Lakshmi nivasa: ಜಾಮರ್ ಆಫ್ ಮಾಡೋದು ಮರೆತೋಯ್ತಾ ಜಯಂತ್? ಲಕ್ಷ್ಮೀ ಕಾಲ್ ಕನೆಕ್ಟ್ ಆಗಿದ್ದಕ್ಕೆ ವೀಕ್ಷಕರ ಪ್ರಶ್ನೆ!

By ಎಸ್ ಸುಮಂತ್

ಜೀ ಕನ್ನಡದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಎಲ್ಲರೂ ದ್ವೇಷ ಮಾಡುವಂತ ಗುಣ ಹೊಂದಿರುವುದು ಜಯಂತ್ ಮಾತ್ರ. ಆತ ಬಂದರೆ ಸಾಕು ಸಾಲು ಸಾಲು ಶಾಪ ಹಾಕುತ್ತಾರೆ. ಇಂಥ ಗಂಡ ಸಿಕ್ಕಿಬಿಟ್ಟರೆ ಹೆಣ್ಣು ಮಕ್ಕಳ ಕಥೆ ಅಷ್ಟೆ. ಈತನನ್ನ ಮೊದಲು ಬದಲಾವಣೆ ಮಾಡಿ ಅಂತಿದ್ದಾರೆ. ಜೊತೆಗೆ ಅವನ ಸೈಕೋ ವರ್ತನೆ ಮನಸ್ಸಿಗೇನೆ ತೀರಾ ಹಿಂಸೆ ನೀಡುತ್ತದೆ. ಜಾಹ್ನವಿ ಅಪ್ಪ ಅಮ್ಮನ ಜೊತೆಗೆ ಮಾತನಾಡಿದರೂ ಸಹಿಸದ ಜಯಂತ್, ಸ್ನೇಹಿತರು ಸಲಿಗೆಯಿಂದ ಇದ್ದರಂತು ಕೊಂದೇ ಬಿಡುತ್ತಾನೆ. ಈ ರೀತಿಯ ಕ್ರೂರವಾದ ಗುಣ ಅವನದ್ದು.

ಜಾಹ್ನವಿಯನ್ನು ಸಿಕ್ಕಾಪಟ್ಟೆ ಪ್ರೀತಿ ಮಾಡುತ್ತಾನೆ. ಆದರೆ ಅವಳಿಗೆ ಹೊರಗಿನ ಪ್ರಪಂಚದ ಅರಿವೇ ಇಲ್ಲದಂತೆ ಮಾಡುತ್ತಿದ್ದಾನೆ. ಕುಟುಂಬದವರ ಜೊತೆಗೆ ಮಾತನಾಡದಂತೆ ಮಾಡಿದ್ದಾನೆ. ನೆಟ್ವರ್ಕ್ ಎಲ್ಲಾ ಕಟ್ ಮಾಡಿ, ಜಾಹ್ನವಿಗೆ ಸಂಕಟ ತಂದಿಟ್ಟಿದ್ದಾನೆ. ಆದರೆ ಇದೀಗ ಅವರ ಅಪ್ಪ ಅಮ್ಮ ಎಲ್ಲಾ ಬಂದಿದ್ದು, ಜಯಂತ್ ಜಾಮರ್ ಆಫ್ ಮಾಡೋದನ್ನ ಮರೆತಂತೆ ಇದೆ. ವೀಕ್ಷಕರು ಅದನ್ನ ಕೇಳುತ್ತಿದ್ದಾರೆ.

Zee kannada serial Lakshmi nivasa Written Update on May 21th episode

ಮನೆಯ ಗಲೀಜು ನೋಡಿ ಕೋಪ

ಜಾಹ್ನವಿಯ ಫೋನ್ ಕನೆಕ್ಟ್ ಆಗದೇ ಇರುವ ಕಾರಣಕ್ಕೆ ಕುಟುಂಬದವರು ಹೆದರಿದ್ದಾರೆ. ಹೀಗಾಗಿ ಅಳಿಯನಿಗೂ ಹೇಳದೇ ನೇರವಾಗಿ ಮನೆಗೆ ಬಂದಿದ್ದಾರೆ. ಅಪ್ಪ ಅಮ್ಮ, ಅಜ್ಜಿ, ಅಣ್ಣನನ್ನು ನೋಡಿದ ಜಾಹ್ನವಿ ತುಂಬಾನೇ ಖುಷಿ ಪಟ್ಟಿದ್ದಾಳೆ. ಎಲ್ಲರೂ ಕುಶಲೋಪರಿ ವಿಚಾರಿಸಿ, ಅಡುಗೆ ಮಾಡುವುದಕ್ಕೆ ಸಿದ್ಧವಾಗಿದ್ದಾರೆ. ಇದೇ ವೇಳೆ ವೆಂಕಿ ತರಕಾರಿ ಕಟ್ ಮಾಡಿ ಕೊಡುತ್ತಿದ್ದು ಎಲ್ಲಾ ಹರಡಿದ್ದಾನೆ. ಇದನ್ನು ಸಹಿಸುವುದಕ್ಕೆ ಆಗದ ಜಯಂತ್ ಎಷ್ಟು ಬೇಗ ಇವರನ್ನು ಸಾಗಾಕುತ್ತೀವೋ ಎಂದು ಕಾಯುತ್ತಿದ್ದಾನೆ‌.

ಅಮ್ಮನ ಬಳಿ ಮಂಗಳ ದೂರು

ಇನ್ನು ಮಂಗಳ ಒಂದೆರಡು ದಿನ ಜಾಹ್ನವಿಯ ಮನೆಯಲ್ಲಿದ್ದು ಚೆನ್ನಾಗಿ ತಿಂದು ಹೋಗೋಣ ಅಂತ ಬಂದಿದ್ದಳು. ಸೆಕ್ಯುರಿಟಿ ನಾಯಿ ಬಿಟ್ಟು ಓಡಿಸಿದ್ದಾನೆ. ಇದನ್ನ ಅಮ್ಮನಿಗೆ ಕಾಲ್ ಮಾಡಿ ಏನೆಲ್ಲಾ ಆಯ್ತು ಅಂತ ವಿವರಿಸಿದ್ದಾಳೆ.

ಅಳಿಯನನ್ನು ಪ್ರಶ್ನೆ ಮಾಡಿದ ಲಕ್ಷ್ಮೀ

ಲಕ್ಷ್ಮೀಗೆ ಇದೆಲ್ಲ ಕೇಳಿ ಶಾಕ್ ಆಗಿದೆ. ಅಳಿಯಂದಿರು ಯಾಕೆ ಈ ರೀತಿ ಮಾಡಿದರು ಅಂತ ಕೇಳ್ತೀನಿ. ಮೊದ್ಲು ನೀನು ಆರೋಗ್ಯ ನೋಡಿಕೋ ಅಂತ ಹೇಳಿ ಫೋನ್ ಇಟ್ಟಿದ್ದಾಳೆ. ಆದರೆ ಮಂಗಳಾ ಫೋನ್ ಇಟ್ಟ ಮೇಲೆ ಗಾಬರಿಯಿಂದ ಓಡಿ ಬಂದಿದ್ದಾಳೆ. ಅಷ್ಟೊಂದು ಗಾಬರಿಯ ಅಗತ್ಯವೇನಿತ್ತು ಅಂತ ವೀಕ್ಷಕರಿಗೆ ಅನುಮಾನ. ಅಳಿಯನಿಗೆ ವಿಚಾರ ತಿಳಿಸಿ, ನೀವ್ಯಾಕೆ ಹಿಂಗೆ ಮಾಡಿದ್ರಿ ಎಂದಿದ್ದಾಳೆ. ಇದಕ್ಕೆ ಕಮೆಂಟ್ ಬಾಕ್ಸ್‌ನಲ್ಲಿ ತರಹೇವಾರಿ ಕಾಮೆಂಟ್ಸ್ ಬಂದಿವೆ. ಜಯಂತ್ ಅತ್ತೆಯನ್ನ ಹೇಗೆಲ್ಲಾ ಯಾಮಾರಿಸ್ತಾನೆ ನೋಡಿ ಅಂತ ವೀಕ್ಷಕರೇ ಊಹೆ ಮಾಡಿದ್ದಾರೆ.

Zee kannada serial Lakshmi nivasa Written Update on May 21th episode

ಲಕ್ಷ್ಮೀ ಫೋನ್ ಕನೆಕ್ಟ್ ಆಗಿದ್ದೇಗೆ?

ಈ ಧಾರಾವಾಹಿಯಲ್ಲಿ ಒಂದಷ್ಟು ಗೊಂದಲಗಳಿವೆ. ಜಾಹ್ನವಿಯ ಫೋನ್ ಕನೆಕ್ಟ್ ಆಗದ ರೀತಿ ಜಯಂತ್ ಜಾಮರ್ ಹಾಕಿದ್ದಾನೆ. ಆದರೆ ಈಗ ಲಕ್ಷ್ಮೀಯ ಫೋನ್ ಕನೆಕ್ಟ್ ಆಗಿದೆ. ಇನ್ನು ಲಕ್ಷ್ಮೀ- ಶ್ರೀನಿವಾಸ ಮದುವೆಯಾದ ಮೇಲೆ ಒಮ್ಮೆಯೂ ಮನೆಗೆ ಬಂದಿರಲಿಲ್ಲ. ಈಗ ಸಡನ್ ಹೇಗೆ ಬಂದರು ಗೊತ್ತಿಲ್ಲ. ಇದರ ಜೊತೆಗೆ ಲಕ್ಷ್ಮೀ ಪಾತ್ರಧಾರಿ ಶ್ವೇತಾಗೆ ಧ್ವನಿ ಕೊಟ್ಟವರ ಬಗ್ಗೆಯೂ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.

More from Filmibeat

English summary
Lakshmi nivasa kannada serial today episode. Here is the details about The audience questioned Jayant;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X