Lakshminivasa: ಪೂರ್ವಿ-ಸಿದ್ದೇಗೌಡರ ಮದುವೆ; ಗೌಡ್ರ ಬದುಕು ಹಾಳು ಮಾಡಬೇಡಿ ಎಂದ ಫ್ಯಾನ್ಸ್
ಸಿದ್ದೇಗೌಡ್ರು - ಭಾವನಾಳನ್ನು ಮನಸ್ಸಾರೆ ಲವ್ ಮಾಡ್ತಾ ಇದ್ದಾರೆ. ಆದರೆ ಅದನ್ನು ಹೇಳಿಕೊಳ್ಳುವಷ್ಟು ಧೈರ್ಯ ಅವರಲ್ಲಿ ಇಲ್ಲ. ಭಾವನಾಗೂ ಗೌಡ್ರ ಮೇಲೆ ಸಾಫ್ಟ್ ಕಾರ್ನರ್ ಇದೆ. ಹಾಗಂತ ಸಿದ್ದೇಗೌಡ್ರ ಮೇಲೆ ಅಲ್ಲ. ಯಾವತ್ತಾದರೂ ಒಂದು ದಿನ ಗೌಡ್ರೇ, ಸಿದ್ದೇಗೌಡ್ರು ಎಂಬ ಸತ್ಯ ಗೊತ್ತಾದರೆ ಭಾವನಾ ರಿಯಾಕ್ಷನ್ ಏನಾಗಬಹುದು ಎಂಬ ಕುತೂಹಲವಿದೆ.
ಸದ್ಯ ನೇರವಾಗಿ ಅಲ್ಲದೇ ಹೋದರೂ ಪರೋಕ್ಷವಾಗಿ ಭಾವನಾ ಸಹಾಯಕ್ಕೆ ನಿಂತಿದ್ದಾರೆ ಸಿದ್ದೇಗೌಡ್ರು. ಮಗುವಿನ ಶಾಲೆ, ಭಾವನಾಗೆ ಸ್ಯಾಲರಿ ಈ ಎರಡರಿಂದೆ ಇರುವುದು ಇದೇ ಸಿದ್ದೇಗೌಡ್ರು. ಆದರೆ ಅದು ಭಾವನಾಗೆ ತಿಳಿಯದಂತೆ ಮಾಡುತ್ತಿದ್ದಾನೆ. ಇದರ ನಡುವೆ ಸೌಪರ್ಣಿಕಾ, ಸಿದ್ದೇಗೌಡ್ರ ಜೀವನದಲ್ಲಿ ಆಟವಾಡಲು ಹೊರಟಿದ್ದಾಳೆ.

ನೀಲು - ಸೌಪರ್ಣಿಕಾ ಪ್ಲ್ಯಾನ್
ಸಿದ್ದೇಗೌಡ್ರು ತಮ್ಮೆಲ್ಲಾ ವೈಯಕ್ತಿಕ ವಿಚಾರಗಳನ್ನು ಅತ್ತಿಗೆ ನೀಲೂ ಬಳಿ ಹೇಳಿಕೊಳ್ಳುತ್ತಾನೆ. ನೀಲೂಗು ಭಾವನಾ ಮೇಲೆ ಸಿದ್ದೇಗೌಡ್ರಿಗೆ ಇರುವ ಪ್ರೀತಿ ಅರ್ಥವಾಗಿದೆ. ಆದರೆ ಗೌಡ್ರ ಬಳಿಯೇ ಎಲ್ಲಾ ಸತ್ಯ ತಿಳಿದುಕೊಂಡು ಗೇಮ್ ಆಡುತ್ತಿದ್ದಾಳೆ. ಈಗ ಸೌಪರ್ಣಿಕಾ ಜೊತೆಗೆ ಸೇರಿಕೊಂಡು ಸಿದ್ದೇಗೌಡ್ರ ಪ್ರೀತಿಗೆ ಉಳಿ ಹಿಂಡುತ್ತಿದ್ದಾಳೆ. ದೂರ ದೂರ ಮಾಡುತ್ತಿದ್ದಾಳೆ. ತನ್ನ ಲಾಭಕ್ಕಾಗಿ ಸಿದ್ದೇಗೌಡ್ರಿಗೆ ಪೂರ್ವಿ ಜೊತೆಗೆ ಮದುವೆ ಮಾಡಲು ಹೊರಟಿದ್ದಾಳೆ.
ಪೂರ್ವಿ ಜೊತೆಗೆ ಮದುವೆ ಪ್ಲ್ಯಾನ್
ಸೌಪರ್ಣಿಕಾಗೆ ದೊಡ್ಡ ಕೆಲಸವೇ ಆಗಬೇಕಿದೆ. ಹೀಗಾಗಿ ಪೂರ್ವಿಯ ತಂದೆ ಹಾಗೂ ಜವರೇಗೌಡರ ಸ್ನೇಹವನ್ನು ಮತ್ತೆ ಒಂದು ಮಾಡಲು ಹೊರಟಿದ್ದಾಳೆ. ಇತ್ತ ಸಿದ್ದೇಗೌಡರ ತಾಯಿಯನ್ನು ಇಂಪ್ರೆಸ್ ಮಾಡಲು ಹೊರಟಿದ್ದಾಳೆ. ಅದರ ಭಾಗವಾಗಿಯೇ ಪೂರ್ವಿ ತೀರಾ ಒಳ್ಳೆಯವಳು ಎಂಬುದನ್ನು ಕ್ರಿಯೇಟ್ ಮಾಡುತ್ತಿದ್ದಾಳೆ. ತನಗೆ ಸೊಸೆಯಾಗಿ ಬರುವವಳು ಹೇಗಿರಬೇಕು ಎಂಬುದನ್ನು ಸಿದ್ದೇಗೌಡ್ರ ತಾಯಿ ಹೇಳಿದ್ದರೊ ಆ ಎಲ್ಲಾ ಗುಣವನ್ನು ಸೌಪರ್ಣಿಕಾ, ಪೂರ್ವಿ ಬಳಿ ಕ್ರಿಯೇಟ್ ಮಾಡುತ್ತಿದ್ದಾಳೆ.
ಸ್ಪೆಷಲ್ ಕೇಕ್ ತಂದ ಸಿದ್ದೇಗೌಡ್ರು
ಭಾವನಾಗೆ ಹುಟ್ಟುಹಬ್ಬದ ಸಂಭ್ರಮ. ಹುಡುಗಿಯ ಬರ್ತ್ ಡೇ ಅಂದ್ರೆ ಸಂಭ್ರಮ ಕೇಳಬೇಕಾ..? ಸಿದ್ದೇಗೌಡ್ರು ಓಡೋಡಿ ಬಂದಿದ್ದಾರೆ. ಸ್ಪೆಷಲ್ ಕೇಕ್ ಕೂಡ ತಂದಿದ್ದಾನೆ. ಆದ್ರೆ ಇದು ಮನೆಯವರಿಗೆಲ್ಲಾ ಶಾಕ್. ಆದರೆ ಸಿಂಚನಾ ಅದನ್ನು ಕವರ್ ಮಾಡಿಕೊಂಡಿದ್ದಾರೆ. ನಾನೇ ತರುವುದಕ್ಕೆ ಹೇಳಿದ್ದು ಎಂದಿದ್ದಾರೆ. ಸಂಭ್ರಮದಲ್ಲಿ ಎಲ್ಲರೂ ಭಾಗಿಯಾಗಿ ಕೇಕ್ ಕಟ್ ಮಾಡಿದ್ದಾರೆ. ಬರೀ ಕೇಕ್ ಮಾತ್ರವಲ್ಲ, ಸಿದ್ದೇಗೌಡ್ರು ಭಾವನಾಗೋಸ್ಕರ ಗಿಫ್ಟ್ ಕೂಡ ತಂದಿದ್ದಾರೆ. ಭಾವನಾ ಲುಕ್ ಕೊಟ್ಟರೂ ಪ್ರಯೋಜನ ಇಲ್ಲ. 'ಇಷ್ಟು ದಿನ ಸಂಬಂಧಿಕರೆ ಆಗಿದ್ದರು ಹುಟ್ಟುಹಬ್ಬ ಜೊತೆಗೆ ಆಚರಿಸುವುದಕ್ಕೆ ಆಗಿರಲಿಲ್ಲ. ಆದರೆ ಈಗ ನೋಡಿ ಖುಷಿಯಾಗ್ತಿದೆ' ಎಂದಿದ್ದಾನೆ. ಭಾವನಾ ಏನು ಮಾತನಾಡುವುದಕ್ಕೆ ಆಗದೆ ಗಿಫ್ಟ್ ತೆಗೆದುಕೊಂಡಿದ್ದಾಳೆ.

ಪೂರ್ವಿ ಜೊತೆಗಿನ ಮದುವೆಗೆ ವಿರೋಧ
ಭಾವನಾಳನ್ನು ಸಿದ್ದೇಗೌಡ್ರ ಮನಸ್ಸಲ್ಲಿಯೇ ಆರಾದ್ಇಸುತ್ತಾ ಇದ್ದಾರೆ. ಅದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಈಗ ನೀಲೂ ಹಾಗೂ ಸೌಪರ್ಣಿಕಾ ಸೇರಿ ಪೂರ್ವಿ ಜೊತೆಗೆ ಮದುವೆ ಮಾಡಲು ಹೊರಟಿದ್ದಾರೆ. ಇದು ಪ್ರೇಕ್ಷಕರಿಗೆ ಕೊಂಚವೂ ಇಷ್ಟವಾಗುತ್ತಿಲ್ಲ. ಜಾಹ್ನವಿಯ ಬದುಕನ್ನು ಹಾಳು ಮಾಡಿದಂತೆ ಸಿದ್ದೇಗೌಡ್ರು ಬದುಕನ್ನು ಹಾಳು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಈ ಜೋಡಿ ಚೆನ್ನಾಗಿಲ್ಲ ಅಂತಾನೇ ಹೇಳುತ್ತಿದ್ದಾರೆ.


Click it and Unblock the Notifications











