Lakshmi Nivasa: ಮನೆಯವರ ಜೊತೆಗೂ ಮಾತಾಡದಂತೆ ನೆಟ್ವರ್ಕ್ ಕಟ್; ಜಯಂತ್ ಒಳ್ಳೆ ಪ್ರೇಮಿನೇ.. ಆದ್ರೆ..

By ಎಸ್ ಸುಮಂತ್

ಜಯಂತ್ ಮೊದಲಿಂದ ಅನಾಥಶ್ರಮದಲ್ಲಿ ಬೆಳೆದಾತ. ಅವನ ಜೊತೆಗೆ ವೆಂಕಿ ಕೂಡ ಬೆಳೆದಿದ್ದ. ಆದರೆ ಜಯಂತ್ ಆ ಫ್ರೆಂಡ್ ಇದೇ ವೆಂಕಿನಾ ಅಂತ ತಿಳಿಯುತ್ತಿಲ್ಲ. ಯಾರ ಜೊತೆಗೂ ಬೆಳೆಯದ, ಯಾರ ಪ್ರೀತಿಯೂ ಪಡೆಯದ ಜಯಂತ್ ಇದೀಗ ಮದುವೆಯಾದ ಮೇಲೆ ಹೆಚ್ಚು ಸ್ವಾರ್ಥಿಯಾಗಿದ್ದಾನೆ. ಹೆಂಡತಿ ತನ್ನನ್ನು ಮಾತ್ರ ಪ್ರೀತಿಸಬೇಕು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾನೆ.

ಜಯಂತ್ ಅದೆಷ್ಟು ಸ್ವಾರ್ಥಿಯೆಂದರೆ, ಜಾಹ್ನವಿಯ ಪ್ರತಿಕ್ಷಣ ಅವನಿಗಾಗಿಯೇ ಮೀಸಲಿಡಬೇಕು. ಕಾಲೇಜಿನಲ್ಲಿ ಫ್ರೆಂಡ್ಸ್‌ಗೆ ಮುದ್ದು ಮುದ್ದಾದ ಹೆಸರಿಟ್ಟರೆ, ನನಗ್ಯಾಕೆ ಇಟ್ಟಿಲ್ಲ. ಅವಳಿಗೆ ಪ್ರೀತಿ ಇಲ್ಲವೇನೋ ಎಂದು ಅನುಮಾನ ಪಡುತ್ತಾನೆ. ಮನೆಯವರ ಜೊತೆಗೆ ಹೆಚ್ಚು ಮಾತನಾಡಿದರೆ ನನ್ನ ಜೊತೆಗೆ ಮಾತನಾಡಲು ಉಷ್ಟವಿಲ್ಲವೇನೋ ಎಂದು ಥಿಂಕ್ ಮಾಡುತ್ತಾನೆ. ಜಾಹ್ನವಿ ಯಾರ ಜೊತೆಗೂ ಮಾತನಾಡದೇ ಎಲ್ಲಿಯೂ ಹೋಗದಂತೆ ತನಗೆ ಮಾತ್ರ ಮೀಸಲಿರಬೇಕು. ಇದು ಜಾಹ್ನವಿಯನ್ನು ಕಟ್ಟ ಹಾಕಿದಂತೆ ಆಗುತ್ತಿದೆ.

zee kannada serial Lakshmi nivasa Written Update on May 15th episode

ಮನೆಯ ನೆಟ್ವರ್ಕ್ ತೆಗೆದ ಜಯಂತ್

ಜಯಂತ್ ನಡವಳಿಕೆಯನ್ನ ಅದೆಷ್ಟೋ ಸಲ ಅರ್ಥ ಮಾಡಿಕೊಳ್ಳಲಾಗದೇ ಜಾಹ್ನವಿ ಕಣ್ಣೀರು ಹಾಕಿದ್ದಾಳೆ. ಜಯಂತ್ ಪದೇ ಪದೇ ಯಾಕ್ ನೀವೂ ನನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಕೇಳಿದಾಗೆಲ್ಲಾ ಜಾಹ್ನವಿಯೇ ಕ್ಷಮೆ ಕೇಳಿ, ಪ್ರೀತಿ ನೀಡುತ್ತಾಳೆ, ಸಂಸಾರ ಸರಿ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾಳೆ‌. ಆದರೆ ಜಯಂತ್ ಸ್ವಾರ್ಥ ಈಗ ಮತ್ತು ಒಂದು ಹೆಜ್ಜೆ ಮುಂದೆ ಹೋಗಿದೆ, ಮನೆಯ ನೆಟ್ವರ್ಕ್ ಕಟ್ ಆಗಿದೆ.

ಜಾಹ್ನವಿ ಪರದಾಟ

ಜಾಹ್ನವಿ ಮನೆಯಲ್ಲಿ ಒಬ್ಬಳೇ ಇರುತ್ತಾಳೆ. ಮಾತನಾಡುವುದಕ್ಕೂ ಜನ ಇಲ್ಲ, ಮನರಂಜನೆಗೆ ಟಿವಿಯೂ ಇಲ್ಲ. ಗಂಡ ಆಫೀಸಿಗೆ ಹೋದಾಗ ಅವಳು ಅವರಮ್ಮನ ಜೊತೆಗೆ ಮಾತನಾಡುತ್ತಾಳೆ. ಇವತ್ತು ವಿಡಿಯೋ ಕಾಲ್‌ನಲ್ಲಿ ಮನೆಯವರೆಲ್ಲರ ಜೊತೆಗೆ ಮಾತನಾಡಿದ್ದಳು. ಅಷ್ಟೇ ಅಲ್ಲ ಅಡುಗೆ ವಿಚಾರದಲ್ಲಿ ಅಮ್ಮನ ಬಳಿ ಕೇಳಿಕೊಂಡು ಮಾಡುತ್ತಾಳೆ. ಆದರೆ ಎಷ್ಟೇ ಪ್ರಯತ್ನ ಪಟ್ಟರು ನೆಟ್ವರ್ಕ್ ಕನೆಕ್ಟ್ ಆಗ್ತಿಲ್ಲ. ಪಾಪ ಜಾಹ್ನವಿಗೇನು ಗೊತ್ತು ತನ್ನ ಗಂಡನ ಮಹಿಮೆ. ತನ್ನದೇ ಸಿಮ್ ಪ್ರಾಬ್ಲಮ್ ಅಂದುಕೊಂಡು ತೆಗೆದು ತೆಗೆದು ನೋಡಿದ್ದಾಳೆ.

zee kannada serial Lakshmi nivasa Written Update on May 15th episode

ನನಗೆ ಮಾತ್ರ ಎಂದ ಜಯಂತ್

ಜಯಂತ್ ಪ್ರತಿದಿನ ಆಫೀಸ್‌ನಲ್ಲಿ ಕೂತು ಮನೆಯಲ್ಲಿ ಜಾನು ಏನು ಮಾಡ್ತಾ ಇದ್ದಾಳೆ ಎಂಬುದನ್ನು ನೋಡುವುದೇ‌ ಕೆಲಸವಾಗಿರುತ್ತದೆ. ಮನೆಯಲ್ಲಿ ಒಬ್ಬಳನ್ನೇ ಬಿಟ್ಟು ಬರುವುದು ತನಗೆ ಕಾಲ್ ಮಾಡಿ ಮಾತನಾಡಬೇಕೆಂಬ ಸ್ವಾರ್ಥ. ಈಗ ಮತ್ತೆ ಸಿಸಿಟಿವಿ ತೆಗೆದು ನೋಡಿದ್ದಾನೆ. ನನ್ನ ಚಿನ್ನಮರಿ ಏನು ಮಾಡ್ತಾ ಇದಾಳೆ ಅಂತ ನೋಡಿದಾಗ ಅವಳ ಪರದಾಟ ಕಂಡಿದ್ದಾನೆ. ಒಂದು ಕ್ಷಣ ಖುಷಿ ಪಟ್ಟಿದ್ದಾನೆ.

ಲ್ಯಾಂಡ್ ಲೈನ್ ನೋಡಿ ಶಾಕ್

ಜಾಹ್ನವಿ ಸಿಮ್ ಎಲ್ಲಾ ತೆಗೆದು ಟ್ರೈ ಮಾಡಿದ್ದನ್ನು ಕಂಡು ಒಂದು ಕ್ಷಣ ಹೊಟ್ಟೆ ಉರಿದುಕೊಳ್ಳುತ್ತಾನೆ. ಆಮೇಲೆ ನಿಮ್ಮ ಮನೆಯವರ ಜೊತೆಗೆ ಅದೇಗೆ ಮಾತನಾಡುತ್ತೀಯ ಅಂತ ನಾನು ನೋಡ್ತೀನಿ ಎಂದು ಗಹಗಹಿಸಿ ನಕ್ಕಿದ್ದಾನೆ. ನನ್ನ ನಿನ್ನ ನಡುವೆ ಯಾರೇ ಬಂದರು ಅದನ್ನು ಈ ಜಯಂತ್ ಸಹಿಸುವುದಿಲ್ಲ ಎಂದಿದ್ದಾನೆ. ಈಗಾಗಲೇ ಬಂದವರನ್ನು ಮಟ್ಟ ಹಾಕಿದ್ದಾನೆ. ಜಾನು ಅದೇ ಬೇಸರದಲ್ಲಿ ಅಡುಗೆ ಮನೆ ಕಡೆಗೆ ಬಂದಿದ್ದಾಳೆ. ಅಲ್ಲಿ ಲ್ಯಾಂಡ್ ಲೈನ್ ಕಂಡು ವರ್ಕ್ ಆಗುತ್ತಾ ಎಂದು ನೋಡಿದ್ದಾಳೆ. ಅದು ವರ್ಕ್ ಆಗಿದ್ದನ್ನು ಕಂಡು ಖುಷಿಯಾಗಿದ್ದಾಳೆ. ಇದನ್ನು ನೋಡಿದ ಜಯಂತ್, ಶಾಕ್ ಆಗಿದ್ದಾನೆ. ಕೋಪ ಮಿತಿಮೀರಿದಂತೆ ಆಡಿದ್ದಾನೆ.

More from Filmibeat

English summary
Zee kannada serial Lakshmi nivasa today episode. Here is the details about Jayant made Jahnavi not to talk to her family;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X