Lakshmi nivasa: ಜಯಂತ್ ಕಾಟಕ್ಕೆ 'ಲಕ್ಷ್ಮೀ ನಿವಾಸ' ಬಿಡ್ತಿದ್ದಾರಾ ಚಂದನಾ? ಜಾಹ್ನವಿಯ ರಿಪ್ಲೇಸ್ಮೆಂಟ್ ಯಾರು?

By ಎಸ್ ಸುಮಂತ್

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಎಲ್ಲಾ ಹೆಣ್ಣು ಮಕ್ಕಳು ದ್ವೇಷ ಮಾಡುವಂತ ಹುಡುಗ ಎಂದರೆ ಅದು ಜಯಂತ್. ಬರೀ ದ್ವೇಷ ಮಾಡಲ್ಲ ಅವನ ಪಾತ್ರ ಬಂತು ಅಂದ್ರೆ ಆತಂಕಗೊಳ್ಳುತ್ತಾರೆ. ಅಸಹ್ಯ ಪಟ್ಟುಕೊಳ್ಳುತ್ತಾರೆ. ಚಿತ್ರ ಹಿಂಸೆ ಕೊಡುವ ಪಾತ್ರದಲ್ಲಿ ಜಯಂತ್ ಕಾಣಿಸಿಕೊಂಡಿದ್ದಾರೆ.

ತನ್ನ ಹೆಂಡತಿ ತನ್ನ ಜೊತೆಗೆ ಮಾತ್ರ ಮಾತನಾಡಬೇಕು, ತನ್ನನ್ನು ಮಾತ್ರ ಪ್ರೀತಿ ಮಾಡಬೇಕು, ಅವಳ ಪ್ರಪಂಚದಲ್ಲಿ ತನ್ನನ್ನು ಬಿಟ್ಟರೆ ಇನ್ಯಾರು ಇರಬಾರದು. ಅದಕ್ಕೆ ತಕ್ಕನಾಗಿಯೇ ಎಲ್ಲಾ ಸೌಕರ್ಯವನ್ನು ಕಟ್ ಮಾಡಿದ್ದಾನೆ. ಈ ಥರ ಹಿಂಸೆ ಕೊಟ್ಟರೆ ಯಾರು ಬದುಕುತ್ತಾರೆ ಹೇಳಿ ಎಂಬ ಡೈಲಾಗ್ ಈಗ ಜಾಹ್ನವಿ ಪಾಲಿಗೆ ಕೇಳಿ ಬರ್ತಿದೆ. ಜಯಂತ್ ಕಾಟ ತಡೆಯಲಾಗದೇ ಈಗ ಜಾಹ್ನವಿಯೇ ಹೊರ ಬರುತ್ತಿದ್ದಾರೆ ಅನ್ಸುತ್ತೆ. ನೆಟ್ಟಿಗರು ಹಂಗೆ ಟ್ರೋಲ್ ಮಾಡ್ತಿದ್ದಾರೆ.

Zee kannada serial Lakshmi nivasa Written Update on May 20th episode

ಜಾಹ್ನವಿ ಮನೆಗೆ ಅಪ್ಪ ಅಮ್ಮ

ಜಯಂತ್ ಮನೆಯಲ್ಲಿ ಎಲ್ಲಿಯೂ ಹೋಗುವುದಕ್ಕೆ ಆಗದಂತೆ ಲಾಕ್ ಆಗಿರುವ ಜಾಹ್ನವಿಗೆ ಅಪ್ಪ ಅಮ್ಮನ ಜೊತೆಗೆ ಮಾತನಾಡುವುದಕ್ಕೂ ಆಗುತ್ತಿಲ್ಲವೆಂಬ ನೋವು ಕಾಡುತ್ತಿದೆ. ಒಂದೇ ಸಮ್ಮನೆ ಅಳುತ್ತಾ ಕೂತಿದ್ದಾಳೆ. ಅದೇ ಸಮಯಕ್ಕೆ ಮನೆಯ ಬೆಲ್ ಆಗಿದೆ. ಯಾರೆಂದು ತೆಗೆದು ನೋಡಿದರೆ ಅಮ್ಮ, ಅಪ್ಪ, ಅಜ್ಜಿ. ಜಾಹ್ನವಿಗೆ ಫುಲ್ ಖುಷಿಯಾದರೆ, ಜಯಂತ್ ದಿಗ್ಬ್ರಾಂತನಾಗಿದ್ದಾನೆ.

ಕೇಬಲ್ ಸರಿ‌ ಮಾಡ್ತಿನಿ ಎಂದ ಮಾವ

ಒಲ್ಲದ ಮನಸ್ಸಿನಿಂದಲೇ ಒಳಗೆ ಕರೆದ ಜಯಂತ್ ಏನು ಮಾತನಾಡದೇ ಸುಮ್ಮನೆ ನಿಂತಿದ್ದಾನೆ. ಶ್ರೀನಿವಾಸನೆ ನಾವು ಬಂದಿದ್ದು ತೊಂದರೆಯಾ ಎಂದರೆ, ಖುಷಿಗೆ ಮಾತೇ ಬರುತ್ತಿಲ್ಲ ಎಂದು ಹೇಳುತ್ತಾನೆ. ಜಾಹ್ನವಿ ತನಗಾಗುತ್ತಿರುವ ನೋವನ್ನು ತೋಡಿಕೊಂಡಿದ್ದಾಳೆ. ಆಗ ಫೋನ್ ವೈಯರ್ ಏನಾದರೂ ಸಮಸ್ಯೆಯಾಗಿರಬಹುದು. ನಾನು ಟೆರೆಸ್ ಮೇಲೆ ಹೋಗಿ‌ ನೋಡಿಕೊಂಡು ಬರುತ್ತೇನೆ ಅಂತ ತಂದೆ ಹೇಳಿದಾಗ ಜಯಂತ್ ಗಾಬರಿಯಾಗಿದ್ದಾನೆ. ತನ್ನ ಬಂಡವಾಳ ಗೊತ್ತಾಗುತ್ತೆ ಎಂದು ಕೈ ಕೈ ಇಸುಕಿಕೊಳ್ಳುತ್ತಿದ್ದಾನೆ. ತನ್ನ ಸೀಕ್ರೆಟ್ ಯಾರಿಗೂ ತಿಳಿಯಬಾರದೆಂಬುದೇ ಜಯಂತ್ ಉದ್ದೇಶ.

ಸಿನಿಮಾ ಒಪ್ಪಿಕೊಂಡಿರುವ ಚಂದನಾ

ಅತಿಯಾಗಿ ಪ್ರೀತಿಸುವ, ತನ್ನನ್ನೇ ಪ್ರಪಂಚವೆಂದು ತಿಳಿದುಕೊಂಡು ಬದುಕಬೇಕೆಂಬ ಸ್ವಾರ್ಥ ಇಟ್ಟುಕೊಂಡು, ಮಾನಸಿಕ ಹಿಂಸೆ ಕೊಡುವವನ ಜೊತೆಗೆ ಯಾವ ಹೆಣ್ಣು ಮಗಳಾಗಲಿ ಬದುಕುವುದು ಕಷ್ಟ. ಆ ಸೈಕೋ ಗಂಡನ ಹೆಂಡತಿಯಾಗಿ ಚಂದನಾ ಪಾತ್ರವಹಿಸಿದ್ದಾರೆ. ಆದರೆ ಇನ್ನು ಆ ಸೈಕೋ ಗಂಡನ ಜೊತೆಗೆ ಚಂದನಾ ಬದುಕಲ್ಲ ಎಂದು ನಿರ್ಧಾರ ಮಾಡಿದಂತೆ ಇದೆ. ಧಾರಾವಾಹಿಯಿಂದ ಹೊರ ನಡೆದಿದ್ದಾರೆ ಎನ್ನುತ್ತಿವೆ ಮೂಲಗಳು. ಆದರೆ ಆ ಜಾಹ್ನವಿ ಪಾತ್ರಕ್ಕೆ ಚಂದನಾ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದರು.

Zee kannada serial Lakshmi nivasa Written Update on May 20th episode

ಜಾನು ಪಾತ್ರಕ್ಕೆ ಯಾರು ಬರ್ತಾರೆ?

ಚಂದನಾ ಈ ಪಾತ್ರಕ್ಕೆ ವಿದಾಯ ಹೇಳುತ್ತಿರುವುದು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿರುವುದಕ್ಕೆ. ಇತ್ತಿಚೆಗಷ್ಟೇ 'ಭಾವ ತೀರ ಯಾನ' ಸಿನಿಮಾದ ಪೋಸ್ಟರ್ ಹಾಕಿದ್ದರು. ಈ ಸಿನಿಮಾದಲ್ಲಿ ದೃತಿ ಎಂಬ ಪಾತ್ರದಲ್ಲಿ ಚಂದನಾ ಅಭಿನಯಿಸುತ್ತಿದ್ದಾರೆ. ಸಿನಿಮಾದ ಶೆಡ್ಯೂಲ್ ಶುರುವಾದ ಕಾರಣ ಟೈಮ್ ಅಡ್ಜೆಸ್ಟ್ ಆಗದೇ ಸೀರಿಯಲ್‌ನಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ. ಆದರೆ ಇನ್ನು ಚಂದನಾ ಕಡೆಯಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ. ಇಂದು ಕೂಡ ಅವರ ಪಾತ್ರದ ಎಪಿಸೋಡ್ ಪ್ರಸಾರವಾಗಿದೆ. ಅವರು ಬದಲಾವಣೆಯಾದರೆ ಅವರ ಜಾಗಕ್ಕೆ ಯಾರು ಬರಬಹುದು ಎಂಬ ಕುತೂಹಲಕ್ಕೆ ಕೆಲವೇ ದಿನಗಳಲ್ಲಿ ತೆರೆ ಬೀಳಬಹುದು.

More from Filmibeat

English summary
Lakshmi nivasa kannada serial today episode. Here is the details about Chandana left Lakshmi Niwas serial;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X