ ತಳ್ಳಿದ್ದಾನೆ.

Zee kannada serial Lakshmi nivasa Written Update on May 10th episode

ಜಯಂತ್ ಬಂದರೆ ನಡುಗುವ ಹೆಣ್ಣು ಮಕ್ಕಳು

ಜಯಂತ್ ನಗು ನಗುತ್ತಲೇ ಜಾಹ್ನವಿಯನ್ನು ಅಪಾಯಕ್ಕೆ ದೂಕಿದ್ದಾನೆ. ಜಾಹ್ನವಿಯ ಆ ಗೂಬೆ ವಿಚಾರ ಜಯಂತ್‌ಗೆ ಸಿಕ್ಕಾಪಟ್ಟೆ ತಲೆ ಕೆಡಿಸಿದೆ. ಆ ಸತ್ಯ ತಿಳಿದುಕೊಳ್ಳಲು ಈ ರೀತಿ ಮಾಡಿದನಾ ಏನೋ..? ಆದರೆ ಜಯಂತ್ ವರ್ತನೆಗೆ ವೀಕ್ಷಕರು ಪೋಷಕರಿಗೂ ಬುದ್ದಿ ಹೇಳುತ್ತಿದ್ದಾರೆ. ಯಾರೋ ಶ್ರೀಮಂತ ಬಂದ ಎಂದಾಕ್ಷಣ ಅವನ ಮನೆಯನ್ನು ನೋಡದೆ ಹೆಣ್ಣು ಮಕ್ಕಳನ್ನು ಕೊಡಬೇಡಿ ಎಂದು ಸಲಹೆ ನೀಡಿದ್ದಾರೆ. ಇನ್ನು ಒಂದಷ್ಟು ಹೆಣ್ಣು ಮಕ್ಕಳು, ಜಯಂತ್ ಮನುಷ್ಯ ರೂಪದ ರಾಕ್ಷಸ, ಉಗ್ರಪ್ರತಾಪಿ ಅಂತೆಲ್ಲ ಬೈದಿದ್ದಾರೆ.

More from Filmibeat

English summary
Lakshmi nivasa kannada serial today episode. Here is the details about Jayant pushed Jahnavi into the swimming pool;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X