Lakshmi nivasa: ಜಾಹ್ನವಿಗೆ ಮನೆಯವರ ಜೊತೆಗೂ ಸಂಪರ್ಕ ಕಟ್: ಮಾನಸಿಕ ಅಸ್ವಸ್ಥಳಾಗುವುದೊಂದೆ ಬಾಕಿ!
ಜಯಂತ್ ಎಂಥ ದೊಡ್ಡ ಸೈಕೋ ಎಂಬುದು ಈಗಾಗಲೇ ಎಲ್ಲರಿಗೂ ಅರಿವಾಗಿದೆ. ಜಾಹ್ನವಿ ಯಾರೊಂದಿಗೂ ಹೆಚ್ಚು ಕ್ಲೋಸ್ ಆಗಿ ಮಾತನಾಡುವಂತೆ ಇಲ್ಲ. ಜಾಹ್ನವಿಯನ್ನು ಯಾರು ಕೂಡ ಸಲಿಗೆಯಿಂದ ಮಾತನಾಡಿಸುವಂತೆ ಇಲ್ಲ. ಇಂದು ವೇಳೆ ಆ ಸಲಿಗೆ ಜಯಂತ್ ಕಣ್ಣಿಗೆ ಬಿದ್ದರೆ ಆ ಮನುಷ್ಯ ಭೂಮಿ ಮೇಲೆ ಬದುಕುವುದೆ ಇಲ್ಲ. ಅಷ್ಟು ಕ್ರೂರವಾಗಿ ಅನುಭವಿಸುತ್ತಾನೆ.
ಜಯಂತ್‌ನದ್ದು ಹುಚ್ಚು ಪ್ರೀತಿ ಎನ್ನಬೇಕಾ, ಸ್ವಾರ್ಥಿ ಎನ್ನಬೇಕಾ ತಿಳಿಯುತ್ತಿಲ್ಲ. ಆದರೆ ಇದಂತೂ ಪ್ರೀತಿಯಾಗುವುದಕ್ಕೆ ಸಾಧ್ಯವೇ ಇಲ್ಲ. ಪ್ರೀತಿ ಮಾಡುವವರು ಆ ವ್ಯಕ್ತಿಗೆ ಏನಿಷ್ಟ, ಯಾವುದು ಕಷ್ಟ ಎಂಬುದನ್ನು ಅರಿಯುವುದಕ್ಕೆ ಪ್ರಯತ್ನ ಪಡುತ್ತಾರೆ. ಆದರೆ ಜಯಂತ್‌ನದ್ದು ಹಾಗಲ್ಲ. ಜಾಹ್ನವಿಗೆ ಯಾವುದು ಇಷ್ಟವೋ ಅದೆಲ್ಲವನ್ನು ಕಿತ್ತುಕೊಂಡು, ತನಗೇನು ಇಷ್ಟವೋ, ತನಗೇಗೆ ಇಷ್ಟವೋ ಆ ರೀತಿ ವಾತಾವರಣವನ್ನು ಸೃಷ್ಟಿಸುತ್ತಿದ್ದಾನೆ. ಇದು ಜಾಹ್ನವಿಗೆ ಕಟ್ಟಿ ಹಾಕಿದಂತೆ ಆಗುತ್ತಿದೆ. ಇಷ್ಟರಲ್ಲಿಯೇ ಹುಚ್ಚಿಯಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.

ಹಾಡು ಮಾತ್ರ ಕೇಳಲು ಅವಕಾಶ
ಜಯಂತ್ ಯೋಚನೆ ಮಾಡುವ ರೀತಿಯೇ ಬೇರೆ ಥರ. ಜಾಹ್ನವಿಗೆ ಯಾರು ಮಾತನಾಡಿಸದೆ ಇದ್ದಾಗ ನನ್ನ ಮಾತ್ರ ಮಾತನಾಡಿಸುತ್ತಾಳೆ, ನನ್ನ ಮಾತ್ರ ಪ್ರೀತಿ ಮಾಡುತ್ತಾಳೆ ಎಂಬ ಭ್ರಮೆ. ಜಯಂತ್ ಆಫೀಸಿಗೆ ಹೋದ ಮೇಲೆ ಜಾಹ್ನವಿ ಮನೆಯಲ್ಲಿ ಒಬ್ಬಳೆ ಇರುತ್ತಿದ್ದಳು. ಆದ ಕಾರಣಕ್ಕೆ ಮನೆಯವರಿಗೆ ಕಾಲ್ ಮಾಡಿ ಮಾತನಾಡುತ್ತಿದ್ದಳು. ಮನೆಯವರ ಜೊತೆಗೆ ಮಾತನಾಡಿದರು ಸಹಿಸದ ಜಯಂತ್, ಈಗ ಎಲ್ಲಾ ಕಡೆಯ ಸಂಪರ್ಕ ಕಟ್ ಮಾಡಿದ್ದಾನೆ. ಅವನ ನಿರೀಕ್ಷೆ ಹಾಡು ಕೇಳುತ್ತಾ ಕಾಲ ಕಳೆಯಬೇಕು. ಜಾಹ್ಮವಿಗೆ ಕಾಣುವಂತೆ ಟೇಪ್ರಿಕಾರ್ಡ್ ಇಟ್ಟು ಬಂದಿದ್ದ. ಅದೃಷ್ಟ ಜಾಹ್ನವಿಗೆ ಅದೇ ಸಿಕ್ಕಿದೆ.
ಜಾಹ್ನವಿ ತಂದೆ-ತಾಯಿಗೆ ಆತಂಕ
ಜಾಹ್ನವಿ ಮನೆಯವರಿಗೆಲ್ಲಾ ಪ್ರತಿದಿನ ಕಾಲ್ ಮಾಡುತ್ತಿದ್ದಳು. ಅಮ್ಮನ ಬಳಿ ಅಡುಗೆ ಏನು ಮಾಡುವುದು ಅಂತ ಕೇಳುತ್ತಿದ್ದಳು. ಆದರೆ ಈಗ ಮೊಬೈಲ್ ಸ್ವಿಚ್ಡ್ ಆಫ್ ಬರ್ತಿದೆ. ಜಾಹ್ನವಿ ಕಾಲ್ ಮಾಡುತ್ತಿದ್ದ ಸಮಯಕ್ಕೇನೆ ಲಕ್ಷ್ಮೀ ಕಾಲ್ ಮಾಡಿದ್ದಾಳೆ. ಕನೆಕ್ಟ್ ಆಗಿಲ್ಲ. ಶ್ರೀನಿವಾಸ್ ಮಾಡಿದಾಗಲೂ ಸ್ವಿಚ್ಡ್ ಆಫ್ ಬರ್ತಿದೆ. ಇದು ಸಹಜವಾಗಿಯೇ ತಂದೆ ತಾಯಿಗೆ ಗಾಬರಿಯಾಗಿದೆ. ಅಳಿಯನಿಗೆ ಕರೆ ಮಾಡಿ, ಕಡೆಗೂ ಮಗಳ ಮನೆಯನ್ನು ಹುಡುಕಿದ್ದಾರೆ. ಮನೆಗೆ ಬಂದ ಅಪ್ಪ ಅಮ್ಮನನ್ನು ಕಂಡು ಕೊಂಚ ಸಮಾಧಾನಗೊಂಡಿದ್ದಾಳೆ ಜಾಹ್ನವಿ.
ಜಾಹ್ನವಿ ನೋಡಿ ಜಯಂತ್ ಖುಷಿ
ಜಯಂತ್‌ಗೆ ಅದೇನೋ ಖುಷಿ. ತಾನು ಕೊಟ್ಟ ಹಿಂಸೆಯಿಂದ ಜಾಹ್ನವಿ ನರಳಿದರೆ ಒಂಥರಾ ಸುಖ. ಈಗ ಜಾಹ್ನವಿ ಏನು ಮಾಡುತ್ತಿದ್ದಾಳೆಂದು ಸಿಸಿಟಿವಿನಲ್ಲಿ ನೋಡಿಕೊಂಡು ಕೂತಿದ್ದಾನೆ. ಅವಳ ಕಣ್ಣಲ್ಲಿ ನೀರು ಬಂದರೂ, ಸ್ವಲ್ಪ ದಿನ ಅಡ್ಜೆಸ್ಟ್ ಮಾಡಿಕೋ ಚಿನ್ನುಮರಿ ಅಂತಾನೆ, ಚಿತ್ರಹಿಂಸೆ ಕೊಡ್ತಾನೆ.

ಹುಚ್ಚಿಯಾಗ್ತಾಳೆ ನೋಡಿ ಜಾಹ್ನವಿ!
ಜಾಹ್ನವಿ ತುಂಬು ಕುಟುಂಬದಿಂದ ಬಂದ ಹುಡುಗಿ.ಒಂದು ಕ್ಷಣವೂ ಸುಮ್ಮನೆ ಇರದೇ ವಟ ವಟ ಅಂತ ಮಾತನಾಡುತ್ತಿದ್ದವಳು. ಕಾಲೇಜಿನಲ್ಲಿ ಮಾತಿನ ಮಲ್ಲಿ. ಇಂಥ ಹುಡುಗಿಗೆ ಸಡನ್ ಆಗಿ ಮಾತು ನಿಲ್ಲಿಸಿ ಬಿಟ್ಟರೆ, ಮೌನವಾಗಿ ಬಿಡುತ್ತಾಳೆ. ಜಯಂತ್ ಮಾಡುವ ಇಂಥ ಉಲ್ಟಾ ಐಡಿಯಾಗಳಿಂದ ಜಾಹ್ನವಿ ಬೇಗನೇ ಮೌನಕ್ಕೆ ಜಾರಬಹುದು. ಪ್ರಪಂಚದ ಪರಿವೇ ಇಲ್ಲದಂತೆ ಕೋಮಾಗೂ ಹೋಗಬಹುದು. ಹುಚ್ಚಿಯಂತೆ ಆಡಬಹುದು. ಆದರೆ ಜಯಂತ್ ಗೆ ಅದ್ಯಾವುದರ ವ್ಯತ್ಯಾಸವೇ ಬರುವುದಿಲ್ಲ. ಜಿರಲೆಯನ್ನೆ ಹಾಲಿಗೆ ಹಾಕಿ ಕುಡಿದವನಿಗೆ, ಹುಚ್ಚಿಯಾದರೂ ಅವಳನ್ನೇ ಇನ್ನಷ್ಟು ಹಿಂಸೆ ಕೊಟ್ಟು ಬದುಕುವ ಕ್ರೂರತೆ ಅವನಿಗೇನು ಹೊಸತಲ್ಲ.


Click it and Unblock the Notifications











