Lakshminivasa: ಸಿದ್ದೇಗೌಡ್ರ ಪರಿಸ್ಥಿತಿ ನೋಡಿ ಫ್ಯಾನ್ಸ್ ಸಲಹೆ; ಭಾವನಾಳಿಂದ ದೂರ ಇರಬೇಕಂತೆ..!
ಭಾವನಾ ಮೂಲ ನಕ್ಷತ್ರದಲ್ಲಿ ಹುಟ್ಟಿರುವ ಕಾರಣ ಮದುವೆ ಎಂಬುದು ದೂರದ ಮಾತಾಗಿದೆ. ಹೆಣ್ಣು ಒಪ್ಪಿಕೊಂಡು ಹೋದವರ್ಯಾರು ಜಾತಕ ಒಪ್ಪುತ್ತಿಲ್ಲ. ಮದುವೆಯಾಗಬೇಕಿದ್ದ ಶ್ರೀಕಾಂತ್ ಸತ್ತೇ ಹೋದ. ಈ ಘಟನೆಗಳೆಲ್ಲಾ ಭಾವನಾ ಮೇಲೆ ಕಠಿಣವಾದ ಪರಿಣಾಮವನ್ನೇ ಬೀರಿದೆ. ಹೀಗಾಗಿ ಮದುವೆ ಎಂಬ ವಿಚಾರದಿಂದ ಬಹಳ ದೂರವೇ ಉಳಿದಿದ್ದಾಳೆ. ಮದುವೆ ಎಲ್ಲಾ ಏನು ಬೇಡ, ಖುದಿಯೊಬ್ಬಳು ಜೊತೆಗಿದ್ದರೆ ಸಾಕು ಎನ್ನುತ್ತಿದ್ದಾಳೆ.
ಭಾವನಾಗೆ ಮದುವೆ ಜೀವನ ಸಾಕಾಗಿದೆ. ಎಲ್ಲರೂ ಆಡುವ ಮಾತುಗಳು ನೋವು ತಂದಿದೆ. ಆದರೆ ಅತ್ತ ಅಪ್ಪ ಅಮ್ಮನಿಗೆ ಭಾವನಾಳ ಜೀವನ ಸರಿಯಾಗಬೇಕು ಎಂಬುದಷ್ಟೇ ಇರುವುದು. ಅದಕ್ಕಾಗಿ ಈಗ ಮತ್ತೆ ಗಂಡು ಹುಡುಕುವುದಕ್ಕೆ ಶುರು ಮಾಡಿದ್ದಾರೆ. ಇದು ಸಿದ್ದೇಗೌಡ್ರಿಗೆ ಗೊತ್ತಾಗಿ, ಬಾಲ ಸುಟ್ಟ ಬೆಕ್ಕಿನಂತೆ ಆಡುತ್ತಿದ್ದಾನೆ.

ಸಿದ್ದೇಗೌಡ್ರಿಗೆ ವಿಚಾರ ಹೇಳಿದ ಭಾವನಾ
ಸಿದ್ದೇಗೌಡ್ರೇ ತಾನೂ ಎಲ್ಲಾ ಭಾವನೆ ಹಂಚಿಕೊಳ್ಳುವ ಗೌಡ್ರು ಎಂಬುದು ಭಾವನಾಗೆ ತಿಳಿದಿಲ್ಲ. ಅದಕ್ಕಾಗಿಯೇ ಭಾವನಾ ತನ್ನೆಲ್ಲಾ ನೋವನ್ನು ಗೌಡ್ರ ಬಳಿ ಹಂಚಿಕೊಳ್ಳುತ್ತಾ ಇರುತ್ತಾಳೆ. ಆದರೆ ಗೌಡ್ರಿಗೆ ತಾನು ಮಗುವಿನ ತಾಯಿ ಅಂತ ಸೇವ್ ಮಾಡಿಕೊಂಡಿರುವವರು ತನ್ನ ಕಮಲಿ ಎಂದು ಯಾವತ್ತೋ ಗೊತ್ತಾಗಿ ಬಿಟ್ಟಿದೆ. ಇದೀಗ ಭಾವನಾ ಹೇಳಿದ ಮಾತು ತಲೆ ತಿರುಗುವಂತೆ ಮಾಡಿದೆ. ಜಾನು ಸಂಸಾರ ಸರಿಯಾಗಿರುವುದಕ್ಕೆ ಭಾವನಾಳಿಗೂ ಒಂದು ಮದುವೆ ಮಾಡುವ ನಿರ್ಧಾರ ಮಾಡಿದ್ದಾರೆ ಮನೆಯವರು. ಈ ವಿಚಾರ ತಿಳಿದ ಸಿದ್ದೇಗೌಡ್ರು ನೋವಲ್ಲಿದ್ದಾರೆ.
ಭಾವನಾಗೆ ಪ್ರೀತಿ ಹೇಳಲು ನಿರ್ಧಾರ
ಒಳಗೊಳಗೆ ಮಸಲತ್ತು ಮಾಡುವ ಅತ್ತಿಗೆಗೆ ಸಿದ್ದೇಗೌಡ್ರ ಪ್ರೀತಿ ಗೊತ್ತಿದೆ. ಪಾಪ ಅದನ್ನು ಒಳ್ಳೆಯತನ ಎಂದು ನಂಬಿರುವ ಸಿದ್ದೇಗೌಡ್ರು ಈಗ ಅವಳ ಬಳಿಯೇ ಪ್ರೀತಿ ವಿಚಾರಕ್ಕೆ ಸಲಹೆಗಳನ್ನು ಕೇಳಿದ್ದಾರೆ. ಅವರು ನಾನು ಎದುರು ಬಂದರೇನೆ ಸುಮ್ಮನೆ ಇರುವುದಿಲ್ಲ. ಪ್ರೀತಿ ಒಪ್ಪಿಕೊಳ್ಳುವುದು ಎಲ್ಲಿಂದ ಬಂತು ಎಂದು ಕೇಳಿದ್ದಾನೆ. ಅದಕ್ಕೆ ಸಿದ್ದೇಗೌಡ್ರ ಅತ್ತಿಗೆ ಮೊದಲು ನಿನ್ನ ಪ್ರೀತಿ ಹೇಳು ಅಂತ ಹುರಿದುಂಬಿಸಿದ್ದಾಳೆ.
ಭಾವನಾ ಆಫೀಸಿಗೆ ಬಂದ ಸಿದ್ದೇಗೌಡ್ರು
ಸಿದ್ದೇಗೌಡ್ರಿಗೂ ಬೇರೆ ದಾರಿಯಿಲ್ಲ. ಪ್ರೀತಿಯನ್ನು ಹೇಳಲೇಬೇಕಾಗಿದೆ. ಆದರೆ ಭಾವನಾ ಸಿದ್ದೇಗೌಡ್ರನ್ನ ನೋಡುವುದೇ ಬೇರೆ, ಗೌಡ್ರನ್ನುನೋಡುವುದೇ ಬೇರೆ. ಈಗ ಭಾವನಾಳ ಆಫೀಸಿಗೆ ಬಂದ ಗೌಡ್ರನ್ನ ಕಂಡು ಕೋಪ ಮಾಡಿಕೊಂಡಿದ್ದಾಳೆ. ನನ್ನನ್ನೇ ನೋಡುವುದಕ್ಕರ ಬಂದಿರುವುದು ಅಂತ ಜಗಳವನ್ನೇ ಆಡಿದ್ದಾಳೆ. ಸಿದ್ದೇಗೌಡ್ರು ಎಷ್ಟು ಸಲ ಹೇಳಿದರು ಕೇಳುತ್ತಿಲ್ಲ. ಯಾವುದೋ ಕೆಲಸಕ್ಕೆ ಬಂದಿದ್ದೀನಿ ಅಂತ. ಸಿದ್ದೇಗೌಡ್ರು ಹಿಂದೆ ಹಿಂದೆ ತಿರುಗುವುದಕ್ಕೆ ಭಾವನಾ ಮನಸ್ಸಲ್ಲಿ ಕೋಪ ಹೆಚ್ಚಾಗಿದೆ.

ಸಿದ್ದೇಗೌಡ್ರುಗೆ ಫ್ಯಾನ್ಸ್ ಸಲಹೆ
ಸಿದ್ದೇಗೌಡ್ರ ಒಳ್ಳೆಯತನ ನೋಡುಗರಿಗೆ ಚೆನ್ನಾಗಿಯೇ ಗೊತ್ತು. ಅದಕ್ಕೆ ಫ್ಯಾನ್ಸ್ ಬೇಸರ ಮಾಡಿಕೊಳ್ಳುತ್ತಿದ್ದಾರೆ. ಸಿದ್ದೇಗೌಡ್ರೆ ನೀವೂ ಭಾವನಾ ಹಿಂದೆ ಜಾಸ್ತಿ ಹೋಗಬೇಡಿ. ಒಂದು ವಾರ ಸುಮ್ಮನೆ ಇದ್ದು ಬಿಡಿ. ಆಗ ಗೊತ್ತಾಗುತ್ತೆ. ಭಾವನಾ ಮನಸ್ಸಲ್ಲೂ ಪ್ರೀತಿ ಇರುವುದು ಹೊರಗೆ ಬರುತ್ತದೆ ಎಂದು ಒಬ್ಬ ಅಭಿಮಾನಿ ಸಲಹೆ ನೀಡಿದರೆ, ಸತ್ಯವಾದ ಪ್ರೀತಿಗೆ ಬೇಗ ಬೆಲೆ ಸಿಗಲ್ಲ. ನಮ್ಮ ಸಿದ್ದೇಗೌಡ್ರುನ್ನ ನೋಡುತ್ತಾ ಇದ್ದರೆ ಅಯ್ಯೋ ಅನ್ನಿಸುತ್ತೆ ಅಂತ ಇನ್ನೊಬ್ಬ ಅಭಿಮಾನಿ ಹೇಳಿದ್ದಾರೆ. ಒಟ್ಟಾರೆ ಭಾವನಾಳ ವರ್ತನೆಗೆ ಬೇಸತ್ತ ಸಿದ್ದೇಗೌಡ್ರ ಫ್ಯಾನ್ಸ್, ಇದೀಗ ಭಾವನಾ ಮೇಲೆ ಕೋಪ ಮಾಡಿಕೊಂಡಿದ್ದಾರೆ.


Click it and Unblock the Notifications











