Lakshminivasa: ಭಾವನಾ-ಸಿದ್ದು ಸೂಪರ್ ಅಂತಿದ್ದೋರು ಈಗ ಪೂರ್ವಿ ಬೊಂಬಾಟ್ ಅಂತಿದ್ದಾರೆ; ಏನ್ ಮಾಡ್ಬೇಕು ಡೈರೆಕ್ಟರ್?
ಸಿದ್ದುಗೆ ಭಾವನಾ ಮೇಲೆ ಹೆವಿ ಲವ್ವು. ಆದರೆ ಅದನ್ನ ಹೇಳುವುದಕ್ಕೆ ಅಷ್ಟು ಧೈರ್ಯವಿಲ್ಲ. ಹೇಳಬೇಕು ಅಂತ ಹೋದಾಗೆಲ್ಲ ಭಾವನಾ ಕೊಡೋ ಲುಕ್‌ಗೇನೆ ಸಿದ್ದೇಗೌಡ್ರು ಮೀಟ್ರೂ ಆಫ್ ಆಗುತ್ತೆ. ಆದ್ರೆ ಗೌಡ್ರೇ, ಸಿದ್ದೇಗೌಡ್ರು ಎಂಬ ವಿಚಾರ ಭಾವನಾಗೆ ತಿಳಿದರೆ ಏನಾಗಬಹುದು ಕುತೂಹಲವಿದೆ.
ಗೌಡ್ರಿಂದ ಸಾಕಷ್ಟು ಸಹಾಯವಾಗಿದೆ ಎಂದು ಭಾವನಾಗು ಗೊತ್ತು. ಜೊತೆಗೆ ಭಾವನಾಗೂ ಗೌಡ್ರ ಜೊತೆ ಮಾತನಾಡುವ ಖುಷಿ ಜಾಸ್ತಿಯೇ ಇದೆ. ಗೌಡ್ರ ಜೊತೆ ಮಾತನಾಡುವಾಗ ಎಲ್ಲಾ ನೋವು ನಲಿವುಗಳನ್ನು ಹಂಚಿಕೊಳ್ಳುತ್ತಾರೆ. ಅಂದು ಹುಟ್ಟುಹಬ್ಬಕ್ಕೆ ಗೌಡ್ರು ಮುಂದೆ ಬಂದಿದ್ರು. ಆದರೆ ಎದುರುನಿಂತಿದ್ದು ಸಿದ್ದೇಗೌಡ್ರಾಗಿದ್ದರಿಂದ ಭಾವನಾ ಊಹೆಯ ಗೌಡ್ರು ಕಾಣಲಿಲ್ಲ. ಇದೀಗ ಯಾಕೋ ಸಿದ್ದೇಗೌಡ್ರು ಭಾವನಾಳಿಂದ ದೂರಾಗುವ ಸಾಧ್ಯತೆ ಇದೆ.

ಹೆಣ್ಣು ನೋಡಲು ಬಂದ ಸಿದ್ದೇಗೌಡ್ರು
ಆದಷ್ಟು ಬೇಗ ಸಿದ್ದುಗೆ ಮದುವೆ ಮಾಡಬೇಕು ಎಂಬುದು ಅವರ ತಾಯಿಯ ಆಸೆ. ಆದರೆ ಅವರ ತಾಯಿ ಆಸೆ ಪಡುವಂತ ಹುಡುಗಿ ಸಿಗಬೇಕು ಎಂದರೆ ಶಿಲ್ಪಿಗೆ ಹೇಳಿ ಕೆತ್ತಿಸಬೇಕು. ವಯಸ್ಸು, ಬುದ್ದಿ, ಬ್ಯೂಟಿ ಎಲ್ಲವೂ ಹೊಂದಾಣಿಕೆಯಾಗಬೇಕು. ಈಗ ಸೌಪರ್ಣಿಕಾ ಹಾಗೂ ನೀಲೂ ಸೇರಿ ಅಂತದ್ದೊಂದು ಹುಡುಗಿ ಹುಡುಕಿದ್ದಾರೆ. ಈಗ ಸಿದ್ದುಗೆ ವಿಷಯವೇ ತಿಳಿಸದೇ ಹೆಣ್ಣು ನೋಡಲು ಸ್ನೇಹಿತನ ಮನೆಗೆ ಬಂದಿದ್ದಾರೆ.
ಪೂರ್ವಿ ಕಂಡು ಮಾತನಾಡಿಸಿದ ಗೌಡ್ರು
ಸಿದ್ದೇಗೌಡ್ರಿಗೆ ಹುಡುಗಿ ನೋಡುವ ಶಾಸ್ತ್ರ ಕೊಂಚವೂ ಇಷ್ಟ ಇರಲಿಲ್ಲ. ಆದರೆ ಇನ್ನು ಪ್ರೀತಿಯನ್ನೇ ಹೇಳಿಕೊಳ್ಳದ ಕಾರಣ ಮನೆಯವರ ಮಾತಿಗೆ ಹ್ಞೂಃಗೊಟ್ಟು ಬಂದಿದ್ದಾನೆ. ಅಲ್ಲಿ ಪೂರ್ವಿ ನೋಡಿ ಮಾತನಾಡಿಸಿದ್ದಾಳೆ. ಓ ಮೇಡಮ್ಮೋರೆ ನೀವೂ ಇಲ್ಲಿ ಅಂತ. ಸಿದ್ದುಗೂ ಪೂರ್ವಿಗೂ ಮೊದಲೇ ಪರಿಚಯವಿದ್ದ ಕಾರಣ ಮನೆಯವರಿಗೂ ಖುಷಿಯಾಗಿದೆ. ಸಿದ್ದೇಗೌಡ್ರಿಗೆ ಪೂರ್ವಿ ಮನೆ ತೋರಿಸಲು ಕರೆದುಕೊಂಡು ಹೋಗಿದ್ದಾಳೆ. ಅದಕ್ಕೆ ಕಾರಣ ಇಬ್ಬರ ನಡುವೆ ಯಾವ ಅಭಿಪ್ರಾಯ ಇದೆ ಎಂದು ತಿಳಿಯಬೇಕಿತ್ತು ಮನೆಯವರಿಗೆ.

ಗೆಲ್ಲೋದು ಗೌಡ್ರೇ ಬಿಡಿ
ಪೂರ್ವಿ ತನ್ನ ರೂಮ್ ತೋರಿಸಿದ್ದಾಳೆ. ಅದನ್ನು ಕಂಡು ಸಿದ್ದೇಗೌಡ್ರು ಹೊಗಳಿದ್ದಾರೆ. ಅಷ್ಟೆ ಅಲ್ಲ, ಮೆಡಲ್‌ಗಳನ್ನು ಕಂಡು ಓದಿನ ಬಗ್ಗೆಯೂ ಮಾತನಾಡಿದ್ದಾನೆ. ಇಷ್ಟೊಂದು ಓದಿದ್ದೀರಾ ಮೇಡಮ್ಮೋರೆ. ನಾನು ಬರೀ ಶಾಲೆ ಅಷ್ಟೇ ಓದಿದ್ದು. ಕಾಲೇಜಿಗೆ ಹೋಗೋದಕ್ಕೆ ಆಗ್ಲಿಲ್ಲ ಎಂದಿದ್ದಾರೆ. ಅಂದ್ರೆ ಸಿದ್ದೇಗೌಡ್ರು ಈ ಲೆಕ್ಕದಲ್ಲಿ ಓದಿರುವುದು ಕೇವಲ ಎಸ್ಎಸ್ಎಲ್ಸಿ. ಹೀಗೆ ಪೂರ್ವಿ ಹಾಗೂ ಗೌಡ್ರು ಮಾತನಾಡುತ್ತಾ ಶಕ್ತಿ ಪ್ರದರ್ಶನದ ಆಟವನ್ನು ಶುರು ಮಾಡಿದ್ದಾರೆ. ಅದರಲ್ಲಿ ಗೆಲ್ಲೋದು ಸಿದ್ದೇಗೌಡ್ರೆ ಅಂತ ಅಭಿಮಾನಿಗಳು ಖುಷಿ ಖುಷಿಯಾಗಿ ಕಮೆಂಟ್ ಹಾಕವ್ರೆ. ಮುದ್ದೆ ತಿಂದವರು ಸೋಲುವುದುಂಟೆ ಅಂತಾನು ಕೇಳಿದ್ದಾರೆ.
ಈಗ ಭಾವನಾ ಕಥೆ ಏನು..?
ಇಷ್ಟು ದಿನ ಭಾವನಾ - ಸಿದ್ದೇಗೌಡರ ಜೋಡಿ ನೋಡಿದವರು ಸೂಪರ್ ಎನ್ನುತ್ತಾ ಇದ್ದರು. ಗೌಡ್ರೇ ಬೇಗ ನಿಮ್ ಲವ್ ಹೇಳ್ಕೊಳಿ, ಡೈರೆಕ್ಟರ್ರೇ ಬೇಗ ಮದುವೆ ಮಾಡ್ಸಿ ಅಂತಿದ್ರು. ಈಗ ಪೂರ್ವಿ ಹಾಗೂ ಸಿದ್ದೇಗೌಡ್ರನ್ನ ನೋಡಿ ಈ ಜೋಡಿನೇ ಸೂಪರ್ ಅಂತಿದ್ದಾರೆ. ಪೂರ್ವಿ ಜೊತೆಗೆ ಚೆನ್ನಾಗಿ ಮಾತನಾಡಿಕೊಂಡು, ಆಟ ಆಡಿಕೊಂಡು ಇದ್ದಿದ್ದಕ್ಕೆ ಫ್ಯಾನ್ಸ್ ಮನಸ್ಸು ಬದಲಾಗಿ ಬಿಟ್ಟಿದೆ. ಈ ಜೋಡಿಯೇ ಚೆಂದ ಅಂತಿದ್ದಾರೆ. ಹಾಗಾದ್ರೆ ಈಗ ನಿರ್ದೇಶಕರು ಯಾರನ್ನ ಯಾರಿಗೆ ಜೋಡಿ ಮಾಡ್ಬೇಕು..? ನೀವೆ ಕಮೆಂಟ್ ಮಾಡಿ.


Click it and Unblock the Notifications











